ಕಿಚ್ಚ ಸುದೀಪ್​ಗೆ ಸಿಕ್ತು ಮತ್ತೊಂದು ಬ್ಯಾಟ್ ಗಿಫ್ಟ್​; ಇದರಲ್ಲಿದೆ ಹಲವು ದಿಗ್ಗಜರ ಆಟೋಗ್ರಾಫ್​

ಈಗ ಕಿಚ್ಚ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ವಿಶೇಷ ಸಂದರ್ಭದಲ್ಲಿ ಸುದೀಪ್​ಗೆ ಒಂದು ಅದ್ಭುತ ಗಿಫ್ಟ್ ಸಿಕ್ಕಿದೆ.

ಕಿಚ್ಚ ಸುದೀಪ್​ಗೆ ಸಿಕ್ತು ಮತ್ತೊಂದು ಬ್ಯಾಟ್ ಗಿಫ್ಟ್​; ಇದರಲ್ಲಿದೆ ಹಲವು ದಿಗ್ಗಜರ ಆಟೋಗ್ರಾಫ್​
ಸುದೀಪ್​
TV9kannada Web Team

| Edited By: Rajesh Duggumane

Jun 26, 2022 | 12:46 PM

ನಟ ಕಿಚ್ಚ ಸುದೀಪ್ (Kichcha Sudeep) ಅವರಿಗೆ ಇತ್ತೀಚೆಗೆ ಖುಷಿಯ ಮೇಲೆ ಖುಷಿಯ ವಿಚಾರ ಸಿಗುತ್ತಿದೆ. ‘ವಿಕ್ರಾಂತ್ ರೋಣ’ ಚಿತ್ರದ (Vikrant Rona Movie) ಟ್ರೇಲರ್​ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಅದಕ್ಕೂ ಮೊದಲು ಇಂಗ್ಲೆಂಡ್ ಆಟಗಾರ ಜೋಸ್ ಬಟ್ಲರ್ ಅವರಿಂದ ಬ್ಯಾಟ್ ಗಿಫ್ಟ್ ಸಿಕ್ಕಿತ್ತು. ಇಂದು (ಜೂನ್​ 26) ಸುದೀಪ್​ಗೆ ಮತ್ತೊಂದು ವಿಶೇಷ ಗಿಫ್ಟ್ ಸಿಕ್ಕಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರಿಂದ ಅನ್ನೋದು ವಿಶೇಷ. ಈ ಫೋಟೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಸುದೀಪ್​ ಅವರಿಗೆ ಸಿನಿಮಾ ಜತೆಗೆ ಕ್ರಿಕೆಟ್ ಬಗ್ಗೆಯೂ ಆಸಕ್ತಿ ಇದೆ. ಆಗಾಗ ಅವರು ಕ್ರಿಕೆಟ್ ಆಡುತ್ತಾರೆ. 1983ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದ ಕಥೆಯನ್ನು ಆಧರಿಸಿ ‘83’ ಚಿತ್ರ ಸಿದ್ಧಗೊಂಡಿತ್ತು. ಈ ಸಿನಿಮಾ ತಂಡ ಬೆಂಗಳೂರಿಗೆ ಬಂದಾಗ ಸುದೀಪ್ ಕೂಡ ಹಾಜರಿ ಹಾಕಿದ್ದರು. ಆ ಕ್ಷಣವನ್ನು ಅವರು ಆನಂದಿಸಿದ್ದರು. ಈಗ ಕಿಚ್ಚ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ವಿಶೇಷ ಸಂದರ್ಭದಲ್ಲಿ ಸುದೀಪ್​ಗೆ ಒಂದು ಅದ್ಭುತ ಗಿಫ್ಟ್ ಸಿಕ್ಕಿದೆ.

1983ರಲ್ಲಿ ವಿಶ್ವಕಪ್​ ಆಡಿದ ಟೀಂ ಇಂಡಿಯಾ ಆಟಗಾರರ ಹೆಸರನ್ನು ಪುಟ್ಟ ಬ್ಯಾಟ್ ಮೇಲೆ ಬರೆಯಲಾಗಿದೆ. ಈ ಬ್ಯಾಟ್​ಮೇಲೆ ಆಟಗಾರರು ತಮ್ಮ ಹಸ್ತಾಕ್ಷರ ಹಾಕಿದ್ದಾರೆ. ಈ ಬ್ಯಾಟ್​ಅನ್ನು ಕಪಿಲ್​ ದೇವ್​ ಅವರು ಸುದೀಪ್​ಗೆ ಗಿಫ್ಟ್ ಆಗಿ ನೀಡಿದ್ದಾರೆ. ಈ ಬ್ಯಾಟ್​ನ ಫೋಟೋವನ್ನು ಹಂಚಿಕೊಂಡು ಸುದೀಪ್ ಸಂಭ್ರಮಿಸಿದ್ದಾರೆ. ‘ವಾವ್​..ಎಂತಹ ಭಾನುವಾರ. ಇಂತಹ ದೊಡ್ಡ ಸರ್​ಪ್ರೈಸ್​ಗೆ ನಿಮಗೆ ಧನ್ಯವಾದ. ಇದನ್ನು ನಾನು ನಿರೀಕ್ಷಿಸಿರಲಿಲ್ಲ. ನಾನು ವಿಶ್ವದ ತುತ್ತ ತುದಿಯಲ್ಲಿದ್ದೇನೆ. ಧನ್ಯವಾದಗಳು’ ಎಂದು ಸುದೀಪ್ ಬರೆದುಕೊಂಡಿದ್ದಾರೆ.

ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸುದೀಪ್ ಬಗ್ಗೆ ವಿಶೇಷ ಪ್ರೀತಿ ಇದೆ. ಈ ಮೊದಲು ರಾಜಸ್ಥಾನ್ ರಾಯಲ್ಸ್ ತಂಡದವರು ಸುದೀಪ್​ಗೆ ಜೆರ್ಸಿ ಗಿಫ್ಟ್ ನೀಡಿದ್ದರು. ರಾಜಸ್ಥಾನ್​ ತಂಡದ ಆಟಗಾರ ಜೋಸ್ ಬಟ್ಲರ್ ಅವರು ಬ್ಯಾಟ್​ಅನ್ನು ಸುದೀಪ್​ಗೆ ನೀಡಿದ್ದರು. ಈ ಸುದ್ದಿ ಕೂಡ ಸಾಕಷ್ಟು ಚರ್ಚೆ ಆಗಿತ್ತು.

ಇದನ್ನೂ ಓದಿ: ಜೋಸ್ ಬಟ್ಲರ್ ಕೊಟ್ಟ ಬ್ಯಾಟ್​ ಅನ್ನು ಸುದೀಪ್ ಎಲ್ಲಿಟ್ಟಿದ್ದಾರೆ? ಕಿಚ್ಚ ಕೊಟ್ರು ಉತ್ತರ

ಇದನ್ನೂ ಓದಿ

ಕೇರಳದಲ್ಲಿ ‘ವಿಕ್ರಾಂತ್​ ರೋಣ’: ಕೊಚ್ಚಿಗೆ ತೆರಳಿದ ಕಿಚ್ಚ ಸುದೀಪ್​ಗೆ ಅಭಿಮಾನಿಗಳ ಆತ್ಮೀಯ ಸ್ವಾಗತ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada