ಹೊಸಕೋಟೆ ಟೋಲ್ ಪ್ಲಾಜಾ ಬಳಿ ಸರಣಿ ಅಪಘಾತ: ಭೀಕರ ಸರಣಿ ಅಪಘಾತದಲ್ಲಿ 8 ವಾಹನಗಳು ನಜ್ಜುಗುಜ್ಜು
ಖಾಸಗಿ ಗೆಸ್ಟ್ ಹೌಸ್ನಲ್ಲಿ ಬೆಂಗಳೂರು ಮೂಲದ ತಂಡಗಳ ನಡುವೆ ಹೊಡೆದಾಟ ನಡೆದಿರುವಂತಹ ಘಟನೆ ನಗರದ ಹೊರವಲಯದ ಉಚ್ಚಿಲದ ಖಾಸಗಿ ಬೀಚ್ ರೆಸಾರ್ಟ್ನಲ್ಲಿ ನಡೆದಿದೆ.
ದೇವನಹಳ್ಳಿ: ಲಾರಿ, ಬಸ್ ಮತ್ತು ಕಾರುಗಳ ನಡುವೆ ಸರಣಿ ಅಪಘಾತ (Accident) ವಾಗಿದ್ದು, 8 ವಾಹನಗಳು ಜಖಂಗೊಂಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ನಡೆದಿದೆ. ಲಾರಿ ಚಾಲಕನ ನಿರ್ಲಕ್ಷ್ಯದಿಂದ ಸರಣಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ಅಪಘಾತದಲ್ಲಿ ಎಲ್ಲರೂ ಯಾವುದೇ ಗಾಯಗಳಿಲ್ಲದೆ ಬಚಾವ್ ಆಗಿದ್ದಾರೆ. ಹೆದ್ದಾರಿಯಲ್ಲಿ ಲಾರಿ ಚಾಲಕನ ಅಡ್ಡಾದಿಡ್ಡಿ ಚಾಲನೆಯಿಂದ ಅಪಘಾತ ನಡೆದಿದೆ ಎಂದು ಆರೋಪಿಸಲಾಗಿದೆ. ಅಪಘಾತದ ನಂತರ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಅಪಘಾತದ ರಬಸಕ್ಕೆ ಲಾರಿಯ ಮುಂಬಾಗ ಬಸ್ಸಿನ ಹಿಂಬಾಗ ಜಖಂಗೊಂಡಿದೆ. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕುಡಿದ ಅಮಲಿನಲ್ಲಿ ಸರಣಿ ಅಪಘಾತ ಮಾಡಿ ಪರಾರಿ
ಮೈಸೂರು: ಕುಡಿದ ಅಮಲಿನಲ್ಲಿ ಸರಣಿ ಅಪಘಾತ ಮಾಡಿ ಎಸ್ಕೇಪ್ ಆಗುತ್ತಿದ್ದ ಕಾರು ಚಾಲಕನನ್ನ ಸಾರ್ವಜನಿಕರು ಬೆನ್ನಟ್ಟಿ ಹಿಡಿದಿರುವಂತಹ ಘಟನೆ ನಗರದ ಬೋಗಾದಿರಿಂಗ್ ರಸ್ತೆಯಲ್ಲಿ ನಿನ್ನೆ ಸಂಜೆ ನಡೆದಿದೆ. ರಿಂಗ್ ರಸ್ತೆಯಲ್ಲಿ ಕಾರು ನಾಲ್ಕು ಬೈಕ್ಗಳಿಗೆ ಡಿಕ್ಕಿಹೊಡೆದಿದೆ. ಬಳಿಕ ಕಾರು ನಿಲ್ಲಿಸದೇ ಸ್ಥಳದಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದ್ದು, ಸಾರ್ವಜನಿಕರು ಬೈಕ್ನಲ್ಲಿ ಕಾರು ಚೇಸ್ ಮಾಡಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾರು ಚೇಸಿಂಗ್ ವೀಡಿಯೋ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕುವೆಂಪುನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸರು ಯಾವುದೇ ಪ್ರಕರಣ ದಾಖಲಿಸದಿರುವುದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರಿಡ್ಜ್ನಿಂದ ಕೆಳಗೆ ಬಿದ್ದು ಬೈಕ್ ರೈಡರ್ ಸ್ಥಳದಲ್ಲಿಯೇ ಸಾವು
ತುಮಕೂರು: ಟಿಟಿ ವಾಹನಕ್ಕೆ ಟಚ್ ಆಗಿ ಬ್ರಿಡ್ಜ್ನಿಂದ ಕೆಳಗೆ ಬಿದ್ದು ಬೈಕ್ ರೈಡರ್ ಸ್ಥಳದಲ್ಲಿಯೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಗವಿಮಠ ಬಳಿ ನಡೆದಿದೆ. ಬೆಂಗಳೂರಿನ ಬನಶಂಕರಿ ನಿವಾಸಿ ಸೂರಜ್ 27 ಮೃತ ದುರ್ದೈವಿ. ಜಾಲಿ ರೈಡ್ಗೆ ಹೊರಟಿದ್ದ ಯುವಕ ಸಾವನ್ನಪಿದ್ದಾನೆ. ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಖಾಸಗಿ ಗೆಸ್ಟ್ ಹೌಸ್ ನಲ್ಲಿ ಬೆಂಗಳೂರು ಮೂಲದ ತಂಡಗಳ ನಡುವೆ ಹೊಡೆದಾಟ
ಮಂಗಳೂರು: ಖಾಸಗಿ ಗೆಸ್ಟ್ ಹೌಸ್ನಲ್ಲಿ ಬೆಂಗಳೂರು ಮೂಲದ ತಂಡಗಳ ನಡುವೆ ಹೊಡೆದಾಟ ನಡೆದಿರುವಂತಹ ಘಟನೆ ನಗರದ ಹೊರವಲಯದ ಉಚ್ಚಿಲದ ಖಾಸಗಿ ಬೀಚ್ ರೆಸಾರ್ಟ್ನಲ್ಲಿ ನಡೆದಿದೆ. ಹೊಡೆದಾಟದ ಸಂದರ್ಭದಲ್ಲಿ ಸ್ಥಳೀಯ ಮನೆಗಳಿಗೆ ನುಗ್ಗಿ ಕಿರಿಕ್ ಮಾಡಲಾಗಿದೆ. ಎರಡು ಬಸ್ಗಳಲ್ಲಿ ಆಗಮಿಸಿದ ಪ್ರವಾಸಿಗರಿಂದ ರೆಸಾರ್ಟ್ನಲ್ಲಿ ತಡರಾತ್ರಿ ಪಾರ್ಟಿ ಮಾಡಿದ್ದಾರೆ. ಗೆಸ್ಟ್ ಹೌಸ್ನಲ್ಲಿ ಕುಡಿದು ಗಲಾಟೆ ಮಾಡಿ ರಸ್ತೆ ಬದಿಗೆ ಬಂದು ಹೊಡೆದಾಟ ಮಾಡಿದರು. ಕುಡಿತದ ಅಮಲಿನಲ್ಲಿದ್ದ ಸ್ಥಳೀಯ ಮನೆಯೊಂದಕ್ಕೆ ನುಗ್ಗಿ ದಾಂದಲೆ ಮಾಡಿರುವ ಆರೋಪ ಮಾಡಲಾಗಿದೆ. ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದವರಿಗೆ ಸ್ಥಳೀಯರು ಎಚ್ಚರಿಕೆ ಕೊಟ್ಟಿದ್ದಾರೆ. ಉಳ್ಳಾಲ ಪೊಲೀಸರಿಂದ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: Viral Video: ಮಳೆಗಾಳದಲ್ಲಿ ಹೇಗೆ ನಡೆದುಕೊಂಡು ಹೋಗಬೇಕು ಗೊತ್ತಾ? ಈ ವಿಡಿಯೋ ನೋಡಿ