1975ರಲ್ಲಿ ಕುರ್ಚಿ ಉಳಿಸಿಕೊಳ್ಳಲು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆ; ಪರೋಕ್ಷವಾಗಿ ಕಾಂಗ್ರೆಸ್ಗೆ ಟಾಂಗ್ ಕೊಟ್ಟ ಸಿಎಂ
1975 ರಲ್ಲಿ ತನ್ನ ಕುರ್ಚಿ ಉಳಿಸಿಕೊಳ್ಳಲು ದೇಶದಲ್ಲಿ ತುರ್ತು ಪರೀಸ್ಥಿತಿ ಹೇರಿ ಮಾಡಬಾರದ್ದನ್ನು ಮಾಡಿದರು. ಎಲ್ಲಾ ರಾಜಕೀಯ ಸಂಘಟನೆ ಸೇರಿ ಎಲ್ಲರನ್ನೂ ಜೈಲಿನಲ್ಲಿ ಇಟ್ಟಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರು: 1975 ರಲ್ಲಿ ತನ್ನ ಕುರ್ಚಿ ಉಳಿಸಿಕೊಳ್ಳಲು ದೇಶದಲ್ಲಿ ತುರ್ತು ಪರೀಸ್ಥಿತಿ (Emergency) ಹೇರಿದರು. ಅಲಹಾಬಾದ್ನಲ್ಲಿ (Allahabad) ಅವರ ವಿರುದ್ಧ ಪಿಟಿಷನ್ ಹಾಕಿದಕ್ಕೆ ರಾತ್ರೋರಾತ್ರಿ ತುರ್ತುಸ್ಥಿತಿ ಹೇರಿದರು. ಈ ವೇಳೆ ಮಾಡಬಾರದ್ದನ್ನು ಮಾಡಿದರು. ಎಲ್ಲಾ ರಾಜಕೀಯ ಸಂಘಟನೆ ಸೇರಿ ಎಲ್ಲರನ್ನೂ ಜೈಲಿನಲ್ಲಿ ಇಟ್ಟಿದ್ದರು. ಅವರ ಪಕ್ಷದಲ್ಲಿ ಇದನ್ನು ಮಾಡುವುದು ಸರಿ ಇಲ್ಲ ಅಂದರು ಅವರನ್ನು ಜೈಲಿಗೆ ಹಾಕಿದರು ಎಂದು ಬಸವ ಭವನದಲ್ಲಿ ಏರ್ಪಡಿಸಿದ್ದ ತುರ್ತು ಪರಿಸ್ಥಿತಿ ದಿನಕ್ಕೆ 47 ವರ್ಷ ಬಿಜೆಪಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದರು.
ಇದನ್ನು ಓದಿ: ಬೆಂಗಳೂರು: ಸಂಚಾರ ದಟ್ಟಣೆ ನಿವಾರಣೆಗೆ ಅಧಿಕಾರಿಗಳೊಂದಿಗೆ ಸಿಎಂ ಸಭೆ; ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಸಿಎಂ
ನಮ್ಮ ದೇಶ ಬಹಳ ವಿಶಿಷ್ಠವಾದ ದೇಶವಾಗಿದ್ದು, ಇಲ್ಲಿ ಮೌನ್ವಿಗಳು, ಆದರ್ಶಗಳು, ಜೀವನ ಪದ್ದತಿ ಜಗತ್ತಿನ ಯಾವ ರಾಷ್ಟ್ರದಲ್ಲಿ ಇಲ್ಲ. ಅಪ್ಪಟ ಹೃದಯ ಶ್ರೀಮಂತಿಕೆ ಇರುವ ದೇಶವಾಗಿದ್ದು, ನೂರಾರು ತ್ಯಾಗ ಬಲಿದಾನ ಇದೆ ಅಲೆಗ್ಸಾಂಡರ್ ಜಗತ್ತನ್ನು ಗೆಲ್ಲಬೇಕು ಅಂತ ಬಂದ ಭಾರತಕ್ಕೆ ಬಂದು ವಾಪಸ್ ಹೋದರು. ಮೊಘಲ್ ಬಹಳಷ್ಟು ಸಾಮ್ರಾಜ್ಯ ವಿಸ್ತಾರಣೆ ಮಾಡಿದ ಭಾರತಕ್ಕೆ ಕೊನೆ ಆಯ್ತು. ಬ್ರಿಟಿಷ್ ಸ್ವಾತಂತ್ರ್ಯ ಕೊಡುವಾಗ ಮೌಂಟ್ ಬ್ಯಾಟನ್ ಸ್ವಾತಂತ್ರ್ಯ ಕೊಟ್ಟುಹೋಗುತ್ತೇವೆ ಇಷ್ಟು ರಾಜರು ಇರುವ ಸಂಧರ್ಭದಲ್ಲಿ ಅಖಂಡತೆ ಇರುತ್ತಾ? ಎಂದು ಕೇಳುತ್ತಾರೆ ಆಗ ಗಾಂಧಿ ಹೇಳುತ್ತಾರೆ ನಿನ್ನ ಕೆಲಸ ಬಿಟ್ಟು ಹೋಗು ನಂತರ ಜಗತ್ತು ತಿರುಗಿ ನೋಡುತ್ತೆ ಎಂದಿದ್ದರು.
ಇದನ್ನು ಓದಿ: ಗಂಡನೊಂದಿಗೆ ಬಳೆ ಖರೀದಿಸಲು ಹೋದ ಹೆಂಡ್ತಿ ಪ್ರಿಯಕರನೊಂದಿಗೆ ಎಸ್ಕೇಪ್..!
ಹುಬ್ಬಳ್ಳಿ ಧಾರವಾಡದಲ್ಲಿ ಸ್ಟೂಡೆಂಟ್ ಆಕ್ಟಿವಿಟಿಸ್ ಬಹಳ ಇತ್ತು. ಬಹಳ ಪೇಪರ್ ಬರ್ತಿತ್ತು ಕೊಂಬು ಕಹಳೆ ಅಂತ ಪೇಪರ್ ಬರುತ್ತಿದ್ದವು. ನಮ್ಮ ಊರಿನಲ್ಲಿ ಏನ್ ಆಗಲ್ಲ ಅಂತ ನಾವು ಕದಕ್ಕೆ ನಾವು ಏನಾದರೂ ಮಾಡಬೇಕು ಎಂದು ಯೋಚನೆ ಮಾಡಿದಿವಿ. ಆಗ ಬೀದಿಗಿಳಿದು ಹೋರಾಟ ಮಾಡಿದಿವಿ. ಬಸ್ ತಡೆದು ಎಲ್ಲಾ ಓಡಿಹೊಂದರು. ಅನಂತ್ ಕುಮಾರ್ ಗೆ ಹೋಗಬೇಡಲೇ ಅಂದೆ ಆದರು ಹೋಗಿ ಸಿಗಾಕೊಂಡರು. ಜೆಪಿ ಹುಬ್ಬಳ್ಳಿ ಗೆ ಬಂದಿದ್ದರು. ಸಂಪೂರ್ಣ ಕಾಂತ್ರಿ ಆಯ್ತು ಅನೇಕ ಯುವಕರು ಬಂದರು. ಗುಜರಾತ್ ನಲ್ಲಿ ಹಾಸ್ಟೆಲ್ ನಲ್ಲಿ ಸರಿಯಾಗಿ ಊಟ ಕೊಡಲಿಲ್ಲ ಅಂತ ಶುರುವಾಗಿದ್ದು ನಂತರ ಜೆಪಿ ಸೇರಿಕೊಂಡರು ಎಂದು ಸಿಎಂ ತುರ್ತುಪರೀಸ್ಥಿತಿಯ ದಿನಗಳನ್ನು ಮೆಲಕು ಹಾಕಿದರು.
ನಮ್ಮ ಸಂವಿಧಾನ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದ್ದು ಬ್ರಿಟನ್ ನಲ್ಲಿ ಸಂವಿಧಾನ ಇಲ್ಲ. ನಮ್ಮ ಸಂವಿಧಾನ ಬದಲಾಗುವ ಆರ್ಥಿಕ, ಸಾಮಾಜಿಕ ವ್ಯವಸ್ಥೆ ಸಹಾಯ ಇದೆ. ಎಲ್ಲರ ರಕ್ಷಣೆ , ಸ್ವಾಭಿಮಾನ ಇದೆ. ಮತ ಹಾಕದಲ್ಲ ಪ್ರಜಾಪ್ರಭುತ್ವ ಆಗುಹೋಗುಗಳಲ್ಲಿ ಭಾಗಿಯಾಗಬೇಕು ಅದು ಮುಖ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ಬದಲಾವಣೆ ಮಾಡಿದ್ದಾರೆ. ಅವರ ಮೇಲೆ ಆರೋಪ ಮಾಡಿದರು. ನೀತಿ ಆಯೋಗ ಮಾಡಿದರು ಶೇ 37 ರಿಂದ ಶೇ 42 ರಷ್ಟು ಮಾಡಿದರು ಎಂದರು. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸದಾನಂದ ಗೌಡ, ಸಂಸದ ಪಿ ಸಿ ಮೋಹನ್, ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಭಾಗಿಯಾಗಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:00 pm, Sat, 25 June 22