ಮಂಡ್ಯ: ಭತ್ತ (Paddy) ಖರೀದಿಸುವ ನೆಪದಲ್ಲಿ ಬಂದು ರೈತರಿಗೆ (Farmers) ಮೋಸ ಮಾಡಲು ಯತ್ನಿಸಿದ ಪ್ರಕರಣ ಆರು ವರ್ಷದ ಬಾಲಕನಿಂದ ಬೆಳಕಿಗೆ ಬಂದಿದೆ. ಬಾಲಕ ಸೆರೆ ಹಿಡಿದ ವಿಡಿಯೋದಿಂದ ದಲ್ಲಾಳಿಗಳ ಬಣ್ಣ ಬಯಲಾಗಿದ್ದು, ಮಂಡ್ಯ ತಾಲೂಕಿನ ಕೋಣನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಭತ್ತ ಖರೀದಿಸಲು ನಾಲ್ವರು ದಲ್ಲಾಳಿಗಳು ಆಗಮಿಸಿದ್ದರು. ಈ ವೇಳೆ 20 ಚೀಲ ತೋರಿಸಿ, 28 ಚೀಲ ಭತ್ತ ತುಂಬಿಕೊಂಡಿದ್ದರು. ಕಡಿಮೆ ಲೆಕ್ಕ ತೋರಿಸಿ ಜಾಸ್ತಿ ಚೀಲ ಭತ್ತ ತುಂಬಿಕೊಂಡು ರೈತರಿಗೆ ಯಾಮಾರಿಸುತ್ತಿದ್ದರು.
ರೈತರಿಗೆ ಮೋಸ ಮಾಡಲು ಮುಂದಾಗಿದ್ದ ದಲ್ಲಾಳಿಗಳ ಕಳ್ಳತನ ದೃಶ್ಯಗಳನ್ನ ಆರು ವರ್ಷದ ಬಾಲಕ ವಿಡಿಯೋ ಚಿತ್ರೀಕರಣ ಮಾಡಿದ್ದ. ಬಾಲಕ ಮಾಡಿದ ವಿಡಿಯೋದಿಂದ ದಲ್ಲಾಳಿಗಳ ನಿಜಾಬಣ್ಣ ಬಯಲಾಗಿದ್ದು, ರೈತರು ಎಚ್ಚೆತ್ತುಕೊಳ್ಳುತ್ತಿದ್ದಂತೆ ಪರಾರಿಯಾಗಿದ್ದಾರೆ. ನಂತರ ಸ್ಥಳಕ್ಕೆ ಬಂದ ಕ್ಯಾಂಟರ್ ಮಾಲೀಕ ನಮ್ಮವರು ತಪ್ಪು ಮಾಡಿದ್ದಾರೆ ಎಂದು ಕಣ್ಣೀರು ಹಾಕಿ ಹೈಡ್ರಾಮ ಮಾಡಿದ್ದಾರೆ. ರೈತರಿಗೆ ಮೋಸ ಮಾಡಲು ಮುಂದಾಗಿದ್ದ ದಲ್ಲಾಳಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ರೈತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬೋಲ್ಡ್ ಲುಕ್ನಲ್ಲಿ ಗಮನ ಸೆಳೆದ ನಟಿ ನಿಧಿ ಅಗರ್ವಾಲ್; ಇಲ್ಲಿವೆ ಫೋಟೋಗಳು
ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಗಳು ಅರೆಸ್ಟ್! ಬೆಂಗಳೂರು ನಗರದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನ ಬ್ಯಾಡರಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ದರ್ಶನ್, ಕೀರ್ತಿ, ಸಂಜಯ್ ಬಂಧಿತ ಆರೋಪಿಗಳು. ಬಂಧಿತರಿಂದ 4 ಲಕ್ಷ ರೂ. ಮೌಲ್ಯದ ದ್ವಿಚಕ್ರ ವಾಹನಗಳನ್ನ ಜಪ್ತಿ ಮಾಡಿದ್ದಾರೆ. ಆರೋಪಿಗಳು ರಾಜಗೋಪಾಲನಗರ, ಕೆಂಗೇರಿ, ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದರು. ಸದ್ಯ ಆರೋಪಿಗಳನ್ನ ಬಂಧಿಸಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.