AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Core Sector: ಎಂಟು ಪ್ರಮುಖ ವಲಯಗಳ ಬೆಳವಣಿಗೆ ಮಾರ್ಚ್​ನಲ್ಲಿ ಶೇ 4.3ಕ್ಕೆ ಇಳಿಕೆ

ಎಂಟು ಪ್ರಮುಖ ವಲಯಗಳ ಬೆಳವಣಿಗೆ ಮಾರ್ಚ್ ತಿಂಗಳಲ್ಲಿ ಫೆಬ್ರವರಿಗೆ ಹೋಲಿಸಿದರೆ ನಿಧಾನವಾಗಿದೆ. ಆ ಬಗ್ಗೆ ವಿವರ ಈ ಲೇಖನದಲ್ಲಿದೆ.

Core Sector: ಎಂಟು ಪ್ರಮುಖ ವಲಯಗಳ ಬೆಳವಣಿಗೆ ಮಾರ್ಚ್​ನಲ್ಲಿ ಶೇ 4.3ಕ್ಕೆ ಇಳಿಕೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Apr 29, 2022 | 8:24 PM

Share

ಭಾರತದ ಎಂಟು ಪ್ರಮುಖ ವಲಯಗಳು (Core Sectors) ಮಾರ್ಚ್‌ನಲ್ಲಿ ಶೇಕಡಾ 4.3ರಷ್ಟು ಬೆಳವಣಿಗೆ ಸಾಧಿಸಿದ್ದು, ಫೆಬ್ರವರಿಯಲ್ಲಿ ಇದ್ದ ಶೇಕಡಾ 6ರಿಂದ ಕಡಿಮೆಯಾಗಿದೆ ಎಂದು ವಾಣಿಜ್ಯ ಸಚಿವಾಲಯ ಏಪ್ರಿಲ್ 29ರಂದು ತಿಳಿಸಿದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಎಂಟು ಪ್ರಮುಖ ವಲಯಗಳಲ್ಲಿ ಕೇವಲ ಮೂರು ಮಾತ್ರ ಮಾರ್ಚ್‌ನಲ್ಲಿ ಉತ್ಪಾದನೆಯ ವೇಗದ ದರವನ್ನು ದಾಖಲಿಸಿದೆ. ಫೆಬ್ರವರಿಯಲ್ಲಿ 6 ವಲಯ ವೇಗ ದಾಖಲಿಸಿತ್ತು. ಈ ಮೂರು ಕ್ಷೇತ್ರಗಳು ರಸಗೊಬ್ಬರ, ಸಿಮೆಂಟ್ ಮತ್ತು ವಿದ್ಯುತ್. ಮಾರ್ಚ್‌ನಲ್ಲಿ ರಸಗೊಬ್ಬರ ಉತ್ಪಾದನೆಯು ವರ್ಷದಿಂದ ವರ್ಷಕ್ಕೆ ಶೇ 15.3ರಷ್ಟು ಜಿಗಿದಿದ್ದರೆ, ಸಿಮೆಂಟ್ ಮತ್ತು ವಿದ್ಯುತ್ ಅನುಕ್ರಮವಾಗಿ ಶೇ 8.8 ಮತ್ತು ಶೇ 4.9ರಷ್ಟು ಏರಿಕೆಯಾಗಿದೆ. ಫೆಬ್ರವರಿಯಲ್ಲಿ ರಸಗೊಬ್ಬರ ಉತ್ಪಾದನೆಯು ಶೇ 1.4ರಷ್ಟು ಕಡಿಮೆಯಾಗಿದೆ. ಸಿಮೆಂಟ್ ಮತ್ತು ವಿದ್ಯುತ್ ಉತ್ಪಾದನೆಯು ಕ್ರಮವಾಗಿ ಶೇ 5 ಮತ್ತು ಶೇ 4.5ರಷ್ಟು ಹೆಚ್ಚಾಗಿದೆ.

ನಿಧಾನಗತಿ ಆಗಿರುವುದು ಗಮನಿಸುವುದಾದರೆ, ಕಲ್ಲಿದ್ದಲು ಮತ್ತು ಕಚ್ಚಾ ತೈಲಗಳು ಸೇರಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮಾರ್ಚ್‌ನಲ್ಲಿ ಕಲ್ಲಿದ್ದಲು ಉತ್ಪಾದನೆಯು ಶೇಕಡಾ 0.1 ರಷ್ಟು ಕಡಿಮೆಯಾಗಿದೆ. ಆದರೆ ಕಚ್ಚಾ ತೈಲ ಉತ್ಪಾದನೆಯು ವರ್ಷದಿಂದ ವರ್ಷಕ್ಕೆ ಶೇ 3.4ರಷ್ಟು ಕಡಿಮೆಯಾಗಿದೆ. ಒಟ್ಟಾರೆಯಾಗಿ ಹಣಕಾಸು ವರ್ಷ 2022ಕ್ಕಾಗಿ ಎಂಟು ಪ್ರಮುಖ ವಲಯಗಳು ಶೇ 10.4ರಷ್ಟು ಬೆಳೆದವು. ಹಣಕಾಸು ವರ್ಷ 2021ರಲ್ಲಿ ಅದರ ಉತ್ಪಾದನೆಯು ಶೇ 6.4ರಷ್ಟು ಕುಗ್ಗಿತು. ಮಾರ್ಚ್‌ನಲ್ಲಿ ಪ್ರಮುಖ ವಲಯದ ಬೆಳವಣಿಗೆಯಲ್ಲಿನ ಕುಸಿತವು ಕೈಗಾರಿಕಾ ಉತ್ಪಾದನೆ ಸೂಚ್ಯಂಕ (ಐಐಪಿ)ದಿಂದ ಅಳೆಯುವಂತೆ ಕೈಗಾರಿಕಾ ಬೆಳವಣಿಗೆ ಕುಸಿತಕ್ಕೆ ಕಾರಣ ಆಗಬಹುದು.

ಎಂಟು ಪ್ರಮುಖ ಕೈಗಾರಿಕೆಗಳು ಒಟ್ಟಾಗಿ ಐಐಪಿ ಒಟ್ಟು ತೂಕದ ಶೇ 40.3ರಷ್ಟು ಹೊಂದಿವೆ. ಅದೇ ರೀತಿ ಪ್ರಮುಖ ವಲಯದ ಕಾರ್ಯಕ್ಷಮತೆಯು ಐಐಪಿ ಬೆಳವಣಿಗೆ ರೀತಿಯ ಪ್ರಮುಖ ಸೂಚಕವಾಗಿದೆ. ಏಪ್ರಿಲ್ 12ರಂದು ಬಿಡುಗಡೆಯಾದ ಡೇಟಾವು ಜನವರಿಯಲ್ಲಿ ಶೇ 1.5ರಿಂದ ಫೆಬ್ರವರಿಯಲ್ಲಿ ಶೇ 1.7ಕ್ಕೆ ಏರಿದೆ ಎಂದು ತೋರಿಸಿದೆ. ಮಾರ್ಚ್ ತಿಂಗಳ ಐಐಪಿ ಡೇಟಾವನ್ನು ಮೇ 12ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: Indian Economy: ಕೊರೊನಾ ಸಮಯದ ನಷ್ಟ ಸರಿತೂಗಿಸಲು ಭಾರತಕ್ಕೆ 15 ವರ್ಷ ಬೇಕಾಗಬಹುದು ಎನ್ನುತ್ತಿದೆ ಆರ್​ಬಿಐ