AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​ನಲ್ಲಿ ಆರಂಭವಾಯ್ತು​​​​ ‘ಟಿಕೆಟ್​ ಫೈಟ್’, ಕೊಪ್ಪಳ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ ಡಿಕೆಶಿ ಚರ್ಚೆ

ಇಕ್ಬಾಲ್ ಅನ್ಸಾರಿ ಮತ್ತು ಶ್ರೀನಾಥ್ ನಡುವಿನ ಮುಸುಕಿನ ಗುದ್ದಾಟ ಶಮನಗೊಳಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಭೆ ನಡೆಸಿದ್ದು, ಎಲ್ಲರೊಂದಿಗೆ ಹೊಂದಿಕೊಂಡು ಹೋಗುವಂತೆ ಅನ್ಸಾರಿಗೆ ಡಿಕೆಶಿ ಸೂಚಿಸಿದ್ದಾರೆ.

ಕಾಂಗ್ರೆಸ್​ನಲ್ಲಿ ಆರಂಭವಾಯ್ತು​​​​ 'ಟಿಕೆಟ್​ ಫೈಟ್', ಕೊಪ್ಪಳ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ ಡಿಕೆಶಿ ಚರ್ಚೆ
ಡಿ.ಕೆ.ಶಿವಕುಮಾರ್
TV9 Web
| Updated By: Rakesh Nayak Manchi|

Updated on:Jun 28, 2022 | 12:02 PM

Share

ಕೊಪ್ಪಳ: ವಿಧಾನಸಭೆ ಚುನಾವಣೆ ಹಿನ್ನೆಲೆ ಕೊಪ್ಪಳ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ​​​​ ಟಿಕೆಟ್​ ಗಿಟ್ಟಿಸಿಕೊಳ್ಳಲು ಈಗಿನಿಂದಲೇ ಪೈಪೋಟಿ ಆರಂಭಗೊಂಡಿದೆ. ಒಂದಡೆ ಜೆಡಿಎಸ್ ತೊರೆದು ಮತ್ತೆ ಕಾಂಗ್ರೆಸ್​ ಸೇರ್ಪಡೆಯಾಗಲು ಶ್ರೀನಾಥ್ (Shrinath) ತುದಿಗಾಲಿನಲ್ಲಿ ನಿಂತಿದ್ದು, ಇನ್ನೊಂದೆಡೆ ಇಕ್ಬಾಲ್ ಅನ್ಸಾರಿ(Iqbal Ansari)ಯವರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇವರಿಬ್ಬರ ಮುಸುಕಿನ ಗುದ್ದಾಟವನ್ನು ಕೊಣೆಗಾಣಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಅವರು ಚರ್ಚೆ ನಡೆಸಿರುವುದು ಸಂಚಲನ ಮೂಡಿಸಿದೆ.

ಅನ್ಸಾರಿ ವಿರುದ್ದ ಅಸಮಾಧಾನಗೊಂಡು‌ ಪಕ್ಷದಿಂದ ಹೊರ ಹೋಗಿದ್ದ ಕಾಂಗ್ರೆಸ್ ಹಿರಿಯ ನಾಯಕ​​ ಹೆಚ್.ಜಿ.ರಾಮುಲು ಪುತ್ರ ಶ್ರೀನಾಥ್ ಅವರು ಮತ್ತೆ ಕಾಂಗ್ರೆಸ್​ಗೆ ಮರಳಲು ತೀರ್ಮಾನಿಸಿದ್ದಾರೆ. ಇದೇ ಕಾರಣಕ್ಕೆ ಅನ್ಸಾರಿ ಅವರು ಅಸಮಧಾನಗೊಂಡಿದ್ದಾರೆ. ಇವರಿಬ್ಬರ ಮುಸುಕಿನ ಗುದ್ದಾಟ ತಪ್ಪಿಸಲು ಡಿ.ಕೆ.ಶಿವಕುಮಾರ್ ಅವರು ನಿನ್ನೆ ಪ್ರತ್ಯೇಕ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ: MVA Crisis: ಬಂಡಾಯದ ನಂತರ ಎರಡು ಬಾರಿ ರಾಜೀನಾಮೆ ನೀಡಲು ಮುಂದಾಗಿದ್ದ ಉದ್ಧವ್ ಠಾಕ್ರೆ, ತಡೆದು ನಿಲ್ಲಿಸಿದ್ದು ಈ ಪ್ರಭಾವಿ

ಶ್ರೀನಾಥ್ ಸೇರ್ಪಡೆ ಹಿನ್ನಲೆ ಅಸಮಾಧಾನಗೊಂಡಿರುವ ಅನ್ಸಾರಿ ಜೊತೆ ಚರ್ಚೆ ನಡೆಸಿ ಮನವೋಲಿಸಿರುವ ಡಿಕೆ ಶಿವಕುಮಾರ್, ಎಲ್ಲರೊಂದಿಗೆ ಸಹಕರಿಸಿಕೊಂಡು ಹೋಗುವಂತೆ ಸೂಚಿಸಿದ್ದಾರೆ. ಈ ನಡುವೆ ಶ್ರೀನಾಥ್ ಪಕ್ಷಕ್ಕೆ ಮರಳುತ್ತಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಜುಲೈ 3ಕ್ಕೆ ಸಭೆ ಕರೆದಿದ್ದು, ಎಲ್ಲರ ಒಪ್ಪಿಗೆ ಪಡೆದು ಪಕ್ಷಕ್ಕೆ ಬರಮಾಡಿಕೊಳ್ಳುವ ಉದ್ದೇಶವನ್ನು ಇಟ್ಟುಕೊಂಡಿದ್ದಾರೆ.

ಶ್ರೀನಾಥ್ ಅವರು ಈ ಹಿಂದೆ ತಾನು ಜುಲೈ 3ಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮರಳುತ್ತೇನೆ ಎಂದಿದ್ದರು. ಆದರೆ ಅಂದು ಪಕ್ಷ ಸೇರುವುದು ಅನುಮಾನವಾಗಿದೆ. ಜು.3ರಂದು ಡಿಕೆ ಶಿವಕುಮಾರ್ ಅವರು ಪಕ್ಷದ ಸಭೆ ಕರೆದು ಚರ್ಚೆ ನಡೆಸಿದ ನಂತರವಷ್ಟೇ ಶ್ರೀನಾಥ್ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆ ಇದೆ.

ಮುಂದೆ ನೋಡೋಣ ಎಂದ ಡಿಕೆಶಿ

ಗಂಗಾವತಿ ವಿಧಾನಸಭೆ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಈಗಿಂದೀಗಲೇ ಫೈಟ್ ಶುರುವಾಗಿದ್ದು, ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು ಯಾವುದೇ ಭರವಸೆಯನ್ನು ನೀಡಿಲ್ಲ. ಶ್ರೀನಾಥ್ ಹಾಗೂ ಅನ್ಸಾರಿ ಆಗಲಿ ಅಥವಾ ಯಾರಿಗೇ ಆಗಲಿ‌ ಟಿಕೆಟ್ ನೀಡುವ ಭರವಸೆಯನ್ನ ನೀಡಿದ ಡಿಕೆಶಿವಕುಮಾರ್, ಮುಂದೆ ನೋಡೋಣ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಾನು ಸತ್ಯವನ್ನೇ ಹೇಳಿದ್ದೇನೆ, ಬಂಡಾಯ ಶಾಸಕರನನ್ನು ‘ಜೀವಂತ ಶವ’ ಎಂದ ಹೇಳಿಕೆ ಸಮರ್ಥಿಸಿಕೊಂಡ ರಾವುತ್

ಅನ್ಸಾರಿ ಪರ ಸಿದ್ದು-ಶ್ರೀನಾಥ್ ಪರ ಡಿಕೆ

ಸಿದ್ದರಾಮಯ್ಯ ಅವರು ಇಕ್ಬಾಲ್ ಅನ್ಸಾರಿ ಪರ ಒಲವನ್ನು ಹೊಂದಿದ್ದು, ಡಿಕೆ ಶಿವಕುಮಾರ್ ಅವರು ಶ್ರೀನಾಥ್ ಪರ ಒಲವನ್ನು ಹೊಂದಿದ್ದಾರೆ. ಹೀಗಾಗಿ ನಾಡಿದು ನಡೆಯುವ ಸಭೆಯಲ್ಲಿ ಶ್ರೀನಾಥ್ ಪಕ್ಷ ಸೇರುವ ಬಗ್ಗೆ ಒಮ್ಮತದ ನಿಲುವು ತಾಳುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

ಮುಸ್ಲಿಂ ವೋಟುಗಳು ‘ಕೈ’ತಪ್ಪುವ ಭೀತಿ

ಶ್ರೀನಾಥ್ ಅವರು ಪಕ್ಷಕ್ಕೆ ಮರಳುತ್ತಿರುವ ಹಿನ್ನೆಲೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದ ಟಿಕೆಟ್ ಯಾರಿಗೆ ಒಲಿಯಲಿದೆ ಎಂಬ ಪ್ರಶ್ನೆ ಎದ್ದಿದೆ. ಅನ್ಸಾರಿ ಅವರನ್ನು ಕಣಕ್ಕಿಳಿಸದಿದ್ದರೆ ಮುಸ್ಲಿಮರ ಮತಗಳು ಕೈತಪ್ಪುವ ಭೀತಿಯನ್ನು ಪಕ್ಷದ ಮುಖಂಡರು ಎದುರಿಸುತ್ತಿದ್ದಾರೆ. ಅನ್ಸಾರಿಗೆ ಟಿಕೆಟ್ ತಪ್ಪಿದರೆ ಮುಸ್ಲಿಂ ಸಮುದಾಯದ ವಿರೋಧ ವ್ಯಕ್ತವಾಗುವ ಬಗ್ಗೆ ಜಿಲ್ಲಾ ನಾಯಕರು ಡಿ.ಕೆ.ಶಿವಕುಮಾರ್ ಅವರ ಮುಂದೆ ಪ್ರಸ್ತಾಪ ಮಾಡಿದ್ದಾರೆ.

ದೆಹಲಿಗೆ ತೆರಳಿದ ಸಿದ್ದು-ಡಿಕೆಶಿ

ಎಐಸಿಸಿ ಸಭೆ ಹಿನ್ನೆಲೆ ರಾಜ್ಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ತೆರಳಿದ್ದಾರೆ. ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಭೆ ಕರೆದಿರುವ ಹಿನ್ನೆಲೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಇಂದು ಬೆಳಗ್ಗೆ 10 ಗಂಟೆಗೆ ದೆಹಲಿಗೆ ತೆರಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ 40% ಕಮಿಷನ್ ಆರೋಪಿಸಿ ಪ್ರಧಾನಿಗೆ ಪತ್ರ ಬರೆದಿದ್ದ ಕೆಂಪಣ್ಣಗೆ ಪಿಎಂ ಕಾರ್ಯಾಲಯದಿಂದ ಕರೆ

Published On - 11:57 am, Tue, 28 June 22

ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಮಾಲ್ಡೀವ್ಸ್ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಮಾಲ್ಡೀವ್ಸ್ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ
ನೆಲಮಂಗಲ: ಗನ್​ ತೋರಿಸಿ ಹೆದರಿಸಿ, ಚಿನ್ನದ ದೋಚಿದ ಆರೋಪಿಗಳು, ವಿಡಿಯೋ ವೈರಲ್
ನೆಲಮಂಗಲ: ಗನ್​ ತೋರಿಸಿ ಹೆದರಿಸಿ, ಚಿನ್ನದ ದೋಚಿದ ಆರೋಪಿಗಳು, ವಿಡಿಯೋ ವೈರಲ್
ಸಿದ್ದರಾಮಯ್ಯ ಪಕ್ಕದಲ್ಲಿ ನಿಂತಿದ್ದ ಶಿವಕುಮಾರ್ ಮುಖದಲ್ಲಿ ಅನ್ಯಮನಸ್ಕತೆ
ಸಿದ್ದರಾಮಯ್ಯ ಪಕ್ಕದಲ್ಲಿ ನಿಂತಿದ್ದ ಶಿವಕುಮಾರ್ ಮುಖದಲ್ಲಿ ಅನ್ಯಮನಸ್ಕತೆ
ಕೋಯ್ನಾ ಜಲಾಶಯದಿಂದ ನೀರು ಬಿಡುಗಡೆ: ಕೃಷ್ಣ ನದಿ ಬಳಿ ತೆರಳದಂತೆ ಸೂಚನೆ
ಕೋಯ್ನಾ ಜಲಾಶಯದಿಂದ ನೀರು ಬಿಡುಗಡೆ: ಕೃಷ್ಣ ನದಿ ಬಳಿ ತೆರಳದಂತೆ ಸೂಚನೆ
ದುರಹಂಕಾರ ಸಿದ್ದರಾಮಯ್ಯ ವಂಶವಾಹಿನಿಯಲ್ಲಿ ಹರಿಯುತ್ತಿದೆ: ವಿಶ್ವನಾಥ್
ದುರಹಂಕಾರ ಸಿದ್ದರಾಮಯ್ಯ ವಂಶವಾಹಿನಿಯಲ್ಲಿ ಹರಿಯುತ್ತಿದೆ: ವಿಶ್ವನಾಥ್
ಜಪಾನ್​ನಲ್ಲಿ ಹೇಗಿವೆ ಬನ್ನೇರುಘಟ್ಟದ ಆನೆಗಳು: ಇಲ್ಲಿದೆ ವಿಡಿಯೋ
ಜಪಾನ್​ನಲ್ಲಿ ಹೇಗಿವೆ ಬನ್ನೇರುಘಟ್ಟದ ಆನೆಗಳು: ಇಲ್ಲಿದೆ ವಿಡಿಯೋ
‘ಒಡಲಾಳ’ ನಾಟಕ; 21ನೇ ವಯಸ್ಸಿಗೆ ಹಣ್ಣಣ್ಣು ಅಜ್ಜಿಯ ಪಾತ್ರ ಮಾಡಿದ್ದ ಉಮಾಶ್ರೀ
‘ಒಡಲಾಳ’ ನಾಟಕ; 21ನೇ ವಯಸ್ಸಿಗೆ ಹಣ್ಣಣ್ಣು ಅಜ್ಜಿಯ ಪಾತ್ರ ಮಾಡಿದ್ದ ಉಮಾಶ್ರೀ