AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳ್ಳದಲ್ಲಿ ಭ್ರೂಣ ಎಸೆದ ಪ್ರಕರಣ: ವೆಂಕಟೇಶ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್ ಜಪ್ತಿ ಮಾಡಿದ ಡಿಎಚ್​ಒ

ಮೂಡಲಗಿ ಪಟ್ಟಣದ ಹಳ್ಳದಲ್ಲಿ  7 ಭ್ರೂಣಗಳ ಪತ್ತೆ ಪ್ರಕರಣ ಸಂಬಂಧ ಬೆಳಗಾವಿ ಜಿಲ್ಲಾ ವೈದ್ಯಾಧಿಕಾರಿಯವರು ವೆಂಕಟೇಶ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್​ ಅನ್ನು ಜಪ್ತಿ ಮಾಡಿದ್ದಾರೆ.

ಹಳ್ಳದಲ್ಲಿ ಭ್ರೂಣ ಎಸೆದ ಪ್ರಕರಣ: ವೆಂಕಟೇಶ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್ ಜಪ್ತಿ ಮಾಡಿದ ಡಿಎಚ್​ಒ
4 ನವಜಾತ ಶಿಶುಗಳ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಸೇರಿದ ಜನರು
TV9 Web
| Edited By: |

Updated on:Jun 25, 2022 | 12:48 PM

Share

ಬೆಳಗಾವಿ: ಮೂಡಲಗಿ ಪಟ್ಟಣದ ಹಳ್ಳದಲ್ಲಿ  7 ಭ್ರೂಣಗಳ ಪತ್ತೆ ಪ್ರಕರಣ ಸಂಬಂಧ ಕೃತ್ಯವಸಗಿದ ಆಸ್ಪತ್ರೆ ವಿರುದ್ಧ ಜಿಲ್ಲಾ ವೈದ್ಯಾಧಿಕಾರಿಯವರು ಕ್ರಮ ಕೈಗೊಂಡಿದ್ದಾರೆ. ಭ್ರೂಣಗಳನ್ನ ಎಸೆದಿದ್ದ ವೆಂಕಟೇಶ್ ಹೆರಿಗೆ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್​ ಅನ್ನು ಜಿಲ್ಲಾಧಿಕಾರಿಯವರು ಜಪ್ತಿ ಮಾಡಿದ್ದಾರೆ. 3 ವರ್ಷಗಳಿಂದ ಅಬಾಷನ್ ಮಾಡಿದ್ದ ಏಳು ಭ್ರೂಣಗಳನ್ನು ಆಸ್ಪತ್ರೆಯಲ್ಲೇ ಇಡಲಾಗಿತ್ತು. ಅದಾಗ್ಯೂ ಪೊಲೀಸರ ದಾಳಿಯ ಭೀತಿಯಿಂದ ಆಸ್ಪತ್ರೆ ಸಿಬ್ಬಂದಿ ಭ್ರೂಣಗಳನ್ನು ಜೂ.23ರಂದು 5 ಬಾಟಲ್‌ಗಳಲ್ಲಿ ತುಂಬಿಸಿ ಹಳ್ಳಕ್ಕೆ ಎಸೆದಿರುವುದು ಬೆಳಕಿಗೆ ಬಂದಿದೆ.

ಭ್ರೂಣ ಪತ್ತೆ ಹಾಗೂ ಹತ್ಯೆ ಕಾನೂನು ಪ್ರಕಾರ ಅಪರಾಧವಾಗಿದೆ. ಅದಾಗ್ಯೂ ಮೂಡಲಗಿ ಪಟ್ಟಣದಲ್ಲಿನ ಹಳ್ಳದಲ್ಲಿ ಭ್ರೂಣಗಳು ಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆಗೆ ಇಳಿದಿದ್ದಾರೆ. ಅದರಂತೆ ಪಟ್ಟಣದಲ್ಲಿರುವ ವೆಂಕಟೇಶ್ ಆಸ್ಪತ್ರೆ ಸಿಬ್ಬಂದಿಗಳನ್ನು ತನಿಖೆ ನಡೆಸಿದಾಗ ಆಸ್ಪತ್ರೆಯ ಕಾನೂನು ಬಾಹಿರ ಚಟುವಟಿಕೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಏಕಾಏಕಿ ಹಂಪ್ ಎಗರಿಸಿದ ಕೆಎಸ್​ಆರ್​ಟಿಸಿ ಬಸ್​ ಚಾಲಕ: ಕೆಳಗೆ ಬಿದ್ದು ಕಾಲು ಮುರಿದುಕೊಂಡ ಕಂಡಕ್ಟರ್

ಪೊಲೀಸರ ಪ್ರಾಥಮಿಕ ತನಿಖೆ ವೇಳೆ ವೆಂಕಟೇಶ ಆಸ್ಪತ್ರೆ ಆಡಳಿತ ಮಂಡಳಿಯು ತಮ್ಮದೇ ಆಸ್ಪತ್ರೆ ಭ್ರೂಣಗಳು ಎಂದು ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ನಿಯಮ ಗಾಳಿಗೆ ತೂರಿ ಸ್ಕ್ಯಾನಿಂಗ್ ಸೆಂಟರ್​ನಲ್ಲಿ ಲಿಂಗ ಪತ್ತೆ ಹಚ್ಚಿದ್ದಾರೆಯೇ? ಅಥವಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ವಿಚಾರ ಗೊತ್ತಿದ್ದರೂ ಸುಮ್ಮನೆ ಕುಳಿತಿದ್ರಾ ಎಂಬ ಪ್ರಶ್ನೆ ಎದ್ದಿದೆ.

ಏನಿದು ಪ್ರಕರಣ?

ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ಬಸ್ ನಿಲ್ದಾಣದ ಸಮೀಪ ಇರುವ ಹಳ್ಳದಲ್ಲಿ ನಾಲ್ಕು ನವಜಾತ ಶಿಶುಗಳ ಮೃತ ದೇಹ ಶುಕ್ರವಾರ ಪತ್ತೆಯಾಗಿತ್ತು. ಒಟ್ಟು ಐದು ಬಾಟಲ್​ಗಳಲ್ಲಿ ಏಳು ಭ್ರೂಣಗಳನನ್ನು ಹಾಕಿ ಹಳ್ಳದಲ್ಲಿ ಬಿಟ್ಟಿದ್ದರು. ಇದನ್ನು ನೋಡಿದ ಜನರು ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಭೇಡಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ: Shocking: ಬಸ್​ ನಿಲ್ದಾಣ ಬಳಿಗೆ ಹಳ್ಳದಲ್ಲಿ ತೇಲಿ ಬಂದ 4 ನವಜಾತ ಶಿಶುಗಳ ಮೃತದೇಹ, ಜಿಲ್ಲಾ ವೈದ್ಯಾಧಿಕಾರಿ ಹೇಳಿದ್ದೇನು?

Published On - 12:48 pm, Sat, 25 June 22