ಮುದ್ದಿನ ಶ್ವಾನದೊಂದಿಗೆ 777 ಚಾರ್ಲಿ ಸಿನಿಮಾ ವೀಕ್ಷಿಸಿದ ಜನಾರ್ದನ ರೆಡ್ಡಿ; ವೈರಲ್ ವಿಡಿಯೋ ಇಲ್ಲಿದೆ
ಶ್ವಾನದೊಂದಿಗೆ ಚಾರ್ಲಿ ಸಿನಿಮಾ ನೋಡಿದ ಜನಾರ್ದನ ರೆಡ್ಡಿ ಬಳಿಕ ಸಾಮಾಜಿಕ ತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 1995ರಿಂದ ಶ್ವಾನ ರಾಖಿಯ ಜೊತೆ ಇರುವ ಭಾವನಾತ್ಮಕ ಸಂಬಂಧವನ್ನು ಉಲ್ಲೇಖಿಸಿದ್ದಾರೆ.
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshith Shetty) ನಟನೆಯ 777 ಚಾರ್ಲಿ (777 Charlie) ಸಿನಿಮಾ ನಿರೀಕ್ಷೆಗೂ ಮೀರಿ ಮುನುಗ್ಗುತ್ತಿದೆ. ಚಿತ್ರರಂಗದಲ್ಲಿ ಮೋಡಿ ಮಾಡುತ್ತಿರುವ ಚಾರ್ಲಿ ಸಿನಿಮಾವನ್ನು ಎಲ್ಲರು ಇಷ್ಟಪಟ್ಟು ವೀಕ್ಷಿಸುತ್ತಿದ್ದಾರೆ. ಜೊತೆಗೆ ಭರ್ಜರಿ ಕಲೆಕ್ಷನ್ ಕೂಡಾ ಮಾಡುತ್ತಿದೆ. ಸಿನಿಮಾವನ್ನು ವೀಕ್ಷಿಸಿದ ಅಭಿಮಾನಿಗಳಿಂದ ಹಿಡಿದು ನಟಿ- ನಟಿಯರು ಚಾರ್ಲಿ ಬಗ್ಗೆ ಕೊಂಡಾಡಿದ್ದಾರೆ. ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಕೂಡಾ ಸಿನಿಮಾ ನೋಡಿ ಕಣ್ಣೀರಾಕಿದ್ದಾರೆ. ಇನ್ನು ಸಚಿವ ಜನಾರ್ದನ ರೆಡ್ಡಿ ಅವರು ಕೂಡಾ ಸಿನಿಮಾ ವೀಕ್ಷಿಸಿದ್ದಾರೆ. ಶ್ವಾನದೊಂದಿಗೆ ಚಾರ್ಲಿ ಸಿನಿಮಾ ನೋಡಿದ ಜನಾರ್ದನ ರೆಡ್ಡಿ ಬಳಿಕ ಸಾಮಾಜಿಕ ತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 1995ರಿಂದ ಶ್ವಾನ ರಾಖಿಯ ಜೊತೆ ಇರುವ ಭಾವನಾತ್ಮಕ ಸಂಬಂಧವನ್ನು ಉಲ್ಲೇಖಿಸಿದ್ದಾರೆ. ಸದ್ಯ ಶ್ವಾನದೊಂದಿಗೆ ಜನಾರ್ದನ ರೆಡ್ಡಿಯವರು ಕಾಲ ಕಳೆಯುವ ವಿಡಿಯೋ ಸದ್ಯ ವೈರಲ್ ಆಗಿದೆ.
Latest Videos