ಅಸ್ಸಾಂನಲ್ಲಿ ಬೀಡು ಬಿಟ್ಟ ಶಿವಸೇನಾದ ಶಾಸಕರು, ಪ್ರವಾಹ ಪೀಡಿತರ ಸಂಕಷ್ಟ ಕೇಳುವರಾರು?

ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶರ್ಮಾ, "ರಾಜ್ಯದ ಕೆಲವು ಭಾಗದಲ್ಲಿ ಪ್ರವಾಹ ಇರುವುದರಿಂದ ನಾನು ಗುವಾಹಟಿಯ ಹೋಟೆಲ್‌ಗಳನ್ನು ಮುಚ್ಚಬೇಕೇ? ಪ್ರವಾಸೋದ್ಯಮವನ್ನು ಉತ್ತೇಜಿಸಲು ನಾವು ಇಷ್ಟು ಹಣವನ್ನು ಖರ್ಚು ಮಾಡಿದ್ದೇವೆ, ನಾನು ಅಸ್ಸಾಂಗೆ ಬಂದವರನ್ನು ತಡೆಯಬೇಕೇ?" ಎಂದಿದ್ದಾರೆ.

ಅಸ್ಸಾಂನಲ್ಲಿ ಬೀಡು ಬಿಟ್ಟ ಶಿವಸೇನಾದ ಶಾಸಕರು, ಪ್ರವಾಹ ಪೀಡಿತರ ಸಂಕಷ್ಟ ಕೇಳುವರಾರು?
ಅಸ್ಸಾಂ ಪ್ರವಾಹ
TV9kannada Web Team

| Edited By: Rashmi Kallakatta

Jun 25, 2022 | 1:49 PM

ಗುವಾಹಟಿ/ಸಿಲ್ಚಾರ್: ಮಹಾರಾಷ್ಟ್ರ (Maharashtra)  ಶಾಸಕರನ್ನು ಒಳಗೊಂಡ ಅಧಿಕಾರದ ಹೋರಾಟ ಒಂದೆಡೆಯಾದರೆ, ಇನ್ನೊಂದೆಡೆ ಪ್ರವಾಹದಿಂದಾಗಿ (Assam Floods) ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಇನ್ನೊಂದು- ಈ ಎರಡು ಸಂಗತಿಗಳಿಂದ ಅಸ್ಸಾಂ ಈಗ ಚರ್ಚೆಯಲ್ಲಿದೆ. ಏಪ್ರಿಲ್ ತಿಂಗಳಿಂನಿಂದ 35 ಜಿಲ್ಲೆಗಳ ಪೈಕಿ 28 ಜಿಲ್ಲೆಗಳ 33 ಲಕ್ಷ ಮಂದಿ ಪ್ರವಾಹ ಪೀಡಿತರಾಗಿದ್ದಾರೆ. ಏಪ್ರಿಲ್ ತಿಂಗಳಿನಿಂದ ಪ್ರವಾಹ ಮತ್ತ ಭೂಕುಸಿತದಿಂದಾಗಿ 117 ಮಂದಿ ಸಾವಿಗೀಡಾಗಿದ್ದಾರೆ. ಅಸ್ಸಾಂನ (Assam) ಎರಡನೇ ದೊಡ್ಡ ನಗರವಾದ ಸಿಲ್ಚಾರ್ ನಲ್ಲಿ ಶೇ 80 ಮಂದಿ ಮುಳುಗಿದ್ದು, ನೀರು ಮತ್ತು ಆಹಾರಕ್ಕಾಗಿ ಕಷ್ಟಪಡುತ್ತಿದ್ದಾರೆ. ಇತ್ತ ಗುವಾಹಟಿಯ ರಾಡಿಸನ್ ಬ್ಲೂ ಹೋಟೆಲ್ ಮಹಾರಾಷ್ಟ್ರದ ಆಡಳಿತಾರೂಢ ಮೈತ್ರಿಕೂಟದ ಭಾಗವಾಗಿರುವ ಶಿವಸೇನಾದೊಳಗಿನ ಅಧಿಕಾರದ ಹೋರಾಟದ ಕೇಂದ್ರಬಿಂದುವಾಗಿದೆ. ಶಿವಸೇನಾ ಬಂಡಾಯ ಶಾಸಕಮತ್ತು ಮಹಾರಾಷ್ಟ್ರದ ಸಚಿವ ಏಕನಾಥ್ ಶಿಂಧೆ ಅವರು ಪಕ್ಷದ ಬಹುಪಾಲು ಶಾಸಕರ ಬೆಂಬಲವಿದೆ ಎಂದು ಹೇಳುತ್ತಿದ್ದು ಈ ಬಿಕ್ಕಟ್ಟು ಮಹಾರಾಷ್ಟ್ರ ಸರ್ಕಾರವನ್ನು ಉರುಳಿಸುವ ಸಾಧ್ಯತೆ ಇದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇದು ಶಿವಸೇನೆಯ ಆಂತರಿಕ ಹೋರಾಟ ಎಂದು ಸಮರ್ಥಿಸಿಕೊಂಡಿದ್ದರೆ, ಗುವಾಹಟಿ ಹೋಟೆಲ್‌ನಲ್ಲಿ ರಾಜ್ಯ ಸಚಿವರು ಮತ್ತು ಬಿಜೆಪಿ ನಾಯಕರ ದೃಶ್ಯಗಳು ಬೇರೆ ರೀತಿಯಲ್ಲಿ ಸೂಚಿಸುತ್ತವೆ. ಎನ್ ಡಿಟಿವಿ ಸಿಲ್ಚಾರ್‌ನ ಪ್ರವಾಹ ಬೀದಿಗಳಲ್ಲಿ ಜನರನ್ನು ಮಾತನಾಡಿಸಿದ್ದು ಅನೇಕ ನಿವಾಸಿಗಳು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಆದ್ಯತೆಗಳನ್ನು ಪ್ರಶ್ನಿಸಿದರು. “ಅಸ್ಸಾಂ ಮುಳುಗುತ್ತಿದೆ ಮತ್ತು ಮಹಾರಾಷ್ಟ್ರದಿಂದ ಮಂತ್ರಿಗಳನ್ನು ಇಲ್ಲಿಗೆ ಕರೆತಂದು ಕುದುರೆ ವ್ಯಾಪಾರಕ್ಕಾಗಿ ಪಂಚತಾರಾ ಹೋಟೆಲ್‌ನಲ್ಲಿ ಇರಿಸಲಾಗುತ್ತಿದೆ? ಅಸ್ಸಾಂ ಸರ್ಕಾರಕ್ಕೆ ಇದು ಕಾಣಿಸುತ್ತಿದೆಯೇ?” ಎಂದು ನಿವಾಸಿಯೊಬ್ಬರು ಕೇಳಿದರು.

ಪ್ರವಾಹದಿಂದಾಗಿ ಜನರು ತಮ್ಮ ಮನೆಗಳಲ್ಲಿ ಸಿಲುಕಿಕೊಂಡಿರುವ ಪ್ರದೇಶಗಳಿಗೆ ಮುಖ್ಯಮಂತ್ರಿ ಶರ್ಮಾ ಭೇಟಿ ನೀಡಬೇಕು ಎಂದು ಮತ್ತೊಬ್ಬರು ಒತ್ತಾಯಿಸಿದ್ದಾರೆ.   “ಮುಖ್ಯಮಂತ್ರಿ ಇಲ್ಲಿಗೆ ಬಂದು ಪರಿಸ್ಥಿತಿಯನ್ನು ಅವಲೋಕಿಸಬೇಕೆಂದು ನಾವು ಬಯಸುತ್ತೇವೆ. ಪ್ರವಾಹದಿಂದಾಗಿ ಇಲ್ಲಿ ಸಾಕಷ್ಟು ಜನರು ಸಿಲುಕಿದ್ದಾರೆ. ಅವರು ಇದೀಗ ಅವರಿಗೆ ಸಹಾಯ ಮಾಡಬೇಕಾಗಿದೆ. ಜನರು ಮನೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ” ಎಂದು ಅಲ್ಲಿನ ನಿವಾಸಿಯೊಬ್ಬರು ಹೇಳಿದ್ದಾರೆ.

ಗುವಾಹಟಿಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದವು. ಮಹಾರಾಷ್ಟ್ರದ ಶಾಸಕರನ್ನು ವಾಪಸ್ ಕಳುಹಿಸಬೇಕು ಮತ್ತು ಪ್ರವಾಹ ನಿರ್ವಹಣೆಗೆ ಸರ್ಕಾರ ಗಮನ ಹರಿಸಬೇಕು ಎಂದು ವಿಪಕ್ಷ ಒತ್ತಾಯಿಸಿದೆ.

ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶರ್ಮಾ, “ರಾಜ್ಯದ ಕೆಲವು ಭಾಗದಲ್ಲಿ ಪ್ರವಾಹ ಇರುವುದರಿಂದ ನಾನು ಗುವಾಹಟಿಯ ಹೋಟೆಲ್‌ಗಳನ್ನು ಮುಚ್ಚಬೇಕೇ? ಪ್ರವಾಸೋದ್ಯಮವನ್ನು ಉತ್ತೇಜಿಸಲು ನಾವು ಇಷ್ಟು ಹಣವನ್ನು ಖರ್ಚು ಮಾಡಿದ್ದೇವೆ, ನಾನು ಅಸ್ಸಾಂಗೆ ಬಂದವರನ್ನು ತಡೆಯಬೇಕೇ?” ಎಂದಿದ್ದಾರೆ.

ಇದನ್ನೂ ಓದಿ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡಗಳು ಅಧಿಕ ಸಮಯ ಕೆಲಸ ಮಾಡುತ್ತಿರುವುದರಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೀರು, ಆಹಾರ ಮತ್ತು ಔಷಧಿಗಳ ಕೊರತೆಯಿದೆ. ಭಾರತೀಯ ವಾಯುಪಡೆಯು ಅಗತ್ಯ ಸಾಮಗ್ರಿಗಳನ್ನು ಸಹ ವಿಮಾನದಿಂದ ಇಳಿಸುತ್ತಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada