ನಾನು ಸತ್ಯವನ್ನೇ ಹೇಳಿದ್ದೇನೆ, ಬಂಡಾಯ ಶಾಸಕರನನ್ನು ‘ಜೀವಂತ ಶವ’ ಎಂದ ಹೇಳಿಕೆ ಸಮರ್ಥಿಸಿಕೊಂಡ ರಾವುತ್
ಉದಯ್ ಸಾಮಂತ್ ಆಪ್ತರು, ಏಕನಾಥ್ ಶಿಂಧೆ ನಮ್ಮ ಆತ್ಮೀಯರು, ನಮ್ಮ ಮನೆಯಲ್ಲಿ ಪರಸ್ಪರ ಮಾತನಾಡಿಕೊಳ್ಳುತ್ತಿದ್ದೆವು, ಸುಖ-ದುಃಖ ಹಂಚಿಕೊಂಡಿದ್ದೆವು. ಇದು ಈಗ ಬೀದಿ ಜಗಳ ಹಾಗೂ ಕಾನೂನು ಹೋರಾಟ. ಅಸ್ಸಾಂನಲ್ಲಿ ಏಕೆ ಕುಳಿತಿದ್ದೀರಿ?
ಮುಂಬೈ: ಬಂಡಾಯ ಶಾಸಕರನ್ನು ‘ಜೀವಂತ ಶವ’ (living corpses) ಎಂದು ಹೇಳಿರುವ ಹೇಳಿಕೆ ಸಮರ್ಥಿಸಿಕೊಂಡಿರುವ ಶಿವಸೇನೆ ನಾಯಕ ಸಂಜಯ್ ರಾವುತ್ (Sanjay Raut), ಇದು ಮಹಾರಾಷ್ಟ್ರದಲ್ಲಿ ಮಾತಿನ ರೀತಿಯಾಗಿದೆ. ಯಾರ ಭಾವನೆಗೂ ಧಕ್ಕೆ ತರಲು ನಾನು ಬಯಸಿಲ್ಲ ಎಂದು ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ರಾವುತ್, ಅವರ ದೇಹ ಜೀವಂತವಾಗಿದೆ, ಆದರೆ ಅವರ ಆತ್ಮ ಸತ್ತಿದೆ. ಇದು ಮಹಾರಾಷ್ಟ್ರದಲ್ಲಿ (Maharashtra) ಮಾತನಾಡುವ ವಿಧಾನ. ನಾನು ಏನು ತಪ್ಪು ಹೇಳಿದೆ? 40 ವರ್ಷಗಳ ಕಾಲ ಪಕ್ಷದಲ್ಲಿದ್ದು ನಂತರ ಓಡಿಹೋದವರು , ಅವರ ಆತ್ಮಗಳು ಸತ್ತಿವೆ, ಅವರಲ್ಲಿ ಏನೂ ಉಳಿದಿಲ್ಲ”, ಇದು ಡಾ ರಾಮ್ ಮನೋಹರ್ ಲೋಹಿಯಾ ಹೇಳಿದ ಸಾಲುಗಳು. ನಾನು ಯಾರ ಭಾವನೆಗೂ ಧಕ್ಕೆ ತರಲು ಬಯಸಲಿಲ್ಲ, ಸತ್ಯವನ್ನೇ ಹೇಳಿದ್ದೇನೆ ಎಂದಿದ್ದಾರೆ. “ತಂದೆಯನ್ನು ಬದಲಾಯಿಸುವವರ ಬಗ್ಗೆ ಮಾತನಾಡುವ ಗುಲಾಬರಾವ್ ಪಾಟೀಲ್ ಅವರ ಭಾಷಣದ ವಿಡಿಯೊವನ್ನು ನಾನು ಟ್ವೀಟ್ ಮಾಡಿದ್ದೇನೆ. ಅವರು ಹೇಳಿದ್ದು ಗುವಾಹಟಿಯಲ್ಲಿ ಕುಳಿತವರಿಗೆ ಸರಿ ಹೊಂದುತ್ತದೆ. ನನ್ನ ಟ್ವೀಟ್ ಗುವಾಹಟಿಯಲ್ಲಿ ಕುಳಿತಿರುವವರಿಗೆ ಇರುವುದು. ಪಾಟೀಲ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಜನರು ತಿನ್ನುತ್ತಾರೆ, ಕುಡಿಯುತ್ತಾರೆ ಮತ್ತು ಪಾರ್ಟಿಯೊಂದಿಗೆ ಆನಂದಿಸುತ್ತಾರೆ ಮತ್ತು ನಂತರ ಅವರ ತಂದೆಯನ್ನು ಬದಲಾಯಿಸುತ್ತಾರೆ, ನಾವು ಅವರಂತೆ ಅಲ್ಲ ಎಂದಿದ್ದಾರೆ ರಾವುತ್.
ಏಕನಾಥ್ ಶಿಂಧೆ ನನಗೆ ನಿಕಟವಾಗಿರುವವರಲ್ಲಿ ಒಬ್ಬರು ಎಂದು ಶಿವಸೇನಾ ನಾಯಕ ಹೇಳಿದ್ದು ಮಹಾರಾಷ್ಟ್ರಕ್ಕೆ ಹಿಂತಿರುಗುವಂತೆ ವಿನಂತಿಸಿದರು.
“ಉದಯ್ ಸಾಮಂತ್ ಆಪ್ತರು, ಏಕನಾಥ್ ಶಿಂಧೆ ನಮ್ಮ ಆತ್ಮೀಯರು, ನಮ್ಮ ಮನೆಯಲ್ಲಿ ಪರಸ್ಪರ ಮಾತನಾಡಿಕೊಳ್ಳುತ್ತಿದ್ದೆವು, ಸುಖ-ದುಃಖ ಹಂಚಿಕೊಂಡಿದ್ದೆವು. ಇದು ಈಗ ಬೀದಿ ಜಗಳ ಹಾಗೂ ಕಾನೂನು ಹೋರಾಟ. ಅಸ್ಸಾಂನಲ್ಲಿ ಏಕೆ ಕುಳಿತಿದ್ದೀರಿ? ಅಲ್ಲಿ ಪ್ರವಾಹ ಉಂಟಾಗಿ ನೂರಾರು ಜನ ಸತ್ತಿದ್ದಾರೆ.ಅಲ್ಲಿ ಯಾಕೆ ಕುಳಿತಿದ್ದೀರಿ, ಹಿಂತಿರುಗಿ ಬರಬೇಕು, ಅವರು ಸೂರತ್ ನಂತರ ಗುವಾಹಟಿಗೆ ಹೋಗುತ್ತಾರೆ, ಅಲ್ಲಿ ಅವರಿಗೆ ಕೇಂದ್ರೀಯ ಸಂಸ್ಥೆಗಳು ರಕ್ಷಣೆ ನೀಡಿವೆ, ಮಹಾರಾಷ್ಟ್ರ ಪೊಲೀಸರು ಭದ್ರತೆಗೆ ಸಮರ್ಥರಾಗಿದ್ದಾರೆ ದಯವಿಟ್ಟು ಇಲ್ಲಿಗೆ ಬನ್ನಿ. ಮೆಹಬೂಬಾ ಮುಫ್ತಿ ಜೊತೆ ನೀವು ಹೇಗೆ ಕೈ ಜೋಡಿಸುತ್ತಿರೀ? ಆರ್ ಡಿಎಕ್ಸ್ ಹಾಕಿದವರ ಜೊತೆ ಹೇಗೆ ಕೈ ಜೋಡಿಸುತ್ತೀರಿ? ಇಡಿ ಮತ್ತು ಸಿಬಿಐ ನಿಮಗೆ ಮತ ನೀಡುವುದಿಲ್ಲ, ಜನರು ನಿಮಗೆ ಮತ ನೀಡಿದ್ದಾರೆ ಎಂದು ರಾವುತ್ ಹೇಳಿದ್ದಾರೆ.