ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಸಿಎಂ ಉದ್ಧವ್‌ ಠಾಕ್ರೆಗೆ ಬಹುಮತ ಸಾಬೀತುಪಡಿಸಲು ಮುಹೂರ್ತ ಫಿಕ್ಸ್​

Maharashtra politics: ಹಿಂದಿನ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್‌ ದೆಹಲಿಯಿಂದ ಇಂದು ರಾತ್ರಿ ವಾಪಸಾಗಿ, ಸೀದಾ ರಾಜ್ಯಪಾಲರನ್ನು ಭೇಟಿ ಮಾಡಿದರು. ಮಹಾರಾಷ್ಟ್ರ ಬಿಜೆಪಿ ನಾಯಕರು ಬಹುಮತ ಸಾಬೀತಿಗೆ ಮನವಿ ಸಲ್ಲಿಸಿದ ಬೆನ್ನಲ್ಲೇ ರಾಜ್ಯಪಾಲರಿಂದ ಈ ಸೂಚನೆ ಹೊರಬಿದ್ದಿದೆ

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಸಿಎಂ ಉದ್ಧವ್‌ ಠಾಕ್ರೆಗೆ ಬಹುಮತ ಸಾಬೀತುಪಡಿಸಲು ಮುಹೂರ್ತ ಫಿಕ್ಸ್​
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಸಿಎಂ ಉದ್ಧವ್‌ಗೆ ಬಹುಮತ ಸಾಬೀತುಪಡಿಸಲು ಮುಹೂರ್ತ ಫಿಕ್ಸ್​
TV9kannada Web Team

| Edited By: sadhu srinath

Jun 28, 2022 | 10:58 PM

ಮುಂಬೈ: ಮಹಾರಾಷ್ಟ್ರ ರಾಜ್ಯ ರಾಜಕೀಯ ಬಿಕ್ಕಟ್ಟು ನಿರ್ಣಾಯಕ ಹಂತದ ಸಾಗುತ್ತಿದೆ. ಸುಪ್ರೀಂಕೋರ್ಟ್ ಸೂಚನೆಯಂತೆ ವಿಧಾನಸಭೆಯಲ್ಲೇ ಬಹುಮತ ಸಾಬೀತುಪಡಿಸಬೇಕಾಗಿದ್ದು, ರಾಜ್ಯಪಾಲ ಕೋಶ್ಯಾರಿ ಅವರು (Governor Bhagat Singh Koshyari) ಜೂನ್ 30ರಂದು ಬಹುಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ (Udhav Thakre) ಸೂಚನೆ ನೀಡಿದ್ದಾರೆ. ಗುರುವಾರ ಬೆಳಗ್ಗೆ 11 ಗಂಟೆಗೆ ಬಹುಮತ ಸಾಬೀತುಪಡಿಸುವ ಪ್ರಕ್ರಿಯೆಗೆ (majority) ಚಾಲನೆ ದೊರೆಯಲಿದೆ. ಹಿಂದಿನ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್‌ (Devendra Fadnavis) ಅವರು ದೆಹಲಿಯಿಂದ ಇಂದು ರಾತ್ರಿ ವಾಪಸಾಗಿ, ಸೀದಾ ರಾಜ್ಯಪಾಲರನ್ನು ಭೇಟಿ ಮಾಡಿದರು. ಮಹಾರಾಷ್ಟ್ರ ಬಿಜೆಪಿ ನಾಯಕರು (Maharashtra BJP) ಬಹುಮತ ಸಾಬೀತಿಗೆ ಮನವಿ ಸಲ್ಲಿಸಿದ ಬೆನ್ನಲ್ಲೇ ರಾಜ್ಯಪಾಲರಿಂದ ಈ ಸೂಚನೆ ಹೊರಬಿದ್ದಿದೆ (Maharashtra politics). ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಏಕನಾಥ್‌ ಶಿಂಧೆ (Eknath Shinde) ಬಣ ಗುವಾಹಟಿಯಿಂದ ಮುಂಬೈಗೆ ನಾಡಿದ್ದು ಆಗಮನವಾಗುವ ಸಾಧ್ಯತೆಯಿದೆ.

ನಾಳೆ ಮಹಾರಾಷ್ಟ್ರ ಬಿಜೆಪಿ ಸಭೆ: ಪಕ್ಷೇತರ ಶಾಸಕರಿಗೂ ಸಭೆಗೆ ಆಹ್ವಾನ ಈ ಮಧ್ಯೆ, ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ಸಿಎಂಗೆ ಸೂಚಿಸಬೇಕೆಂದು ಮಹಾರಾಷ್ಟ್ರ ರಾಜ್ಯಪಾಲರಿಗೆ ಪಕ್ಷೇತರ ಶಾಸಕರಿಂದಲೂ ಮನವಿ ಸಲ್ಲಿಸಲಾಗಿದೆ. ಪಕ್ಷೇತರ ಶಾಸಕರು ಇ-ಮೇಲ್ ಮೂಲಕ ರಾಜ್ಯಪಾಲ ಕೋಶ್ಯಾರಿ ಅವರಿಗೆ ಮನವಿ ಮಾಡಿದ್ದಾರೆ. ಈ ಬೆಳವಣಿಗೆಗಳ ಬೆನ್ನಲ್ಲೇ ಬಿಜೆಪಿ ನಾಳೆ ಬುಧವಾರ ಕೆಲ ಪಕ್ಷೇತರ ಶಾಸಕರನ್ನೂ ಪಕ್ಷದ ಸಭೆಗೆ ಆಹ್ವಾನ ನೀಡಿದೆ.

ಇದನ್ನೂ ಓದಿ:

CBSE 10th Result: ಸಿಬಿಎಸ್​​ಇ 10ನೇ ತರಗತಿ ಮೌಲ್ಯಮಾಪನ ಪೂರ್ಣ: ಫಲಿತಾಂಶ ಪ್ರಕಟ ಯಾವಾಗ? ಇಲ್ಲಿದೆ ಮಾಹಿತಿ

ಇದನ್ನೂ ಓದಿ:

ಕಾಂಗ್ರೆಸ್ ಆಡಳಿತದಲ್ಲಿ ಇದೇ‌ನು ಹೊಸದಲ್ಲ: ರಾಜಸ್ಥಾನದಲ್ಲಿ ಹತ್ಯೆ ಖಂಡಿಸಿ ‘ಭಯೋತ್ಪಾದಕ ಕಾಂಗ್ರೆಸ್‘ ಎಂದು ವಾಗ್ದಾಳಿ ನಡೆಸಿದ ಕರ್ನಾಟಕ ಬಿಜೆಪಿ

 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada