Bypoll Vote Counting: ಉತ್ತರ ಪ್ರದೇಶದಲ್ಲಿ ಎಸ್​ಪಿ, ಪಂಜಾಬ್​​ನಲ್ಲಿ ಆಪ್​ಗೆ ಹಿನ್ನಡೆ, ಬಿಜೆಪಿಗೆ ಮುನ್ನಡೆ

ಒಟ್ಟು ಐದು ರಾಜ್ಯಗಳಲ್ಲಿ ಜೂನ್ 23ರಂದು ಉಪ ಚುನಾವಣೆಗಳು ನಡೆದಿದ್ದವು.

Bypoll Vote Counting: ಉತ್ತರ ಪ್ರದೇಶದಲ್ಲಿ ಎಸ್​ಪಿ, ಪಂಜಾಬ್​​ನಲ್ಲಿ ಆಪ್​ಗೆ ಹಿನ್ನಡೆ, ಬಿಜೆಪಿಗೆ ಮುನ್ನಡೆ
ದೇಶದ ವಿವಿಧೆಡೆ ನಡೆದಿರುವ ಉಪ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ.
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jun 26, 2022 | 2:05 PM

ದೆಹಲಿ: ದೇಶದ ವಿವಿಧೆಡೆ ನಡೆದಿರುವ ಮೂರು ಲೋಕಸಭೆ ಮತ್ತು ಏಳು ವಿಧಾನಸಭಾ ಉಪ ಚುನಾವಣೆಗಳ ಫಲಿತಾಂಶ (By Election Result) ಇಂದು ಪ್ರಕಟವಾಗಲಿದೆ. ಒಟ್ಟು ಐದು ರಾಜ್ಯಗಳಲ್ಲಿ ಜೂನ್ 23ರಂದು ಉಪ ಚುನಾವಣೆಗಳು ನಡೆದಿದ್ದವು. ಉಪಚುನಾವಣೆಗಳಲ್ಲಿ ಸ್ಪರ್ಧಿಸಿರುವ ಉಮೇದುವಾರರ ಪೈಕಿ ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಾಹಾ ಸೇರಿದ್ದಾರೆ. ಉಪ ಚುನಾವಣೆ ನಡೆಯುತ್ತಿರುವ ಲೋಕಸಭೆಯ ಮೂರು ಸ್ಥಾನಗಳ ಪೈಕಿ ಎರಡರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ, ಒಂದರಲ್ಲಿ ಶಿರೋಮಣಿ ಅಕಾಲಿದಳ ಮುನ್ನಡೆಯಲ್ಲಿದೆ. ವಿಧಾನಸಭೆ ಚುನಾವಣೆ ನಡೆಯುತ್ತಿರುವ ಏಳು ಕ್ಷೇತ್ರಗಳ ಪೈಕಿ ಮೂರರಲ್ಲಿ ಬಿಜೆಪಿ, ಎರಡು ಕಡೆ ಕಾಂಗ್ರೆಸ್, ತಲಾ ಒಂದು ಕ್ಷೇತ್ರಗಳಲ್ಲಿ ವೈಎಸ್​ಆರ್​ಸಿಪಿ, ಆಪ್ ಮುನ್ನಡೆಯಲ್ಲಿವೆ.

ಉಪ ಚುನಾವಣೆಗೆ ಸಂಬಂಧಿಸಿದ 10 ಪ್ರಮುಖ ಅಂಶಗಳು ಇಲ್ಲಿದೆ…

  1. ಉತ್ತರ ಪ್ರದೇಶದ ರಾಮ್​ಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಘನಶ್ಯಾಮ ಲೋಧಿ 1000ಕ್ಕೂ ಹೆಚ್ಚು ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಅಜಂಗಡದಲ್ಲಿ ಬಿಜೆಪಿ ಅಭ್ಯರ್ಥಿ ದಿನೇಶ್ ಲಾಲ್ ಯಾದವ್ ಮುನ್ನಡೆಯಲ್ಲಿದ್ದಾರೆ.
  2. ಪಂಜಾಬ್​ನ ಹಾಲಿ ಮುಖ್ಯಮಂತ್ರಿ ಭಗವಂತ್ ಮಾನ್​ ರಾಜೀನಾಮೆಯಿಂದ ತೆರವಾಗಿರುವ ಸಂಗ್ರೂರ್ ಲೋಕಸಭಾ ಕ್ಷೇತ್ರದಲ್ಲಿ ಅಕಾಲಿ ದಳದ ಸಿಮ್ರನ್​ಜಿಂಗ್ ಸಿಂಗ್ ಮಾನ್ ಮುನ್ನಡೆಯಲ್ಲಿದ್ದಾರೆ.
  3. ದೆಹಲಿಯ ರಾಜೇಂದ್ರ ನಗರ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ದುರ್ಗೇಶ್ ಪಾಠಕ್ ಮುನ್ನಡೆ ಸಾಧಿಸಿದ್ದಾರೆ. ಜಾರ್ಖಂಡ್​ನ ಮಂದಾರ್ ಮತ್ತು ಆಂಧ್ರ ಪ್ರದೇಶದ ಆತ್ಮಕೂರು ಕ್ಷೇತ್ರಗಳಲ್ಲಿಯೂ ಉಪ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ.
  4. ಅಜಂಗಡದಲ್ಲಿ ಬಿಜೆಪಿ ಅಭ್ಯರ್ಥಿ ದಿನೇಶ್ ಲಾಲ್ ಯಾದವ್ ತೀವ್ರ ಪ್ರತಿರೋಧ ಎದುರಿಸುತ್ತಿದ್ದಾರೆ. ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್ ಅವರ ಎದುರು ಗೆಲುವು ತೂಗುಯ್ಯಾಲೆ ಆಡುತ್ತಿದೆ.
  5. ಪಂಜಾಬ್​​ನಲ್ಲಿ ಆಪ್ ಸಂಗೂಲ್ ಜಿಲ್ಲಾ ಉಸ್ತುವಾರಿ ಗುರ್​ಮೈಲ್ ಸಿಂಗ್ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಪಕ್ಷವು ಧುರು ಕ್ಷೇತ್ರದ ಮಾಜಿ ಶಾಸಕ ದಲ್​ವೀರ್ ಸಿಂಗ್ ಗೋಲ್ಡಿ ಮತ್ತು ಬಿಜೆಪಿಯು ಬರ್​​ನಾಲಾ ಶಾಸಕ ಕೇವಲ್ ಧಿಲೋನ್ ಅವರನ್ನು ಕಣಕ್ಕಿಳಿಸಿದೆ.
  6. ಪಂಜಾಬ್ ಮುಖ್ಯಮಂತ್ರಿ ಬೀಂತ್ ಸಿಂಗ್ ಅವರ ಹತ್ಯಾ ಪ್ರಕರಣದ ಘೋಷಿತ ಅಪರಾಧಿ ಬಲವಂತ್ ಸಿಂಗ್ ರೋಜಾನಾ ಅವರ ಸೋದರಿ ಕಮಲ್​ದೀಪ್ ಕೌರ್ ಅವರನ್ನು ಶಿರೋಮಣಿ ಅಕಾಲಿದಳವು ಕಣಕ್ಕಿಳಿಸಿದೆ. ಅಕಾಲಿದಳದ ಅಮೃತಸರ ಘಟಕದ ಮುಖ್ಯಸ್ಥ ಸಿಮ್ರಾನ್​ಜಿತ್ ಸಿಂಗ್ ಮಾನ್ ಸಹ ಸ್ಪರ್ಧಿಸಿದ್ದಾರೆ.
  7. ಜಾರ್ಖಂಡ್​ನಲ್ಲಿ ಭ್ರಷ್ಟಾಚಾರದ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಶಾಸಕ ಬಂಡು ಟಿರ್​ಕೆ ಅವರ ಸದಸ್ಯತ್ವ ರದ್ದಾದ ಹಿನ್ನೆಲೆಯಲ್ಲಿ ಉಪ-ಚುನಾವಣೆ ಘೋಷಿಸಬೇಕಾಯಿತು.
  8. ಕಾಂಗ್ರೆಸ್-ಜಾರ್ಖಂಡ್ ಮುಕ್ತಿ ಮೋರ್ಚಾ ಮೈತ್ರಿಕೂಟವು ಟಿರ್​ಕೆ ಮಗಳಾದ ಶಿಲ್ಪಿ ನೇಹಾ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿಯು ಮಾಜಿ ಶಾಸಕಿ ಗಂಗೋತ್ರಿ ಕುಜೂರ್ ಅವರನ್ನು ಕಣಕ್ಕಿಳಿಸಿದೆ. ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷದ ಬೆಂಬಲದೊಂದಿಗೆ ದೇವ್ ಕುಮಾರ್ ಧನ್ ಕಣಕ್ಕಿಳಿದ್ದಾರೆ.
  9. ದೆಹಲಿಯ ರಾಜೇಂದ್ರ ನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಾಜೇಶ್ ಭಾಟಿಯಾ, ಕಾಂಗ್ರೆಸ್​ ಅಭ್ಯರ್ಥಿಯಾಗಿ ಪ್ರೇಮಲತಾ ಕಣದಲ್ಲಿದ್ದಾರೆ.
  10. ಆಂಧ್ರ ಪ್ರದೇಶದ ಕೈಗಾರಿಕಾ ಸಚಿವರಾಗಿದ್ದ ಮೇಕಪತಿ ಗೌತಮ್ ರೆಡ್ಡಿ ಕಳೆದ ಫೆಬ್ರುವರಿಯಲ್ಲಿ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯಿತು. ಗೌತಮ್ ರೆಡ್ಡಿ ಅವರ ತಮ್ಮ ವಿಕ್ರಮ್ ರೆಡ್ಡಿ ಅವರನ್ನು ವೈಎಸ್​ಆರ್ ಕಾಂಗ್ರೆಸ್ ಕಣಕ್ಕಿಳಿಸಿದೆ. ಬಿಜೆಪಿಯು ಜಿ.ಭರತ್ ಕುಮಾರ್ ಯಾದವ್ ಅವರನ್ನು ಕಣಕ್ಕಿಳಿಸಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada