AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್ ಸಂಬಂಧಿತ ಲಿಕ್ವಿಡಿಟಿ ಕ್ರಮಗಳೆಲ್ಲವೂ ಕೊನೆ ದಿನಾಂಕದೊಂದಿಗೆ ಬಂದವು: ಆರ್‌ಬಿಐ ಗವರ್ನರ್ ದಾಸ್

ಕೊವಿಡ್​19 ಲಿಕ್ವಿಡಿಟಿ ಕ್ರಮಗಳು ಅಂತಿಮ ದಿನಾಂಕದೊಂದಿಗೆ ಜಾರಿಗೆ ಬಂದಿದ್ದವು ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಹೇಳಿದ್ದಾರೆ.

ಕೊವಿಡ್ ಸಂಬಂಧಿತ ಲಿಕ್ವಿಡಿಟಿ ಕ್ರಮಗಳೆಲ್ಲವೂ ಕೊನೆ ದಿನಾಂಕದೊಂದಿಗೆ ಬಂದವು: ಆರ್‌ಬಿಐ ಗವರ್ನರ್ ದಾಸ್
ಶಕ್ತಿಕಾಂತ ದಾಸ್ (ಸಂಗ್ರಹ ಚಿತ್ರ)
TV9 Web
| Edited By: |

Updated on: Mar 21, 2022 | 11:48 PM

Share

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಅವರು ಸೋಮವಾರದಂದು ಮಾತನಾಡಿ, ಬಡ್ಡಿದರಗಳನ್ನು ಹೊರತುಪಡಿಸಿ ಕೇಂದ್ರ ಬ್ಯಾಂಕ್ ಘೋಷಿಸಿದ ಕೊವಿಡ್ -19 ಸಂಬಂಧಿತ ಎಲ್ಲ ಲಿಕ್ವಿಡಿಟಿ ಕ್ರಮಗಳು ಕೊನೆಗೊಳ್ಳುವ ದಿನಾಂಕದೊಂದಿಗೆ ಬಂದಿವೆ ಎಂದು ಹೇಳಿದ್ದಾರೆ. ಸಿಐಐ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ದಾಸ್, ಆರ್‌ಬಿಐ ಲಿಕ್ವಿಡಿಟಿ ಕ್ರಮಗಳನ್ನು ಹಿಂತೆಗೆದುಕೊಳ್ಳುವುದರಿಂದ ಬಹಳ ಸಲೀಸಾಗಿ ಹೊರಬರುತ್ತದೆ ಎಂದು ಹೇಳಿದ್ದಾರೆ. “ಆರ್ಥಿಕತೆಯ ಉತ್ಪಾದನಾ ವಲಯಗಳ ಅಗತ್ಯಗಳನ್ನು ಪೂರೈಸಲು ನಾವು ಹೇರಳವಾದ ಲಿಕ್ವಿಡಿಟಿಯನ್ನು ಖಚಿತಪಡಿಸಿಕೊಳ್ಳುತ್ತೇವೆ. 17 ಲಕ್ಷ ಕೋಟಿ ರೂಪಾಯಿ ಲಿಕ್ವಿಡಿಟಿ ಬೆಂಬಲವನ್ನು ಒದಗಿಸಲಾಗಿದೆ,” ಎಂದು ಅವರು ಹೇಳಿದ್ದಾರೆ.

ಏರುತ್ತಿರುವ ಹಣದುಬ್ಬರದ ಒತ್ತಡದ ಹಿನ್ನೆಲೆಯಲ್ಲಿ ವಿಶ್ಲೇಷಕರು ಮತ್ತು ತಜ್ಞರು ದರಗಳಲ್ಲಿ ಹೆಚ್ಚಳ ಹಾಗೂ ಅದರ ನಿಲುವಿನಲ್ಲಿ ಬದಲಾವಣೆಯನ್ನು ಊಹಿಸಿದ್ದರು. ವಿತ್ತೀಯ ನೀತಿ ಹಿನ್ನಡೆಯ ನಿರೀಕ್ಷೆಗಳನ್ನು ಆರ್‌ಬಿಐ ತಡೆದುಕೊಂಡಿದೆ ಎಂದು ಗವರ್ನರ್ ದಾಸ್ ಸೋಮವಾರ ಹೇಳಿದ್ದಾರೆ. “ಬೆಳವಣಿಗೆಯನ್ನು ಬೆಂಬಲಿಸಲು ಹೊಂದಾಣಿಕೆ ನಿಲುವಿನಿಂದ ದೂರ ಸರಿಯುವ ಎಲ್ಲ ಆಮಿಷಗಳನ್ನು ಆರ್‌ಬಿಐ ತಡೆಯಿತು. ಇನ್ನು ಮುಂದೆ ಹಣದುಬ್ಬರವು ಮಿತಗೊಳಿಸುವುದನ್ನು ಎದುರು ನೋಡುತ್ತಿದ್ದೇವೆ,” ಎಂದು ದಾಸ್ ತಿಳಿಸಿದ್ದಾರೆ.

“ಬೆಳವಣಿಗೆಗೆ ಬೆಂಬಲವಾಗಿ ಆರ್‌ಬಿಐ ಮುಂದುವರಿಯುತ್ತದೆ. ಬೆಲೆ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮತ್ತು ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ನಮ್ಮ ಪ್ರಾಥಮಿಕ ಜವಾಬ್ದಾರಿ ಬಗ್ಗೆ ಜಾಗೃತರಾಗಿದ್ದೇವೆ” ಎಂದಿದ್ದಾರೆ. ಭಾರತೀಯ ಆರ್ಥಿಕತೆಯ ಬಗ್ಗೆ ಮಾತನಾಡುತ್ತಾ, ಆರ್​ಬಿಐ ಅನುಸರಿಸುವ ಸುಮಾರು 60 ಹೈ-ಫ್ರೀಕ್ವೆನ್ಸಿ ಸೂಚಕಗಳ ಬಗ್ಗೆ ಗವರ್ನರ್ ದಾಸ್ ಮಾತನಾಡಿದ್ದಾರೆ ಮತ್ತು ಭಾರತೀಯ ಆರ್ಥಿಕತೆಯು ಈಗ ಉತ್ತಮ ಸ್ಥಾನದಲ್ಲಿದೆ. “ಸ್ಟಾಗ್​ಫ್ಲೇಷನ್ ನಿರೀಕ್ಷೆಯು ಭಾರತಕ್ಕೆ ಇಲ್ಲ. ನಿರಂತರ ಆಧಾರದ ಮೇಲೆ ಗ್ರಾಹಕ ದರ ಸೂಚ್ಯಂಕ ಶೇ 6ರಷ್ಟು ಮೇಲ್ಮಟ್ಟದಲ್ಲಿರುವ ಪರಿಸ್ಥಿತಿಯನ್ನು ನೋಡುವುದಿಲ್ಲ,” ಎಂದು ಅವರು ಹೇಳಿದ್ದಾರೆ.

ಕೊವಿಡ್‌ನಿಂದ ಉಂಟಾಗುವ ಪ್ರತಿಕೂಲವನ್ನು ನಿಭಾಯಿಸಲು ಆರ್‌ಬಿಐ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಮಾರುಕಟ್ಟೆಯು ಹಣದ ಮಾರುಕಟ್ಟೆಯಾಗಿರಲಿ ಅಥವಾ ವಿದೇಶೀ ವಿನಿಮಯ ಮಾರುಕಟ್ಟೆಯಾಗಿರಲಿ ಸಾಮಾನ್ಯವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿದೆ ಎಂದು ದಾಸ್ ಹೇಳಿದ್ದಾರೆ. “ಹಣದ ವೆಚ್ಚವನ್ನು ಕಡಿಮೆ ಮಾಡುವುದು ನಮ್ಮ ಗಮನವಾಗಿತ್ತು. ಆದ್ದರಿಂದ ನಾವು ರೆಪೊ ದರವನ್ನು 75 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದ್ದೇವೆ. ಶೀಘ್ರದಲ್ಲೇ ನಾವು ಹಣಕಾಸಿನ ಮಾರುಕಟ್ಟೆಯು ಸ್ಥಗಿತಗೊಳ್ಳುವುದನ್ನು ಕಂಡುಕೊಂಡಿದ್ದೇವೆ. ಆದ್ದರಿಂದ ಲಿಕ್ವಿಡಿಟಿ ಕ್ರಮಗಳನ್ನು ಘೋಷಿಸಲಾಯಿತು,” ಎಂದು ದಾಸ್ ಸೇರಿಸಿದ್ದಾರೆ. ಅದು ಭೌಗೋಳಿಕ ರಾಜಕೀಯ ಉದ್ವಿಗ್ನತೆಯೇ ಆಗಿರಲಿ ಅಥವಾ ಕೊವಿಡ್ ಸನ್ನಿವೇಶಗಳನ್ನು ನಿಭಾಯಿಸುತ್ತಿರಲಿ ಆರ್‌ಬಿಐನ ವಿಧಾನವು ಯಾವಾಗಲೂ ನಿಯಮ ಪುಸ್ತಕವನ್ನು ಮೀರಿದೆ ಎಂದು ದಾಸ್ ಹೇಳಿದ್ದಾರೆ.

ಬ್ಯಾಂಕ್‌ಗಳ ಸ್ಥಿತಿಯ ಕುರಿತು ದಾಸ್ ಅವರು ಮಾತನಾಡಿ, ಬ್ಯಾಂಕ್‌ಗಳು 16ರ ದರದಲ್ಲಿ ಸಿಸ್ಟಮ್ ಮಟ್ಟದ ಕ್ಯಾಪಿಟಲ್ ಅಡಿಕ್ವೆಸಿ ಅನುಪಾತದೊಂದಿಗೆ ಉತ್ತಮ ಬಂಡವಾಳವನ್ನು ಹೊಂದಿವೆ. ಒಟ್ಟು ಎನ್‌ಪಿಎಗಳು ದಾಖಲೆಯ ಶೇ 6.5ಕ್ಕೆ ಇಳಿದಿವೆ ಎಂದಿದ್ದಾರೆ. ಚಾಲ್ತಿ ಖಾತೆ ಕೊರತೆಯ ಹೆಚ್ಚುತ್ತಿರುವ ಆತಂಕವನ್ನು ನಿವಾರಿಸಿದ ಅವರು, ಭಾರತವು ಅದಕ್ಕೆ ಹಣಕಾಸು ಒದಗಿಸುವಲ್ಲಿ ಯಾವುದೇ ಸವಾಲುಗಳನ್ನು ಎದುರಿಸುವುದಿಲ್ಲ. “ಯುದ್ಧದ ಸಮಯದಲ್ಲಿ ನಮ್ಮ CAD ತುಂಬಾ ಕಡಿಮೆಯಾಗಿದ್ದು, ವಿದೇಶೀ ವಿನಿಮಯ ಮೀಸಲು 622 ಶತಕೋಟಿಗಳ ಮಟ್ಟದಲ್ಲಿದೆ,” ಎಂದು ಅವರು ಹೇಳಿದ್ದಾರೆ.

“ನಾವು ಕಚ್ಚಾ ಬೆಲೆಯ ಏರಿಳಿತ ಮತ್ತು ಕಮಾಡಿಟಿ ಸೈಕಲ್​ಗಳನ್ನು ಹತ್ತಿರದಿಂದ ಗಮನಿಸುತ್ತಿದ್ದೇವೆ. ನಾವು ಹಣದುಬ್ಬರ ಡೈನಾಮಿಕ್ಸ್ ಅನ್ನು ವೀಕ್ಷಿಸಬೇಕಾಗಿದೆ. ಯಾವುದೇ ಹೊಸ ಸವಾಲನ್ನು ಎದುರಿಸುವ ವಿಶ್ವಾಸವಿದೆ,” ಎಂದು ದಾಸ್ ಸೇರಿಸಿದ್ದಾರೆ. “ಕಚ್ಚಾ ತೈಲ ದರವು ಇದೇ ಸ್ಥಿತಿಯಲ್ಲಿ ಎಷ್ಟು ಕಾಲ ಉಳಿಯುತ್ತದೆ ಎಂದು ನಮಗೆ ಇಂದು ತಿಳಿದಿಲ್ಲ. ಇಂದಿನ ಪರಿಸ್ಥಿತಿಯು ಅನಿಶ್ಚಿತವಾಗಿ ಉಳಿದಿದೆ,” ಎಂದಿದ್ದಾರೆ.

ಇದನ್ನೂ ಓದಿ: LIC IPO: ಸರಿಯಾದ ಸಮಯದಲ್ಲಿ ಎಲ್​ಐಸಿ ಐಪಿಒ ಬರಬೇಕು: ಕೇಂದ್ರ ಸರ್ಕಾರಕ್ಕೆ ಆರ್​ಬಿಐ ಸಲಹೆ

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್