AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maharashtra Political Crisis: ಶಾಸಕ ತಾನಾಜಿ ಸಾವಂತ್ ಕಚೇರಿಯನ್ನು ಧ್ವಂಸಗೊಳಿಸಿದ ಶಿವಸೇನೆ ಕಾರ್ಯಕರ್ತರು

ಪುಣೆಯ ಕತ್ರಾಜ್‌ನ ಬಾಲಾಜಿ ಪ್ರದೇಶದಲ್ಲಿ ಶಿವಸೇನಾ ಕಾರ್ಯಕರ್ತರು ಪಕ್ಷದ ಶಾಸಕ ತಾನಾಜಿ ಸಾವಂತ್ ಅವರ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ.

Maharashtra Political Crisis: ಶಾಸಕ ತಾನಾಜಿ ಸಾವಂತ್ ಕಚೇರಿಯನ್ನು ಧ್ವಂಸಗೊಳಿಸಿದ ಶಿವಸೇನೆ ಕಾರ್ಯಕರ್ತರು
Shiv Sena activists
TV9 Web
| Edited By: |

Updated on:Jun 25, 2022 | 12:27 PM

Share

ಪುಣೆಯ ಕತ್ರಾಜ್‌ನ ಬಾಲಾಜಿ ಪ್ರದೇಶದಲ್ಲಿ ಶಿವಸೇನಾ ಕಾರ್ಯಕರ್ತರು ಪಕ್ಷದ ಶಾಸಕ ತಾನಾಜಿ ಸಾವಂತ್ ಅವರ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ. ತಾನಾಜಿ ಸಾವಂತ್ (Tanaji Sawant) ರಾಜ್ಯದ ಬಂಡಾಯ ಶಾಸಕರಲ್ಲಿ ಒಬ್ಬರಾಗಿದ್ದು, ಪ್ರಸ್ತುತ ಅಸ್ಸಾಂನ (Assam) ಗುವಾಹಟಿಯಲ್ಲಿ ಬೀಡುಬಿಟ್ಟಿದ್ದಾರೆ.

ಮಹಾರಾಷ್ಟ್ರದ ರಾಜಕೀಯ ಪ್ರಕ್ಷುಬ್ಧತೆಯ ನಡುವೆ ಸಿಎಂ ಉದ್ಧವ್ ಠಾಕ್ರೆ, ಶಿವಸೇನೆಯ ಬಂಡಾಯದ ಹಿಂದೆ ಬಿಜೆಪಿ ಇದೆ ಎಂದು ಹೇಳಿದ್ದಾರೆ. ‘ಶಿವಸೇನೆಯನ್ನು ಮುಗಿಸುವುದು’ ಬಿಜೆಪಿಯ ಏಕೈಕ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. ಇಂದು ಉದ್ಧವ್ ಠಾಕ್ರೆ ಈ ವಿಷಯದ ಕುರಿತು ಜಿಲ್ಲಾ ಮುಖ್ಯಸ್ಥರೊಂದಿಗೆ ವರ್ಚುವಲ್ ಸಭೆ ನಡೆಸಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ಕರೆಯಲಾಗಿದೆ.

ಇದನ್ನೂ ಓದಿ
Image
Amit Shah: 19 ವರ್ಷ ಮೋದಿ ವಿಷಕಂಠನಂತೆ ಮೌನವಾಗಿ ನೋವು ನುಂಗಿದರು; ಗುಜರಾತ್ ಗಲಭೆ ಬಗ್ಗೆ ಅಮಿತ್ ಶಾ ಹೇಳಿದ್ದೇನು?
Image
Viral Video: ತಡವಾಗಿ ಬಂದ ಶಿಕ್ಷಕಿಗೆ ಚಪ್ಪಲಿಯಲ್ಲಿ ಥಳಿಸಿದ ಪ್ರಿನ್ಸಿಪಾಲ್; ಶಾಕಿಂಗ್ ವಿಡಿಯೋ ವೈರಲ್
Image
ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮುಗೆ ನಮ್ಮ ಬೆಂಬಲ; ಮಾಯಾವತಿ ಘೋಷಣೆ
Image
Maharashtra Crisis: ಮಹಾರಾಷ್ಟ್ರ ಹೈಡ್ರಾಮಾ; 16 ರೆಬೆಲ್ ಶಾಸಕರಿಗೆ ಇಂದು ನೋಟಿಸ್ ನೀಡ್ತಾರಾ ಡೆಪ್ಯುಟಿ ಸ್ಪೀಕರ್?

38 ಶಾಸಕರ ಕುಟುಂಬ ಸದಸ್ಯರ ಭದ್ರತೆಯನ್ನು ದುರುದ್ದೇಶಪೂರ್ವಕವಾಗಿ ಹಿಂತೆಗೆದುಕೊಳ್ಳುವ ಕುರಿತು ಸಿಎಂ ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಗೃಹ ಸಚಿವ, ಡಿಜಿಪಿ ಮಹಾರಾಷ್ಟ್ರಕ್ಕೆ ಬಂಡಾಯ ಶಿವಸೇನೆ ಶಾಸಕ ಏಕನಾಥ್ ಶಿಂಧೆ ಪತ್ರ ಬರೆದಿದ್ದಾರೆ.  ಅವರನ್ನು ಮತ್ತು ಅವರ ಕುಟುಂಬಗಳನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಬುಧವಾರ ನಡೆದ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದ ಕಾರಣ ಶಿಂಧೆ ಸೇರಿದಂತೆ 12 ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಶಿವಸೇನೆ ಕೋರಿದೆ. ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಶಿಂಧೆ, ನಾವು ಶಿವಸೇನೆ ಮುಖ್ಯಸ್ಥ ಬಾಳ್ ಠಾಕ್ರೆ ಅವರ ಅನುಯಾಯಿಗಳಾಗಿರುವುದರಿಂದ ಅನರ್ಹತೆಗೆ 12 ಶಾಸಕರ ಹೆಸರನ್ನು ನೀಡಿ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ. ನಮಗೆ ಕಾನೂನು ತಿಳಿದಿದೆ, ಆದ್ದರಿಂದ ನಾವು ಬೆದರಿಕೆಗಳಿಗೆ ಕಿವಿಗೊಡುವುದಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೊಂದೆಡೆ, ಬಂಡಾಯ ಶಾಸಕರು ಮುಂಬೈಗೆ ಹಿಂತಿರುಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ತಮ್ಮ ಸಮಸ್ಯೆಗಳನ್ನು ಚರ್ಚಿಸಿದರೆ ಆಡಳಿತಾರೂಢ ಮೈತ್ರಿಕೂಟದ ಎಂವಿಎ ಮೈತ್ರಿಯನ್ನು ತೊರೆಯಲು ತಮ್ಮ ಪಕ್ಷವು ಮುಕ್ತವಾಗಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.

Published On - 12:01 pm, Sat, 25 June 22