Stock Market Timings: ಏಪ್ರಿಲ್ 18ರಿಂದ ಬದಲಾಗಲಿದೆ ಆರ್​ಬಿಐ ನಿಯಂತ್ರಿಸುವ ಎಲ್ಲ ಮಾರುಕಟ್ಟೆಗಳ ವಹಿವಾಟಿನ ಸಮಯ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಂತ್ರಿತ ಮಾರುಕಟ್ಟೆಗಳ ವಹಿವಾಟು ಸಮಯ ಏಪ್ರಿಲ್ 18ರ ಸೋಮವಾರದಿಂದ ಬದಲಾವಣೆ ಆಗಲಿದೆ. ಆ ಬಗ್ಗೆ ವಿವರಗಳು ಇಲ್ಲಿವೆ.

Stock Market Timings: ಏಪ್ರಿಲ್ 18ರಿಂದ ಬದಲಾಗಲಿದೆ ಆರ್​ಬಿಐ ನಿಯಂತ್ರಿಸುವ ಎಲ್ಲ ಮಾರುಕಟ್ಟೆಗಳ ವಹಿವಾಟಿನ ಸಮಯ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Apr 18, 2022 | 11:36 AM

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (RBI) ಹಣದ ಮಾರುಕಟ್ಟೆಯೂ ಒಳಗೊಂಡಂತೆ ಆರ್​ಬಿಐ ನಿಯಂತ್ರಣಕ್ಕೆ ಬರುವ ಎಲ್ಲ ಮಾರುಕಟ್ಟೆಗಳಲ್ಲಿ ಕೊರೊನಾ ಸಾಂಕ್ರಾಮಿಕಕ್ಕೂ ಮುಂಚಿನ ವಹಿವಾಟಿನ ಸಮಯವನ್ನು ತರಲಾಗಿದೆ. ಆರ್‌ಬಿಐ ನಿಯಂತ್ರಿತ ಮಾರುಕಟ್ಟೆಗಳಲ್ಲಿ ಇಂದಿನಿಂದ (ಏಪ್ರಿಲ್ 18, 2022) ಬೆಳಗ್ಗೆ 9 ಗಂಟೆಯಿಂದ ವಹಿವಾಟು ಆರಂಭವಾಗಲಿದೆ. ಸದ್ಯಕ್ಕೆ ಮಾರುಕಟ್ಟೆಗಳು ಬೆಳಿಗ್ಗೆ 10 ಗಂಟೆಗೆ ಆರಂಭವಾಗುತ್ತಿವೆ. ಈ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ ಆರ್‌ಬಿಐ, “ಜನರ ಸಂಚಾರ ಮತ್ತು ಕಚೇರಿಗಳ ಕಾರ್ಯನಿರ್ವಹಣೆ ಮೇಲಿನ ನಿರ್ಬಂಧಗಳನ್ನು ಗಣನೀಯವಾಗಿ ಸಡಿಲಿಸುವುದರೊಂದಿಗೆ ನಿಯಂತ್ರಿತ ಹಣಕಾಸು ಮಾರುಕಟ್ಟೆಗಳ ಆರಂಭಿಕ ಸಮಯವನ್ನು ಅವುಗಳ ಪೂರ್ವ-ಸಾಂಕ್ರಾಮಿಕ ಸಮಯ 9ಕ್ಕೆ ಶುರು ಮಾಡಲು ನಿರ್ಧರಿಸಲಾಗಿದೆ,” ಎಂದು ತಿಳಿಸಿದೆ.

ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯ ಸ್ಥಳಾಂತರ ಮತ್ತು ಹೆಚ್ಚಿನ ಆರೋಗ್ಯದ ಅಪಾಯಗಳನ್ನು ಗಮನದಲ್ಲಿ ಇರಿಸಿಕೊಂಡು ಆರ್‌ಬಿಐ ನಿಯಂತ್ರಿಸುವ ವಿವಿಧ ಮಾರುಕಟ್ಟೆಗಳ ವಹಿವಾಟಿನ ಸಮಯವನ್ನು ಏಪ್ರಿಲ್ 7, 2020ರಂದು ಬದಲಾಯಿಸಲಾಯಿತು.

ಈ ಮಾರುಕಟ್ಟೆಗಳನ್ನು ಆರ್‌ಬಿಐ ನಿಯಂತ್ರಿಸುತ್ತದೆ ಕಾಲ್ / ನೋಟಿಸ್ / ಟರ್ಮ್ ಹಣ; ಸರ್ಕಾರಿ ಸೆಕ್ಯೂರಿಟಿಗಳಲ್ಲಿ ಮಾರುಕಟ್ಟೆ ರೆಪೋ; ಸರ್ಕಾರಿ ಸೆಕ್ಯೂರಿಟಿಗಳಲ್ಲಿ ತ್ರಿಪಕ್ಷೀಯ ರೆಪೊ; ಕಮರ್ಷಿಯಲ್ ಪೇಪರ್ ಮತ್ತು ಠೇವಣಿ ಪ್ರಮಾಣಪತ್ರಗಳು; ಕಾರ್ಪೊರೇಟ್ ಬಾಂಡ್‌ಗಳಲ್ಲಿ ರೆಪೊ; ಸರ್ಕಾರಿ ಸಾಲಪತ್ರಗಳು (ಕೇಂದ್ರ ಸರ್ಕಾರದ ಸಾಲ ಪತ್ರಗಳು, ರಾಜ್ಯ ಅಭಿವೃದ್ಧಿ ಸಾಲಗಳು ಮತ್ತು ಟ್ರೆಷರಿ ಬಿಲ್​ಗಳು); ವಿದೇಶಿ ಕರೆನ್ಸಿ (FCY)/ಭಾರತೀಯ ರೂಪಾಯಿ (INR) ವಹಿವಾಟುಗಳು, ವಿದೇಶೀ ವಿನಿಮಯ ಉತ್ಪನ್ನಗಳು ಸೇರಿದಂತೆ ರೂಪಾಯಿ ಬಡ್ಡಿದರದ ಉತ್ಪನ್ನಗಳನ್ನು ನಿಯಂತ್ರಿಸುತ್ತದೆ.

ಪರಿಷ್ಕೃತ ಸಮಯ ಹೀಗಿದೆ – ಕಾಲ್ / ನೋಟಿಸ್ / ಟರ್ಮ್ ಹಣ – ಬೆಳಗ್ಗೆ 9ರಿಂದ ಮಧ್ಯಾಹ್ನ 3.30ರ ವರೆಗೆ

– ಸರ್ಕಾರಿ ಸಾಲಪತ್ರಗಳಲ್ಲಿ ಮಾರುಕಟ್ಟೆ ರೆಪೋ – ಬೆಳಗ್ಗೆ 9ರಿಂದ ಮಧ್ಯಾಹ್ನ 2.30 ರವರೆಗೆ

– ಸರ್ಕಾರಿ ಸಾಲಪತ್ರಗಳಲ್ಲಿ ಟ್ರೈ-ಪಾರ್ಟಿ ರೆಪೋ – ಬೆಳಗ್ಗೆ 9ರಿಂದ ಮಧ್ಯಾಹ್ನ 3 ರವರೆಗೆ

– ಕಮರ್ಷಿಯಲ್ ಪೇಪರ್ ಮತ್ತು ಠೇವಣಿ ಪ್ರಮಾಣಪತ್ರಗಳು – ಬೆಳಗ್ಗೆ 9ರಿಂದ ಮಧ್ಯಾಹ್ನ 3.30

– ಕಾರ್ಪೊರೇಟ್ ಬಾಂಡ್‌ಗಳಲ್ಲಿ ರೆಪೋ – ಬೆಳಗ್ಗೆ 9ರಿಂದ ಮಧ್ಯಾಹ್ನ 3.30ರ ವರೆಗೆ

– ಸರ್ಕಾರಿ ಸಾಲಪತ್ರಗಳು (ಕೇಂದ್ರ ಸರ್ಕಾರದ ಸೆಕ್ಯೂರಿಟಿಗಳು, ರಾಜ್ಯ ಅಭಿವೃದ್ಧಿ ಸಾಲಗಳು ಮತ್ತು ಟೆಷರಿ ಬಿಲ್‌ಗಳು) – ಬೆಳಗ್ಗೆ 9ರಿಂದ ಮಧ್ಯಾಹ್ನ 3.30ರ ವರೆಗೆ

– ವಿದೇಶಿ ಕರೆನ್ಸಿ (FCY)/ಭಾರತೀಯ ರೂಪಾಯಿ (INR) ವಿದೇಶೀ ವಿನಿಮಯ ಉತ್ಪನ್ನಗಳು ಸೇರಿದಂತೆ ವ್ಯಾಪಾರಗಳು – ಬೆಳಗ್ಗೆ 9ರಿಂದ ಮಧ್ಯಾಹ್ನ 3.30 ರವರೆಗೆ

– ರೂಪಾಯಿ ಬಡ್ಡಿ ದರದ ಉತ್ಪನ್ನಗಳು – ಬೆಳಗ್ಗೆ 9ರಿಂದ ಮಧ್ಯಾಹ್ನ 3.30 ರವರೆಗೆ

ಇದನ್ನೂ ಓದಿ: ಕೊವಿಡ್ ಸಂಬಂಧಿತ ಲಿಕ್ವಿಡಿಟಿ ಕ್ರಮಗಳೆಲ್ಲವೂ ಕೊನೆ ದಿನಾಂಕದೊಂದಿಗೆ ಬಂದವು: ಆರ್‌ಬಿಐ ಗವರ್ನರ್ ದಾಸ್

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್