Viral Video: ವಾಹನದ ಗ್ಲಾಸ್ ಒರೆಸುವ ನೆಪದಲ್ಲಿ ಫಾಸ್ಟ್‌ಟ್ಯಾಗ್ ಸ್ಕ್ಯಾನ್ ಮಾಡಿ ಹಣ ಕದಿಯುವ ಮಕ್ಕಳು? NPCI ಏನು ಹೇಳಿದೆ ಗೊತ್ತಾ?
ಫಾಸ್ಟ್‌ಟ್ಯಾಗ್ ಸ್ಕ್ಯಾನ್ ಮಾಡುವ ಮೂಲಕ ಕೆಲವು ಮಕ್ಕಳು ಹಣವನ್ನು ಕದಿಯುತ್ತಿದ್ದಾರೆ ಎಂಬ ವಿಡಿಯೋ ವೈರಲ್ ಆಗುತ್ತಿದೆ. ಈ ಬಗ್ಗೆ NPCI ಮತ್ತು Paytm ನೀಡಿದ ಸ್ಪಷ್ಟೀಕರಣ ಇಲ್ಲಿದೆ ನೋಡಿ.
ಫಾಸ್ಟ್‌ಟ್ಯಾಗ್ (PASTag) ಸ್ಕ್ಯಾನ್ ಮಾಡುವ ಮೂಲಕ ಕೆಲವು ಮಕ್ಕಳು ಹಣವನ್ನು ಕದಿಯುತ್ತಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನು ಗಮನಿಸಿದ ನ್ಯಾಷನಲ್ ಪೇಮೆಂಟ್ಸ್ ಕೌನ್ಸಿಲ್ ಆಫ್ ಇಂಡಿಯಾ (NPCI), “ಫಾಸ್ಟ್‌ಟ್ಯಾಗ್ ಅನ್ನು ಸ್ಕ್ಯಾನ್ ಮಾಡಿ ಯಾವುದೇ ವ್ಯಕ್ತಿ ಹಣವನ್ನು ಕದಿಯಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದೆ.
ಕಾರಿನ ಗಾಜು ಒರೆಸುವ ನೆಪದಲ್ಲಿ ಮಕ್ಕಳು ಸ್ಮಾರ್ಟ್ ವಾಚ್ ಮೂಲಕ ಫಾಸ್ಟ್‌ಟ್ಯಾಗ್ ಸ್ಕ್ಯಾನ್ ಮಾಡಿ ಹಣವನ್ನು ಹೇಗೆ ಕದಿಯುತ್ತಿದ್ದಾರೆ ಎಂಬುದನ್ನು ತೋರಿಸುವ ವೀಡಿಯೋವೊಂದು ವೈರಲ್ ಆಗುತ್ತಿದೆ. ಕಾರಿನ ವಿಂಡ್ ಶೀಲ್ಡ್ ಅನ್ನು ಬಾಲಕನೊಬ್ಬ ಸ್ವಚ್ಛಗೊಳಿಸುತ್ತಾನೆ. ಬಳಿಕ ಕಾರಿನೊಳಗೆ ಕುಳಿತಿದ್ದವರು ಆತನನ್ನು ಮಾತನಾಡಿಸಿ ಕೈಯಲ್ಲಿದ್ದ ವಾಚ್ ಬಗ್ಗೆ ವಿಚಾರಿಸಿದಾಗ ಬಾಲಕ ಓಡಿಹೋಗುತ್ತಾನೆ. ಬಳಿಕ “ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡುವ ಮಕ್ಕಳಿಗೆ ಸ್ಕ್ಯಾನರ್‌ಗಳಿರುವ ಅತ್ಯಾಧುನಿಕ ವಾಚ್‌ಗಳನ್ನು ನೀಡುತ್ತಿರುವುದು ಹೊಸ ಹಗರಣವಾಗಿದೆ. ವಿಂಡ್ ಷೀಲ್ಡ್ ಅನ್ನು ಸ್ವಚ್ಛಗೊಳಿಸುತ್ತಾ ಟ್ಯಾಗ್ ಅನ್ನು ಸ್ಕ್ಯಾನ್ ಮಾಡುತ್ತಾರೆ. ಎಲ್ಲರೂ ತುಂಬಾ ಜಾಗರೂಕರಾಗಿರಿ” ಎಂದು ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: Viral Video: ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ತನ್ನ ಮರಿಯನ್ನು ಕಾಪಾಡಿದ ತಾಯಿ ಆನೆ
ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೊವನ್ನು ನಂಬಿದ್ದಾರೆ. ಅದಾಗ್ಯೂ ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಈ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡು ಇದು ನಿಜವೇ? ಎಂಬ ಶೀರ್ಷಿಕೆ ಬರೆದು ಅಭಿಪ್ರಾಯ ಕೇಳಿದ್ದರು. ಬಳಿಕ ಈ ವಿಡಿಯೋ ವೈರಲ್ ಪಡೆದುಕೊಂಡಿದೆ. ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಎನ್ಪಿಸಿಐ ಸ್ಪಷ್ಟೀಕರಣವನ್ನು ನೀಡಿದೆ. “ಒಬ್ಬ ವ್ಯಕ್ತಿಯು ಫಾಸ್ಟ್ಯಾಗ್ ಅನ್ನು ಸ್ಕ್ಯಾನ್ ಮಾಡಲು ಮತ್ತು ಮಾಲೀಕರ ಖಾತೆಯಿಂದ ಹಣವನ್ನು ಪಡೆಯಲು ಸಾಧ್ಯವಿಲ್ಲ” ಎಂದಿದೆ.
Please note that there are baseless and false videos circulating on Social media. Do understand the below points:
1. No transactions can be executed through open internet connectivity. pic.twitter.com/yTcNGt8R0c
— NPCI (@NPCI_NPCI) June 25, 2022
ವಿಡಿಯೋ ಬಗ್ಗೆ Paytm ಹೇಳಿಕೆಯನ್ನು ಬಿಡುಗಡೆ ಮಾಡಿ ವಿಡಿಯೋ ಫಾಸ್ಟ್‌ಟ್ಯಾಗ್ ಬಗ್ಗೆ ತಪ್ಪು ಮಾಹಿತಿಯನ್ನು ಹರಡುತ್ತಿದೆ ಎಂದು ಹೇಳಿದೆ. ಫಾಸ್ಟ್ಯಾಗ್ ಪಾವತಿಗಳನ್ನು ಅಧಿಕೃತ ವ್ಯಾಪಾರಿಗಳು ಮಾತ್ರ ಪ್ರಾರಂಭಿಸಬಹುದು. ಬಹು ಸುತ್ತಿನ ಪರೀಕ್ಷೆಯ ನಂತರ ಆನ್‌ಬೋರ್ಡ್ ಮಾಡಬಹುದು. Paytm FASTag ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದಿದೆ.
A video is spreading misinformation about Paytm FASTag that incorrectly shows a smartwatch scanning FASTag. As per NETC guidelines, FASTag payments can be initiated only by authorised merchants, onboarded after multiple rounds of testing. Paytm FASTag is completely safe & secure. pic.twitter.com/BmXhq07HrS
— Paytm (@Paytm) June 25, 2022
Published On - 9:59 am, Sun, 26 June 22