Mann Ki Baat: ಮನ್ ಕಿ ಬಾತ್ನಲ್ಲಿ 1975ರ ತುರ್ತು ಪರಿಸ್ಥಿತಿ ನೆನಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ
PM Modi Speech: ಈ ಬಾರಿಯ ಮನ್ ಕಿ ಬಾತ್ನಲ್ಲಿ 1975ರ ತುರ್ತು ಪರಿಸ್ಥಿತಿಯ ಹೋರಾಟವನ್ನು ವಿಶೇಷವಾಗಿ ನೆನಪಿಸಿಕೊಂಡರು.
ದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಭಾನುವಾರ (ಜೂನ್ 26) ಪ್ರತಿ ತಿಂಗಳ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು. ಈ ಬಾರಿಯ ಮನ್ ಕಿ ಬಾತ್ನಲ್ಲಿ 1975ರ ತುರ್ತು ಪರಿಸ್ಥಿತಿಯ ಹೋರಾಟವನ್ನು ವಿಶೇಷವಾಗಿ ನೆನಪಿಸಿಕೊಂಡರು. ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹಲವು ಸ್ಟಾರ್ಟ್ಅಪ್ಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಎಲ್ಲರ ಸಹಯೋಗದಿಂದ ಭಾರತವು ಬಾಹ್ಯಾಕಾಶ ಕ್ಷೇತ್ರದ ಮಹಾನ್ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.
ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದಾಗ ದೇಶದಲ್ಲಿ ನಾಗರಿಕರ ಎಲ್ಲ ಹಕ್ಕುಗಳು ದಮನಗೊಂಡಿದ್ದವು. ಸಂವಿಧಾನದ 21ನೇ ಪರಿಚ್ಛೇದ ನೀಡಿರುವ ಜೀವಿಸುವ ಹಕ್ಕು, ವೈಯಕ್ತಿಕ ಸ್ವಾತಂತ್ರ್ಯದ ಹಕ್ಕುಗಳನ್ನೂ ಕಿತ್ತುಕೊಳ್ಳಲಾಗಿತ್ತು ಎಂದು ಮೋದಿ ಹೇಳಿದರು. ತುರ್ತು ಪರಿಸ್ಥಿತಿಯ ನಂತರವೂ ದೇಶದಲ್ಲಿ ಜನರು ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಕಳೆದುಕೊಳ್ಳಲಿಲ್ಲ. ದೇಶವು ಸ್ವಾತಂತ್ರ್ಯ ಗಳಿಸಿದ ಅಮೃತ ಮಹೋತ್ಸವ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯ ಸಂಕಷ್ಟಗಳನ್ನು ನಾವು ಮರೆಯಬಾರದು ಎಂದು ಮೋದಿ ಹೇಳಿದರು. ತುರ್ತು ಪರಿಸ್ಥಿತಿ ವಿರುದ್ಧ ನಡೆದ ಹೋರಾಟಗಳನ್ನು ನೆನಪಿಸಿಕೊಂಡರು.
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆಗಳನ್ನು ಪ್ರಸ್ತಾಪಿಸಿದ ಅವರು, ಅಜಾದಿ ಕಾ ಅಮೃತ ಮಹೋತ್ಸವ ವಿಶೇಷ ಕಾರ್ಯಕ್ರಮದ ಪ್ರಯುಕ್ತ ಹಲವು ವಿದ್ಯಾರ್ಥಿಗಳು ಸಣ್ಣಸಣ್ಣ ಉಪಗ್ರಹಗಳನ್ನು ರೂಪಿಸುತ್ತಿದ್ದಾರೆ. ಈ ವಿದ್ಯಾರ್ಥಿಗಳು ಸಣ್ಣ ಪಟ್ಟಣಗಳ ಮೂಲದವರು. ಭಾರತದ ಯುವಜನರು ಆಗಸ ಮುಟ್ಟಲು ತಯಾರಾಗಿದ್ದಾರೆ ಎಂದರು.
Before 2019, StartUps in the space sector were not common. In the last 3 years, things have changed and our youth have shown great innovative skills. #MannKiBaat pic.twitter.com/e1fEkRxuzv
— PMO India (@PMOIndia) June 26, 2022
2019ಕ್ಕೆ ಮೊದಲು ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ಟಾರ್ಟ್ಅಪ್ಗಳು ಹೆಚ್ಚಾಗಿ ಕಂಡು ಬರುತ್ತಿರಲಿಲ್ಲ. ಆದರೆ ಕಳೆದ ಮೂರು ವರ್ಷಗಳಲ್ಲಿ ದೇಶದ ಯುವಜನರು ಬಾಹ್ಯಾಕಾಶ ಕ್ಷೇತ್ರದ ಸಾಧ್ಯತೆಗಳ ಬಗ್ಗೆ ಆಸಕ್ತಿ ತೋರಿದ್ದು, ಹೊಸ ಆವಿಷ್ಕಾರಗಳನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಹೇಳಿದರು.
ಕ್ರೀಡಾ ಕ್ಷೇತ್ರದ ಸಾಧನೆಗಾಗಿ ನೀರಜ್ ಛೋಪ್ರಾ, ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಅವರನ್ನು ಶ್ಲಾಘಿಸಿದರು. ಜಾವಲಿನ್ ಎಸೆತದಲ್ಲಿ ಒಲಿಂಪಿಕ್ಸ್ನಲ್ಲಿ ಉತ್ತಮ ಸಾಧನೆ ಮೆರೆದ ನೀರಜ್ ಛೋತ್ರಾ ಇದೀಗ ಪಾವೊ ನುರ್ಮಿ ಗೇಮ್ಸ್ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಇತ್ತೀಚೆಗಷ್ಟೇ ನಿವೃತ್ತರಾದ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್, ಹಲವರಿಗೆ ಸ್ಫೂರ್ತಿಯ ಸೆಲೆಯಾಗಿದ್ದರು ಎಂದು ತಿಳಿಸಿದರು.
PM @narendramodi talks about the upcoming Rath Yatra. #MannKiBaat pic.twitter.com/8uwbhi1h6L
— PMO India (@PMOIndia) June 26, 2022
ಜಗನ್ನಾಥ ಯಾತ್ರೆ, ವೈಷ್ಣೋದೇವಿ ಯಾತ್ರೆ, ಪಂಡರಾಪುರ ಯಾತ್ರೆ ಮತ್ತು ಶಬರಿಮಲೆ ಯಾತ್ರೆಗಳ ಹಿಂದಿರುವ ಆಶಯವನ್ನು ಮೋದಿ ವಿವರಿಸಿದರು. ‘ತೀರ್ಥಯಾತ್ರೆಗಳು ನಮಗೆ ಅಧ್ಯಾತ್ಮದ ಅನುಭೂತಿ ಕಲ್ಪಿಸುವುದರೊಂದಿಗೆ, ಬಡವರಿಗೆ ಸೇವೆ ಸಲ್ಲಿಸಲು ಅವಕಾಶ ನೀಡುತ್ತವೆ’ ಎಂದು ಹೇಳಿದರು.
ಕೊರೊನಾ ನಿರ್ವಹಣೆ ವಿಚಾರದಲ್ಲಿ ದೇಶದ ಉತ್ತಮ ಸಾಧನೆ ಮಾಡಿದೆ. ಆದರೆ ಈ ವಿಚಾರದಲ್ಲಿ ನಾವು ಎಚ್ಚರ ತಪ್ಪುವಂತಿಲ್ಲ. ಕೈಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವುದರೊಂದಿಗೆ ಬೂಸ್ಟರ್ ಡೋಸ್ ಪಡೆದುಕೊಳ್ಳಲು ಗಮನ ನೀಡಬೇಕು ಎಂದು ಸಲಹೆ ಮಾಡುವುದರೊಂದಿಗೆ ಮನ್ ಕಿ ಬಾತ್ ಮಾತು ಮುಗಿಸಿದರು.
Published On - 11:11 am, Sun, 26 June 22