TV9 Education Summit 2022, Day 3: ಟಿವಿ9 ಎಜ್ಯುಕೇಷನ್ ಎಕ್ಸ್ಪೋ ಸಂಚಾರಿ ಪೊಲೀಸ್ ಜಂಟಿ ಆಯುಕ್ತ ಬಿ.ಆರ್ ರವಿಕಾಂತೇಗೌಡ ಭಾಗಿ
TV9 Education Fair 2022 Live Updates: ಟಿವಿ9 ಪ್ರಸ್ತುತ ಪಡಿಸುತ್ತಿರುವ ಅತೀ ದೊಡ್ಡ ಎಜ್ಯುಕೇಷನ್ ಎಕ್ಸ್ಪೋಗೆ ಇಂದು ಕೊನೆಯ ದಿನ. ಈಗಾಗಲೇ ಎರಡು ದಿನ ಎಜ್ಯುಕೇಷನ್ ಎಕ್ಸ್ಪೋ ಮುಕ್ತಾಯವಾಗಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.

LIVE NEWS & UPDATES
-
TV9 Education Summit 2022, Day 3 Live: ಎಜ್ಯುಕೇಷನ್ ಸಮ್ಮಿಟ್ನಲ್ಲಿ ನಟ ನಿರಂಜನ್ ಸುಧೀಂದ್ರ ಹಾಗು ನಟಿ ರಾಧ್ಯ ಭಾಗಿ
ಟಿವಿ9 ಎಜ್ಯುಕೇಷನ್ ಸಮ್ಮಿಟ್ಗೆ ನಟ ನಿರಂಜನ್ ಸುಧೀಂದ್ರ ಹಾಗು ನಟಿ ರಾಧ್ಯ ಆಗಮಿಸಿದ್ದಾರೆ. ಟಿವಿ9 ಎಜ್ಯುಕೇಷನ್ ಸಮ್ಮಿಟ್ನಲ್ಲಿ ನಮ್ಮ ಹುಡುಗರು ಚಿತ್ರ ತಂಡ ಭಾಗಿಯಾಗಿದ್ದಾರೆ. ಸಮ್ಮಿಟ್ನಲ್ಲಿ ಲಕ್ಕಿ ಕೂಪನ್ ಎತ್ತಿ ಗೆದ್ದವರಿಗೆ ನಟ ನಿರಂಜನ್ ಟ್ಯಾಬ್ ಗಿಫ್ಟ್ ಮಾಡಿದ್ದಾರೆ.
-
TV9 Education Summit 2022, Day 3 Live: ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ ರವಿಕಾಂತೇಗೌಡ
ಈ ಹಿಂದೆ ಸ್ಪರ್ಧಾತ್ಮಕ ಪರೀಕ್ಷೆಗೆ ಯಾವ ರೀತಿ ತಯಾರಿ ನಡೆಸಬೇಕು ಎಂದು ಹೇಳುವವರು ಇರಲಿಲ್ಲ. ಆದರೆ ಇಂದಿನ ಯುವ ಜನಾಂಗಕ್ಕೆ ಇಂತಹ ಎಜ್ಯುಕೇಷನ್ ಎಕ್ಸ್ಪೋ ಮೂಲಕ ಸಾಕಷ್ಟು ಮಾಹಿತಿ ಜೊತೆಗೆ ಜ್ಞಾನ ಕೂಡ ಸಿಗುತ್ತೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಸಿಕೊಳ್ಳಬೇಕು. ಮತ್ತು ಹೆಚ್ಚು ಶ್ರಮ ಪಡಬೇಕು ಎಂದು ಸಂಚಾರಿ ಪೊಲೀಸ್ ಜಂಟಿ ಆಯುಕ್ತ ಬಿ.ಆರ್ ರವಿಕಾಂತೇಗೌಡ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
-
-
TV9 Education Summit 2022, Day 3 Live: ಪತ್ರಿಕೆಗಳನ್ನು ಓದುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿ
ಸಾಕಷ್ಟು ವಿದ್ಯಾರ್ಥಿಗಳಲ್ಲಾಗಲಿ, ಪೋಷಕರಲ್ಲಾಗಲಿ ಈ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಪದವಿ ಮುಗಿದ ನಂತರವೆ ನಾವು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಬೇಕು ಎನ್ನುವ ಕೆಲ ತಪ್ಪುಗಳಿವೆ. ಅದು ಎಲ್ಲವೂ ಸುಳ್ಳು. 7 ತರಗತಿಯಂದಲೇ ನಿಮ್ಮ ಮಕ್ಕಳಿಗೆ ಪತ್ರಿಕೆಯನ್ನ ಓದಿಸುವುದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಬಹುದು ಎಂದು ಸಂಚಾರಿ ಪೊಲೀಸ್ ಜಂಟಿ ಆಯುಕ್ತ ಬಿ.ಆರ್ ರವಿಕಾಂತೇಗೌಡ ಹೇಳಿದರು.
-
TV9 Education Summit 2022, Day 3 Live: ಮಕ್ಕಳಿಗೆ ದಿನಪತ್ರಿಕೆ ಓದಿಸಿ
ಸದ್ಯದ ಪರಿಸ್ಥಿಯಲ್ಲಿ ನಮ್ಮ ನಮ್ಮ ಮಕ್ಕಳು ಪ್ರತಿನಿತ್ಯ ಮೊಬೈಲ್ ಗೇಮ್ಸ್ಗಳಲ್ಲಿ ಮುಳುಗಿ ಹೋಗಿದ್ದಾರೆ. ಹಾಗಾಗಿ ಅವರಿಗೆ ಪ್ರಚಲಿತ ವಿದ್ಯಮಾನಗಳ ಕುರಿತು ತಿಳಿದಿಲ್ಲ. ಇಲ್ಲಿ ಸಾಕಷ್ಟು ಪೋಷಕರು ಸೇರಿದ್ದೀರಿ ನಿಮ್ಮಲ್ಲಿ ನಾನು ವಿನಂತಿ ಮಾಡುತ್ತೇನೆ ನಿಮ್ಮ ಮಕ್ಕಳಿಗೆ ಪ್ರತಿನಿತ್ಯ ದಿನಪತ್ರಿಕೆಯನ್ನ ಓದಿಸಿ ಎಂದು ಟಿವಿ9 ಎಜ್ಯುಕೇಷನ್ ಎಕ್ಸ್ಪೋಗೆ ಬಂದಿದ್ದ ಪೋಷಕರಲ್ಲಿ ಸಂಚಾರಿ ಪೊಲೀಸ್ ಜಂಟಿ ಆಯುಕ್ತ ಬಿ.ಆರ್ ರವಿಕಾಂತೇಗೌಡ ಮನವಿ ಮಾಡಿದರು.
-
TV9 Education Summit 2022, Day 3 Live: ಸ್ಪರ್ಧಾತ್ಮಕ ಪರೀಕ್ಷೆಗೆ ಜಂಟಿ ಆಯುಕ್ತ ಬಿ.ಆರ್ ರವಿಕಾಂತೇಗೌಡ ಮಾತು
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಇತ್ತೀಚಿನ ಯುವ ಜನಾಂಗದಲ್ಲಿ ಹೆಚ್ಚು ಆಸಕ್ತಿ ಬೆಳೆಯುತ್ತಿದೆ. ಅದು ತುಂಬಾ ಒಳ್ಳೆಯದು ಕೂಡ. ಡಿಗ್ರಿ, ಪದವಿಯನ್ನ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ಈ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಹರಾಗುತ್ತಾರೆ ಎಂದು ಟಿವಿ9 ಎಜ್ಯುಕೇಷನ್ ಎಕ್ಸ್ಪೋಗೆ ಬಂದಿದ್ದ ವಿದ್ಯಾರ್ಥಿಗಳಿಗೆ ಸಂಚಾರಿ ಪೊಲೀಸ್ ಜಂಟಿ ಆಯುಕ್ತ ಬಿ.ಆರ್ ರವಿಕಾಂತೇಗೌಡ ಹೇಳಿದರು.
-
-
TV9 Education Summit 2022, Day 3 Live: ಟಿವಿ9 ಎಜ್ಯುಕೇಷನ್ ಎಕ್ಸ್ಪೋ ಸಂಚಾರಿ ಪೊಲೀಸ್ ಜಂಟಿ ಆಯುಕ್ತ ಬಿ.ಆರ್ ರವಿಕಾಂತೇಗೌಡ
ಸ್ಪರ್ಧಾತ್ಮಕ ಪರೀಕ್ಷೆಯ ಕುರಿತಾಗಿ ಅರಿವು ಕರ್ನಾಟಕದ ವಿದ್ಯಾರ್ಥಿಗಳಲ್ಲಿ ಇತ್ತೀಚಿಗೆ ಬೆಳೆಯುತ್ತಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನ ವಿದ್ಯಾರ್ಥಿಗಳು ಎದುರಿಸುವುದರೊಂದಿಗೆ ತಮ್ಮ ಜೀವನವನ್ನ ರೂಪಿಸಿಕೊಳ್ಳಬೇಕು ಎಂದು ಸಂಚಾರಿ ಪೊಲೀಸ್ ಜಂಟಿ ಆಯುಕ್ತ ಬಿ.ಆರ್ ರವಿಕಾಂತೇಗೌಡ ಟಿವಿ9 ಎಜ್ಯುಕೇಷನ್ ಎಕ್ಸ್ಪೋದಲ್ಲಿ ಹೇಳಿದರು.
-
TV9 Education Summit 2022, Day 3 Live: ಟಿವಿ9 ಎಕ್ಸ್ ಪೋಗೆ ಅದ್ಭುತ ರೆಸ್ಪಾನ್ಸ್: ಸಾವಿರಾರು ವಿದ್ಯಾರ್ಥಿಗಳು ಹಾಗು ಪೋಷಕರು ಭಾಗಿ
ಮೂರನೇ ದಿನಕ್ಕೆ ಟಿವಿನೈನ್ ಸಮ್ಮಿಟ್ ಕಾಲಿಟ್ಟಿದೆ. ಎರಡು ದಿನ ಸಾವಿರಾರು ವಿದ್ಯಾರ್ಥಿಗಳು ಹಾಗು ಪೋಷಕರು ಸಮ್ಮಿಟ್ನಲ್ಲಿ ಭಾಗಿಯಾಗಿದ್ದಾರೆ. ರಾಜ್ಯದ ಹಲವೆಡೆ ಇಂದು ಬಂದು ಶಿಕ್ಷಣ ತಜ್ಞರಿಂದ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಂಡರು. ರಜಾ ದಿನ ಭಾನುವಾರ ಆಗಿರೋದ್ರಿಂದ ಇನ್ನು ಹೆಚ್ಚು ಜನ ಸಮ್ಮಿಟ್ಗೆ ವಿದ್ಯಾರ್ಥಿಗಳು ಹಾಗು ಪೋಷಕರು ಹರಿದು ಬರುತ್ತಿದ್ದು, ಟಿವಿನೈನ್ ಎಕ್ಸ್ ಪೋಗೆ ಅದ್ಭುತವಾದ ರೆಸ್ಪಾನ್ಸ್ ದೊರೆತಿದೆ.
-
-
TV9 Education Summit 2022, Day 3 Live: ಪ್ರತಿ ಗಂಟೆಗೊಮ್ಮೆ ಚಿನ್ನ ಗೆಲ್ಲುವ ಅವಕಾಶ
ಟಿವಿ9 ಎಜುಕೇಷನ್ ಸಮಿಟ್‌ಗೆ ಬನ್ನಿ, ಕಾರು, ಮೊಬೈಲ್ ಗೆಲ್ಲಿ. ಸಮಿಟ್‌ಗೆ ಬಂದವ್ರಿಗೆ ಲಕ್ಕಿ ಡಿಪ್ ಮೂಲಕ ಹಲವು ಬಹುಮಾನ ನೀಡಲಾಗುವುದು. ಲಕ್ಕಿ ಡಿಪ್ ಮೂಲಕ ಪ್ರತಿ ಗಂಟೆಗೊಮ್ಮೆ ಚಿನ್ನ ಗೆಲ್ಲುವ ಅವಕಾಶವಿದೆ.
-
TV9 Education Summit 2022, Day 3 Live: ಎಲ್ಲಾ ಪ್ರಶ್ನೆ, ಗೊಂದಲಗಳು ಟಿವಿ9 ಸಮಿಟ್ ಪರಿಹಾರ
ಬೆಂಗಳೂರು ಸೇರಿ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಭಾಗಿಯಾಗಿದ್ದು, ಯಾವ ಕಾಲೇಜಿಗೆ ಸೇರಬೇಕು? ಯಾವ ಕೋರ್ಸ್ ತಗೋಬೇಕು? ಎನ್ನುವ ನಿಮ್ಮ ಎಲ್ಲಾ ಪ್ರಶ್ನೆ, ಗೊಂದಲಗಳು ಟಿವಿ9 ಸಮಿಟ್‌ಗೆ ಬಂದ್ರೆ ಪರಿಹಾರ ಸಿಗುತ್ತದೆ. ಟಿವಿ9 ಸಮಿಟ್‌ನಲ್ಲಿ ಹತ್ತಾರು ವಿವಿಗಳು, ನೂರಾರು ಕಾಲೇಜುಗಳು, ಶಿಕ್ಷಣ ತಜ್ಞರು, ಮಾಜಿ ಕುಲಪತಿಗಳಿಂದ ವಿಶೇಷ ಸಮಾಲೋಚನೆ ಮಾಡಲಾಗುವುದು.
-
TV9 Education Summit 2022, Day 3 Live: ಟಿವಿ9 ಎಜ್ಯುಕೇಷನ್ ಎಕ್ಸ್ಪೋಗೆ ಇಂದು ತೆರೆ
ಬೆಂಗಳೂರು: ಟಿವಿ9 ಪ್ರಸ್ತುತ ಪಡಿಸುತ್ತಿರುವ ಅತೀ ದೊಡ್ಡ ಎಜ್ಯುಕೇಷನ್ ಎಕ್ಸ್ಪೋ ಜೂನ್ 24ರಿಂದ ನಡೆಯುತ್ತಿದ್ದು, ಇಂದು ಕೊನೆಯ ದಿನಕ್ಕೆ ತಲುಪಿದೆ. ದೇಶದ ನಂಬರ್ 1 ನ್ಯೂಸ್ ನೆಟ್‌ವರ್ಕ್ ಟಿವಿ9ನಿಂದ ಆಯೋಜನೆ ಮಾಡಿರುವ ಎಜ್ಯುಕೇಷನ್ ಎಕ್ಸ್ಪೋಗೆ ಇಂದು ತೆರೆಬೀಳಲಿದೆ.
ಬೆಂಗಳೂರು: ಟಿವಿ9 ಪ್ರಸ್ತುತ ಪಡಿಸುತ್ತಿರುವ ಅತೀ ದೊಡ್ಡ ಎಜ್ಯುಕೇಷನ್ ಎಕ್ಸ್ಪೋ (Education Expo) ಗೆ ಇಂದು ಕೊನೆಯ ದಿನ. ದೇಶದ ನಂಬರ್ 1 ನ್ಯೂಸ್ ನೆಟ್‌ವರ್ಕ್ ಟಿವಿ9ನಿಂದ ಬೆಂಗಳೂರು ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಸಮಿಟ್ ಆಯೋಜನೆ ಮಾಡಲಾಗಿದೆ. ಬೆಂಗಳೂರು ಸೇರಿ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಭಾಗಿಯಾಗಿದ್ದು, ಯಾವ ಕಾಲೇಜಿಗೆ ಸೇರಬೇಕು? ಯಾವ ಕೋರ್ಸ್ ತಗೋಬೇಕು? ಎನ್ನುವ ನಿಮ್ಮ ಎಲ್ಲಾ ಪ್ರಶ್ನೆ, ಗೊಂದಲಗಳು ಟಿವಿ9 ಸಮಿಟ್‌ಗೆ ಬಂದ್ರೆ ಪರಿಹಾರ ಸಿಗುತ್ತದೆ. ಟಿವಿ9 ಸಮಿಟ್‌ನಲ್ಲಿ ಹತ್ತಾರು ವಿವಿಗಳು, ನೂರಾರು ಕಾಲೇಜುಗಳು, ಶಿಕ್ಷಣ ತಜ್ಞರು, ಮಾಜಿ ಕುಲಪತಿಗಳಿಂದ ವಿಶೇಷ ಸಮಾಲೋಚನೆ ಮಾಡಲಾಗುವುದು. ಇಂದು ಕೊನೆ ದಿನದ ಟಿವಿ9 ಎಜುಕೇಷನ್ ಸಮಿಟ್‌ನಲ್ಲಿ ಭಾಗಿಯಾಗಿ, ಶಿಕ್ಷಣಕ್ಕೆ ಸಂಬಂಧಿಸಿದ ನಿಮ್ಮ ಸಂದೇಹಗಳಿಗೆ ಪರಿಹಾರ ಕಂಡುಕೊಳ್ಳಿ. ಟಿವಿ9 ಎಜುಕೇಷನ್ ಸಮಿಟ್‌ಗೆ ಬನ್ನಿ, ಕಾರು, ಮೊಬೈಲ್ ಗೆಲ್ಲಿ. ಸಮಿಟ್‌ಗೆ ಬಂದವ್ರಿಗೆ ಲಕ್ಕಿ ಡಿಪ್ ಮೂಲಕ ಹಲವು ಬಹುಮಾನ ನೀಡಲಾಗುವುದು. ಲಕ್ಕಿ ಡಿಪ್ ಮೂಲಕ ಪ್ರತಿ ಗಂಟೆಗೊಮ್ಮೆ ಚಿನ್ನ ಗೆಲ್ಲುವ ಅವಕಾಶವಿದೆ. ಎಲ್ಲರಿಗೂ ಉಚಿತ ಪ್ರವೇಶವಿದೆ. ಈಗಾಗಲೇ ಎರಡು ದಿನ ಎಜ್ಯುಕೇಷನ್ ಎಕ್ಸ್ಪೋ ಮುಕ್ತಾಯವಾಗಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.
ಜೂನ್ 24ರಿಂದ ನಡೆಯುತ್ತಿರುವ ಟಿವಿ9 ಎಜುಕೇಷನ್ ಸಮಿಟ್ 2022ಕ್ಕೆ ಭಾರಿ ಸ್ಪಂದನೆ ದೊರೆತಿದ್ದು, ಸಾವಿರಾರು ವಿದ್ಯಾರ್ಥಿಗಳು, ಪೋಷಕರು ಫುಲ್ ಖುಷ್ ಆಗಿದ್ದಾರೆ. ಎಜುಕೇಷನ್ ಸಮಿಟ್‌ನಲ್ಲಿ ಪ್ರತಿಷ್ಠಿತ ವಿವಿಗಳು, ನೆಚ್ಚಿನ ಕಾಲೇಜು, ಕೋರ್ಸ್‌ಗೆ ಸೇರಲು ಒಂದೇ ವೇದಿಕೆಯಾಗಿದೆ. ಇಂದು ಕೊನೆಯ ದಿನವಾಗಿದ್ದು, PU ನಂತರದ ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ತಪ್ಪದೇ ಭೇಟಿ ನೀಡಿ.
Published On - Jun 26,2022 10:34 AM