Viral video: ಶಿವಣ್ಣ ನಟನೆಯ ಟಗರು ಹಾಡಿಗೆ ಸಖತ್ ಸ್ಟೆಪ್ ಹಾಕಿದ ಪಾಲಿಕೆ ಆಯುಕ್ತ!

'ಟಗರು ಬಂತು ಟಗರು, ಇದು ಈ ಊರ ಟಗರು' ಹಾಡಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಅವರು ಹಾಕಿದ ಸಖತ್ ಸ್ಟೆಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

TV9kannada Web Team

| Edited By: Rakesh Nayak

Jun 25, 2022 | 11:20 AM

ಧಾರವಾಡ: ‘ಟಗರು ಬಂತು ಟಗರು, ಇದು ಈ ಊರ ಟಗರು, ಜೋರಾಗಿ ಇದರ ಹೆಸರು ಹೇಳ್ಬೇಡ ಕಣೋ ಬ್ರದರೂ, ಯಾವತ್ತೂ ಇದರ ಎದುರು ಹೋಗ್ಬೇಡ ಕಣೋ’ ಎಂಬ ಹಾಡು ಎಲ್ಲರಿಗೂ ಗೊತ್ತೇ ಇದೆ. ನಟ ಶಿವರಾಜ್ ಕುಮಾರ್ ಅಭಿನಯದ ಟಗರು ಸಿನಿಮಾದ ಈ ಹಾಡು ಜನಮನದಲ್ಲಿ ನೆಲೆಯೂರಿದೆ. ಈ ಹಾಡು ಜನರಿಗೆ, ಸಿನಿಮಾ ಮತ್ತು ಶಿವಣ್ಣ ಅಭಿಮಾನಿಗಳಿಗೆ ಮಾತ್ರವಲ್ಲ ಅಧಿಕಾರಿಗಳಿಗೂ ಅಚ್ಚುಮೆಚ್ಚಿನ ಹಾಡು. ಇದೀಗ ಪಾಲಿಕೆ ಆಯುಕ್ತರೊಬ್ಬರು ಈ ಹಾಡಿಗೆ ಡಾನ್ಸ್ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಹುಬ್ಬಳ್ಳಿ ಧಾರವಾಡ ವಿದ್ಯಾವರ್ಧಕ ಸಂಘದಲ್ಲಿ ನಡೆದ ಸ್ವಚ್ಛತೆ ಜಾಗೃತಿಯ ಸಂಗೀತ ಕಾರ್ಯಕ್ರಮದಲ್ಲಿ ಇಲ್ಲಿನ ಮಹಾನಗರ ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಅವರು ಪಾಲಿಗೆ ಸಿಬ್ಬಂದಿಗಳೊಂದಿಗೆ ಟಗರು ಬಂತು ಟಗರು ಹಾಡಿಗೆ ಸಖತ್ ಸ್ಟೆಪ್ ಹಾಕಿ ಗಮನಸೆಳೆದಿದ್ದಾರೆ.

ಇದನ್ನೂ ಓದಿ: viral video: ಏನ್ ಗುರು ಎಷ್ಟು ಬಾಯಿ ಹಾಕಿದ್ರೂ ಮಾಂಸದ ತುಂಡು ಬಾಯ್ಗೇ ಬರ್ತಿಲ್ವಲ್ಲಾ! ಪಾಪ ಮಾರೆ ಸಾಕುನಾಯಿ

Follow us on

Click on your DTH Provider to Add TV9 Kannada