ಕಲಬುರಗಿ: ನಿರ್ಮಾಣ ಹಂತದ ಕಟ್ಟಡ ಬಳಿ ನಡೆದಿದ್ದ ಕೊಲೆ ಪ್ರಕರಣ, ಪೊಲೀಸ​ರ ತನಿಖೆಗೆ ನೆರವಾದ ಜೋಡಿ ಚಪ್ಪಲಿಗಳು!

ನಗರದ ಗುಬ್ಬಿ ಕಾಲೋನಿಯ ಹೊರವಲಯದಲ್ಲಿ ನಿರ್ಮಾಣ ಹಂತದ ಕಟ್ಟಡದ ಪಕ್ಕದಲ್ಲಿ ಜೂನ್ 11 ರಂದು ನಡೆದಿದ್ದ ಮಹ್ಮದ್ ಕರೀಮಸಾಬ್ ಪಟೇಲ್ (40)ನ ಕೊಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ  ಕೊಲೆ ಆರೋಪಿಗಳನ್ನು  ಮಹಾತ್ಮಾ ಬಸವೇಶ್ವರ ನಗರ ಠಾಣೆಯ ಪೊಲೀಸರು  ಬಂಧಿಸಿದ್ದಾರೆ.

ಕಲಬುರಗಿ: ನಿರ್ಮಾಣ ಹಂತದ ಕಟ್ಟಡ ಬಳಿ ನಡೆದಿದ್ದ ಕೊಲೆ ಪ್ರಕರಣ, ಪೊಲೀಸ​ರ ತನಿಖೆಗೆ ನೆರವಾದ ಜೋಡಿ ಚಪ್ಪಲಿಗಳು!
ಸಾಂದರ್ಭಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on:Jun 25, 2022 | 9:57 PM

ಕಲಬುರಗಿ: ನಗರದ ಗುಬ್ಬಿ ಕಾಲೋನಿಯ ಹೊರವಲಯದಲ್ಲಿ ನಿರ್ಮಾಣ ಹಂತದ ಕಟ್ಟಡದ ಪಕ್ಕದಲ್ಲಿ ಜೂನ್ 11 ರಂದು ನಡೆದಿದ್ದ ಮಹ್ಮದ್ ಕರೀಮಸಾಬ್ ಪಟೇಲ್ (40) ಎಂಬಾತನ ಕೊಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ  ಕೊಲೆ ಆರೋಪಿಗಳನ್ನು  ಮಹಾತ್ಮಾ ಬಸವೇಶ್ವರ ನಗರ ಠಾಣೆಯ ಪೊಲೀಸರು  ಬಂಧಿಸಿದ್ದಾರೆ. ಕಲಬುರಗಿ ನಗರದ ಬಾಪು ನಗರದ ನಿವಾಸಿಗಳಾದ ಕೇವಲ್ ಉಪಾಧ್ಯಾಯ, ಜಿತೇಶ್ ಉಪಾದ್ಯಾಯ್, ಪ್ರೇಮ್ ಉಪಾಧ್ಯಾಯ ಬಂಧಿತ ಆರೋಪಿಗಳು.

ಕೊಲೆಗೆ ಕಾರಣ ಏನು? ಕೊಲೆ ಪ್ರಕರಣ ಬೇಧಿಸಲು ನೆರವಾಗಿದ್ದು ಚಪ್ಪಲಿಗಳು

ಆರೋಪಿಗಳು ಮಹ್ಮದ್ ಕರೀಮಸಾಬ್ ಪಟೇಲ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದರು. ಕೊಲೆಯ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ  ಕಲಬುರಗಿ ಪೊಲೀಸ್ ಕಮಿಷನರ್, ಡಿಸಿಪಿ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಕರೀಮಸಾಬ್, ಮೂಲತ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬುರು ನಿವಾಸಿ. ಆದರೆ ಕಳೆದ ಕೆಲ ವರ್ಷಗಳಿಂದ ಕಲಬುರಗಿ ನಗರದ ಉಮರ್ ಕಾಲೋನಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದನು.

ಇದನ್ನೂ ಓದಿ: ಗಂಡನೊಂದಿಗೆ ಬಳೆ ಖರೀದಿಸಲು ಹೋದ ಹೆಂಡ್ತಿ ಪ್ರಿಯಕರನೊಂದಿಗೆ ಎಸ್ಕೇಪ್..!

ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅನೇಕ ರೀತಿಯಿಂದ ತನಿಖೆ ನಡೆಸಿದರು ಕೂಡಾ ಕೊಲೆಗಾರರ ಮಾಹಿತಿ ಸಿಕ್ಕಿರಲಿಲ್ಲ.  ಕೊಲೆಯಾದ ಸ್ಥಳದಲ್ಲಿ ಪತ್ತೆಯಾದ ಜೋಡಿ ಚಪ್ಪಲಿಗಳು ಬಿದ್ದಿದ್ದನ್ನು ಪೊಲೀಸರು ಗಮನಿಸಿದ್ದರು. ಜೊತೆಗೆ ಕೊಲೆಯಾದ ದಿನದ ಹಿಂದಿನ ರಾತ್ರಿ ಸುತ್ತಮುತ್ತಲಿನ ಬಾರ್ ಗಳಲ್ಲಿನ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದರು. ಆಗ ಕೊಲೆಯಾದ ಸ್ಥಳದ ಸಮೀಪದ ಬಾರ್ ವೊಂದರ ಸಿಸಿಟಿವಿಯಲ್ಲಿ ಕೊಲೆ ಮಾಡಿದ ಆರೋಪಿ ಜಿತೇಶ್ ಕಾಲಲ್ಲಿ ಚಪ್ಪಲಿ ಮತ್ತು ಕೊಲೆಯಾದ ಸ್ಥಳದಲ್ಲಿನ ಚಪ್ಪಲಿಗಳು ಒಂದೆಯಾಗಿದ್ದವು. ಹೀಗಾಗಿ ಜಿತೇಶ್ ನನ್ನು ಪತ್ತೆ ಮಾಡಿದ್ದ ಪೊಲೀಸರು, ಆತನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದರು.

ಇದನ್ನು ಓದಿ: ಪಂಜಾಬ್​​​ನಲ್ಲಿ ಐಎಎಸ್ ಅಧಿಕಾರಿಯ ಪುತ್ರ ಸಾವು; ಇದು ಕೊಲೆ ಎಂದ ಕುಟುಂಬ, ಆತ್ಮಹತ್ಯೆ ಎಂಬುದು ಪೊಲೀಸರ ವಾದ

ಆಗ ಆತ ತನ್ನ ಚಪ್ಪಲಿಯನ್ನು ಎಲ್ಲೋ ಬಿಟ್ಟಿರೋ ಕಥೆ ಹೇಳಿದ್ದ. ನಂತರ ಪೊಲೀಸರು ಆತನನ್ನು ವಿಚಾರಣೆ ನಡೆಸಿದಾಗ ಜಿತೇಶ್ ಮತ್ತು ಆತನ ಇನ್ನಿಬ್ಬರು ಸ್ನೇಹಿತರಾದ ಕೇವಲ್, ಮತ್ತು ಪ್ರೇಮ್ ಅನ್ನೋ ಮೂವರು ಸೇರಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ್ದ ಮೂವರು ಕೂಡಾ ಜೂನ್ 10 ರಂದು ರಾತ್ರಿ ಕುಡದಿದ್ದರು. ಮತ್ತೆ ಕುಡಿಯುವ ಉದ್ದೇಶದಿಂದ ಹಣಕ್ಕಾಗಿ ಹುಡುಕಾಟ ನಡೆಸಿದ್ದರು. ಇದೇ ಸಂದರ್ಭದಲ್ಲಿ ಕಲಬುರಗಿ ನಗರದ ಆರ್ ಟಿ ಓ ಕ್ರಾಸ್ ಬಳಿಯಿಂದ ಮಹ್ಮದ್ ಕರೀಂಸಾಬ್ ನಡೆದುಕೊಂಡು ಬರುತ್ತಿದ್ದ. ಆತನನ್ನು ಹಿಡಿದ ದುಷ್ಕರ್ಮಿಗಳು, ಆತನ ಬಳಿಯಿದ್ದ ಇನ್ನೂರು ರೂಪಾಯಿ ಹಣವನ್ನು ಕಸಿದುಕೊಂಡಿದ್ದರು.

ಆದರೆ ತನ್ನ ಬಳಿ ಇದ್ದ ಹಣವನ್ನು ಕಸಿದುಕೊಂಡಿದ್ದಕ್ಕೆ ಮಹ್ಮದ್ ಕರೀಂಸಾಬ್, ಹಣವನ್ನು ನೀಡುವಂತೆ ಆರೋಪಿಗಳ ದುಂಬಾಲು ಬಿದ್ದಿದ್ದನು. ಆರೋಪಿಗಳಿದ್ದ ಆಟೋ ಹತ್ತಿ ಕೂತಿದ್ದ. ಹಣ ಕೊಡದ ಆರೋಪಿಗಳು, ಮಹ್ಮದ್ ಕರೀಂಸಾಬ್ ನನ್ನು ನಿರ್ಮಾಣ ಹಂತದ ಕಟ್ಟಡದ ಬಳಿ ಕರೆದುಕೊಂಡು ಹೋಗಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದರು. ಆದರೆ ಕೊಲೆ ಮಾಡಿದ ಗಾಬರಿಯಲ್ಲಿ ಜಿತೇಶ್ ತನ್ನ ಚಪ್ಪಲಿಗಳನ್ನು ಕೊಲೆ ಮಾಡಿದ ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದನು.

Published On - 9:56 pm, Sat, 25 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ