ಬೆಂಗಳೂರು: ಇ.ಡಿ ಅಧಿಕಾರಿಗಳಿಂದ ಮಂತ್ರಿ ಗ್ರೂಪ್​ ಸಿಎಂಡಿ ಸುಶೀಲ್​ ಪಾಂಡುರಂಗ ಅರೆಸ್ಟ್

ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ( PMLA) ಸುಶೀಲ್ ಗೆ ಶುಕ್ರವಾರ ನೋಟಿಸ್​ ನೀಡಿದ್ದರು. ವಿಚಾರಣೆ ಬಳಿಕ ಮಂತ್ರಿ ಗ್ರೂಪ್​ ಸಿಎಂಡಿ ಸುಶೀಲ್ ಪಾಂಡುರಂಗ ಬಂಧನವಾಗಿದೆ.

ಬೆಂಗಳೂರು: ಇ.ಡಿ ಅಧಿಕಾರಿಗಳಿಂದ ಮಂತ್ರಿ ಗ್ರೂಪ್​ ಸಿಎಂಡಿ ಸುಶೀಲ್​ ಪಾಂಡುರಂಗ ಅರೆಸ್ಟ್
ಬೆಂಗಳೂರು: ಮಂತ್ರಿ ಗ್ರೂಪ್​ ಸಿಎಂಡಿ ಸುಶೀಲ್​ ಪಾಂಡುರಂಗನನ್ನು ಬಂಧಿಸಿದ ಇ.ಡಿ ಅಧಿಕಾರಿಗಳು
TV9kannada Web Team

| Edited By: sadhu srinath

Jun 27, 2022 | 1:33 PM

ಬೆಂಗಳೂರು: ಹಣಕಾಸು ವ್ಯವಹಾರದಲ್ಲಿ ಅಕ್ರಮವೆಸಗಿರುವ ಆರೋಪದ ಹಿನ್ನೆಲೆಯಲ್ಲಿ ಮಂತ್ರಿ ಗ್ರೂಪ್​ ಸಿಎಂಡಿ ಸುಶೀಲ್ ಪಾಂಡುರಂಗ ಮಂತ್ರಿ ಅವರನ್ನು (CMD Susheel Panduranga Mantri ) ಜಾರಿ ನಿರ್ದೇಶನಾಲಯದ ಅಧಿಕಾರಿಗಳು (Enforcement Directorate ಇ.ಡಿ.) ಬಂಧಿಸಿದ್ದಾರೆ. ಬೆಂಗಳೂರಿನ ಇಡಿ ಕಚೇರಿಯಲ್ಲಿ ವಿಚಾರಣೆ ನಂತರ ಸುಶೀಲ್ ಬಂಧನ ನಡೆದಿದೆ. ಕಳೆದ ವರ್ಷ ಮಂತ್ರಿ​ ಗ್ರೂಪ್ ಮೇಲೆ ಇ.ಡಿ. ದಾಳಿ ಮಾಡಿತ್ತು. ದಾಳಿ ವೇಳೆ ಕೆಲ ದಾಖಲೆ ಪತ್ರಗಳನ್ನು ಇ.ಡಿ. ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ( PMLA -ಪ್ರಿವೆನ್ಷನ್ ಆಫ್ ಮನಿ ಲ್ಯಾಂಡರಿಂಗ್ ಆಕ್ಟ್ ) ಸುಶೀಲ್ ಗೆ ಶುಕ್ರವಾರ ನೋಟಿಸ್​ ನೀಡಿದ್ದರು. ವಿಚಾರಣೆ ಬಳಿಕ ಮಂತ್ರಿ ಗ್ರೂಪ್​ ಸಿಎಂಡಿ ಸುಶೀಲ್ ಪಾಂಡುರಂಗ ಬಂಧನವಾಗಿದೆ. ಸುಶೀಲ್ ಪಾಂಡುರಂಗ ವಿರುದ್ಧ ವೈಯಕ್ತಿಕ ಹಾಗೂ ಸಂಸ್ಥೆಯ ವ್ಯವಹಾರದಲ್ಲಿ ಅಕ್ರಮವೆಸಗಿರುವ ಆರೋಪ ಇತ್ತು.

ಮನಿ ಲಾಂಡರಿಂಗ್ ಕೇಸ್ ನಲ್ಲಿ ಮಂತ್ರಿ ಗ್ರೂಪ್ ಸಿಎಂಡಿ ಬಂಧನ ಸಂಬಂಧ ಇ.ಡಿ ಅಧಿಕೃತ ಪತ್ರಿಕಾ ಪ್ರಕಟಣೆ:

ಸುಶೀಲ್ ಪಿ. ಮಂತ್ರಿ ವಿರುದ್ಧ ಮಾರ್ಚ್ 2020 ರಲ್ಲಿ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ನಿವೇಶನ ಖರೀದಿದಾರರು ಇ.ಡಿ. ಗೂ ದೂರು ನೀಡಿದ್ದರು. ಸಾವಿರಾರು ಖರೀದಿದಾರರಿಂದ ಒಂದು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣ ಪಡೆದುಕೊಳ್ಳಲಾಗಿತ್ತು. ಆದರೆ ಹಣ ಪಡೆದು ಫ್ಲಾಟ್ ನೀಡದೇ ವಂಚನೆ ಎಸಗಲಾಗಿತ್ತು. 7 ರಿಂದ 10 ವರ್ಷ ಕಳೆದರೂ ಫ್ಲಾಟ್ ನೀಡದೆ ವಂಚನೆ ನಡೆದಿದೆ. ಈ ಹಿನ್ನೆಲೆ ಖರೀದಿದಾರರು ದೂರು ದಾಖಲಿಸಿದ್ದರು.

RERA (ರಿಯಲ್ ಎಸ್ಟೇಟ್ ರೆಗ್ಯೂಲೇಟರಿ ಅಥಾರಿಟಿ ) ಯಿಂದ ನಿರ್ದೇಶನ ಬಂದಿದ್ದರೂ ಸಹ ಹಣ ಹಿಂದಿರುಗಿಸದೇ ಸುಶೀಲ್ ಪಿ. ಮಂತ್ರಿ ನಿರ್ಲಕ್ಷ್ಯ ತೋರಿದ್ದರು. ಅಪಾರ್ಟ್ ಮೆಂಟ್ ನಿರ್ಮಾಣಕ್ಕೆ ಹಣ ಪಡೆದು ವೈಯಕ್ತಿಕವಾಗಿ ಬಳಕೆ ಮಾಡಲಾಗಿದೆ. ಅಲ್ಲದೇ ಇದೇ ಪ್ರಾಜೆಕ್ಟ್ ಹೆಸರಲ್ಲಿ ಕಂಪನಿಯು ವಿವಿಧ ಬ್ಯಾಂಕ್ ಗಳಿಂದ 5 ಸಾವಿರ ಕೋಟಿ ಲೋನ್ ಪಡೆದಿದೆ. ಇದು ಇ.ಡಿ. ತನಿಖೆಯಲ್ಲಿ ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ, 10 ದಿನ ಕಸ್ಟಡಿಗೆ ಪಡೆಯಲಾಗಿದೆ.

Also Read:

ತಿಂಗಳಲ್ಲಿ 15 ದಿನ ಅರಣ್ಯದಲ್ಲಿ ವಾಸ್ತವ್ಯ ಹೂಡಲು ಅರಣ್ಯ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ತಾಕೀತು

Also Read:

Coking Coal Production: ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸಲು ಯೋಜನೆ ಸಿದ್ಧ, ಏನಿದರ ವಿವರ?

 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada