CBSE 10th Result: ಸಿಬಿಎಸ್​​ಇ 10ನೇ ತರಗತಿ ಮೌಲ್ಯಮಾಪನ ಪೂರ್ಣ: ಫಲಿತಾಂಶ ಪ್ರಕಟ ಯಾವಾಗ? ಇಲ್ಲಿದೆ ಮಾಹಿತಿ

CBSE Class 10th Results: ಸಂಬಂಧಿತ ಅಪ್‌ಡೇಟ್‌ನಲ್ಲಿ, CBSE 10th ಟರ್ಮ್ 1 ಮತ್ತು ಟರ್ಮ್ 2 ಫಲಿತಾಂಶಕ್ಕಾಗಿ ಒಂದೇ ಅಂಕ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಸಂಯೋಜಿತ ಅಂದರೆ ಎರಡೂ ಒಟ್ಟು ಮಾಡಿದ ಮಾರ್ಕ್ಸ್​​ ಶೀಟ್ ಆಗಿರುತ್ತದೆ.

CBSE 10th Result: ಸಿಬಿಎಸ್​​ಇ 10ನೇ ತರಗತಿ ಮೌಲ್ಯಮಾಪನ ಪೂರ್ಣ: ಫಲಿತಾಂಶ ಪ್ರಕಟ ಯಾವಾಗ? ಇಲ್ಲಿದೆ ಮಾಹಿತಿ
CBSE 2022: ಮೌಲ್ಯಮಾಪನ ಪೂರ್ಣ, ಸಿಬಿಎಸ್​​ಇ 10ನೇ ತರಗತಿ ಫಲಿತಾಂಶ ದಿನಾಂಕ ಪ್ರಕಟ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 28, 2022 | 7:59 PM

ಸಿಬಿಎಸ್​​ಇ (CBSE) 10ನೇ ತರಗತಿಯ ಫಲಿತಾಂಶವನ್ನು cbseresults.nic.in ಮತ್ತು cbse.gov.in ನಲ್ಲಿ ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ. ಮಂಡಳಿಯು ಟರ್ಮ್ 1 ಮತ್ತು ಟರ್ಮ್ 2 ಪರೀಕ್ಷೆಗಳ ಒಟ್ಟು ಅಂಕಗಳನ್ನು ಸಂಯೋಜಿಸಿ, ಒಂದೇ ಮಾರ್ಕ್ಸ್​​ ಶೀಟ್ ಅನ್ನು ನೀಡುತ್ತಿದೆ ಎಂದು CBSE ಅಧಿಕಾರಿಗಳು ತಿಳಿಸಿದ್ದಾರೆ.

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್, CBSE ನಡೆಸಿದ 2022ನೇ ಶೈಕ್ಷಣಿಕ ವರ್ಷದ 10ನೇ ತರಗತಿ ಫಲಿತಾಂಶ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದೆ. ತಾಜಾ ಅಪ್‌ಡೇಟ್‌ ಪ್ರಕಾರ, CBSE 10 ನೇ ತರಗತಿಯ ಫಲಿತಾಂಶದ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡಿದೆ ಮತ್ತು ಅಂತಿಮ ಸಂಕಲನಕ್ಕಾಗಿ ಅಂಕಗಳನ್ನು ಕಳುಹಿಸಲಾಗಿದೆ. ಫಲಿತಾಂಶಗಳನ್ನು ಘೋಷಿಸಿದ ನಂತರ ಅಧಿಕೃತ ವೆಬ್‌ಸೈಟ್ cbseresults.nic.in ಮತ್ತು cbse.gov.in ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ.

ಗಮನಾರ್ಹವೆಂದರೆ ಫಲಿತಾಂಶ ಪ್ರಕಟಣೆ ದಿನಾಂಕದ ಬಗ್ಗೆ CBSE ಅಧಿಕಾರಿಗಳು ವಾಡಿಕೆಯಂತೆ ಯಾವುದೇ ದಿನಾಂಕ ನೀಡಲು ನಿರಾಕರಿಸಿದರು. ಆದಾಗ್ಯೂ, 10ನೇ ಫಲಿತಾಂಶವು ದಿನಾಂಕ ಜೂನ್ ಅಂತ್ಯ ಅಥವಾ ಜುಲೈ ಮೊದಲ ವಾರದ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.

ಇದೇ ವೇಳೆ CBSE 12 ನೇ ತರಗತಿ ಫಲಿತಾಂಶಗಳನ್ನು ಸಹ ತ್ವರಿತವಾಗಿ ನೀಡಬೇಕಿರುವುದರಿಂದ CBSE 10 ನೇ ಫಲಿತಾಂಶ ವಿಳಂಬವಾಗಬಹುದು ಎಂದು ಮಂಡಳಿಯ ಒಳ ಮೂಲಗಳು ತಿಳಿಸಿವೆ. “CBSE 12th ಗಾಗಿ ಮೌಲ್ಯಮಾಪನ ಪ್ರಕ್ರಿಯೆಯು ಬಹುತೇಕ ಪೂರ್ಣಗೊಂಡಿದೆ, CBSE 12 ನೇ ತರಗತಿ ಫಲಿತಾಂಶಗಳನ್ನು ಮೊದಲು ಪ್ರಕ್ರಿಯೆಗೊಳಿಸುವ ಸಲುವಾಗಿ, 10 ನೇ ತರಗತಿ ಫಲಿತಾಂಶವನ್ನು ತಡೆಹಿಡಿಯಬಹುದು ಅಥವಾ ಎರಡೂ ಫಲಿತಾಂಶಗಳನ್ನು ಒಂದೇ ಸಮಯದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ” ಎಂದು ಮೂಲಗಳು ತಿಳಿಸಿವೆ.

CBSE 10 ನೇ ಫಲಿತಾಂಶ 2022 ಟರ್ಮ್ 1 ಮತ್ತು ಟರ್ಮ್ 2 ಗಾಗಿ ಸಂಯೋಜಿತ ಮಾರ್ಕ್ ಶೀಟ್

ಮತ್ತೊಂದು ಸಂಬಂಧಿತ ಅಪ್‌ಡೇಟ್‌ನಲ್ಲಿ, CBSE ಟರ್ಮ್ 1 ಮತ್ತು ಟರ್ಮ್ 2 ಫಲಿತಾಂಶಕ್ಕಾಗಿ ಒಂದೇ ಅಂಕ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಇದು ಸಂಯೋಜಿತ ಅಂದರೆ ಎರಡೂ ಒಟ್ಟು ಮಾಡಿದ ಮಾರ್ಕ್ಸ್​​ ಶೀಟ್ ಆಗಿರುತ್ತದೆ. CBSE ಟೆನ್ತ್​​ಗೆ ಎರಡೂ ಟರ್ಮ್​​ನ ಸಂಯೋಜಿತ ಮತ್ತು ಅಂತಿಮ ಫಲಿತಾಂಶವನ್ನು ನೀಡುತ್ತೇವೆ. ಡಿಸ್ಟಿಂಕ್ಷನ್​​ ಗಳನ್ನು ವಿಂಗಡಿಸಲಾಗಿಲ್ಲ ಎಂದೂ ಮೂಲಗಳಿಂದ ತಿಳಿದುಬಂದಿದೆ.

Published On - 7:45 pm, Tue, 28 June 22

ಊಟ ಮಾಡುವಾಗ ಮಾತನಾಡಬಾರದು ಯಾಕೆ? ಇಲ್ಲಿದೆ ಆಧ್ಯಾತ್ಮಿಕ ಹಿನ್ನೆಲೆ
ಊಟ ಮಾಡುವಾಗ ಮಾತನಾಡಬಾರದು ಯಾಕೆ? ಇಲ್ಲಿದೆ ಆಧ್ಯಾತ್ಮಿಕ ಹಿನ್ನೆಲೆ
ದಿನ ಭವಿಷ್ಯ: ಗುರು ಅನುಗ್ರಹದ ಈ ದಿನ ಯಾವ ರಾಶಿವರಿಗೆಲ್ಲ ಶುಭ ಫಲ ನೋಡಿ
ದಿನ ಭವಿಷ್ಯ: ಗುರು ಅನುಗ್ರಹದ ಈ ದಿನ ಯಾವ ರಾಶಿವರಿಗೆಲ್ಲ ಶುಭ ಫಲ ನೋಡಿ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ