ಬಂಡಾಯ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವನ್ನು ಉದ್ಧವ್ ಠಾಕ್ರೆಗೆ ನೀಡಿ ನಿರ್ಣಯ ಅಂಗೀಕರಿಸಿದ ಶಿವಸೇನಾ

ಪಕ್ಷಕ್ಕೆ ದ್ರೋಹ ಬಗೆದವರ ವಿರುದ್ಧ ಕ್ರಮ ಕೈಗೊಳ್ಳುವ ಎಲ್ಲಾ ಅಧಿಕಾರವನ್ನು ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರಿಗೆ ನೀಡಿ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಸಂಜಯ್ ರಾವುತ್ ಹೇಳಿದ್ದಾರೆ.

ಬಂಡಾಯ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವನ್ನು ಉದ್ಧವ್ ಠಾಕ್ರೆಗೆ ನೀಡಿ ನಿರ್ಣಯ ಅಂಗೀಕರಿಸಿದ ಶಿವಸೇನಾ
ಉದ್ಧವ್ ಠಾಕ್ರೆ
TV9kannada Web Team

| Edited By: Rashmi Kallakatta

Jun 25, 2022 | 7:46 PM

ಮುಂಬೈ: ಶನಿವಾರ ನಡೆದ ತನ್ನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಏಕನಾಥ್ ಶಿಂಧೆ (Eknat Shinde)  ಅವರೊಂದಿಗೆ ಬಂಡಾಯ ಪಾಳಯಕ್ಕೆ ಸೇರಿರುವ ಎಲ್ಲಾ ಭಿನ್ನಮತೀಯ ಸಚಿವರನ್ನು ಪದಚ್ಯುತಗೊಳಿಸಲು ಶಿವಸೇನಾ (Shiv Sena) ನಿರ್ಧರಿಸಿದೆ. ಮತ್ತೊಂದು ನಿರ್ಧಾರದಲ್ಲಿ, ಯಾವುದೇ ರಾಜಕೀಯ ಸಂಘಟನೆಯು ಶಿವಸೇನಾ ಹೆಸರನ್ನು ಮತ್ತು ಅದರ ಸಂಸ್ಥಾಪಕ ದಿವಂಗತ ಬಾಳಠಾಕ್ರೆ (Bal Thackeray) ಹೆಸರನ್ನು ಬಳಸುವಂತಿಲ್ಲ ಎಂಬ ನಿರ್ಣಯವನ್ನು ಅಂಗೀಕರಿಸಿದೆ. ಶಿಂಧೆಯವರ ಬಂಡಾಯದಿಂದಾಗಿ ಎಂವಿಎ ನೇತೃತ್ವದ ಸರ್ಕಾರ ರಾಜಕೀಯ ಬಿಕ್ಕಟ್ಟಿಗೆ ಸಿಲುಕಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮತ್ತು ಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ (Uddhav Thackeray) ಅವರು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಕರೆದಿದ್ದರು. ಬಹುಪಾಲು ಸೇನಾ ಶಾಸಕರು, ಅವರಲ್ಲಿ ಕೆಲವರು ಕ್ಯಾಬಿನೆಟ್ ಮಂತ್ರಿಗಳು, ಗುವಾಹಟಿಯಲ್ಲಿ ಬಂಡಾಯ ಗುಂಪನ್ನು ಸೇರಿದ್ದಾರೆ. ಶಿಂಧೆ ಅವರಲ್ಲದೆ, ಕ್ಯಾಬಿನೆಟ್ ಮಟ್ಟದ ‘ಆಯೋಗ್ ಅಧ್ಯಕ್ಷ’ ರಾಜೇಶ್ ಕ್ಷೀರಸಾಗರ್, ದಾದಾ ಭೂಸೆ, ಗುಲಾಬ್ ರಾವ್ ಪಾಟೀಲ್, ಸಂದೀಪ್ ಭೂಮ್ರೆ, ಶಂಭುರಾಜೇ ದೇಸಾಯಿ, ಅಬ್ದುಲ್ ಸತ್ತಾರ್ ಮತ್ತು ಬಚ್ಚು ಕಾಡು ಅವರು ರಾಷ್ಟ್ರೀಯ ಕಾರ್ಯಕಾರಿಣಿಯ ನಿರ್ಧಾರದಂತೆ ಕ್ರಮ ಎದುರಿಸಬೇಕಾಗುತ್ತದೆ. ಶಿಂಧೆ ಮತ್ತು ಪಕ್ಷದ ಮತ್ತೋರ್ವ ಅತೃಪ್ತ ನಾಯಕ ಮತ್ತು ಮಾಜಿ ಸಚಿವ ರಾಮದಾಸ್ ಕದಂ ರಾಷ್ಟ್ರೀಯ ಕಾರ್ಯಕಾರಿಣಿಯ ಭಾಗವಾಗಿದ್ದರು. ಕದಂ ಅವರ ಪುತ್ರ, ಶಾಸಕ ಯೋಗೇಶ್ ಕದಂ ಗುವಾಹಟಿಯಲ್ಲಿ ಬಂಡಾಯ ಪಾಳಯ ಸೇರಿದ್ದಾರೆ. ಬಂಡಾಯ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲು ಉದ್ಧವ್ ಠಾಕ್ರೆ ಅವರಿಗೆ ಅಧಿಕಾರ ನೀಡುವ ನಿರ್ಣಯವನ್ನು ರಾಷ್ಟ್ರೀಯ ಕಾರ್ಯಕಾರಿಣಿ ಅಂಗೀಕರಿಸಿದೆ.

“ಶಿವಸೇನಾ ಬಾಳಾಠಾಕ್ರೆಯವರದ್ದು. ಹಿಂದುತ್ವ ಮತ್ತು ಮರಾಠಿ ಹೆಮ್ಮೆಯ ಅವರ ಉಗ್ರ ಸಿದ್ಧಾಂತವನ್ನು ಮುಂದಕ್ಕೆ ಕೊಂಡೊಯ್ಯಲು ಬದ್ಧವಾಗಿದೆ ಎಂದು ಕಾರ್ಯಕಾರಿಣಿ ನಿರ್ಧರಿಸಿತು. ಶಿವಸೇನಾ ಎಂದಿಗೂ ಈ ಹಾದಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಸೇನಾ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.

ಪಕ್ಷಕ್ಕೆ ದ್ರೋಹ ಬಗೆದವರ ವಿರುದ್ಧ ಕ್ರಮ ಕೈಗೊಳ್ಳುವ ಎಲ್ಲಾ ಅಧಿಕಾರವನ್ನು ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರಿಗೆ ನೀಡಿ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ

ಜೂನ್ 22 ರಂದು ಕೊರೊನಾವೈರಸ್‌ಗೆ ಧನಾತ್ಮಕ ಪರೀಕ್ಷೆ ನಡೆಸಿದ ಠಾಕ್ರೆ, ಅವರ ನಿವಾಸ ‘ಮಾತೋಶ್ರೀ’ ಯಿಂದ ಸಭೆಯ ಅಧ್ಯಕ್ಷತೆ ವಹಿಸಬೇಕಿತ್ತು. ಆದರೆ, ಅವರು ಮಧ್ಯ ಮುಂಬೈನ ದಾದರ್‌ನಲ್ಲಿರುವ ಪಕ್ಷದ ಪ್ರಧಾನ ಕಚೇರಿ ಶಿವಸೇನಾ ಭವನಕ್ಕೆ ಆಗಮಿಸಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada