Viral Video: ಮಳೆಯಲ್ಲಿ ‘ಬರ್ಸೋ ರೆ ಮೇಘ ಮೇಘ’ ಹಾಡಿಗೆ ಗ್ರೂಪ್ ಡಾನ್ಸ್ ಮಾಡಿದ ಯುವತಿಯರು! ಏನ್​ ವೈರಲ್ ಗುರು ಈ ವಿಡಿಯೋ

ನ್ಯೂಯಾರ್ಕ್‌ನ ಟೈಮ್ ಸ್ಕ್ವೇರ್‌ನಲ್ಲಿ ಮಳೆ ಹನಿಯಲು ಪ್ರಾರಂಭವಾದಾಗ ಐಶ್ವರ್ಯಾ ರೈ ಅವರ ಅಭಿನಯದ ಜನಪ್ರಿಯ ಹಾಡು ಬರ್ಸೋ ರೇ ಹಾಡಿಗೆ ದೇಸಿ ನೃತ್ಯಗಾರ್ತಿಯರು ಗ್ರೂಪ್ ಡಾನ್ಸ್ ಮಾಡಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ.

Viral Video: ಮಳೆಯಲ್ಲಿ 'ಬರ್ಸೋ ರೆ ಮೇಘ ಮೇಘ' ಹಾಡಿಗೆ ಗ್ರೂಪ್ ಡಾನ್ಸ್ ಮಾಡಿದ ಯುವತಿಯರು! ಏನ್​ ವೈರಲ್ ಗುರು ಈ ವಿಡಿಯೋ
ಮಳೆಯಲ್ಲಿ ಡಾನ್ಸ್ ಮಾಡಿದ ಯುವತಿಯರು
TV9kannada Web Team

| Edited By: Rakesh Nayak

Jun 25, 2022 | 12:18 PM

ನಟಿ ಐಶ್ವರ್ಯ ರೈ ಅವರು ಮಳೆ ಬರುವಾಗ ಬರ್ಸೋ ರೆ ಮೇಘ ಮೇಘ ಎಂದು ಹಾಡಿಗೆ ಡಾನ್ಸ್ ಮಾಡಿದ್ದು ಯಾರಿಗೆ ತಾನೆ ಗೊತ್ತಿಲ್ಲ? ಈ ಹಾಡು ಕೊಂಚ ಓಲ್ಡ್ ಆಗಿದ್ದರೂ ಈಗಲು ಕೂಡ ಹೆಚ್ಚಿನವರಿಗೆ ಫೇವರಿಟ್ ಹಾಡಾಗಿದೆ. ಅದರಂತೆ ಯುವತಿಯರ ಗುಂಪೊಂದು ಮಳೆ ಬರಲು ಆರಂಭವಾದಾಗ ಈ ಹಾಡಿಗೆ ಸೊಗಸಾಗಿ ನೃತ್ಯ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ.

ಇದನ್ನೂ ಓದಿ: Viral video: ಶಿವಣ್ಣ ನಟನೆಯ ಟಗರು ಹಾಡಿಗೆ ಸಖತ್ ಸ್ಟೆಪ್ ಹಾಕಿದ ಪಾಲಿಕೆ ಆಯುಕ್ತ!

ನ್ಯೂಯಾರ್ಕ್‌ನ ಟೈಮ್ ಸ್ಕ್ವೇರ್‌ನಲ್ಲಿ ಮಳೆ ಹನಿಯಲು ಪ್ರಾರಂಭವಾದಾಗ ಐಶ್ವರ್ಯಾ ರೈ ಅವರ ಅಭಿನಯದ ಜನಪ್ರಿಯ ಹಾಡು ಬರ್ಸೋ ರೇಗೆ ದೇಸಿ ನೃತ್ಯಗಾರ್ತಿಯರ ಗುಂಪು ಡಾನ್ಸ್ ಮಾಡಿದ್ದಾರೆ. ಇದರ ವಿಡಿಯೋವನ್ನು ಎಶ್ಪತ್ (eshhpat) ಎಂಬ ನರ್ತಕಿಯೊಬ್ಬರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ”ಟೈಮ್ಸ್ ಸ್ಕ್ವೇರ್‌ನಲ್ಲಿ ಮಧ್ಯರಾತ್ರಿಯಲ್ಲಿ ಮಳೆಯಾಗುತ್ತಿರುವಾಗ” ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.

View this post on Instagram

A post shared by eshhpat (@eshhpat)

ಈ ವಿಡಿಯೋ ವೈರಲ್ ಪಡೆದು ಈವರಗೆ 12 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, 10 ಲಕ್ಷಕ್ಕೂ ಅಧಿಕ ಲೈಕ್ಸ್​ಗಳನ್ನು ಗಿಟ್ಟಿಸಿಕೊಂಡಿದೆ. ವಿಡಿಯೋದಲ್ಲಿ ಕಾಣುವಂತೆ ಒಟ್ಟು ನಾಲ್ವರು ನರ್ತಕಿಯರು ಮಳೆಯ ಸಮಯದಲ್ಲಿ ಟೈಮ್ಸ್ ಸ್ಕ್ವೇರ್‌ನಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ನೆಟಿಜನ್‌ಗಳು ಹುಡುಗಿಯರ ನೃತ್ಯ ಪ್ರದರ್ಶನವನ್ನು ಸಂಪೂರ್ಣವಾಗಿ ಆನಂದಿಸಿದ್ದು, ಕಾಮೆಂಟ್‌ಗಳ ವಿಭಾಗದಲ್ಲಿ ಅವರ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನೆಟ್ಟಿಗರೊಬ್ಬರು ನೃತ್ಯಗಾರರ ಸಮನ್ವಯದ ಬಗ್ಗೆ ಮಾತನಾಡಿದರೆ, ಮತ್ತೊಬ್ಬರು ಇದನ್ನು ನಾನು ತುಂಬಾ ಇಷ್ಟಪಡುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: viral video: ಏನ್ ಗುರು ಎಷ್ಟು ಬಾಯಿ ಹಾಕಿದ್ರೂ ಮಾಂಸದ ತುಂಡು ಬಾಯ್ಗೇ ಬರ್ತಿಲ್ವಲ್ಲಾ! ಪಾಪ ಮಾರೆ ಸಾಕುನಾಯಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada