AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MVA Crisis: ಬಂಡಾಯದ ನಂತರ ಎರಡು ಬಾರಿ ರಾಜೀನಾಮೆ ನೀಡಲು ಮುಂದಾಗಿದ್ದ ಉದ್ಧವ್ ಠಾಕ್ರೆ, ತಡೆದು ನಿಲ್ಲಿಸಿದ್ದು ಈ ಪ್ರಭಾವಿ

ಮಹಾರಾಷ್ಟ್ರದಲ್ಲಿ ಬಿಜೆಪಿ ತಂತ್ರಗಾರಿಕೆಗೆ ಸೆಡ್ಡು ಹೊಡೆದು ಮಹಾ ವಿಕಾಸ್ ಅಘಾಡಿ ಮೈತ್ರಿ ಕೂಟವನ್ನು ಅಸ್ತಿತ್ವಕ್ಕೆ ತಂದ ಶರದ್​ ಪವಾರ್ ಇದೀಗ ಮತ್ತೊಮ್ಮೆ ತಮ್ಮ ದಾಳಗಳನ್ನು ಉರುಳಿಸುತ್ತಿದ್ದಾರೆ.

MVA Crisis: ಬಂಡಾಯದ ನಂತರ ಎರಡು ಬಾರಿ ರಾಜೀನಾಮೆ ನೀಡಲು ಮುಂದಾಗಿದ್ದ ಉದ್ಧವ್ ಠಾಕ್ರೆ, ತಡೆದು ನಿಲ್ಲಿಸಿದ್ದು ಈ ಪ್ರಭಾವಿ
ಉದ್ಧವ್ ಠಾಕ್ರೆ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Jun 28, 2022 | 7:28 AM

Share

ಮುಂಬೈ: ಏಕನಾಥ ಶಿಂಧೆ ನೇತೃತ್ವದಲ್ಲಿ ಮಹಾರಾಷ್ಟ್ರದ (Maharashtra Politics) ಶಿವಸೇನೆ ಶಾಸಕರು ಬಂಡಾಯ (Shiv Sena MLAs Revolt) ಘೋಷಿಸಿದ ನಂತರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ರಾಜೀನಾಮೆ ನೀಡಲು ಮುಂದಾಗಿದ್ದರು. ಒಂದಲ್ಲ ಎರಡು ಬಾರಿ ಅವರು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡುವಲ್ಲಿ ಮೈತ್ರಿಕೂಟದ ಹಿರಿಯ ನಾಯಕರೊಬ್ಬರು ಯಶಸ್ವಿಯಾಗಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ಎನ್​ಡಿಟಿವಿ ಜಾಲತಾಣ ವರದಿ ಮಾಡಿದೆ. ಉದ್ಧವ್​ರನ್ನು ತಡೆದು ನಿಲ್ಲಿಸಿದ್ದು ಯಾರು ಎಂಬ ಬಗ್ಗೆ ಮೂಲಗಳು ಖಚಿತಪಡಿಸಿಲ್ಲ. ಉದ್ಧವ್​ರ ಕೈಹಿಡಿದು ತಡೆದವರು ಶರದ್​ ಪವಾರ್ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ತಂತ್ರಗಾರಿಕೆಗೆ ಸೆಡ್ಡು ಹೊಡೆದು ಮಹಾ ವಿಕಾಸ್ ಅಘಾಡಿ ಮೈತ್ರಿ ಕೂಟವನ್ನು ಅಸ್ತಿತ್ವಕ್ಕೆ ತಂದ ಶರದ್​ ಪವಾರ್ ಇದೀಗ ಮತ್ತೊಮ್ಮೆ ತಮ್ಮ ದಾಳಗಳನ್ನು ಉರುಳಿಸುತ್ತಿದ್ದಾರೆ. ಬಂಡಾಯ ಬಿಕ್ಕಟ್ಟು ಕಾಣಿಸಿಕೊಂಡ ನಂತರ ಹಲವು ಬಾರಿ ಅವರು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿದ್ದರು.

ಏಕನಾಥ್ ಶಿಂಧೆ ಅವರು 21 ಬಂಡಾಯ ಶಾಸಕರೊಂದಿಗೆ ಜೂನ್ 21ರಂದು ಗುಜರಾತ್​ನ ಸೂರತ್​ಗೆ ತೆರಳಿ, ಸಂಪರ್ಕ ಕಡಿದುಕೊಂಡಿದ್ದರು. ಉದ್ಧವ್ ಸಹ ಅಂದೇ ರಾಜೀನಾಮೆ ನೀಡಲು ಮುಂದಾಗಿದ್ದರು. ಅಂದು ಸಂಜೆ 5 ಗಂಟೆಗೆ ಫೇಸ್​ಬುಕ್​ನಲ್ಲಿ ಲೈವ್​​ಸ್ಟ್ರೀಮ್ ಬಂದು ರಾಜೀನಾಮೆ ನಿರ್ಧಾರ ಘೋಷಿಸಬೇಕು ಎಂದು ಉದ್ಧವ್ ನಿರ್ಧರಿಸಿದ್ದರು. ಶಿವಸೇನೆಯ ಮತ್ತಷ್ಟು ಶಾಸಕರು ಬಂಡಾಯ ಏಳಬಹುದು. ಅವರನ್ನು ತಡೆಯಬೇಕು ಎನ್ನುವುದು ಉದ್ಧವ್​ರ ಉದ್ದೇಶವಾಗಿತ್ತು. ಆಗಲೂ ಮೈತ್ರಿಕೂಟದ ಮಹಾ ನಾಯಕ ಅವರನ್ನು ತಡೆಹಿಡಿದರು ಎಂದು ಮೂಲಗಳು ಹೇಳಿದರು.

ಮಾರನೇ ದಿನ, ಅಂದರೆ ಜೂನ್ 22ರಂದು ಸಹ ಠಾಕ್ರೆ ರಾಜೀನಾಮೆ ನೀಡಲು ಮುಂದಾಗಿದ್ದರು. ವಿದಾಯ ಹೇಳಲು ಅಧಿಕಾರಿಗಳನ್ನೂ ಕರೆದಿದ್ದರು. ಠಾಕ್ರೆ ರಾಜೀನಾಮೆ ನೀಡಬಹುದು ಎಂಬ ಸುಳಿವು ಅರಿತ ‘ಮಹಾನಾಯಕ’ ಮತ್ತೊಮ್ಮೆ ಮಧ್ಯಪ್ರವೇಶಿಸಿದರು. ಅಂದು ಸಂಜೆ 4 ಗಂಟೆಗೆ ಫೇಸ್​ಬುಕ್ ಲೈವ್ ಸ್ಟ್ರೀಮ್​ನಲ್ಲಿ ಠಾಕ್ರೆ ರಾಜೀನಾಮೆ ನೀಡಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಲೈವ್ ಸ್ಟ್ರೀಮ್​ ಅರ್ಧ ತಾಸು ತಡವಾಗಿ ಆರಂಭವಾಯಿತು.

ಇದನ್ನೂ ಓದಿ
Image
ಮುಖ್ಯಮಂತ್ರಿ ಪಟ್ಟಕ್ಕಾಗಿ ಸುಪ್ರೀಂಕೋರ್ಟ್ ನಲ್ಲಿ ಉದ್ದವ್ ಠಾಕ್ರೆ v/s ಏಕನಾಥ್ ಶಿಂಧೆ ಮಧ್ಯೆ ಕಾನೂನು ಸಮರ ಹೀಗಿತ್ತು!
Image
ನಾನು ಸತ್ಯವನ್ನೇ ಹೇಳಿದ್ದೇನೆ, ಬಂಡಾಯ ಶಾಸಕರನನ್ನು ‘ಜೀವಂತ ಶವ’ ಎಂದ ಹೇಳಿಕೆ ಸಮರ್ಥಿಸಿಕೊಂಡ ರಾವುತ್
Image
Maharashtra political crisis ಉದ್ಧವ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, 5 ದಿನಗಳಲ್ಲಿ ಪ್ರತಿಕ್ರಿಯಿಸುವಂತೆ ಹೇಳಿದ ಸುಪ್ರೀಂ; ಮುಂದಿನ ವಿಚಾರಣೆ ಜುಲೈ 11ಕ್ಕೆ
Image
Maharashtra Crisis: ಮಹಾರಾಷ್ಟ್ರದಲ್ಲಿ ಬಿಜೆಪಿ, ಶಾಸಕ, ಸಂಸದರ ಸಭೆ; ಜುಲೈ 3ರಂದು ಮುಂಬೈ ಏರ್​ಪೋರ್ಟ್​ ಬಳಿ ಜಮಾಯಿಸಲು ಸೂಚನೆ

‘ಫೇಸ್​ಬುಕ್ ಲೈವ್​ ಸ್ಟ್ರೀಮ್ ತಡವಾಗಲು ಉದ್ಧವ್ ಠಾಕ್ರೆ ಅವರೊಂದಿಗೆ ಹಿರಿಯ ನಾಯಕ ಮಾತನಾಡಿ, ರಾಜೀನಾಮೆ ನಿರ್ಧಾರದಿಂದ ಹಿಂದಕ್ಕೆ ಸರಿಯುವಂತೆ ಮನವೊಲಿಸಲು ಮುಂದಾಗಿದ್ದೇ ಕಾರಣ’ ಎಂದು ಮೂಲಗಳು ಹೇಳಿವೆ. ‘ಹೋರಾಡಬೇಕು, ಹೋರಾಡದೇ ಸೋಲುವುದರಲ್ಲಿ ಅರ್ಥವಿಲ್ಲ. ಸಮಸ್ಯೆ ಏನು ಎಂದು ಸಮಾಧಾನವಾಗಿ ಅರ್ಥ ಮಾಡಿಕೊಳ್ಳಿ. ಅದನ್ನು ಎದುರಿಸಲು ಕಾರ್ಯತಂತ್ರ ರೂಪಿಸಿ. ಆಗುವುದಿಲ್ಲ ಎಂದು ಕೈಬಿಡಬೇಡಿ’ ಎಂದು ಕೊನೆಯ ಕ್ಷಣದಲ್ಲಿ ಉದ್ಧವ್ ಅವರ ಮನವೊಲಿಸಲು ಯತ್ನಿಸಲಾಯಿತು ಎಂದು ಮೂಲಗಳು ಹೇಳಿವೆ.

‘ನನ್ನ ಕಿಸೆಯಲ್ಲಿ ರಾಜೀನಾಮೆ ಪತ್ರವಿದೆ. ಆದರೆ ಒಬ್ಬೇ ಒಬ್ಬ ಬಂಡಾಯ ಶಾಸಕ ನನ್ನೆದುರು ಬಂದು, ಏಕೆ ಅಸಮಾಧಾನ ಎಂದು ವಿವರಿಸಿದರೂ ರಾಜೀನಾಮೆ ಕೊಡುತ್ತೇನೆ’ ಎಂದು ಉದ್ಧವ್ ಮಾಧ್ಯಮಗಳ ಎದುರು ಪ್ರತಿಕ್ರಿಯಿಸಿದರು. ಈ ಬೆಳವಣಿಗೆಯಾದ ಕೆಲವೇ ಗಂಟೆಗಳ ನಂತರ ಅವರು ಮುಖ್ಯಮಂತ್ರಿಯ ಅಧಿಕೃತ ನಿವಾಸದಿಂದ ಖಾಸಗಿ ನಿವಾಸಕ್ಕೆ ಹಿಂದಿರುಗಿದರು.

ಆದರೆ ಈ ಬಾರಿ ಪವಾರ್ ಕಾರ್ಯತಂತ್ರವೂ ವಿಫಲವಾಗುವ ಲಕ್ಷಣಗಳು ಗೋಚರಿಸುತ್ತಿದೆ. ಉದ್ಧವ್ ಠಾಕ್ರೆ ಅವರ ಮನವಿ, ಏಕನಾಥ್ ಶಿಂಧೆ ಅವರೊಂದಿಗೆ ಫೋನ್ ಮಾಡಿ ಮಾತನಾಡಿ ಮನವೊಲಿಸುವ ಪ್ರಯತ್ನಗಳ ನಡುವೆಯೂ ಬಂಡುಕೋರ ಶಾಸಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಏಕನಾಥ್ ಶಿಂಧೆ ಬಣದಲ್ಲಿ ಸುಮಾರು 50 ಶಾಸಕರು ಇರಬಹುದು ಎಂದು ಹೇಳಲಾಗುತ್ತಿದೆ. ಈ ಪೈಕಿ 40 ಮಂದಿ ಶಿವಸೇನೆಗೆ ಸೇರಿದವರೇ ಆಗಿದ್ದಾರೆ.

ಅಂಕಿಅಂಶದ ಲೆಕ್ಕಾಚಾರ

ಮಹಾರಾಷ್ಟ್ರ ವಿಧಾನಸಭೆಯ ಒಟ್ಟು ಸದಸ್ಯ ಬಲವು 288. ಈ ಪೈಕಿ ಒಂದು ಸ್ಥಾನವು ತೆರವಾಗಿದೆ. ಹೀಗಾಗಿ ಸದ್ಯ 287 ಸದಸ್ಯರಿದ್ದಾರೆ. ಶಿವಸೇನೆಯ 55 ಸದಸ್ಯರಿದ್ದು, ಎನ್​ಸಿಪಿ 53, ಕಾಂಗ್ರೆಸ್ 44 ಸದಸ್ಯ ಬಲ ಹೊಂದಿದೆ. ಮೂರು ಸಣ್ಣ ಪಕ್ಷಗಳು ಮತ್ತು 9 ಪಕ್ಷೇತರರ ಬೆಂಬಲದೊಂದಿಗೆ ಮಹಾ ವಿಕಾಸ ಅಘಾಡಿ ಮೈತ್ರಿ 166 ಸದಸ್ಯ ಬಲದ ಬೆಂಬಲದೊಂದಿಗೆ ಸರ್ಕಾರ ರಚಿಸಿದೆ. ಬಿಜೆಪಿ 106 ಸದಸ್ಯ ಬಲ ಹೊಂದಿದ್ದು, ಎರಡು ಮಿತ್ರ ಪಕ್ಷಗಳು ಮತ್ತು ನಾಲ್ವರ ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ 112 ಮಂದಿ ತನ್ನ ಪರ ಇರುವುದಾಗಿ ಹೇಳಿದೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬೇಕಿರುವ ಸದಸ್ಯರ ಸಂಖ್ಯೆ 143. ಸದ್ಯ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ಹಾಗೂ ಎನ್​ಡಿಎ ಮೈತ್ರಿಕೂಟ 113 ಸಂಖ್ಯಾಬಲ ಹೊಂದಿದೆ. ಇದೀಗ ಏಕನಾಥ ಶಿಂಧೆ ಬಣದಲ್ಲಿ ಪಕ್ಷೇತರ ಶಾಸಕರು ಸೇರಿದಂತೆ 48 ಶಾಸಕರು ಗುರುತಿಸಿಕೊಂಡಿದ್ದಾರೆ. ಇದರಿಂದಾಗಿ ಎನ್​​ಡಿಎ ಮತ್ತು ಏಕನಾಥ ಶಿಂಧೆ‌ ಬಣದ ಶಾಸಕರ ಸಂಖ್ಯೆ 161ಕ್ಕೆ ಹೆಚ್ಚಾಗಿದೆ. ಇದೇ ಹೊತ್ತಿಗೆ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಸಂಖ್ಯಾಬಲವು 124ಕ್ಕೆ ಕುಸಿತ ಕಂಡಿದೆ. ವಿಧಾನಸಭೆಯಲ್ಲಿ ಸಿಎಂ ಉದ್ಧವ್ ಠಾಕ್ರೆ ಬಹುಮತ ಕಳೆದುಕೊಳ್ಳುವ ಸಾಧ್ಯತೆ ನಿಚ್ಚಳ ಎನಿಸಿದೆ.

Published On - 7:25 am, Tue, 28 June 22

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!