Viral Video: ತಡವಾಗಿ ಬಂದ ಶಿಕ್ಷಕಿಗೆ ಚಪ್ಪಲಿಯಲ್ಲಿ ಥಳಿಸಿದ ಪ್ರಿನ್ಸಿಪಾಲ್; ಶಾಕಿಂಗ್ ವಿಡಿಯೋ ವೈರಲ್
ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರು ಮಹಿಳಾ ಶಿಕ್ಷಕಿಗೆ ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಆ ಪ್ರಾಂಶುಪಾಲರನ್ನುಅಮಾನತು ಮಾಡಲಾಗಿದೆ.
ಲಖೀಂಪುರ ಖೇರಿ: ಶಾಲೆಗೆ ತಡವಾಗಿ ಬಂದಿದ್ದಕ್ಕೆ ಮಹಿಳಾ ಶಿಕ್ಷಕಿಗೆ ಪ್ರಾಂಶುಪಾಲರು ತನ್ನ ಚಪ್ಪಲಿಯಿಂದ ಥಳಿಸಿದ ಆಘಾತಕಾರಿ ಘಟನೆ (Shocking News) ಉತ್ತರ ಪ್ರದೇಶದ ಲಖಿಂಪುರ ಖೇರಿ (Lakhimpur Kheri) ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೋವನ್ನು ಎಎನ್‌ಐ ಟ್ವಿಟ್ಟರ್ ಪೇಜ್‌ನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. ಶಾಲೆಯ ಸಹ ಶಿಕ್ಷಕಿಯನ್ನು ಥಳಿಸಿ, ಅಮಾನುಷವಾಗಿ ನಡೆಸಿಕೊಂಡ ಆರೋಪದ ಮೇಲೆ ಲಖೀಂಪುರ ಬ್ಲಾಕ್‌ನ ಸರ್ಕಾರಿ ಶಾಲೆಯ ಪ್ರಾಂಶುಪಾಲರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರಿ ಶಾಲೆಯ ಮಹಿಳಾ ಶಿಕ್ಷಕಿ ಮೇಲೆ ದೌರ್ಜನ್ಯ ಎಸಗಿರುವುದು, ಅವರ ಹುದ್ದೆ ಮತ್ತು ಇಲಾಖೆಯ ಗೌರವವನ್ನು ಹಾಳುಮಾಡಿರುವುದು ಮತ್ತು ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಪ್ರಾಂಶುಪಾಲ ಅಜೀತ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
#WATCH | Principal of a government school in Uttar Pradesh’s Lakhimpur thrashed a female teacher with shoes
(Source: Viral video) pic.twitter.com/hCRiMuVsgV
— ANI UP/Uttarakhand (@ANINewsUP) June 24, 2022
ಮುಖ್ಯ ಶಿಕ್ಷಕರು ಮಹಿಳಾ ಶಿಕ್ಷಕಿಗೆ ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಈ ಸಂಬಂಧ ಲಖೀಂಪುರ ಬ್ಲಾಕ್ ಶಿಕ್ಷಣಾಧಿಕಾರಿ ಸುಭಾಷ್ ಚಂದ್ರ ಖೇರಿ ಮೂಲ ಶಿಕ್ಷಣಾಧಿಕಾರಿ ಲಕ್ಷ್ಮೀಕಾಂತ ಪಾಂಡೆ ಅವರಿಗೆ ವರದಿ ಕಳುಹಿಸಿದ್ದಾರೆ.
ಇದನ್ನೂ ಓದಿ: Viral Video: ಮದುವೆಯಲ್ಲಿ ಗೆಳೆಯನನ್ನೇ ಶೂಟ್ ಮಾಡಿದ ಮದುಮಗ; ಹಸೆಮಣೆ ಏರಬೇಕಾದ ವರ ಜೈಲು ಸೇರಿದ
ಈ ಪ್ರಕರಣದ ತನಿಖೆ ನಡೆಯುವವರೆಗೆ ತಪ್ಪಿತಸ್ಥ ಪ್ರಾಂಶುಪಾರನ್ನು ಪಾಸ್‌ಗಾವಾನ್ ಜೂನಿಯರ್ ಹೈಸ್ಕೂಲ್‌ಗೆ ಲಗತ್ತಿಸಲಾಗಿದೆ ಎಂದಿರುವ ಲಕ್ಷ್ಮಿಕಾಂತ್ ಪಾಂಡೆ, ಅಮಾನತುಗೊಂಡ ಮುಖ್ಯ ಶಿಕ್ಷಕರ ಹಾಜರಾತಿ ವರದಿಯನ್ನು ಪ್ರತಿದಿನ ತಮ್ಮ ಕಚೇರಿಗೆ ಸಲ್ಲಿಸುವಂತೆ ಬಿಇಒಗೆ ಸೂಚಿಸಲಾಗಿದೆ ಎಂದು ಹೇಳಿದರು. ಈ ಪ್ರಕರಣದ ತನಿಖೆ ನಡೆಸಿ ಆದಷ್ಟು ಬೇಗ ವರದಿ ಸಲ್ಲಿಸಲು ಮೂವರು ಸದಸ್ಯರ ತಂಡವನ್ನು ಕೂಡ ರಚಿಸಲಾಗಿದೆ.