AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bangalore Power Cut: ಜೂನ್​ 27 ರಿಂದ ಜೂನ್ 29ರವರಗೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್​​ ವ್ಯತ್ಯಯ

Bengaluru Power Outage: ಜೂನ್​ 27 ರಿಂದ ಜೂನ್ 29ರವರಗೆ ಬೆಂಗಳೂರಿನ ಹಲವು ನಗರಗಳಲ್ಲಿ ವಿದ್ಯುತ್​​ ವ್ಯತ್ಯಯವಾಗಲಿದೆ.  ವಿದ್ಯುತ್ ನಿರ್ವಹಣೆ ಕೆಲಸಗಳು, ಕೇಬಲ್‌ಗಳನ್ನು ಹಾಕುವುದು ಇತ್ಯಾದಿಗಳನ್ನು ಸರಿಪಡಿಸಲು ವಿದ್ಯುತ್​ ವ್ಯತ್ಯಯವಾಗಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತಿಳಿಸಿದೆ.

Bangalore Power Cut: ಜೂನ್​ 27 ರಿಂದ ಜೂನ್ 29ರವರಗೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್​​ ವ್ಯತ್ಯಯ
ಪ್ರಾತಿನಿಧಿಕ ಚಿತ್ರ
TV9 Web
| Updated By: ವಿವೇಕ ಬಿರಾದಾರ|

Updated on:Jun 25, 2022 | 6:19 PM

Share

ಬೆಂಗಳೂರು: ಜೂನ್​ 27 ರಿಂದ ಜೂನ್ 29ರವರಗೆ ಬೆಂಗಳೂರಿನ ಹಲವು ನಗರಗಳಲ್ಲಿ ವಿದ್ಯುತ್​​ ವ್ಯತ್ಯಯವಾಗಲಿದೆ.  ವಿದ್ಯುತ್ ನಿರ್ವಹಣೆ ಕೆಲಸಗಳು, ಕೇಬಲ್‌ಗಳನ್ನು ಹಾಕುವುದು ಇತ್ಯಾದಿಗಳನ್ನು ಸರಿಪಡಿಸಲು ವಿದ್ಯುತ್​ ವ್ಯತ್ಯಯವಾಗಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತಿಳಿಸಿದೆ. ಬೆಂಗಳೂರು ದಕ್ಷಿಣ ವಲಯದ ಪ್ರದೇಶಗಳು ಕೋರಮಂಗಲ ಬ್ಲಾಕ್‌ಗಳು 3, 4, 5 ಮತ್ತು 6, ಸಕ್ರಾ ಆಸ್ಪತ್ರೆ, ಹೊರವರ್ತುಲ ರಸ್ತೆಯಲ್ಲಿರುವ ಸಲಾರ್‌ಪುರಿಯಾದಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್​​ ವ್ಯತ್ಯಯವಾಗಲಿದೆ.

ಇದನ್ನು ಓದಿ: ಸಖತ್​ ಬೋಲ್ಡ್​ ಫೋಟೋ ಹಂಚಿಕೊಂಡ ‘ಕನ್ನಡತಿ’ ನಟಿ ಸಾರಾ ಅಣ್ಣಯ್ಯ

ಪೂರ್ವ ವಲಯದಲ್ಲಿ ಹಳೆ ಬೈಯಪ್ಪನಹಳ್ಳಿ, ಕುಕ್ಸನ್ ರಸ್ತೆ, ಡೇವಿಸ್ ರಸ್ತೆ, ರಿಚರ್ಡ್ಸ್ ಪಾರ್ಕ್ ರಸ್ತೆ, ಆಯಿಲ್ ಮಿಲ್ ರಸ್ತೆ, ಸದಾಶಿವ ದೇವಸ್ಥಾನ ರಸ್ತೆ, ಕಾಮನಹಳ್ಳಿ ಮುಖ್ಯರಸ್ತೆ, ಕೆಎಚ್ ಬಿ ಕಾಲೋನಿ, ಹಚಿನ್ಸ್ ರಸ್ತೆ, ವೀಲರ್ ರಸ್ತೆ, ಬಾಣಸವಾಡಿ ರೈಲು ನಿಲ್ದಾಣ ರಸ್ತೆ, ಲಿಂಗರಾಜಪುರ, ಐಟಿಸಿ ಮುಖ್ಯರಸ್ತೆ, ಜೀವನಹಳ್ಳಿ ಮತ್ತು ಬಾಣಸವಾಡಿ ಮುಖ್ಯರಸ್ತೆ ಹಾಗೂ ಸುತ್ತಮುತ್ತ ಬೆಳಗ್ಗೆ 11ರಿಂದ ಸಂಜೆ 5ರವರೆಗೆ ವ್ಯತ್ಯಯವಾಗಲಿದೆ. ಪಶ್ಚಿಮ ವಲಯದಲ್ಲಿ ಬಿಎಂಟಿಸಿ ಬಸ್ ಡಿಪೋ, ಶಂಕರಪ್ಪ ಎಸ್ಟೇಟ್ ಸೇರಿದಂತೆ ಉತ್ತರ ವಲಯದಲ್ಲಿ ಇಸ್ರೋ ಲೇಔಟ್ ಮತ್ತು ನ್ಯೂ ಬಿಇಎಲ್ ರಸ್ತೆಯಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್​ ಕಡಿತಗೊಳ್ಳಲಿದೆ.

ಇದನ್ನು ಓದಿ: ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ನಲ್ಲಿ ತಂದೆ ನೆನೆದು ಕಣ್ಣೀರು ಹಾಕಿದ ಶಿವಣ್ಣ; ಇದಕ್ಕೆ ಕಾರಣವಾಯ್ತು ಆ ಒಂದು ಹಾಡು

ಜೂನ್ 28, ಬೆಂಗಳೂರು ಪೂರ್ವ ವಲಯದ ವ್ಯಾಪ್ತಿಯ ಪ್ರದೇಶಗಳಲ್ಲಿ HRBR ಲೇಔಟ್ 2 ಮತ್ತು 3 ನೇ ಬ್ಲಾಕ್, ಕಾಮನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಮತ್ತು ಬಾಣಸವಾಡಿ ಸೇರಿವೆ. ಈ ಪ್ರದೇಶಗಳು ಬೆಳಿಗ್ಗೆ 11 ರಿಂದ ಸಂಜೆ 5 ರ ವರೆಗೆ ವಿದ್ಯುತ್​ ವ್ಯತ್ಯಯವಾಗಲಿದೆ.

ಇದನ್ನು ಓದಿ:

ಜೂನ್ 29 ರಂದು ನಗರದ ದಕ್ಷಿಣ ವಲಯದಲ್ಲಿಕೋರಮಂಗಲ 2 ಬ್ಲಾಕ್, ಮಡಿವಾಳ ಟೋಟಲ್ ಮಾಲ್, ದವನಂ ಜ್ಯುವೆಲರ್ಸ್ ಕಟ್ಟಡ, ಮಡಿವಾಳ ಸಂತೆ, ಸಿದ್ಧಾರ್ಥ ಕಾಲೋನಿ, ಕೋರಮಂಗಲ 5 ಬ್ಲಾಕ್, ಇಂಡಸ್ಟ್ರಿಯಲ್ ಲೇಔಟ್​​ನಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆವರೆಗೆ ವ್ಯತ್ಯಯವಾಗಲಿದೆ. ಸಿಎಂಆರ್ ರಸ್ತೆ, ಎಚ್‌ಆರ್‌ಬಿಆರ್ ಲೇಔಟ್ 3 ಬ್ಲಾಕ್, ರಾಮಯ್ಯ ಲೇಔಟ್, ಕರವಳ್ಳಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ಪೂರ್ವ ವಲಯದ ಕೆಲವು ಪ್ರದೇಶಗಳಲ್ಲಿ ಬೆಳಗ್ಗೆ 11ರಿಂದ ಸಂಜೆ 5.30ರವರೆಗೆ ವ್ಯತ್ಯಯವಾಗಲಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 6:19 pm, Sat, 25 June 22