ಮುಖ್ಯಮಂತ್ರಿ ಪಟ್ಟಕ್ಕಾಗಿ ಸುಪ್ರೀಂಕೋರ್ಟ್ ನಲ್ಲಿ ಉದ್ದವ್ ಠಾಕ್ರೆ v/s ಏಕನಾಥ್ ಶಿಂಧೆ ಮಧ್ಯೆ ಕಾನೂನು ಸಮರ ಹೀಗಿತ್ತು!

ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ನೆನ್ನೆಯೇ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಸುಪ್ರೀಂಕೋರ್ಟ್ ನಲ್ಲಿ ಉದ್ದವ್ ಠಾಕ್ರೆ ಬಣ ಹಾಗೂ ಏಕನಾಥ್ ಶಿಂಧೆ ಬಣದ ನಡುವೆ ಕಾನೂನು ಸಮರವೇ ನಡೆಯಿತು. ಏಕನಾಥ್ ಶಿಂಧೆ ಬಣದ ವಿರುದ್ಧ ಶಾಸಕ ಸ್ಥಾನದ ಅನರ್ಹತೆಯ ತೂಗುಕತ್ತಿ ನೇತಾಡುತ್ತಿತ್ತು. ಅದಕ್ಕೆ ಈಗ ಸುಪ್ರೀಂಕೋರ್ಟ್ ರಿಲೀಫ್ ನೀಡಿದೆ.

ಮುಖ್ಯಮಂತ್ರಿ ಪಟ್ಟಕ್ಕಾಗಿ ಸುಪ್ರೀಂಕೋರ್ಟ್ ನಲ್ಲಿ ಉದ್ದವ್ ಠಾಕ್ರೆ v/s  ಏಕನಾಥ್ ಶಿಂಧೆ ಮಧ್ಯೆ ಕಾನೂನು ಸಮರ ಹೀಗಿತ್ತು!
ಮುಖ್ಯಮಂತ್ರಿ ಪಟ್ಟಕ್ಕಾಗಿ ಸುಪ್ರೀಂಕೋರ್ಟ್ ನಲ್ಲಿ ಉದ್ದವ್ ಠಾಕ್ರೆ ವರ್ಸಸ್ ಏಕನಾಥ್ ಶಿಂಧೆ ಮಧ್ಯೆ ಕಾನೂನು ಸಮರ ಹೀಗಿತ್ತು!
Follow us
S Chandramohan
| Updated By: ಸಾಧು ಶ್ರೀನಾಥ್​

Updated on: Jun 27, 2022 | 10:51 PM

ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ನೆನ್ನೆಯೇ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಸುಪ್ರೀಂಕೋರ್ಟ್ ನಲ್ಲಿ ಉದ್ದವ್ ಠಾಕ್ರೆ ಬಣ ಹಾಗೂ ಏಕನಾಥ್ ಶಿಂಧೆ ಬಣದ ನಡುವೆ ಕಾನೂನು ಸಮರವೇ ನಡೆಯಿತು. ಏಕನಾಥ್ ಶಿಂಧೆ ಬಣದ ವಿರುದ್ಧ ಶಾಸಕ ಸ್ಥಾನದ ಅನರ್ಹತೆಯ ತೂಗುಕತ್ತಿ ನೇತಾಡುತ್ತಿತ್ತು. ಅದಕ್ಕೆ ಈಗ ಸುಪ್ರೀಂಕೋರ್ಟ್ ರಿಲೀಫ್ ನೀಡಿದೆ. ಜುಲೈ 11 ರವರೆಗೂ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಜೊತೆಗೆ ಬಂಡಾಯ ಶಾಸಕರು ಹಾಗೂ ಅವರ ಕುಟುಂಬಕ್ಕೆ ತಕ್ಷಣವೇ ಭದ್ರತೆ ನೀಡುವಂತೆ ಸೂಚಿಸಿದೆ.

ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಈಗ ಸುಪ್ರೀಂ ಕೋರ್ಟ್ ಅಂಗಳ ತಲುಪಿದೆ. ಬಿಕ್ಕಟ್ಟಿನ ಬಗ್ಗೆ ಈಗ ಕಾನೂನು ಸಮರ ನಡೆಯುತ್ತಿದೆ. ಉದ್ದವ್ ಠಾಕ್ರೆ ಸರ್ಕಾರದ ವಿರುದ್ಧ ಬಂಡಾಯ ಸಾರಿರುವ ಏಕನಾಥ್ ಶಿಂಧೆ ಬಣ ನೆನ್ನೆ 2 ಅರ್ಜಿಗಳನ್ನು ಸುಪ್ರೀಂಕೋರ್ಟ್ ಗೆ ಸಲ್ಲಿಸಿತ್ತು. ಶಿವಸೇನೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ಏಕನಾಥ್ ಶಿಂಧೆ ತೆಗೆದು ಅಜಯ್ ಚೌಧರಿ ನೇಮಿಸಿದ್ದನ್ನು ಪ್ರಶ್ನಿಸಿ ಒಂದು ಅರ್ಜಿ ಸಲ್ಲಿಸಿದ್ದರೇ, ಶಿಂಧೆ ಬಣದ 16 ಶಾಸಕರ ಅನರ್ಹತೆ ಬಗ್ಗೆ ಡೆಪ್ಯುಟಿ ಸ್ಪೀಕರ್ ನೀಡಿದ್ದ ನೋಟಿಸ್ ಪ್ರಶ್ನಿಸಿ ಮತ್ತೊಂದು ಅರ್ಜಿ ಸಲ್ಲಿಸಲಾಗಿತ್ತು.

ಈ ಅರ್ಜಿಗಳನ್ನು ಇಂದು ಸುಪ್ರೀಂಕೋರ್ಟ್ ನ ಜಸ್ಟೀಸ್ ಸೂರ್ಯಕಾಂತ್ ಹಾಗೂ ಜಸ್ಟೀಸ್ ಜೆ.ಬಿ.ಪರ್ದಿವಾಲಾ ಅವರಳನ್ನೊಳಗೊಂಡ ರಜಾಕಾಲದ ಪೀಠ ವಿಚಾರಣೆ ನಡೆಸಿತು. ಏಕನಾಥ್ ಶಿಂಧೆ ಬಣದ ಪರವಾಗಿ ಹಿರಿಯ ವಕೀಲ ನೀರಜ್ ಕಿಶನ್ ಕೌಲ್ ವಾದ ಮಂಡಿಸಿದರು. ಶಿವಸೇನೆಯ ಉದ್ದವ್ ಠಾಕ್ರೆ ಸರ್ಕಾರದ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ವಾದಿಸಿದ್ದರು. ಡೆಪ್ಯುಟಿ ಸ್ಪೀಕರ್ ನರಹರಿ ಜೀರವಾಲ್ ಪರವಾಗಿ ಹಿರಿಯ ವಕೀಲ ರಾಜೀವ್ ಧವನ್ ವಾದಿಸಿದ್ದರು. ಮೊದಲಿಗೆ ಏಕನಾಥ್ ಶಿಂಧೆ ಬಣದ ಪರ ವಕೀಲ ನೀರಜ್ ಕಿಶನ್ ಕೌಲ್ ವಾದಿಸಿದ್ದರು.

ಸುಪ್ರೀಂಕೋರ್ಟ್-ನೀವು ಏಕೆ ಈ ಬಗ್ಗೆ ಹೈಕೋರ್ಟ್ ಗೆ ಹೋಗಲಿಲ್ಲ? ನೀರಜ್ ಕಿಶನ್ ಕೌಲ್–ಶಾಸಕರ ಅನರ್ಹತೆ ಬಗ್ಗೆ ಶಾಸಕರಿಗೆ ಕಾನೂನುಬಾಹಿರವಾಗಿ ನೋಟಿಸ್ ಕಳಿಸಲಾಗಿದೆ. ಡೆಪ್ಯುಟಿ ಸ್ಪೀಕರ್ ಪದಚ್ಯುತಿಗೆ ಅವಿಶ್ವಾಸ ನಿರ್ಣಯ ನೋಟಿಸ್ ನೀಡಲಾಗಿದೆ. ಸುಪ್ರೀಂಕೋರ್ಟ್ ನ ಸಂವಿಧಾನಿಕ ಪೀಠದ ಆದೇಶಗಳನ್ನು ಪಾಲಿಸಿಲ್ಲ. ಸಹಜ ನ್ಯಾಯವನ್ನು ಅನುಸರಿಸದೇ ಆತುರಾತುರವಾಗಿ ನೋಟಿಸ್ ನೀಡಲಾಗಿದೆ. ಅರುಣಾಚಲ ಪ್ರದೇಶದ ನಬಮ್ ರಿಬಿಯಾ ಪ್ರಕರಣದಲ್ಲಿ ಸ್ಪೀಕರ್ ವಿರುದ್ಧವೇ ಅವಿಶ್ವಾಸ ನಿರ್ಣಯ ಮಂಡನೆಯಾಗಿದ್ದಾಗ ಶಾಸಕರ ಅನರ್ಹತೆಯ ಬಗ್ಗೆ ತೀರ್ಮಾನ ಕೈಗೊಳ್ಳಬಾರದೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ಆದರೆ, ಈ ತೀರ್ಪುನ್ನು ಪಾಲಿಸದೇ, ಶಾಸಕರಿಗೆ ಅನರ್ಹತೆ ದೂರಿನ ಆಧಾರದ ಮೇಲೆ ನೋಟಿಸ್ ನೀಡಲಾಗಿದೆ. ಉದ್ದವ್ ಠಾಕ್ರೆ ಸರ್ಕಾರ ನಮ್ಮನ್ನು ಬೆದರಿಸುತ್ತಿದೆ. ಶಿವಸೇನೆಯ ವಕ್ತಾರ ಸಂಜಯ್ ರಾವತ್ ಗುವಾಹಟಿಯಿಂದ ಬರುವ ಶವಗಳನ್ನು ಶವಾಗಾರಕ್ಕೆ ಕಳಿಸುತ್ತೇವೆ ಎಂದಿದ್ದಾರೆ. ಮಹಾರಾಷ್ಟ್ರದಲ್ಲಿ ನಮ್ಮ ಕುಟುಂಬಗಳಿಗೆ ರಕ್ಷಣೆ ಇಲ್ಲ. ನಮ್ಮ ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ.

ಬಹುಸಂಖ್ಯಾತ ಶಾಸಕರು ಏಕನಾಥ್ ಶಿಂಧೆರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ನೇಮಿಸಿದ್ದಾರೆ. ಆದರೆ, ನಂತರ, 19 ಶಾಸಕರು ಅಜಯ್ ಚೌಧರಿಯನ್ನು ಸಭೆ ನಡೆಸಿ ಶಾಸಕಾಂಗ ಪಕ್ಷದ ನಾಯಕರಾಗಿ ಆರಿಸಿಕೊಂಡಿದ್ದಾರೆ. ಇದನ್ನು ಡೆಪ್ಯುಟಿ ಸ್ಪೀಕರ್ ಗೆ ತಿಳಿಸಿದ್ದಾರೆ. ಅಜಯ್ ಚೌಧರಿಯನ್ನೇ ಶಾಸಕಾಂಗ ಪಕ್ಷದ ನಾಯಕಾಗಿ ಡೆಪ್ಯುಟಿ ಸ್ಪೀಕರ್ ಘೋಷಿಸಿದ್ದಾರೆ. ಮೆಜಾರಿಟಿ ಗುಂಪು ತಮ್ಮ ತೀರ್ಮಾನದ ಬಗ್ಗೆ ಸ್ಪೀಕರ್ ಗೆ ತಿಳಿಸಿದ್ದಾರೆ. ನಂತರ ರೆಬೆಲ್ ಶಾಸಕರಿಗೆ ಸಭೆಗೆ ಹಾಜರಾಗುವಂತೆ ಅಲ್ಪಸಂಖ್ಯಾತ ಶಾಸಕರ ಬಣ ನೋಟೀಸ್ ನೀಡಿದೆ. ಆದರೇ, ರೆಬೆಲ್ ಶಾಸಕರು ಸಭೆಗೆ ಹಾಜರಾಗಿಲ್ಲ. ಅಂದೇ ನೋಟೀಸ್ ಕೊಟ್ಟ ಆಧಾರದ ಮೇಲೆ ಅನರ್ಹತೆಗೆ ಅರ್ಜಿ ಸಲ್ಲಿಸಿದ್ದಾರೆ.

ಶಾಸಕರ ವಿರುದ್ಧದ ಅನರ್ಹತೆ ಅರ್ಜಿಯ ಬಗ್ಗೆ ತೀರ್ಮಾನ ಕೈಗೊಳ್ಳಲು ಸ್ಪೀಕರ್ ಸದನದ ವಿಶ್ವಾಸ ಹೊಂದಿರಬೇಕು. ಸ್ಪೀಕರ್ ಪದಚ್ಯುತಿ ನಿರ್ಣಯದ ತೀರ್ಮಾನ ಬಾಕಿ ಇದೆ. ಇದೇ ಅವಧಿಗೆ ಹಾಲಿ ಶಾಸಕರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ. ಅನರ್ಹಗೊಳಿಸುವ ಮೂಲಕ ವಿಧಾನಸಭೆಯ ಸಂಖ್ಯಾಬಲದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಇದು ಕಾನೂನು ಬಾಹಿರವಾದ ನಡೆಯಾಗಿದೆ.

ಅಭಿಷೇಕ್ ಮನುಸಿಂಘ್ವಿ ವಾದಮಂಡನೆ -ರಾಜಸ್ಥಾನದ ಪ್ರಕರಣ ಹೊರತುಪಡಿಸಿ ಭಾರತದಲ್ಲಿ ಒಂದೇ ಒಂದು ಪ್ರಕರಣವೂ ಇಲ್ಲ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ಸ್ಪೀಕರ್ ತೀರ್ಮಾನ ಕೈಗೊಳ್ಳುವವರೆಗೂ ಕೋರ್ಟ್ ಮಧ್ಯಪ್ರವೇಶ ಮಾಡಲ್ಲ.

ಜಸ್ಟೀಸ್ ಸೂರ್ಯಕಾಂತ್‌ – ನಮಗೆ 1992ರ ಒಂದು ಪ್ರಕರಣ ನೆನಪಿದೆ. ಅಭಿಷೇಕ ಮನುಸಿಂಘ್ವಿ ವಾದಮಂಡನೆ -ಅರುಣಾಚಲಪ್ರದೇಶದ ನಬಮ್ ರಬಿಯಾ ಪ್ರಕರಣದಲ್ಲಿ ಮಾತ್ರ ತೀರ್ಪು ನೀಡಲಾಗಿದೆ. ಅದಕ್ಕಿಂತ ಮುಂಚಿತವಾಗಿ ಅಲ್ಲ. ಒಂದು ವೇಳೆ ಸ್ಪೀಕರ್ ಮಧ್ಯಂತರ ಅನರ್ಹತೆಯ ಆದೇಶ ನೀಡಿದರೇ, ಅದನ್ನೇ ಅಂತಿಮ ಆದೇಶ ಎಂದು ಪರಿಗಣಿಸಲಾಗುತ್ತೆ. ಆದಾದ ಬಳಿಕ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಬಹುದು.

ಜಸ್ಟೀಸ್ ಸೂರ್ಯಕಾಂತ್- ಇಲ್ಲಿ ವಿಷಯ ಸೀಮಿತವಾಗಿದೆ. ಸ್ಪೀಕರ್ ತಮ್ಮ ವಿರುದ್ಧವೇ ಸಂವಿಧಾನದ 179ನೇ ಸೆಕ್ಷನ್‌ನಡಿ ಅವಿಶ್ವಾಸ ನಿರ್ಣಯ ಮಂಡಿಸಿದ್ದಾಗ, ಸಂವಿಧಾನದ ಹತ್ತನೇ ಷೆಡ್ಯೂಲ್ ನಡಿ ಶಾಸಕರ ಅನರ್ಹತೆಯ ಬಗ್ಗೆ ವಿಚಾರಣೆ ನಡೆಸುವ ಹಕ್ಕು ಹೊಂದಿದ್ದಾರೆಯೇ? ಎಂಬುದು ಪ್ರಶ್ನೆ. ಅಭಿಷೇಕ್ ಮನುಸಿಂಘ್ವಿ- ಈಗಾಗಲೇ ಡೆಪ್ಯುಟಿ ಸ್ಪೀಕರ್ ಅವಿಶ್ವಾಸ ನಿರ್ಣಯ ನೋಟೀಸ್ ಬಗ್ಗೆ ತೀರ್ಮಾನ ಕೈಗೊಂಡಿದ್ದಾರೆ. ಅವಿಶ್ವಾಸ ನಿರ್ಣಯ ನೋಟೀಸ್ ಸಿಂಧುತ್ವ ಇಲ್ಲವೆಂದು ತಿರಸ್ಕರಿಸಿದ್ದಾರೆ.

ಜಸ್ಟೀಸ್ ಸೂರ್ಯಕಾಂತ್- ಸ್ಪೀಕರ್ ತಮ್ಮ ವಿರುದ್ಧದ ಕೇಸ್ ಅನ್ನು ತಾವೇ ನಿರ್ಣಯಿಸಬಹುದೇ? ಅಭಿಷೇಕ್ ಮನುಸಿಂಘ್ವಿ- ಹೌದು. ಏಕೆಂದರೇ, ಇದು ಸಿಂಧುತ್ವಕ್ಕೆ ಸಂಬಂಧಪಟ್ಟಿದ್ದು. ಡೆಪ್ಯುಟಿ ಸ್ಪೀಕರ್ ವೆರಿಫೈ ಮಾಡದೇ ಇರುವ ಪತ್ರವನ್ನು ಗಮನಿಸಿದ್ದಾರೆ . ಅದನ್ನು ತಿರಸ್ಕರಿಸಿದ್ದಾರೆ.

ರಾಜೀವ್ ಧವನ್ ವಾದ ಮಂಡನೆ-ಡೆಪ್ಯುಟಿ ಸ್ಪೀಕರ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಲಾಗಿದೆ. ಇ ಮೇಲ್ ದೃಢೀಕರಿಸಿದ ಮೇಲ್ ಅಲ್ಲ.

ಸುಪ್ರೀಂಕೋರ್ಟ್ ಆದೇಶ: ಈ ಅರ್ಜಿಗಳ ಬಗ್ಗೆ ತೀರ್ಮಾನಿಸುವವರೆಗೂ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು. ಡೆಪ್ಯುಟಿ ಸ್ಪೀಕರ್ ಅನರ್ಹತೆ ನೋಟೀಸ್ ನೀಡಿರುವುದಕ್ಕೆ ಉತ್ತರಿಸಲು 16 ಶಾಸಕರಿಗೂ ಜುಲೈ 12ರವರೆಗೆ ಕಾಲಾವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರ, ಮಹಾರಾಷ್ಟ್ರ ಸರ್ಕಾರ ಸೇರಿದಂತೆ ಸಂಬಂಧಪಟ್ಟವರಿಗೆ ನೋಟೀಸ್ ನೀಡಲಾಗಿದೆ.

ಈ ಅರ್ಜಿಗಳಿಗೆ 5 ದಿನಗಳಲ್ಲಿ ಉತ್ತರ ಸಲ್ಲಿಸಬೇಕು. ಆದಾದ ಬಳಿಕ 3 ದಿನಗಳಲ್ಲಿ ಪ್ರತಿವಾದಿಗಳ ಉತ್ತರಕ್ಕೆ ಪ್ರತ್ಯುತ್ತರ ಸಲ್ಲಿಸಲು ಅರ್ಜಿದಾರರಿಗೆ ಅವಕಾಶ ನೀಡುತ್ತಿದ್ದೇವೆ. ಶಾಸಕರು ಹಾಗೂ ಶಾಸಕರ ಕುಟುಂಬ ಸುರಕ್ಷಿತವಾಗಿರುವಂತೆ ಮಹಾರಾಷ್ಟ್ರ ಸರ್ಕಾರ ನೋಡಿಕೊಳ್ಳಬೇಕು. ತಕ್ಷಣವೇ ಶಾಸಕರ, ಕುಟುಂಬದ ಭದ್ರತೆ, ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಕಾನೂನಿನ ವಿಷಯಗಳು ಬಗೆಹರಿಯುವವರೆಗೂ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು.

ಹೀಗೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಹೀಗಾಗಿ ಜುಲೈ 12ರವರೆಗೂ ಡೆಪ್ಯುಟಿ ಸ್ಪೀಕರ್ ಶಿಂಧೆ ಬಣದ 16 ಶಾಸಕರನ್ನು ಅನರ್ಹಗೊಳಿಸುವ ಪ್ರಕ್ರಿಯೆಗೂ ಬ್ರೇಕ್ ಬಿದ್ದಿದೆ. ಈಗ ಶಿಂಧೆ ಬಣ ಸುಪ್ರೀಂಕೋರ್ಟ್ ಸಲ್ಲಿಸಿದ್ದ ಅರ್ಜಿಗಳಿಗೆ ಉತ್ತರ ಸಲ್ಲಿಸಲು ಉದ್ದವ್ ಠಾಕ್ರೆ ಸರ್ಕಾರ ಹಾಗೂ ಡೆಪ್ಯುಟಿ ಸ್ಪೀಕರ್ ನರಹರಿ ಜೀರವಾಲ್ ಅವರಿಗೆ 5 ದಿನ ಕಾಲಾವಕಾಶ ಸಿಕ್ಕಿದೆ. ಜುಲೈ 11ಕ್ಕೆ ಸುಪ್ರೀಂಕೋರ್ಟ್ ವಿಚಾರಣೆಯನ್ನು ಮುಂದೂಡಿದೆ.

ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ