ಮಹಾರಾಷ್ಟ್ರ ಸರ್ಕಾರದ ಇಂದಿನ ರಾಜಕೀಯ ಬಿಕ್ಕಟ್ಟಿಗೆ ಶಿವಸೇನೆಯ ಒಳಜಗಳವೇ ಕಾರಣ -ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಾಖ್ಯಾನ

Pralhad Joshi: ಮಹಾರಾಷ್ಟ್ರ ಸರ್ಕಾರದ ಇಂದಿನ ರಾಜಕೀಯ ಬಿಕ್ಕಟ್ಟಿಗೆ ಶಿವಸೇನೆಯ ಒಳಜಗಳವೇ ಕಾರಣ. ಇದಕ್ಕೆ ಶಿವಸೇನೆಯ ಶಾಸಕರು ಬರೆದಿರುವ ಪತ್ರವೇ ಸಾಕ್ಷಿ ಎಂದು ಗದಗ ಜಿಲ್ಲೆ ನರಗುಂದದಲ್ಲಿ ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಮಹಾರಾಷ್ಟ್ರ ಸರ್ಕಾರದ ಇಂದಿನ ರಾಜಕೀಯ ಬಿಕ್ಕಟ್ಟಿಗೆ ಶಿವಸೇನೆಯ ಒಳಜಗಳವೇ ಕಾರಣ -ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಾಖ್ಯಾನ
ಮಹಾರಾಷ್ಟ್ರ ಸರ್ಕಾರದ ಇಂದಿನ ರಾಜಕೀಯ ಬಿಕ್ಕಟ್ಟಿಗೆ ಶಿವಸೇನೆಯ ಒಳಜಗಳವೇ ಕಾರಣ -ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಾಖ್ಯಾನ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jun 25, 2022 | 6:03 PM

ಗದಗ: ಮಹಾರಾಷ್ಟ್ರ ಸರ್ಕಾರದ ಇಂದಿನ ರಾಜಕೀಯ ಬಿಕ್ಕಟ್ಟಿಗೆ (Maharashtra Politics) ಶಿವಸೇನೆಯ (shiv sena) ಒಳಜಗಳವೇ ಕಾರಣ ಎಂದು ಗದಗ ಜಿಲ್ಲೆ ನರಗುಂದದಲ್ಲಿ ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ. ಇದಕ್ಕೆ ಶಿವಸೇನೆಯ ಶಾಸಕರು ಬರೆದಿರುವ ಪತ್ರವೇ ಸಾಕ್ಷಿ. ಇದು ಅಸ್ವಾಭಾವಿಕ ಮೈತ್ರಿ ಎಂದು ಶಿವಸೇನೆ ಶಾಸಕರೇ ಹೇಳಿದ್ದಾರೆ. ಕಾಂಗ್ರೆಸ್​ ಮತ್ತು ಎನ್​​ಸಿಪಿ ವಿರುದ್ಧ ಬಾಳಾ ಠಾಕ್ರೆ ಅವರೇ ಹೋರಾಟ ಮಾಡಿದ್ದರು. NCP ಕೈಯಲ್ಲಿ ಸಿಎಂ ರಿಮೋಟ್ ಕಂಟ್ರೋಲ್​ ಇದೆ ಅನ್ನೋ ಆರೋಪವಿತ್ತು. ಇವರ ತಪ್ಪಿನಿಂದ ಇಡೀ ಪಕ್ಷವೇ ಅಸಮಾಧಾನಗೊಂಡಿದೆ. ಇನ್ನೆರಡು ದಿನ ತಡೆದರೆ ಉಳಿದಿರುವವರೂ ಹೊರಹೋಗುವ ಸಾಧ್ಯತೆಯಿದೆ. ಉದ್ಧವ್​, ಆದಿತ್ಯ ಠಾಕ್ರೆ (Uddhav Thackeray) ಬಿಟ್ಟರೆ ಎಲ್ಲರೂ ಪಕ್ಷ ಬಿಡುವ ಸಾಧ್ಯತೆ ಇದೆ. ಹೊರಗಿನವರು ಷಡ್ಯಂತ್ರ ಮಾಡಿ ಪಕ್ಷ ತೆಗೆದುಕೊಂಡು ಹೋಗಲಾಗಲ್ಲ ಎಂದು ಸಚಿವ ಪ್ರಲ್ಹಾದ್ ಜೋಶಿ ಮಹಾರಾಷ್ಟ್ರದ ತಾಜಾ ರಾಜಕೀಯ ಬೆಳವಣಿಗೆಗಳನ್ನು ವಿಶ್ಲೇಷಿಸಿದ್ದಾರೆ. ಜೊತೆಗೆ ಹಿಂದೂ ವೋಟ್ ಗಿಂತನೂ ಸಮಾನ ಮನಸ್ಕರರು ಒಂದೆಡೆ ಇದ್ದೇವೆ. ಶಿವಸೇನೆ ಒಂದು ನಮ್ಮಿಂದ ಹೊರಗೆ ಹೋಗಿತ್ತು. 2014 ರ ಚುನಾವಣೆಯಲ್ಲೂ ನಾವು ಒಳ್ಳೆ ಸಾಧನೆ ಮಾಡಿದ್ದೇವೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕಾಂಗ್ರೆಸ್​​ ಪಕ್ಷದ್ದು 40 ಸೀಟ್ ಇದೆ. ಕಾಂಗ್ರೆಸ್ಸನ್ನು ಮುಗಿಸುವ ಅಗತ್ಯವಿಲ್ಲ, ಅದಾಗಿಯೇ ಮುಗಿದು ಹೋಗುತ್ತೆ. ಕಾಂಗ್ರೆಸ್​​​ ವಿಪಕ್ಷವಾಗಿ ತನ್ನ ಅಸ್ತಿತ್ವವನ್ನಾದರೂ ಉಳಿಸಿಕೊಳ್ಳಲಿ. ಮಹಾರಾಷ್ಟ್ರದಲ್ಲಿ ಶಾಸಕರನ್ನು ಖರೀದಿಸುವ ಪ್ರಶ್ನೆಯೇ ಬರುವುದಿಲ್ಲ. ಎನ್​ಸಿಪಿ, ಕಾಂಗ್ರೆಸ್​​​ನಿಂದಲೇ ಸಮಸ್ಯೆಯಾಗಿದೆ ಎಂದು ಪ್ರಲ್ಹಾದ್ ಜೋಶಿ ಸೂಚ್ಯವಾಗಿ ಹೇಳಿದರು. ಕಾಂಗ್ರೆಸ್ ಪಾರ್ಟಿ ಮಹಾರಾಷ್ಟ್ರ ದಲ್ಲಿ ಏನಿದೆ? ಕಾಂಗ್ರೆಸ್ ಪಾರ್ಟಿ ಏನೋ 40 ಸೀಟ್ ಇದೆ. ಅಲ್ಲಿ ಇಲ್ಲಿ ಮೇಯಿಕೊಂಡು ಇದ್ದರು. ಕಾಂಗ್ರೆಸ್ ಪಕ್ಷದವರನ್ನು ಟಾರ್ಗೆಟ್ ಮಡುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಅದಾಗಿಯೇ ಮುಗಿದು ಹೋಗುತ್ತಿದೆ. ಕಾಂಗ್ರೆಸ್ ಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇವೆ.. ಅವರು ವಿರೋಧ ಪಕ್ಷವಾಗಿ ಅಸ್ಥಿತ್ವ ಉಳಿಸಿಕೊಳ್ಳಲಿ ಎಂದು ಕೇಂದ್ರ ಸಚಿವ ಜೋಶಿ ಹೇಳಿದರು.

ಭಾರತ ಸ್ವಾತಂ‌ತ್ಯ್ರದ ಅಮೃತ ಮಹೋತ್ಸವದ ಅಂಗವಾಗಿ ದೇಶಕ್ಕಾಗಿ ಜೀವ ಹಾಗು ಜೀವನವನ್ನು ಸಮರ್ಪಿಸಿದ ಹೋರಟಗಾರರ ಸ್ಮರಣೆಗಾಗಿ ಹಮ್ಮಿಕೊಂಡಿದ್ದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮದಲ್ಲಿ ಸಚಿವ ಜೋಶಿ ಭಾಗವಹಿಸಿದ್ದರು.

ಇದನ್ನೂ ಓದಿ:

ನೀವು ಏನು ಬೇಕಾದರೂ ಮಾಡಿಕೊಳ್ಳಿ ಆದರೆ ಬಾಳಾಸಾಹೇಬ್ ಹೆಸರು ಬಳಸಬೇಡಿ: ಉದ್ಧವ್ ಠಾಕ್ರೆ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್