ಪಂಜಾಬ್​​​ನಲ್ಲಿ ಐಎಎಸ್ ಅಧಿಕಾರಿಯ ಪುತ್ರ ಸಾವು; ಇದು ಕೊಲೆ ಎಂದ ಕುಟುಂಬ, ಆತ್ಮಹತ್ಯೆ ಎಂಬುದು ಪೊಲೀಸರ ವಾದ

ವಿಜಿಲೆನ್ಸ್ ತಂಡವು ವಿಚಾರಣೆಗಾಗಿ ಐಎಎಸ್ ಸಂಜಯ್ ಪೊಪ್ಲಿ ಅವರ ಮನೆ ತಲುಪಿತು.ಆಗ ಗುಂಡೇಟಿನ ಶಬ್ದ ಕೇಳಿಸಿತು. ಪರಿಶೀಲನೆಯ ನಂತರ, ಅವರ ಮಗ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡಿದ್ದಾನೆ...

ಪಂಜಾಬ್​​​ನಲ್ಲಿ ಐಎಎಸ್ ಅಧಿಕಾರಿಯ ಪುತ್ರ ಸಾವು; ಇದು ಕೊಲೆ ಎಂದ ಕುಟುಂಬ, ಆತ್ಮಹತ್ಯೆ ಎಂಬುದು ಪೊಲೀಸರ ವಾದ
ಸಾಂಕೇತಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 25, 2022 | 8:36 PM

ಚಂಡೀಗಢ: ಭ್ರಷ್ಟಾಚಾರ ಪ್ರಕರಣದಲ್ಲಿ (corruption case) ಬಂಧಿತರಾಗಿರುವ ಅಧಿಕಾರಿಯೊಬ್ಬರ ಪುತ್ರ ಗುಂಡೇಟಿನಿಂದ ಸಾವನ್ನಪ್ಪಿರುವ ಘಟನೆ ಶನಿವಾರ ಚಂಡೀಗಢದಲ್ಲಿ (Chandigarh) ನಡೆದಿದೆ. ಐಎಎಸ್ ಸಂಜಯ್ ಪೊಪ್ಲಿ(Sanjay Popli) ಅವರ ಪುತ್ರ ಕಾರ್ತಿಕ್ ಪೊಪ್ಲಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದು, ಪೊಪ್ಲಿ ಕುಟುಂಬವು ಇದು ಕೊಲೆ ಎಂದು ಹೇಳಿದೆ. “ವಿಜಿಲೆನ್ಸ್ ತಂಡ (vigilance team) ಸಂಜಯ್ ಪೊಪ್ಲಿ ಅವರ ನಿವಾಸದಲ್ಲಿತ್ತು. ಅವರ ಮಗ ಕಾರ್ತಿಕ್ ಪೊಪ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಚಂಡೀಗಢದ ಎಸ್‌ಎಸ್‌ಪಿ ಕುಲದೀಪ್ ಚಾಹಲ್ ಹೇಳಿದ್ದಾರೆ. 27 ವರ್ಷದ ಯುವಕ ತನ್ನ ತಂದೆಯ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಚಹಾಲ್ ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ.  ವಿಜಿಲೆನ್ಸ್ ತಂಡವು ವಿಚಾರಣೆಗಾಗಿ ಐಎಎಸ್ ಸಂಜಯ್ ಪೊಪ್ಲಿ ಅವರ ಮನೆ ತಲುಪಿತು.ಆಗ ಗುಂಡೇಟಿನ ಶಬ್ದ ಕೇಳಿಸಿತು. ಪರಿಶೀಲನೆಯ ನಂತರ, ಅವರ ಮಗ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡಿದ್ದಾನೆ   ಎಂದು ಅವರಿಗೆ ತಿಳಿಯಿತು ಎಂದಿದ್ದಾರೆ ಚಾಹಲ್. ವಿಜಿಲೆನ್ಸ್ ತಂಡವು ತಮ್ಮ ಏಕೈಕ ಪುತ್ರನನ್ನು ಕೊಂದಿದೆ ಎಂದು ಪೊಪ್ಲಿ ಅವರ ಪತ್ನಿ ಆರೋಪಿಸಿದ್ದಾರೆ.

“ಭಗವಂತ್ ಮಾನ್ ನಮ್ಮ ಮಗನನ್ನು ಕೊಂದಿದ್ದಾನೆ. ವಿಜಿಲೆನ್ಸ್ ತಂಡವು ನಮ್ಮ ನಿವಾಸದಲ್ಲಿಯೇ ಇತ್ತು ಅವರು ನನ್ನ ಮಗನನ್ನು ಕೊಂದಿದ್ದಾರೆ” ಎಂದು ಅವರು ಹೇಳಿದರು.

ಕಾರ್ತಿಕ್ ಸಾವಿನ ಬಗ್ಗೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ತೀವ್ರ ಆಘಾತ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಶಾಕಿಂಗ್! ಸಂಜಯ್ ಪೊಪ್ಲಿ ಅವರ ಪುತ್ರ ಕಾರ್ತಿಕ್ ಅವರನ್ನು ಕಳೆದುಕೊಂಡಿರುವ ಕುಟುಂಬಕ್ಕೆ ಸಂತಾಪ ಮತ್ತು ಸಹಾನುಭೂತಿ. ಕಾನೂನು ರೂಪಿಸುವುದು ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಗೆ ಅಮೂಲ್ಯವಾದ ಜೀವವನ್ನು ಕಳೆದುಕೊಳ್ಳುವ ಪ್ರಕ್ರಿಯೆಯನ್ನು ನಾಟಕೀಯಗೊಳಿಸುವುದನ್ನು ಕ್ಷಮಿಸಲಾಗದು” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪಂಜಾಬ್‌ನ ನವನ್‌ಶಹರ್‌ನಲ್ಲಿ ಒಳಚರಂಡಿ ಪೈಪ್‌ಲೈನ್ ಹಾಕಲು ಟೆಂಡರ್‌ಗಳನ್ನು ಕ್ಲಿಯರ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಸಂಜಯ್ ಪೊಪ್ಲಿ ಅವರನ್ನು ಬಂಧಿಸಲಾಗಿತ್ತು. ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು.

Published On - 8:32 pm, Sat, 25 June 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ