Shocking: ಬಸ್​ ನಿಲ್ದಾಣ ಬಳಿಗೆ ಹಳ್ಳದಲ್ಲಿ ತೇಲಿ ಬಂದ 4 ನವಜಾತ ಶಿಶುಗಳ ಮೃತದೇಹ, ಜಿಲ್ಲಾ ವೈದ್ಯಾಧಿಕಾರಿ ಹೇಳಿದ್ದೇನು?

ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಯಾರು ಎಸೆದರು? ಏಕೆ ಎಸೆದರು ಎನ್ನುವುದು ಇನ್ನೂ ನಿಗೂಢವಾಗಿದೆ. ಶಿಶುಗಳ ಮೃತದೇಹ ಕಂಡು ಹೌಹಾರಿದ ಮೂಡಲಗಿಯ ಜನ ಪೊಲೀಸರಿಗೆ ತಿಳಿಸಿದ್ದಾರೆ.

Shocking: ಬಸ್​ ನಿಲ್ದಾಣ ಬಳಿಗೆ ಹಳ್ಳದಲ್ಲಿ ತೇಲಿ ಬಂದ 4 ನವಜಾತ ಶಿಶುಗಳ ಮೃತದೇಹ, ಜಿಲ್ಲಾ ವೈದ್ಯಾಧಿಕಾರಿ ಹೇಳಿದ್ದೇನು?
ಬಸ್​ ನಿಲ್ದಾಣ ಬಳಿಗೆ ಹಳ್ಳದಲ್ಲಿ ತೇಲಿ ಬಂದ 4 ನವಜಾತ ಶಿಶುಗಳ ಮೃತದೇಹ
Follow us
| Updated By: ಸಾಧು ಶ್ರೀನಾಥ್​

Updated on:Jun 25, 2022 | 3:14 PM

ಬೆಳಗಾವಿ: ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ಬಸ್ ನಿಲ್ದಾಣದ ಸಮೀಪ (mudalagi bus stand) ಇರುವ ಹಳ್ಳದಲ್ಲಿ ನಾಲ್ಕು ನವಜಾತ ಶಿಶುಗಳ (neonatal babies) ಮೃತ ದೇಹ ಪತ್ತೆಯಾಗಿದೆ (dead bodies). ಶಿಶುಗಳನ್ನ ಡಬ್ಬದಲ್ಲಿ ಹಾಕಿ, ಹಳ್ಳದಲ್ಲಿ ಬಿಟ್ಟಿದ್ದಾರೆ ದುರುಳರು. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಯಾರು ಎಸೆದರು? ಏಕೆ ಎಸೆದರು ಎನ್ನುವುದು ಇನ್ನೂ ನಿಗೂಢವಾಗಿದೆ. ಶಿಶುಗಳ ಮೃತದೇಹ (fetus) ಕಂಡು ಹೌಹಾರಿದ ಮೂಡಲಗಿಯ ಜನ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಮೂಡಲಗಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮೃತ ಭ್ರೂಣಗಳು ಪತ್ತೆ ವಿಚಾರ: ಬೆಳಗಾವಿ ಜಿಲ್ಲಾ ವೈದ್ಯಾಧಿಕಾರಿ ಹೇಳಿದ್ದೇನು?

ಮೂಡಲಗಿ ಪಟ್ಟಣದ ಹಳ್ಳದಲ್ಲಿ ಮೃತ ಭ್ರೂಣಗಳು ಪತ್ತೆ ವಿಚಾರವಾಗಿ ಬೆಳಗಾವಿ ಜಿಲ್ಲಾ ವೈದ್ಯಾಧಿಕಾರಿ (ಡಿಎಚ್‌ಒ) ಡಾ. ಮಹೇಶ್ ಕೋಣೆ ಮಾತನಾಡಿದ್ದಾರೆ: ಪ್ರಾಥಮಿಕವಾಗಿ ನೋಡಿದ್ರೇ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆಯಾಗಿದೆ ಅಂತಾ ಹೇಳಬಹುದು. ಫೋಟೋಗಳನ್ನ ನೋಡಿದ್ರೇ ಐದು ತಿಂಗಳ ಮೇಲಿರುವ ಬೇಬಿ ಅಂತಾ ಗೊತ್ತಾಗುತ್ತೆ. ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ.

ಐದು ಬಾಟಲಿಗಳಲ್ಲಿ ಏಳು ಭ್ರೂಣಗಳು ಸಿಕ್ಕಿವೆ. ಸ್ಥಳೀಯ ವೈದ್ಯರಿಗೆ ತಿಳಿಸಿದ ಕೂಡಲೇ ಬಾಟಲ್ ಗಳನ್ನ ತಂದು ಮೂಡಲಗಿ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿಟ್ಟಿದ್ದಾರೆ. ಪುರಸಭೆ ಅಧಿಕಾರಿಗಳಿಂದ ಪೊಲೀಸ್ ಠಾಣೆಯಲ್ಲಿ ದೂರು ಕೊಡಿಸುತ್ತೇವೆ. ನಂತರ ಬೆಳಗಾವಿ ವಿಧಿವಿಜ್ಞಾನ ವಿಭಾಗಕ್ಕೆ ಶಿಫ್ಟ್​ ಮಾಡುತ್ತೇವೆ. ಜಿಲ್ಲಾಧಿಕಾರಿಗಳ ಜತೆಗೆ ಚರ್ಚೆ ಮಾಡಿ, ಒಂದು ತನಿಖೆ ತಂಡ ರಚನೆ ಮಾಡುತ್ತೇವೆ. ಇದರ ಹಿಂದೆ ಯಾರಿದ್ದಾರೆ ಅಂತಾ ತನಿಖೆ ಮಾಡಿಸುತ್ತೇವೆ. ತಪ್ಪಿತಸ್ಥರ ವಿರುದ್ಧ ಉಗ್ರ ಕ್ರಮ ಕೈಗೊಳ್ಳುತ್ತೇವೆ.

ಬೆಂಗಳೂರು: ವಿಜಯನಗರದ ಹಂಪಿ ನಗರದಲ್ಲಿ ಸರಣಿ ರಸ್ತೆ ಅಪಘಾತ

ಬೆಂಗಳೂರು: ಬೆಂಗಳೂರಿನಲ್ಲಿ ಆರ್​ ಪಿಸಿ ಲೇಔಟಿನ 87 ಬಸ್ ಸ್ಟಾಪ್ ಬಳಿ ಸರಣಿ ಅಪಘಾತ ಸಂಭವಿಸಿದೆ. ಇನ್ನೋವಾ ಕ್ರಿಸ್ಟಾ- ಕ್ವಾಲಿಸ್ ಕಾರುಗಳ ನಡುವೆ‌ ಪರಸ್ಪರ ಡಿಕ್ಕಿಯಾಗಿದೆ. ಈ ವೇಳೆ ಮತ್ತೊಂದು ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿಜಯನಗರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಜಯನಗರದ ಹಂಪಿ ನಗರದ ಹಂಪಿ ನಗರದ ಹತ್ತನೇ ಮುಖ್ಯ ರಸ್ತೆಯಲ್ಲಿ ನಡೆದಿರುವ ಈ ರಸ್ತೆ ಅಪಘಾತದಲ್ಲಿ ಇನ್ನೋವಾ ಕಾರ್ ಚಾಲಕನ ನಿಯಂತ್ರಣ ತಪ್ಪಿ ಕ್ವಾಲೀಸ್ ವೆಹಿಕಲ್ ಗೆ ಡಿಕ್ಕಿಯಾಗಿದೆ. ಕ್ವಾಲೀಸ್ ವಾಹನದಲ್ಲಿ ಒಂದೇ ಕುಟುಂಬದ ಐವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಇನ್ನೋವಾ ಕಾರ್ ಡಿಕ್ಕಿಯಾಗುತ್ತಿದ್ದಂತೆ ಕ್ವಾಲೀಸ್ ವಾಹನ ಬಟ್ಟೆ ಅಂಗಡಿಗೆ ನುಗ್ಗಿದೆ. ಕ್ವಾಲೀಸ್ ವಾಹನದಲ್ಲಿದ್ದ ಐದೂ ಜನಕ್ಕೆ ಗಾಯಗಳಾಗಿವೆ. ಗಾಯಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Also Read:

Assam Flood: ಅಸ್ಸಾಂ ಪ್ರವಾಹದಲ್ಲಿ ಸಾವಿನ ಸಂಖ್ಯೆ 108ಕ್ಕೆ ಏರಿಕೆ; ಸಿಲ್ಚಾರ್​ಗೆ ಹೆಲಿಕಾಪ್ಟರ್​ ಮೂಲಕ ಆಹಾರ, ನೀರಿನ ಪೂರೈಕೆ

Also Read:

ಗೊಂಬೆಯನ್ನು ಮದುವೆಯಾದ ಮಹಿಳೆಗೆ ಜನಿಸಿತು ಮಗು! ಇಲ್ಲಿದೆ ಕುತೂಹಲಕಾರಿ ಸಂಗತಿ

Published On - 2:28 pm, Fri, 24 June 22

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ