Elon Musk: ಟ್ವೀಟ್ನಿಂದ ಹಣ ಗಳಿಕೆ, ವೇತನ ಕಡಿತ ಸೇರಿದಂತೆ ಸಾಲ ನೀಡುವವರ ಮುಂದೆ ಎಲಾನ್ ಮಸ್ಕ್ ಇಟ್ಟ ಪ್ಲಾನ್ಗಳಿವು
ಟ್ವೀಟ್ ಮೂಲಕ ಹಣ ಗಳಿಕೆ, ಕಂಪೆನಿಯಲ್ಲಿ ವೇತನ ಕಡಿತ ಸೇರಿದಂತೆ ವೆಚ್ಚ ಕಡಿತದ ಬಗ್ಗೆ ಸಾಲ ನೀಡುವವರ ಬಳಿ ಎಲಾನ್ ಮಸ್ಕ್ ಪ್ರಸ್ತಾವ ಮಾಡಿದ್ದಾರೆ.
ಟ್ವಿಟ್ಟರ್ ಇಂಕ್ (Twitter) ಷೇರುಗಳ ಖರೀದಿ ಮಾಡುತ್ತಿರುವ ಎಲಾನ್ ಮಸ್ಕ್ ಕಹಾನಿಯಲ್ಲಿ ಟ್ವಿಸ್ಟ್ ಬಂದಿದೆ. ಯಾವ ಬ್ಯಾಂಕ್ಗಳು ಟ್ವಿಟ್ಟರ್ ಷೇರು ಖರೀದಿಗೆ ಹಣ ಸಾಲ ನೀಡಲು ಪ್ರಾಯೋಜಕತ್ವ ವಹಿಸುತ್ತಿವೆಯೋ ಅವುಗಳಿಗೆ ಸ್ವತಃ ಎಲಾನ್ ಮಸ್ಕ್ ಹೇಳಿದ್ದಾರೆ ಎನ್ನಲಾದ ವರದಿ ಇಲ್ಲಿದೆ. ಆ ಪ್ರಕಾರ, ಟ್ವಿಟ್ಟರ್ ಕಂಪೆನಿಯಲ್ಲಿ ಹಣ ಉಳಿಸುವ ಸಲುವಾಗಿ ಅಧಿಕಾರಿಗಳು ಮತ್ತು ಮಂಡಳಿಯ ಸದಸ್ಯರ ವೇತನಕ್ಕೆ ಕತ್ತರಿ ಹಾಕಲಾಗುವುದಂತೆ. ಇನ್ನು ರಾಯಿಟರ್ಸ್ ವರದಿ ಮಾಡಿರುವಂತೆ, ಟ್ವೀಟ್ಸ್ಗಳಿಗೆ ಹಣ ಗಳಿಸುವ ಯೋಜನೆ ಸಹ ಮಸ್ಕ್ ಮುಂದಿಟ್ಟಿದ್ದಾರೆ. ಏಪ್ರಿಲ್ 14ನೇ ತಾರೀಕಿನಂದು ಟ್ವಿಟ್ಟರ್ ಖರೀದಿಗೆ ಆಫರ್ ಮಾಡಿದ ನಂತರ ಸಾಲ ಪಡೆಯುವ ಸಲುವಾಗಿ ಸಾಲಗಾರರಿಗೆ ಹೇಳಿರುವಂಥ ಅಂಶಗಳು ಇವಾಗಿವೆ. ತಾನು ಪಡೆಯುತ್ತಿರುವ ಸಾಲಕ್ಕೆ ಟ್ವಿಟ್ಟರ್‌ನ ನಗದು ಹರಿವು ಸಾಕಾಗುತ್ತದೆ ಎಂಬುದನ್ನು ಮಸ್ಕ್ ಮನದಟ್ಟು ಮಾಡಬೇಕಾಯಿತು. ಕೊನೆಗೆ ಟ್ವಿಟ್ಟರ್ ಮೇಲೆ 1300 ಕೋಟಿ ಅಮೆರಿಕನ್ ಯುಎಸ್ಡಿ ಮತ್ತು 1250 ಕೋಟಿ ಯುಎಸ್ಡಿ ಮಾರ್ಜಿನ್ ಸಾಲವನ್ನು ಟೆಸ್ಲಾ ಈಕ್ವಿಟಿ ಮೇಲೆ ಪಡೆದಿದ್ದಾರೆ. ಬಾಕಿ ಮೊತ್ತವನ್ನು ಸ್ವಂತ ಹಣದಲ್ಲಿ ಪಾವತಿಸುವುದಾಗಿ ಮಸ್ಕ್ ಹೇಳಿದ್ದಾರೆ.
ಈ ಹಿಂದೆ ಮಸ್ಕ್ ಮಾತನಾಡುವಾಗ ಟ್ವಿಟ್ಟರ್‌ನ ಮಂಡಳಿ ನಿರ್ದೇಶಕರ ಸಂಬಳ ತೆಗೆಯುವ ಬಗ್ಗೆ ಇರುವ ಯೋಜನೆ ಕುರಿತು ಹೇಳಿದ್ದರು. ಇದರಿಂದಾಗಿ, ಮಸ್ಕ್ ಅಭಿಪ್ರಾಯದಂತೆ 30 ಲಕ್ಷ ಅಮೆರಿಕನ್ ಡಾಲರ್ ತನಕ ಉಳಿತಾಯ ಮಾಡಬಹುದು. ಒಂದು ವೇಳೆ ನನ್ನ ಬಿಡ್ ಯಶಸ್ವಿಯಾದಲ್ಲಿ ಮಂಡಳಿ ಸದಸ್ಯರ ವೇತನ ಶೂನ್ಯ. ಇಲ್ಲಿಂದಲೇ ವರ್ಷಕ್ಕೆ 3 ಮಿಲಿಯನ್ ಡಾಲರ್ ಉಳಿತಾಯ ಮಾಡಿದಂತಾಯಿತು ಎಂಬುದಾಗಿ ಎಲಾನ್ ಮಸ್ಕ್ ಏಪ್ರಿಲ್ 18ರಂದು ಟ್ವೀಟ್ ಮಾಡಿದ್ದರು.
ರಾಯಿಟರ್ಸ್ನ ಅನಾಮಧೇಯ ಮೂಲದ ಪ್ರಕಾರ, ಟ್ವಿಟ್ಟರ್‌ನ ಒಟ್ಟು ಮಾರ್ಜಿನ್ ಅನ್ನು ಮೆಟಾದ ಫೇಸ್‌ಬುಕ್ ಮತ್ತು ಪಿನ್‌ಟೆರೆಸ್ಟ್‌ಗಿಂತ ಕಡಿಮೆ ಎಂಬುದರ ಕಡೆಗೆ ಮಸ್ಕ್ ಗಮನ ಸೆಳೆದಿದ್ದು, ಇದರಿಂದಾಗಿ ಕಂಪೆನಿಯನ್ನು ವೆಚ್ಚ-ಪರಿಣಾಮಕಾರಿಯಾಗಿ ನಡೆಸಲು ಸಾಕಷ್ಟು ಅವಕಾಶ ನೀಡುತ್ತದೆ ಎನ್ನಲಾಗಿದೆ. ಬ್ಯಾಂಕ್‌ಗಳಿಗೆ ಮಸ್ಕ್‌ನ ಪ್ರಸ್ತಾವದಲ್ಲಿ ಉದ್ಯೋಗ ಕಡಿತವನ್ನು ಸಹ ಒಳಗೊಂಡಿದೆ ಎಂದು ಬ್ಲೂಮ್‌ಬರ್ಗ್ ಈ ಹಿಂದೆ ವರದಿ ಮಾಡಿದ್ದು, ಆದರೂ ಅವರು ಸಂಸ್ಥೆಯ ಮಾಲೀಕತ್ವವನ್ನು ಪಡೆದುಕೊಳ್ಳುವವರೆಗೆ ನಿರ್ಧಾರವನ್ನು ತೆಗೆದುಕೊಳ್ಳುವ ನಿರೀಕ್ಷೆಯಿಲ್ಲ.
ಅವರ ಹಣಗಳಿಕೆ ಯೋಜನೆಗಳು ವೈರಲ್ ಟ್ವೀಟ್‌ಗಳನ್ನು ಬಳಸಿಕೊಂಡು ವ್ಯಾಪಾರ ಆದಾಯವನ್ನು ಹೆಚ್ಚಿಸಲು ಫೀಚರ್ಗಳನ್ನು ಅಭಿವೃದ್ಧಿಪಡಿಸುವುದನ್ನು ಒಳಗೊಂಡಿವೆ. ವೆರಿಫೈ ಮಾಡಲಾದ ಖಾತೆಗಳ ಮೂಲಕ ಟ್ವೀಟ್ ಅನ್ನು ಉಲ್ಲೇಖಿಸಲು ಅಥವಾ ಎಂಬೆಡ್ ಮಾಡಲು ಮೂರನೇ ವ್ಯಕ್ತಿಯ ವೆಬ್‌ಸೈಟ್‌ಗಳಿಗೆ ಶುಲ್ಕ ವಿಧಿಸುವುದು ಅವರ ಆಲೋಚನೆಗಳಲ್ಲಿ ಒಂದಾಗಿದೆ. ಅವರ ಹಿಂದಿನ ಟ್ವೀಟ್‌ಗಳಲ್ಲಿ, ಟ್ವಿಟ್ಟರ್ ಬ್ಲೂ ಪ್ರೀಮಿಯಂನ ಚಂದಾದಾರಿಕೆ ಸೇವೆಯನ್ನು ಕಡಿತಗೊಳಿಸುವುದು ಸೇರಿದಂತೆ ಹಲವು ಬದಲಾವಣೆಗಳನ್ನು ಅವರು ಸೂಚಿಸಿದ್ದರು. ಅವರು ಅಳಿಸಿ ಹಾಕಿದ ಮತ್ತೊಂದು ಟ್ವೀಟ್‌ನಲ್ಲಿ, ಆದಾಯಕ್ಕಾಗಿ ಜಾಹೀರಾತಿನ ಮೇಲೆ ಟ್ವಿಟ್ಟರ್ ಅವಲಂಬನೆಯನ್ನು ಕಡಿಮೆ ಮಾಡಲು ಸಲಹೆ ನೀಡಿದ್ದರು.
ಇದನ್ನೂ ಓದಿ: Parag Agarwal: ಟ್ವಿಟ್ಟರ್ ಸಿಇಒ ಪರಾಗ್ ಅಗರ್ವಾಲ್ರನ್ನು ಕೆಲಸದಿಂದ ತೆಗೆದಲ್ಲಿ 300 ಕೋಟಿ ರೂ.ಗೂ ಹೆಚ್ಚು ಪರಿಹಾರ