ಅಕ್ರಮ ಮಣ್ಣು ಗಣಿ ಹೊಂಡದಲ್ಲಿ ಬಿದ್ದು ಯುವಕರು ಸತ್ತಿದ್ದರೂ ಮಣ್ಣು ಗಣಿಗಾರಿಕೆ ಅಕ್ರಮಕ್ಕೆ ಬ್ರೇಕ್ ಹಾಕದ ಜಿಲ್ಲಾಡಳಿತ
ಮಣ್ಣು ಗಣಿಗಾರಿಕೆ ಹೊಂಡದಲ್ಲಿ ಬಿದ್ದು ಯುವಕ್ರು ಸಾವನ್ನಪ್ಪಿದ್ರು ಗದಗನಲ್ಲಿ ಗಣಿಗಾರಿಕೆ ನಿಲ್ಲುತ್ತಿಲ್ಲ. ಜಮೀನುಗಳಲ್ಲಿ ಮತ್ತೆ ಜೆಸಿಬಿ, ಇಟಾಚಿಗಳ ಘರ್ಜನೆ ಜೋರಾಗಿದೆ. ಕಾನೂನು ಉಲ್ಲಂಘನೆ ಮಾಡಿ ಎರ್ರಾಬಿರಿ ಮಣ್ಣು ಗಣಿಗಾರಿಕೆ ನಡೆದ್ರೂ ಅಧಿಕಾರಿಗಳು ಡೋಂಟ್ ಕೇರ್ ಎಂದಿದ್ದಾರೆ.
ಗದಗ: ಗದಗ ಜಿಲ್ಲೆಯಲ್ಲಿ ಅಕ್ರಮ ಮಣ್ಣು ಗಣಿಗಾರಿಕೆಯಿಂದಾಗಿ ಇತ್ತೀಚೆಗೆ ಬೃಹತ್ ಹೊಂಡದಲ್ಲಿ ಬಿದ್ದು ಇಬ್ಬರು ಯುವಕರು ಬಲಿಯಾಗಿದ್ದರು. ಈ ಘಟನೆ ಗ್ರಾಮಸ್ಥರಲ್ಲಿ ಇನ್ನೂ ಮಾಸಿಲ್ಲ. ಆದ್ರೆ ಈಗ ಮತ್ತೆ ಅದೇ ಪ್ರದೇಶದ ವ್ಯಾಪ್ತಿಯಲ್ಲಿ ಎಗ್ಗಿಲ್ಲದೇ ಅಕ್ರಮ ಮಣ್ಣು ಗಣಿಗಾರಿಕೆ ನಡೆದಿದೆ. ಅಕ್ರಮಕ್ಕೆ ಬ್ರೇಕ್ ಹಾಕುವಂತೆ ಜಿಲ್ಲಾಧಿಕಾರಿ ಖಡಕ್ ಸೂಚನೆ ನೀಡಿದ್ದರು. ಆದ್ರೆ, ಗಣಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಅಕ್ರಮ ಗೊತ್ತಿದ್ರೂ ಕ್ಯಾರೇ ಎನ್ನುತ್ತಿಲ್ಲ. ಅಧಿಕಾರಿಗಳ ಹಣದ ದಾಹಕ್ಕೆ ಇನ್ನೂ ಎಷ್ಟು ಮಂದಿ ಬಲಿಯಾಗಬೇಕು ಅಂತ ಜನ್ರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಮೀನುಗಳಲ್ಲಿ ಮತ್ತೆ ಜೆಸಿಬಿ, ಇಟಾಚಿಗಳ ಘರ್ಜನೆ ಜೋರಾಗಿದೆ. ಕಾನೂನು ಉಲ್ಲಂಘನೆ ಮಾಡಿ ಎರ್ರಾಬಿರಿ ಮಣ್ಣು ಗಣಿಗಾರಿಕೆ ನಡೆದ್ರೂ ಅಧಿಕಾರಿಗಳು ಡೋಂಟ್ ಕೇರ್ ಎಂದಿದ್ದಾರೆ. ಮಣ್ಣು ಗಣಿಗಾರಿಕೆ ಹೊಂಡದಲ್ಲಿ ಬಿದ್ದು ಯುವಕ್ರು ಸಾವನ್ನಪ್ಪಿದ್ರು ಗದಗನಲ್ಲಿ ಗಣಿಗಾರಿಕೆ ನಿಲ್ಲುತ್ತಿಲ್ಲ. ಗದಗ ತಾಲೂಕಿನ ಹುಲಕೋಟಿ, ಚಿಕ್ಕಹಂದಿಗೋಳ, ಬೆಳಹೊಡ ಗ್ರಾಮಗಳ ಸುತ್ತಮುತ್ತಲಿನ ಜಮೀನುಗಳಲ್ಲಿ ಮಣ್ಣು ಗಣಿಗಾರಿಕೆ ಮತ್ತೆ ಎಗ್ಗಿಲ್ಲದೇ ಸಾಗಿದೆ.
ಏಪ್ರಿಲ್ 30 ಚಿಕ್ಕಹಂದಿಗೋಳ ಗ್ರಾಮದ ಬಳಿ ಅಕ್ರಮ ಮಣ್ಣು ಗಣಿಗಾರಿಕೆ ಹೊಂಡದಲ್ಲಿ ಬಿದ್ದು ಶ್ಯಾಗೋಟಿ ಗ್ರಾಮದ ಇಬ್ಬರು ಯುವಕರು ಸಾವನ್ನಪ್ಪಿದ್ರು. ಘಟನೆ ಬಳಿಕ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಅಕ್ರಮ ಮಣ್ಣು ಗಣಿಗಾರಿಕೆಗೆ ಬ್ರೇಕ್ ಹಾಕಿತ್ತು. ಡಿಸಿ ಸುಂದರೇಶ್ ಬಾಬು ಗಣಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಖಡಕ್ ಆದೇಶ್ ಮಾಡಿದ್ರು. ಅಷ್ಟೇ ಅಲ್ಲ ಎಲ್ಲ ಹೊಂಡಗಳಿಗೆ ತಂತಿ ಬೇಲೆ ಹಾಕಿ ಅಪಾಯದ ಸ್ಥಳ ಅಂತ ನಾಮಫಲಕ ಹಾಕಲು ಸೂಚಿಸಿದ್ರು.
ಆದ್ರೆ ಇದುವರೆಗೂ ಗಣಿ ಹಾಗೂ ಕಂದಾಯ ಇಲಾಖೆ ಅಧಿಕಾರಿಳು ಮಾಡಿಲ್ಲ. ಅದ್ರೆ, ಈಗ ಮತ್ತೆ ಎಗ್ಗಿಲ್ಲದೇ ಅಕ್ರಮ ಮಣ್ಣು ಗಣಿಗಾರಿಕೆ ಶುರುವಾಗಿದೆ. ರೈತರ ಜಮೀನುಗಳಲ್ಲಿ ಜೆಸಿಬಿ ಇಟಾಚಿಗಳ ಘರ್ಜನೆ ಜೋರಾಗಿದೆ. ಹೀಗಾಗಿ ಗದಗ ತಾಲೂಕಿನ ಜನ್ರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣ ಅಕ್ರಮ ಮಣ್ಣು ಗಣಿಗಾರಿಕೆಗೆ ಬ್ರೇಕ್ ಹಾಕುವಂತೆ ಗದಗ ನಿವಾಸಿ ಚಂದ್ರಕಾಂತ್ ಒತ್ತಾಯಿಸಿದ್ದಾರೆ.
ಅಂದು ಹೊಂಡದಲ್ಲಿ ಇಬ್ಬರು ಯುವಕ್ರು ಸಾವನ್ನಪ್ಪಿದ್ದು ಇಡೀ ಊರು ಕಣ್ಣೀರು ಹಾಕಿತ್ತು. ಇಷ್ಟಾದ್ರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿ. ಗಣಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಹಣದ ದಾಹಕ್ಕೆ ಅಮಾಯಕ ಯುವಕ್ರು ಬಲಿಯಾಗುತ್ತಿದ್ದಾರೆ. ಕಾನೂನು ಮೀರಿ ಬೇಕಾಬಿಟ್ಟಿ ಬೃಹತ್ ಹೊಂಡಗಳು ಅಗೆದಿದ್ದು, ಅದ್ರಲ್ಲಿ ಅಪಾರ ನೀರು ತುಂಬಿಕೊಂಡಿವೆ. ಯುವಕ್ರು ಸ್ಥಾನಕ್ಕೆ ಅಂತ ನೀರಿಗಿಳಿದಾಗ ಬಲಿಯಾಗುತ್ತಿದ್ದಾರೆ.
ಹುಲಕೋಟಿ, ಕುರ್ತಕೋಟಿ, ಚಿಕ್ಕಹಂದಿಗಳೋಳ, ಬೆಳಹೊಡ, ಶ್ಯಾಗೋಟಿ ಗ್ರಾಮಗಳ ಸುತ್ತಮುತ್ತ ಇನ್ನೂ ಅಕ್ರಮ ಮಣ್ಣು ಲೂಟಿ ಎಗ್ಗಿಲ್ಲದೇ ಸಾಗಿದೆ. ಈ ಸಾವಿನ ಹೊಂಡಗಳ ಬಗ್ಗೆ ತೆಗೆದ ದಂಧೆಕೋರರ ವಿರುದ್ಧ ಎಫ್ಐಆರ್ ದಾಖಲಾಗಬೇಕು. ಕಾನೂನು ರೀತಿ ಕ್ರಮ ಕೈಗೊಳ್ಳುವ ಮೂಲಕ ಅಕ್ರಮ ಗಣಿಗಾರಿಕೆ ಮಾಡೋರಿಗೆ ಬಿಸಿ ತಟ್ಟಿಸಬೇಕು ಅಂತ ಜನ್ರು ಒತ್ತಾಯಿಸಿದ್ದಾರೆ. ಒಂದು ವೇಳೆ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದ್ರೆ ಹೋರಾಟ ಮಾಡುವುದಾಗ ಹೋರಾಟಗಾರ ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.
ದಂಧೆಕೋರರು ನೀಡೋ ಎಂಜಲು ಕಾಸು ಪಡೆದು ಅಧಿಕಾರಿಗಳು ಅನುಮತಿ ನೀಡಿ ಕಚೇರಿಯಲ್ಲಿ ಕುಳಿತಿದ್ದಾರೆ. ಇಲ್ಲಿ ದಂಧೆಕೋರರು ಮಣ್ಣು ಲೂಟಿ ಮಾಡಿದ್ದೇ ಮಾಡಿದ್ದು,. ದಂಧೆಕೋರರ ಅಟ್ಟಹಾಸ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇಬ್ಬರು ಯುವಕ್ರು ಬಲಿಯಾಗಿದ್ದಾರೆ. ಇನ್ನಾದ್ರೂ ಗಣಿ, ಕಂದಾಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಅಕ್ರಮ ಗಣಿಗಾರಿಕೆಗೆ ಬ್ರೇಕ್ ಹಾಕಬೇಕಿದೆ.
– ಸಂಜೀವ ಪಾಂಡ್ರೆ, ಟಿವಿ 9, ಗದಗ