ಆರೋಪಿಗಳು ವೆಬ್ಸೈಟ್ ಮೂಲಕ ಭಕ್ತರಿಂದ ಅಪಾರ ಪ್ರಮಾಣದ ಹಣ ವಸೂಲಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಭಕ್ತರು ಈ ಬಗ್ಗೆ ಮಠದ ಇ-ಮೇಲ್ಗೆ ಸಂದೇಶ ರವಾನಿಸಿದ್ದಾರೆ. ಭಕ್ತರು ಕಳಿಸಿದ್ದ ಇ-ಮೇಲ್ ಸಂದೇಶದಿಂದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಕೇಸ್ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: Viral Video: ವಿಮಾನದಲ್ಲಿ ಎಸಿ ಸ್ಥಗಿತಗೊಂಡು ಪ್ರಯಾಕರು ಸುಸ್ತೋ ಸುಸ್ತು! ವಿಮಾನ ಬಹಿಷ್ಕಾರದ ಎಚ್ಚರಿಕೆ ನೀಡಿದ ಪ್ರಯಾಣಿಕರು
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಕ್ತರು, ಕೊರೊನಾ ಬಳಿಕ ನಕಲಿ ವೆಬ್ಸೈಟ್ನಲ್ಲಿ ದೇವರ ಹೆಸರಲ್ಲಿ ವಂಚನೆಗಳು ನಡೆಯುತ್ತಿವೆ. ದೇವಾಸ್ಥಾನದಲ್ಲಿ 25 ರೂಪಾಯಿಗೆ ಸಿಗುತ್ತದೆ. ಆದರೆ ವಂಚಕರು 400- 500 ರೂ. ಗೆ ಮಾರಾಟ ಮಾಡುತ್ತಿದ್ದಾರೆ. ದೇವರ ಹೆಸರಲ್ಲಿ ವಂಚನೆಗಳು ನಡೆಯಬಾರದು. ರಾಯರ ಹೆಸರಲ್ಲಿ ಮಾಡುವ ವಂಚನೆಗಳಿಗೆ ಒಳಗಾಗಬೇಡಿ ಎಂದರು.
ಮಠದ ವ್ಯವಸ್ಥಾಪಕರು ಮಾತನಾಡಿ, ಪರಿಮಳ ಪ್ರಸಾದ ಪವಿತ್ರವಾದ ಪ್ರಸಾದ. ಈ ಪ್ರಸಾದವನ್ನು ಇಲ್ಲಿ 20 ರೂ.ಗೆ ಮಾರಾಟ ಮಾಡುತ್ತೇವೆ. ಆದರೆ ಕಿಡಿಗೇಡಿಗಳು 400ರಿಂದ 500 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ನಾವು ನಮ್ಮ ವೆಬ್ಸೈಟ್ನಲ್ಲಿ ಪ್ರಸಾದ ವಿತರಣೆ ಮಾಡುತ್ತಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: Mann Ki Baat: ಮನ್ ಕಿ ಬಾತ್ನಲ್ಲಿ 1975ರ ತುರ್ತು ಪರಿಸ್ಥಿತಿ ನೆನಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ