ಎಂವಿಎ ಬಿಕ್ಕಟ್ಟಿನ ನಡುವೆಯೇ ಮತ್ತೊಂದು ಸಂಕಷ್ಟ; ಭೂ ಹಗರಣ ಪ್ರಕರಣದಲ್ಲಿ ಸಂಜಯ್ ರಾವುತ್‌ಗೆ ಇಡಿ ಸಮನ್ಸ್
ಇಡಿ ಸಮನ್ಸ್ ನೀಡಿರುವ ಬಗ್ಗೆ ಟ್ವೀಟ್ ಮಾಡಿರುವ ರಾವುತ್, ನನಗೆ ಇಡಿ ಸಮನ್ಸ್ ನೀಡಿದೆ ಎಂದು ಈಗಷ್ಟೇ ತಿಳಿಯಿತು. ಮಹಾರಾಷ್ಟ್ರದಲಿ ದೊಡ್ಡ ಮಟ್ಟದ ರಾಜಕೀಯ ಬೆಳವಣಿಗೆಗಳು ಆಗುತ್ತಿವೆ. ನಾವು, ಬಾಳಾಸಾಹೇಬ್ ಅವರ ಶಿವಸೈನಿಕರು ದೊಡ್ಡ ಹೋರಾಟವನ್ನು ಮಾಡುತ್ತಿದ್ದೇವೆ...
ಪತ್ರಾ ಚಾಲ್ ಭೂ ಹಗರಣ ಪ್ರಕರಣಕ್ಕೆ(Patra Chawl land scam )ಸಂಬಂಧಿಸಿದಂತೆ ಶಿವಸೇನಾ ನಾಯಕ ಸಂಜಯ್ ರಾವುತ್ (Sanjay Raut) ಅವರಿಗೆ ಜಾರಿ ನಿರ್ದೇಶನಾಲಯ (ED) ಸೋಮವಾರ ಸಮನ್ಸ್ ಜಾರಿ ಮಾಡಿದೆ.ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ (MVA) ಸರ್ಕಾರದೊಂದಿಗೆ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಸಮನ್ಸ್ ಬಂದಿದೆ. ಜೂನ್ 28 ರಂದು ಏಜೆನ್ಸಿಯ ಮುಂದೆ ಹಾಜರಾಗುವಂತೆ ರಾವುತ್ ಅವರನ್ನು ಕೇಳಲಾಗಿದೆ. ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಕೂಡಾ ಇಡಿ, ಸಿಬಿಐ ಮತ್ತು ಇತರ ಕೇಂದ್ರ ಏಜೆನ್ಸಿಗಳ ಒತ್ತಡದ ಪರಿಣಾಮವಾಗಿದೆ ಎಂದು ಠಾಕ್ರೆ ಬಣ ಹೇಳುತ್ತಿದೆ. ₹ 1,034 ಕೋಟಿ ಪತ್ರಾ ಚಾಲ್ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ರಾವುತ್ ಅವರ ಆಸ್ತಿಯನ್ನು ಇಡಿ ಏಪ್ರಿಲ್‌ನಲ್ಲಿ ಜಪ್ತಿ ಮಾಡಿತ್ತು. ಆಗ ರಾವುತ್, “ನಾನು ಹೆದರುವವನಲ್ಲ, ನನ್ನ ಆಸ್ತಿಯನ್ನು ವಶಪಡಿಸಿಕೊಳ್ಳಿ, ನನ್ನನ್ನು ಗುಂಡಿಕ್ಕಿ, ಅಥವಾ ನನ್ನನ್ನು ಜೈಲಿಗೆ ಕಳುಹಿಸಿ. ಈ ಸಂಜಯ್ ರಾವುತ್ ಬಾಳಾಸಾಹೇಬ್ ಠಾಕ್ರೆ ಅವರ ಅನುಯಾಯಿ ಮತ್ತು ಶಿವಸೈನಿಕ” ಎಂದು ಹೇಳಿದ್ದರು. ಎರಡು ತಿಂಗಳ ನಂತರ ಹಲವಾರು ಶಿವಸೇನೆಯ ಶಾಸಕರು ಬಂಡಾಯವೆದ್ದರು ಮತ್ತು ಕಾಂಗ್ರೆಸ್ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಯೊಂದಿಗಿನ ಸೇನೆಯ ಮೈತ್ರಿಯನ್ನು ಮುರಿಯಲು ಪ್ರಯತ್ನಿಸಿದರು. ಆಗ ರಾವುತ್ ಅವರು, ಬಂಡಾಯ ಶಾಸಕರು ಕೇಂದ್ರದ ಆಡಳಿತಾರೂಢ ಬಿಜೆಪಿಯ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. ಹಿಂದುತ್ವ ಸಿದ್ಧಾಂತವನ್ನು ಉಲ್ಲೇಖಿಸಿ, ಬಿಜೆಪಿಯೊಂದಿಗಿನ ತನ್ನ ಸಹಜ ಮೈತ್ರಿಗೆ ಸೇನಾ ಮರಳಬೇಕು ಎಂದು ಬಂಡಾಯ ಶಾಸಕರು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರದ ಅಡಿಯಲ್ಲಿ ಇಡಿಯನ್ನು ಶಿವಸೇನಾ ವಿರುದ್ಧ ದುರುಪಯೋಗಪಡಿಸಿಕೊಳ್ಳಲಾಗಿದೆ ರಾಜ್ಯಸಭಾ ಸದಸ್ಯರಾದ ರಾವುತ್ ಅವರು ಕಳೆದ ವಾರ ಹೇಳಿದ್ದರು. “ನಮಗೆ ಇಡಿ ಒತ್ತಡವಿದೆ ಆದರೆ ನಾವು ಉದ್ಧವ್ ಠಾಕ್ರೆ ಅವರೊಂದಿಗೆ ನಿಲ್ಲುತ್ತೇವೆ” ಎಂದು ಅವರು ಕಳೆದ ಗುರುವಾರ ಹೇಳಿದ್ದರು.
“ಇಡಿ ಒತ್ತಡದಲ್ಲಿ ಪಕ್ಷವನ್ನು ತೊರೆಯುವವನು ನಿಜವಾದ ಬಾಳಾಸಾಹೇಬ್ ಭಕ್ತನಲ್ಲ. ನಾವು ನಿಜವಾದ ಬಾಳಾಸಾಹೇಬ್ ಭಕ್ತರು” ಎಂದು ರಾವುತ್ ಹೇಳಿದ್ದರು. ಬಂಡಾಯ ಶಾಸಕಏಕನಾಥ್ ಶಿಂಧೆ ಕೂಡ ಬಾಳ್ ಠಾಕ್ರೆಯನ್ನು ತಮ್ಮ ಮಾರ್ಗದರ್ಶಕ ಎಂದು ಉಲ್ಲೇಖಿಸಿದ್ದಾರೆ.
ಸಮನ್ಸ್ ಬಗ್ಗೆ ರಾವುತ್ ಪ್ರತಿಕ್ರಿಯೆ
I just came to know that the ED has summoned me.
Good ! There are big political developments in Maharashtra. We, Balasaheb’s Shivsainiks are fighting a big battle. This is a conspiracy to stop me. Even if you behead me, I won’t take the Guwahati route.
Arrest me ! Jai Hind! pic.twitter.com/VeL6qMQYgr
— Sanjay Raut (@rautsanjay61) June 27, 2022
ಇಡಿ ಸಮನ್ಸ್ ನೀಡಿರುವ ಬಗ್ಗೆ ಟ್ವೀಟ್ ಮಾಡಿರುವ ರಾವುತ್, ನನಗೆ ಇಡಿ ಸಮನ್ಸ್ ನೀಡಿದೆ ಎಂದು ಈಗಷ್ಟೇ ತಿಳಿಯಿತು. ಮಹಾರಾಷ್ಟ್ರದಲಿ ದೊಡ್ಡ ಮಟ್ಟದ ರಾಜಕೀಯ ಬೆಳವಣಿಗೆಗಳು ಆಗುತ್ತಿವೆ. ನಾವು, ಬಾಳಾಸಾಹೇಬ್ ಅವರ ಶಿವಸೈನಿಕರು ದೊಡ್ಡ ಹೋರಾಟವನ್ನು ಮಾಡುತ್ತಿದ್ದೇವೆ. ಇದು ನನಗೆ ತಡೆ ನೀಡುವ ಸಂಚು. ನೀವು ನನ್ನ ಶಿರಚ್ಛೇದನ ಮಾಡಿದರೂ ನಾನು ಗುವಾಹಟಿ ದಾರಿ ತುಳಿಯಲ್ಲ. ನನ್ನನ್ನು ಬಂಧಿಸಿ ಜೈ ಹಿಂದ್ ಎಂದಿದ್ದಾರೆ.
Published On - 1:06 pm, Mon, 27 June 22