Work From Anywhere ಜಾರಿಗೊಳಿಸುವ ಯೋಚನೆ ಸರ್ಕಾರಕ್ಕಿದೆ: ಪ್ರಧಾನಿ ಮೋದಿ

ಬೆಂಗಳೂರು: ಕೋವಿಡ್ ಕಾಲದಲ್ಲಿ ತಂತ್ರಜ್ಞಾನದ ಸಹಾಯದಿಂದ ವರ್ಕ್ ಫ್ರಂ ಹೋಮ್​ಗೆ ಬದಲಾಗಲು ಸಾಧ್ಯವಾಯಿತು.ಭವಿಷ್ಯದಲ್ಲಿ ಇನ್ನಷ್ಟು ಸುಧಾರಿತ ತಂತ್ರಜ್ಞಾನದ ಮೂಲಕ ವರ್ಕ್ ಫ್ರಂ ಎನಿವೇರ್ Work From Anywhere-WFA ಜಾರಿಗೊಳಿಸುವ ಕುರಿತು ಸರ್ಕಾರ ಹೆಜ್ಜೆಯಿಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. ಡಿಜಿಟಲ್ ಇಂಡಿಯಾ ಮಾನವ ಕೇಂದ್ರಿತ ಯೋಜನೆಗಳನ್ನೇ ಹಮ್ಮಿಕೊಂಡಿದೆ. ತಂತ್ರಜ್ಞಾನದ ಸಮರ್ಥ ಬಳಕೆ ಜನಸಾಮಾನ್ಯರಿಗೆ ಗೌರವ ತಂದುಕೊಟ್ಟಿದೆ. ಬಡವರಿಗೆ ಸರ್ಕಾರದ ಆರೋಗ್ಯ ಸೇವೆಗಳನ್ನು ಪರಿಚಯಿಸಿದೆ. ಬಡವರು ಸರ್ಕಾರವನ್ನು ಸಂಪರ್ಕಿಸಲು ಪ್ರಬಲ ವೇದಿಕೆಯನ್ನು ಒದಗಿಸಿದೆ. ಕೋವಿಡ್-19ನಂತಹ ಪಿಡುಗನ್ನು ಸಮರ್ಥವಾಗಿ […]

Work From Anywhere ಜಾರಿಗೊಳಿಸುವ ಯೋಚನೆ ಸರ್ಕಾರಕ್ಕಿದೆ: ಪ್ರಧಾನಿ ಮೋದಿ
ಸಾಂದರ್ಭಿಕ ಚಿತ್ರ
Follow us
ಸಾಧು ಶ್ರೀನಾಥ್​
| Updated By: ಪೃಥ್ವಿಶಂಕರ

Updated on:Nov 19, 2020 | 3:10 PM

ಬೆಂಗಳೂರು: ಕೋವಿಡ್ ಕಾಲದಲ್ಲಿ ತಂತ್ರಜ್ಞಾನದ ಸಹಾಯದಿಂದ ವರ್ಕ್ ಫ್ರಂ ಹೋಮ್​ಗೆ ಬದಲಾಗಲು ಸಾಧ್ಯವಾಯಿತು.ಭವಿಷ್ಯದಲ್ಲಿ ಇನ್ನಷ್ಟು ಸುಧಾರಿತ ತಂತ್ರಜ್ಞಾನದ ಮೂಲಕ ವರ್ಕ್ ಫ್ರಂ ಎನಿವೇರ್ Work From Anywhere-WFA ಜಾರಿಗೊಳಿಸುವ ಕುರಿತು ಸರ್ಕಾರ ಹೆಜ್ಜೆಯಿಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಡಿಜಿಟಲ್ ಇಂಡಿಯಾ ಮಾನವ ಕೇಂದ್ರಿತ ಯೋಜನೆಗಳನ್ನೇ ಹಮ್ಮಿಕೊಂಡಿದೆ. ತಂತ್ರಜ್ಞಾನದ ಸಮರ್ಥ ಬಳಕೆ ಜನಸಾಮಾನ್ಯರಿಗೆ ಗೌರವ ತಂದುಕೊಟ್ಟಿದೆ. ಬಡವರಿಗೆ ಸರ್ಕಾರದ ಆರೋಗ್ಯ ಸೇವೆಗಳನ್ನು ಪರಿಚಯಿಸಿದೆ. ಬಡವರು ಸರ್ಕಾರವನ್ನು ಸಂಪರ್ಕಿಸಲು ಪ್ರಬಲ ವೇದಿಕೆಯನ್ನು ಒದಗಿಸಿದೆ. ಕೋವಿಡ್-19ನಂತಹ ಪಿಡುಗನ್ನು ಸಮರ್ಥವಾಗಿ ಎದುರಿಸಲು ಸಹಾಯ ಮಾಡಿದೆ. ದಿನನಿತ್ಯದ ಜೀವನವನ್ನು ಸುಲಭವಾಗಿಸಿದೆ. ಆಧುನಿಕ ತಂತ್ರಜ್ಞಾನದ ಮೂಲಕ ದೇಶವನ್ನು ಕಟ್ಟಲು ಸರ್ಕಾರ ಉತ್ಸುಕವಾಗಿದೆ ಎಂದು ಅವರು ವಿವರಿಸಿದರು.

ಎಲ್ಲಿಂದ ಬೇಕಾದರೂ ಕೆಲಸ ನಿರ್ವಹಿಸುವ ಅವಕಾಶದಿಂದ ಆಡಳಿತಗಳಿಗೆ ನೆರವಾಗಲಿದೆ. ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಗರಾಡಳಿತಗಳ ಹೆಣಗಾಟ ಕೊನೆಗೊಳ್ಳಲಿದೆ ಎಂದು ಭವಿಷ್ಯದ ಯೋಜನೆಗಳ ಕುರಿತು ಸುಳಿವು ನೀಡಿದರು.

ಭಾರತದ ಚಿಕ್ಕ ಉದ್ದಿಮೆಗಳಿಗೆ ಜಾಗತಿಕ ಮಟ್ಟದಲ್ಲಿ ಮಿಂಚುವ ಸಾಮರ್ಥ್ಯವಿದೆ. ಅಕ್ಟೋಬರ್ ಒಂದೇ ತಿಂಗಳಲ್ಲಿ ಕೇಂದ್ರೀಕೃತ ಯುಪಿಐಗಳ ಮೂಲಕ 200 ಬಿಲಿಯನ್ ಹಣಕಾಸಿನ ವಹಿವಾಟು ನಡೆದಿದೆ. ಸಣ್ಣ ಅಂಗಡಿಕಾರರು ಯುಪಿಐಗಳ ಮೂಲಕ ಉದ್ದಿಮೆಯ ವಿಸ್ತರಣೆ ನಡೆಸುತ್ತಿದ್ದಾರೆ. ಅಲ್ಲದೇ, ರಕ್ಷಣಾ ಕ್ಷೇತ್ರಕ್ಕೆ ಸಹ ತಂತ್ರಜ್ಞಾನ ಮರು ವ್ಯಾಖ್ಯಾನ ನೀಡಿದೆ. ಸೈಬರ್ ಭದ್ರತೆಗೆ ಸಂಬಂಧಿಸಿ ದೇಶದ ಯುವಕರು ಹೊಸ ಭಾಷ್ಯವನ್ನೇ ಬರೆಯಲಿದ್ದಾರೆ. ಈ-ಗವರ್ನೆನ್ಸ್, ಸ್ವಾಮಿತ್ವ ಯೋಜನೆಗಳು ಸರ್ಕಾರದ ಸಹಭಾಗಿತ್ವ ವಿವರಿಸಲಿವೆ. ಭಾರತದ ಐಟಿ ಉದ್ದಿಮೆ ದೇಶವನ್ನು ಬಲಗೊಳಿಸುವ ವಿಶ್ವಾಸವಿದೆ ಎಂದರು.

ಇದನ್ನೂ ಓದಿ: ಅಭಿವೃದ್ಧಿಯಲ್ಲಿ ಜೊತೆಜೊತೆಗೆ ಸಾಗೋಣ: ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್

Bengaluru Tech Summit 2020 ಮುಂದಿನ 5 ವರ್ಷಗಳಲ್ಲಿ 50 ಲಕ್ಷ ಉದ್ಯೋಗ: CM ಯಡಿಯೂರಪ್ಪ

ದತ್ತಾಂಶ ಸುರಕ್ಷತಾ ಕಾನೂನು ರೂಪಿಸುತ್ತೇವೆ: ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್

Published On - 12:17 pm, Thu, 19 November 20