Crime: ಹುಷಾರ್ ಕಣ್ರೀ… ಬೈಕ್ನಲ್ಲಿ ಬರುತ್ತಾರೆ, ಹಿಗ್ಗಾಮುಗ್ಗ ಥಳಿಸುತ್ತಾರೆ, ನಿಮ್ಮ ಬಳಿ ಇರೋದನ್ನ ಕಸಿದು ಹೋಗ್ತಾರೆ!
ಸಿನಿಮೀಯ ಶೈಲಿಯಲ್ಲಿ ಬೈಕ್ನಲ್ಲಿ ಬಂದು ಹಿಗ್ಗಾಮುಗ್ಗ ಥಳಿಸಿ ನಗನಾಣ್ಯಗಳನ್ನು ಸುಲಿಗೆ ಮಾಡುವ ಗ್ಯಾಂಗ್ ನಗರದಲ್ಲಿ ಆಕ್ಟಿವ್ ಆಗಿದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಬೇಕಿದೆ.
ಬೆಂಗಳೂರು: ಸಿನಿಮೀಯ ಶೈಲಿಯಲ್ಲಿ ಬೈಕ್ನಲ್ಲಿ ಬರುವ ಕತರ್ನಾಕ್ ಸುಲಿಗೆಕೋರರು (extortionists) ಹಿಗ್ಗಾಮುಗ್ಗ ಥಳಿಸಿ ನಗನಾಣ್ಯಗಳನ್ನು ಸುಲಿಗೆ (Extortion) ಮಾಡುವ ಗ್ಯಾಂಗ್ ನಗರದಲ್ಲಿ ಆಕ್ಟಿವ್ ಆಗಿದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಬೇಕಿದೆ. ಅನ್ನಪೂರ್ಣೆಶ್ವಯ ನಗರ ಠಾಣಾ ವ್ಯಾಪ್ತಿಯಲ್ಲಿ ಓರ್ವ ವ್ಯಕ್ತಿಯ ಮೇಲೆ ಸುಲಿಗೆಕೋರರು ಹಾಡುಹಗಲೇ ಡೆಡ್ಲಿ ಅಟ್ಯಾಕ್ ನಡೆಸಿದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪ್ರಕರಣ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Crime News: ರಾಜ್ಯದಲ್ಲಿ 25 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ! 21 ಟನ್ ಮಾದಕವಸ್ತು ನಾಶಪಡಿಸಲು ಪೊಲೀಸರ ಸಿದ್ಧತೆ
ಸಿನಿಮಾ ಶೈಲಿಯಲ್ಲಿ ದರೋಡೆ ನಡೆಸುವ ಗ್ಯಾಂಗ್ ಒಂದು ಅನ್ನಪೂರ್ಣೆಶ್ವಯ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಓರ್ವ ವ್ಯಕ್ತಿಯ ಮೇಲೆ ದಾಳಿ ನಡೆಸಿದೆ. ಆ ವ್ಯಕ್ತಿಗೆ ಸುಲಿಗೆಕೋರರು ಮನಸೋಇಚ್ಛೆ ಥಳಿಸಿ ಚಿನ್ನದ ಸರ, ಎಟಿಎಂ ಕಾರ್ಡ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಕಳೆದ ಜೂನ್ 10 ನೇ ರಂದು ಮಧ್ಯಾಹ್ನ 12 ಗಂಟೆಗೆ ನಡೆದ ಈ ಡೆಡ್ಲಿ ಅಟ್ಯಾಕ್ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸುಲಿಗೆ ನಡೆಸಿದ ಸಂಬಂಧ ಸಂತ್ರಸ್ತ ವ್ಯಕ್ತಿಯು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಘಟನಾ ಸ್ಥಳದಲ್ಲಿನ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಸುಲಿಗೆ ದೃಶ್ಯಾವಳಿ ಸೆರೆಯಾಗಿರುವುದು ಕಂಡುಬಂದಿದೆ. ಇದನ್ನು ಆಧರಿಸಿ ತನಿಖೆ ಆರಂಭಿಸಿದ ಪೊಲೀಸರು ಮನೋಜ್ ಮತ್ತು ದರ್ಶನ್ ಎಂಬ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಚೆಕ್ ಬೌನ್ಸ್ ಕೇಸ್‌ನಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಕೆ ವೆಂಕಟಸ್ವಾಮಿ ತಪ್ಪಿತಸ್ಥ: ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ
ಸಹಾಯದ ನೆಪದಲ್ಲಿ ವಿದೇಶಿ ಪ್ರಜೆಯ ಸುಲಿಗೆ
ಬೆಂಗಳೂರು: ಸಹಾಯದ ನೆಪದಲ್ಲಿ ವಿದೇಶಿ ಪ್ರಜೆಯನ್ನು ಕರೆದೊಯ್ದು ಸುಲಿಗೆ ಮಾಡಿದ ಪ್ರಕರಣ ನಗರದ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ಓರ್ವ ಆರೋಪಿ ಸೈಯ್ಯದ್ ಇಮ್ರಾನ್ ಎಂಬಾತನನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳಿಗಾಗಿ ತನಿಖೆ ಮುಂದುವರೆದಿದೆ.
ವ್ಯವಹಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರಕ್ಕೆ ಬಂದ ಆಸ್ಟ್ರೇಲಿಯಾ ಪ್ರಜೆ ಹಂಝೋಹಿ ಅವರು ಫಾರ್ಚೂನ್ ಇನ್ ಹೋಟೆಲ್ನಲ್ಲಿ ನೆಲೆಸಿದ್ದರು. ಇವರು ಪ್ರತಿಷ್ಠಿತ 2 ಕಂಪನಿಗಳ ಸಿಇಒ ಆಗಿರುವ ಹಂಝೋಹಿ, ವೆಬ್ಸೈಟ್ ಮೂಲಕ ಪೇಮೆಂಟ್ ಮಾಡುವುದಾಗಿ ಹೊಟೇಲ್ ಸಿಬ್ಬಂದಿಗೆ ತಿಳಿಸಿದ್ದಾರೆ. ಈ ವೇಳೆ ಫಾರ್ಚೂನ್ ಹೋಟೆಲ್ನ ಐವರು ಸಿಬ್ಬಂದಿಗಳು ಹಲ್ಲೆಗೆ ಮುಂದಾದ ಹಿನ್ನೆಲೆ ಸಿಬ್ಬಂದಿಗಳ ವಿರುದ್ಧ ದೂರು ನೀಡಲು ಹೋಗಿದ್ದಾರೆ.
ಹೊಟೇಲ್ ಸಿಬ್ಬಂದಿಗಳ ವಿರುದ್ಧ ದೂರು ನೀಡಲು ಸಹಾಯ ಮಾಡುವ ನೆಪದಲ್ಲಿ ನೆರವಿಗೆ ಬಂದ ಅದೇ ಹೊಟೇಲ್ನಲ್ಲಿ ತಂಗಿದ್ದ ಮೂವರು ಹಂಝೋಹಿ ಅವರನ್ನು ಮಧ್ಯರಾತ್ರಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿ ಆ್ಯಪಲ್ ಮೊಬೈಲ್, ಓಪೋ ಮೊಬೈಲ್, 2 ಕ್ರೆಡಿಟ್ ಕಾರ್ಡ್, ಮೂರು ಬ್ಯಾಗ್ ಹಾಗೂ 4 ಸಾವಿರ ನಗದು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಪ್ರಕರಣ ಜೂ.23ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಓರ್ವ ಆರೋಪಿ ಸೈಯ್ಯದ್ ಇಮ್ರಾನ್ ಅರೆಸ್ಟ್ ಆಗಿದ್ದು, ಮತ್ತಿಬ್ಬರ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಹಳ್ಳದಲ್ಲಿ ಭ್ರೂಣ ಎಸೆದ ಪ್ರಕರಣ: ವೆಂಕಟೇಶ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್ ಜಪ್ತಿ ಮಾಡಿದ ಡಿಎಚ್ಒ
Published On - 2:17 pm, Sat, 25 June 22