Maharashtra Crisis: ಮಹಾರಾಷ್ಟ್ರ ಬಿಕ್ಕಟ್ಟು; ಅತೃಪ್ತ ಶಾಸಕರ ಬಣಕ್ಕೆ ಶಿವಸೇನಾ- ಬಾಳಾಸಾಹೇಬ್ ಎಂದು ಹೆಸರಿಟ್ಟ ಏಕನಾಥ್ ಶಿಂಧೆ

ಶನಿವಾರ ಗುವಾಹಟಿಯಲ್ಲಿ ನಡೆದ ಸಭೆಯಲ್ಲಿ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಿವಸೇನೆ ನಾಯಕರ ಬಣವು ‘ಶಿವಸೇನಾ ಬಾಳಾಸಾಹೇಬ್ ಗ್ರೂಪ್’ ಎಂದು ಹೆಸರಿಟ್ಟಿರುವುದಾಗಿ ಘೋಷಿಸಿದ್ದಾರೆ.

Maharashtra Crisis: ಮಹಾರಾಷ್ಟ್ರ ಬಿಕ್ಕಟ್ಟು; ಅತೃಪ್ತ ಶಾಸಕರ ಬಣಕ್ಕೆ ಶಿವಸೇನಾ- ಬಾಳಾಸಾಹೇಬ್ ಎಂದು ಹೆಸರಿಟ್ಟ ಏಕನಾಥ್ ಶಿಂಧೆ
ಏಕನಾಥ್ ಶಿಂಧೆ
TV9kannada Web Team

| Edited By: Sushma Chakre

Jun 25, 2022 | 2:05 PM

ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು (Maharashtra Political Crisis) ಕಗ್ಗಂಟಾಗುತ್ತಲೇ ಇದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ (uddhav thackeray) ವಿರುದ್ಧ ದಂಗೆದ್ದು ರೆಸಾರ್ಟ್​ ಸೇರಿಕೊಂಡಿರುವ 16 ಅತೃಪ್ತ ಶಾಸಕರ ಬಣದ ಮನವೊಲಿಕೆ ಕಾರ್ಯ ಮುಂದುವರೆದಿದೆ. ಈ ನಡುವೆ ಅತೃಪ್ತ ಶಾಸಕರ ತಂಡದ ನೇತೃತ್ವ ವಹಿಸಿರುವ ಶಿವಸೇನೆ ನಾಯಕ ಏಕನಾಥ್ ಶಿಂಧೆ (Eknath Shinde) ತಮ್ಮ ಬಂಡಾಯ ಶಾಸಕರ ಗುಂಪಿಗೆ ‘ಶಿವಸೇನಾ ಬಾಳಾಸಾಹೇಬ್’ (Shiv Sena Balasaheb) ಎಂದು ಹೆಸರಿಟ್ಟಿದ್ದಾರೆ.

ಏಕನಾಥ್ ಶಿಂಧೆ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ನಮ್ಮ ತಂಡವನ್ನು ಶಿವ ಸೇನಾ- ಬಾಳಾಸಾಹೇಬ್ ಎಂಬ ಹೆಸರಿನಿಂದ ಕರೆಯಲಾಗುವುದು. ನಾವು ಯಾವುದೇ ಕಾರಣಕ್ಕೂ ಯಾವುದೇ ಪಕ್ಷದ ಜೊತೆ ಕೈಜೋಡಿಸುವುದಿಲ್ಲ. ನಾವು ಸ್ವತಂತ್ರವಾಗಿಯೇ ಹೋರಾಡುತ್ತೇವೆ ಎಂದು ಶಿವಸೇನೆ ಶಾಸಕ ದೀಪಕ್ ಕೇಸರ್​ಕರ್ ಹೇಳಿದ್ದಾರೆ.

ಈ ಗುಂಪಿಗೆ ಬಾಳ್ ಠಾಕ್ರೆ ಹೆಸರಿಡುವ ಮೂಲಕ ಶಿವಸೈನಿಕರು ತಮ್ಮ ಬಣದೊಂದಿಗೆ ಭಾವನಾತ್ಮಕವಾಗಿ ಸಂಪರ್ಕ ಹೊಂದುವಂತೆ ಮಾಡುವುದು ಏಕನಾಥ್ ಶಿಂಧೆಯ ಲೆಕ್ಕಾಚಾರ ಎನ್ನಲಾಗುತ್ತಿದೆ. ಏಕನಾಥ್ ಶಿಂಧೆ ತಂಡದ, ಪ್ರಸ್ತುತ ಗುವಾಹಟಿಯಲ್ಲಿರುವ ಬಂಡಾಯ ಶಿವಸೇನೆ ಶಾಸಕ ತಾನಾಜಿ ಸಾವಂತ್ ಅವರ ಕಚೇರಿಯನ್ನು ಶಿವಸೇನಾ ಕಾರ್ಯಕರ್ತರು ಇಂದು ಧ್ವಂಸಗೊಳಿಸಿದ್ದಾರೆ. ಸೇನಾ ಕಾರ್ಯಕರ್ತರ ಗುಂಪು ಸಾವಂತ್ ಅವರಿಗೆ ಸೇರಿದ ಭೈರವನಾಥ್ ಶುಗರ್ ವರ್ಕ್ಸ್ ಕಚೇರಿಗೆ ಬೆಳಿಗ್ಗೆ ನುಗ್ಗಿ ಕಟ್ರಾಜ್ ಪ್ರದೇಶದಲ್ಲಿದ್ದ ಕಚೇರಿಗೆ ಹಾನಿ ಮಾಡಲಾಗಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ರೆಬೆಲ್ ಶಿವಸೇನೆ ಶಾಸಕನ ಕಚೇರಿಯನ್ನೂ ಧ್ವಂಸ ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ.

ಇದನ್ನೂ ಓದಿ: Maharashtra Crisis: ಮಹಾರಾಷ್ಟ್ರ ಹೈಡ್ರಾಮಾ; 16 ರೆಬೆಲ್ ಶಾಸಕರಿಗೆ ಇಂದು ನೋಟಿಸ್ ನೀಡ್ತಾರಾ ಡೆಪ್ಯುಟಿ ಸ್ಪೀಕರ್?

ಶನಿವಾರ ಗುವಾಹಟಿಯಲ್ಲಿ ನಡೆದ ಸಭೆಯಲ್ಲಿ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಿವಸೇನೆ ನಾಯಕರ ಬಣವು ‘ಶಿವಸೇನಾ ಬಾಳಾಸಾಹೇಬ್ ಗ್ರೂಪ್’ ಎಂದು ಹೆಸರಿಸುವುದಾಗಿ ಘೋಷಿಸಿದ್ದಾರೆ. ಪ್ರಸ್ತುತ ಅಸ್ಸಾಂನ ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಬಂಡಾಯ ಶಾಸಕರ ಪೈಕಿ ಸೇರಿರುವ ಶಿವಸೇನೆ ಶಾಸಕ ತಾನಾಜಿ ಸಾವಂತ್ ಅವರ ಕಚೇರಿಗೆ ಪುಣೆಯಲ್ಲಿ ಶಿವಸೇನೆ ಕಾರ್ಯಕರ್ತರು ಶನಿವಾರ ದಾಳಿ ನಡೆಸಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತ ತಾನಾಜಿ ಸಾವಂತ್ ಅವರ ಕಚೇರಿಯನ್ನು ಧ್ವಂಸಗೊಳಿಸಿದರು. ನಮ್ಮ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ತೊಂದರೆ ನೀಡಿದ ಎಲ್ಲಾ ದೇಶದ್ರೋಹಿಗಳು ಮತ್ತು ಬಂಡಾಯ ಶಾಸಕರು ಈ ರೀತಿಯ ಕ್ರಮವನ್ನು ಎದುರಿಸಬೇಕಾಗುತ್ತದೆ. ಅವರ ಕಚೇರಿಯ ಮೇಲೂ ದಾಳಿ ನಡೆಸಲಾಗುವುದು. ಯಾರನ್ನೂ ಬಿಡಲಾಗುವುದಿಲ್ಲ ಎಂದು ಪುಣೆ ಶಿವಸೇನೆಯ ಮುಖ್ಯಸ್ಥ ಸಂಜಯ್ ಮೋರೆ ಹೇಳಿದ್ದಾರೆ.

ಶಿವಸೇನೆಯ ಬಹುಪಾಲು ಶಾಸಕರು ಏಕನಾಥ್ ಶಿಂಧೆಯೊಂದಿಗೆ ಕೈ ಜೋಡಿಸಿದ್ದು, ಗುವಾಹಟಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಈ ಮೂಲಕ ಶಿವಸೇನೆಯ ನಾಯಕ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ಬಿಕ್ಕಟ್ಟಿಗೆ ತಳ್ಳಿದ್ದಾರೆ. ಯಾವುದೇ ಕ್ಷಣದಲ್ಲಿ ಬೇಕಾದರೂ ಉದ್ಧವ್ ಠಾಕ್ರೆ ಸರ್ಕಾರ ಪತನವಾಗುವ ಸಾಧ್ಯತೆಯಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada