Crime News: ಗಂಡನೊಂದಿಗೆ ಬಳೆ ಖರೀದಿಸಲು ಹೋದ ಹೆಂಡ್ತಿ ಪ್ರಿಯಕರನೊಂದಿಗೆ ಎಸ್ಕೇಪ್..!

Crime Story In Kannada: ಜೂನ್ 22 ರಂದು ಸಂಜೆ ಮೋನಿ ಕುಮಾರಿ ತನ್ನ ಪತಿ ವಿವೇಕ್ ಜೊತೆ ಬಳೆ ಖರೀದಿಸಲು ನಗರಕ್ಕೆ ಹೋಗಿದ್ದಾಳೆ. ಹೀಗೆ ಖುಷಿ ಖುಷಿಯಾಗಿ ಹೋಗುತ್ತಿದ್ದ ಜೋಡಿಯನ್ನು ಕಾರ್​ನಲ್ಲಿ ಬಂದ ತಂಡವೊಂದು ಅಡ್ಡಗಟ್ಟಿದೆ.

Crime News: ಗಂಡನೊಂದಿಗೆ ಬಳೆ ಖರೀದಿಸಲು ಹೋದ ಹೆಂಡ್ತಿ ಪ್ರಿಯಕರನೊಂದಿಗೆ ಎಸ್ಕೇಪ್..!
ಮೋನಿ ಕುಮಾರಿ
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jun 25, 2022 | 7:47 PM

ನಮ್ಮ ಸಮಾಜದಲ್ಲಿ ನಡೆಯುವ ಕೆಲವೊಂದು ಘಟನೆಗಳು ಪಕ್ಕಾ ಸಿನಿಮಾ ಸ್ಟ್ರೈಲ್​ನಲ್ಲಿರುತ್ತದೆ. ಇಂತಹ ಘಟನೆಗಳನ್ನು ನೋಡಿ ಸಿನಿಮಾ ಕಥೆ ಸೃಷ್ಟಿಸುತ್ತಾರೋ, ಅಥವಾ ಸಿನಿಮಾ ನೋಡಿ ಇಂತಹ ಪ್ಲ್ಯಾನ್ ರೂಪಿಸುತ್ತಾರೋ ಗೊತ್ತಾಗುವುದಿಲ್ಲ. ಅಂತಹದೊಂದು ಘಟನೆ ಬಿಹಾರ ಮುಂಗೇರ್​ನಲ್ಲಿ ನಡೆದಿದೆ. ಜೂನ್ 14 ರಂದು ಮುಂಗೇರ್ ನಿವಾಸಿ ರಾಮವಿಲಾಸ್ ಗುಪ್ತಾ ಅವರ ಪುತ್ರ ವಿವೇಕ್ ಪೊದ್ದಾರ್ ಮತ್ತು ನೌವಾಗರ್ಹಿ ನಿವಾಸಿ ರಾಮ್ವಿಲಾಸ್ ಪೊದ್ದಾರ್ ಅವರ ಪುತ್ರಿ ಮೋನಿ ಕುಮಾರಿ ವಿವಾಹ ನಡೆದಿತ್ತು. ಈ ಸಂಭ್ರಮ ಮೊದಲ ವಾರದವರೆಗೆ ಹಾಗೆಯೇ ಮುಂದುವರೆದಿತ್ತು. ನವದಂಪತಿಗಳು ಖುಷಿಯಿಂದಲೇ ಸಂಬಂಧಿಕರ ಮನೆಗಳಿಗೆ ಭೇಟಿ ನೀಡುತ್ತಿದ್ದರು. ಈ ಜೋಡಿಯನ್ನು ನೋಡಿ ಕಣ್ಣು ಬೀಳದಿರಲಿ ಎಂದವರೇ ಹೆಚ್ಚು. ಆದರೆ ಮದುವೆಯಾಗಿ ಒಂದೇ ವಾರದಲ್ಲಿ ಮೋನಿ ಕುಮಾರಿ ಮೇಲೆ ಕಣ್ಣು ಬಿದ್ದಾಗಿತ್ತು. ಆದರೆ ಈ ಕಣ್ಣು ಬಿದ್ದು 6 ವರ್ಷಗಳೇ ಕಳೆದಿತ್ತು ಎಂಬುದೇ ಇಲ್ಲಿ ಟ್ವಿಸ್ಟ್​. ಅಂದರೆ…

ಜೂನ್ 22 ರಂದು ಸಂಜೆ ಮೋನಿ ಕುಮಾರಿ ತನ್ನ ಪತಿ ವಿವೇಕ್ ಜೊತೆ ಬಳೆ ಖರೀದಿಸಲು ನಗರಕ್ಕೆ ಹೋಗಿದ್ದಾಳೆ. ಹೀಗೆ ಖುಷಿ ಖುಷಿಯಾಗಿ ಹೋಗುತ್ತಿದ್ದ ಜೋಡಿಯನ್ನು ಕಾರ್​ನಲ್ಲಿ ಬಂದ ತಂಡವೊಂದು ಅಡ್ಡಗಟ್ಟಿದೆ. ಅಷ್ಟೇ ಅಲ್ಲದೆ ಗನ್​ ತೋರಿಸಿ ವಿವೇಕ್​ನನ್ನು ಬೆದರಿಸಿದ್ದಾರೆ. ಒಂದು ಕಡೆ ವಿವೇಕ್​ನ್ನು ಗ್ಯಾಂಗ್​ ವಶಕ್ಕೆ ತೆಗೆದುಕೊಂಡರೆ, ಮತ್ತೊಂದು ಕಡೆ ಮೋನಿ ಕುಮಾರಿಯನ್ನು ಕಾರ್​ಗೆ ಹತ್ತಿಸಿದ್ದಾರೆ. ಏನಾಗುತ್ತಿದೆ ಅನ್ನುವಷ್ಟರಲ್ಲಿ ಮೋನಿ ಕುಮಾರಿಯೊಂದಿಗೆ ಗ್ಯಾಂಗ್ ಎಸ್ಕೇಪ್ ಆಗಿತ್ತು.

ಇತ್ತ ಏನು ಮಾಡಲಿ ಎಂದು ತೋಚದೆ ತಲೆ ಕೆಡಿಸಿಕೊಂಡ ವಿವೇಕ್ ನೇರವಾಗಿ ಮನೆಗೆ ಬಂದು ವಿಷಯ ಮುಟ್ಟಿಸಿದ್ದಾನೆ. ಅಷ್ಟೇ ಅಲ್ಲದೆ ಕುಟುಂಬದವರ ಜೊತೆ ಹೋಗಿ ಪೊಲೀಸರಿಗೆ ದೂರು ನೀಡಿದ್ದಾನೆ. ಇದಾಗಿ ಮನೆಗೆ ಬಂದು ನೋಡಿದರೆ ಮದುವೆಗೆ ಹಾಕಿದ್ದ ಒಡವೆಗಳು, ಆಭರಣಗಳೂ ಯಾವುದೂ ಇರಲಿಲ್ಲ. ಅಷ್ಟೇ ಅಲ್ಲದೆ ಮೋನಿ ಕುಮಾರಿಗೆ ಬೇಕಾದ ವಸ್ತುಗಳು ರೂಮ್​ನಲ್ಲಿ ಕಾಣೆ.

ಇದನ್ನೂ ಓದಿ
Image
Viral Video: ಒಳಗೆ ಸೇರಿದರೆ ಗುಂಡು…ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ಯುವತಿಯ ರಂಪಾಟ..!
Image
Crime Story: ಪೊಲೀಸ್ ಮಗ, ಎಲ್​ಎಲ್​ಬಿ ಪದವೀಧರ: ಯಾರು ಈ ಡಾನ್ ಲಾರೆನ್ಸ್ ಬಿಷ್ಣೋಯ್?
Image
Railway Recruitment 2022: SSLC ಪಾಸಾದವರಿಗೆ ಸುರ್ವಣಾವಕಾಶ: ರೈಲ್ವೆಯಲ್ಲಿದೆ ಉದ್ಯೋಗಾವಕಾಶ
Image
Crime Story: ಕಿಂಗ್ ಆಫ್ ಕ್ರೈಮ್: ದಾವೂದ್ ಇಬ್ರಾಹಿಂಗೆ ನಡುಕ ಹುಟ್ಟಿಸಿದ್ದ ಸ್ಲಂ ಡಾನ್

ಒಡವೆ ಹಾಗೂ ಇನ್ನಿತರ ವಸ್ತುಗಳ ರೂಮ್​ನಲ್ಲಿ ಇಲ್ಲದಿರುವುದು ನೋಡಿ ಇಡೀ ಘಟನೆಯ ಬಗ್ಗೆ ವಿವೇಕ್​ಗೆ ಅನುಮಾನ ಬಂದಿದೆ. ಅಲ್ಲದೆ ಈ ವಿಚಾರವನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ. ಇದೇ ವೇಳೆ ಮೋನಿ ಕುಮಾರಿಯ ಫೋನ್ ಫೋನ್​ ಕರೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಅಪಹರಣಗಾರರ ತಂಡದಲ್ಲಿದ್ದ ಒಬ್ಬನ ನಂಬರ್​ನಿಂದ ಮೋನಿ ಕುಮಾರಿಗೆ ಪದೇ ಪದೇ ಕರೆ ಬಂದಿರುವುದು ಕಂಡು ಬಂದಿದೆ.

ತಕ್ಷಣವೇ ಕಾರ್ಯಪ್ರವೃತರಾದ ರಾಮನಗರ ಪೊಲೀಸ್ ಠಾಣೆಯ ಪೊಲೀಸರು, ಮೋನಿ ಕುಮಾರಿ ಹಾಗೂ ಆಕೆಯ ಪ್ರಿಯಕರ ದಿವ್ಯಾಂಶು ಕುಮಾರ್​ನ ಫೋನ್ ಟ್ರ್ಯಾಕ್ ಮಾಡಿದ್ದಾರೆ. ಅಲ್ಲದೆ ಇಬ್ಬರನ್ನು ಕಾಂತಪುರ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದಿದ್ದಾರೆ. ಆ ಬಳಿಕ ವಿಚಾರಣೆಗೆ ಒಳಪಡಿಸಿದಾಗ ಮೋನಿ ದಿವ್ಯಾಂಶುನನ್ನು ಪ್ರೀತಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಇಬ್ಬರು ಆರು ವರ್ಷಗಳಿಂದ  ಪರಸ್ಪರ ಪ್ರೀತಿಸುತ್ತಿದ್ದರು. ಇದಾಗ್ಯೂ ಮದುವೆಗೆ ಮನೆಯಲ್ಲಿ ಒಪ್ಪಿರಲಿಲ್ಲ. ಹೀಗಾಗಿ ಮದುವೆಯಾದ ಬಳಿಕ ಪರಾರಿಯಾಗಲು ಮೋನಿ ಕುಮಾರಿ ಪ್ಲ್ಯಾನ್ ರೂಪಿಸಿದ್ದಳು.

ಅದರಂತೆ ಜೂನ್ 22 ರಂದು ಎಸ್ಕೇಪ್​ ಆಗಲು ನಿರ್ಧರಿಸಿ, ಕಿಡ್ನಾಪ್ ಮಾಡುವಂತೆ ದಿವ್ಯಾಂಶು ಕುಮಾರ್​ಗೆ ತಿಳಿಸಿದ್ದಾಳೆ. ಅತ್ತ ಗೆಳೆಯರೊಂದಿಗೆ ಆಗಮಿಸಿ ದಿವ್ಯಾಂಶು ಮೋನಿಯನ್ನು ಅಪಹರಿಸಿದ್ದಾನೆ. ಇದೀಗ ಕಿಡ್ನಾಪ್​ ಪ್ಲ್ಯಾನ್​ ಬಗ್ಗೆ ಬಾಯಿಬಿಟ್ಟಿರುವ ದಿವ್ಯಾಂಶು ಕುಮಾರ್, ಎಲ್ಲವೂ ಮೋನಿ ಕುಮಾರಿಯ ಪ್ಲ್ಯಾನ್​ನಂತೆ ಮಾಡಿರುವುದಾಗಿ ತಿಳಿಸಿದ್ದಾನೆ. ಇದನ್ನೆಲ್ಲಾ ಕೇಳಿ ನವ ವರ ವಿವೇಕ್ ಮಾತ್ರ ದಂಗಾಗಿದ್ದಾರೆ. ಏಕೆಂದರೆ ಹೆಂಡತಿಯ ಆಸೆ ಎಂದು ಬಳೆ ಕೊಡಿಸಲು ಹೋದ ವಿವೇಕ್​​ಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗುವ ಪ್ಲ್ಯಾನ್ ರೂಪಿಸಿದ್ದಳು ಪತ್ನಿ ಮೋನಿ ಕುಮಾರಿ. ಸದ್ಯ ತಮ್ಮನ್ನು ತಾವೇ ಕಿಡ್ನಾಪ್ ಮಾಡಿಕೊಂಡ ಪ್ರೇಮಿಗಳು ಪೊಲೀಸರ ವಶದಲ್ಲಿದ್ದು, ನ್ಯಾಯಾಲಯಕ್ಕೆ ಒಪ್ಪಿಸುವುದಾಗಿ ಎಸ್‌ಎಚ್‌ಒ ಧೀರೇಂದ್ರ ಕುಮಾರ್ ಪಾಂಡೆ ತಿಳಿಸಿದ್ದಾರೆ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ