AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೊಂಬೆಯನ್ನು ಮದುವೆಯಾದ ಮಹಿಳೆಗೆ ಜನಿಸಿತು ಮಗು! ಇಲ್ಲಿದೆ ಕುತೂಹಲಕಾರಿ ಸಂಗತಿ

ಆಕೆಯೊಂದಿಗೆ ಯಾರೂ ಡಾನ್ಸ್ ಮಾಡಲು ಬಂದಿಲ್ಲ ಎಂದು ಗೊಂಬೆ ಮಾಡಿಕೊಟ್ಟ ತಾಯಿ! ಅದರ ಮೇಲೆ ಪ್ರೀತಿಯಾಗಿ ಮದುವೆಯಾದ ಮಗಳು, ಗೊಂಬೆಯೊಂದಿಗೆ ಜೀವನ ನಡೆಸುತ್ತಿದ್ದ ಈಕೆಗೆ ಈಗ ಮಗುವಾಗಿದೆ! ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಗೊಂಬೆಯನ್ನು ಮದುವೆಯಾದ ಮಹಿಳೆಗೆ ಜನಿಸಿತು ಮಗು! ಇಲ್ಲಿದೆ ಕುತೂಹಲಕಾರಿ ಸಂಗತಿ
ರಾಗ್​ಡಾಲ್ ಜೊತೆ ಮಹಿಳೆ ಮತ್ತು ಗೊಂಬೆ ಮಗುImage Credit source: Jam Press
TV9 Web
| Edited By: |

Updated on: Jun 24, 2022 | 1:11 PM

Share

ಆಕೆಯೊಂದಿಗೆ ಯಾರೂ ಡಾನ್ಸ್ ಮಾಡಲು ಬಂದಿಲ್ಲ ಎಂದು ಗೊಂಬೆ ಮಾಡಿಕೊಟ್ಟ ತಾಯಿ! ಅದರ ಮೇಲೆ ಪ್ರೀತಿಯಾಗಿ ಮದುವೆಯಾದ ಮಗಳು, ಗೊಂಬೆಯೊಂದಿಗೆ ಜೀವನ ನಡೆಸುತ್ತಿದ್ದ ಈಕೆಗೆ ಈಗ ಮಗುವಾಗಿದೆ! ಇದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ಅಚ್ಚರಿ ಮೂಡಿಸಿದೆ. ಅಷ್ಟಕ್ಕೂ ಗೊಂಬೆಯಿಂದ ಮಗು ಆಗಲು ಸಾಧ್ಯವೇ? ಇಲ್ಲ, ಹಾಗಿದ್ದರೆ ಆಕೆಗೆ ಹೇಗೆ ಮಗು ಆಯ್ತು? ಈ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಇದೂ ಒಂದು ರಾಷ್ಟ್ರೀಯ ಹೆದ್ದಾರಿಯೇ? ರಸ್ತೆಯುದ್ದಕ್ಕೂ 100 ಸ್ವಿಮ್ಮಿಂಗ್ ಪೂಲ್! ಅಚ್ಚರಿಯ ವಿಡಿಯೋ ವೈರಲ್!

ತನ್ನೊಂದಿಗೆ ಡಾನ್ಸ್ ಮಾಡಲು ಯಾರೂ ಬಂದಿಲ್ಲ ಎಂದು ಮೆರಿವೊನ್ ರೋಚಾ ಮೊರೇಸ್ ತಾಯಿಗೆ ದೂರು ನೀಡಿದ್ದಾಳೆ. ತನ್ನ ಮಗಳು ಒಂಟಿಯಾಗಿದ್ದಾಳೆ ಎಂದು ತಿಳಿದು ತಾಯಿ ಆಕೆಗೊಂದು ಪುರುಷ ಗೊಂಬೆಯನ್ನು ಮಾಡಿಕೊಟ್ಟಿದ್ದಾರೆ. ಇದಕ್ಕೆ ಮಾರ್ಸೆಲೊ ಎಂದು ಹೆಸರು ಇಡಲಾಗುತ್ತದೆ. ಮಾರ್ಸೆಲೊನೊಂದಿಗೆ ಆಡುತ್ತಿದ್ದ ಈಕೆಗೆ ಅವನ​ ಮೇಲೆ ಲವ್ ಆಗಿ ಮದುವೆ ಕೂಡ ಆಗುತ್ತಾಳೆ. ರಾಗ್‌ಡಾಲ್ ಅನ್ನು ಪ್ರೀತಿಸಿ ಮದುವೆಯಾಗಿದ್ದೇನೆ ಎಂದು ಹೇಳಿಕೊಳ್ಳುವ ಮೆರಿವೊನ್ ಈಗ ಮಗು ಹೊಂದಿದ್ದಾರೆ.

ಮಾರ್ಸೆಲೊ (ರಾಗ್​ಡಾಲ್) ಅವನನ್ನು ಭೇಟಿಯಾದ ದಿನದಿಂದಲೂ ಪ್ರಣಯ ಸಂಬಂಧವನ್ನು ಹೊಂದಿದ್ದ ಮೀರಿವೊನ್, 250 ಅತಿಥಿಗಳ ಸಮ್ಮುಖದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಆತನನ್ನು ವಿವಾಹವಾಗಿದ್ದಾರೆ. ಈ ಬಗ್ಗೆ ಸ್ವತಃ ಮೆರಿವೋನ್ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ಬಳಿ ಫೋರ್ ಡಾನ್ಸರ್ ಇರಲಿಲ್ಲ, ನಾನು ನೃತ್ಯಗಳಿಗೆ ಹೋಗುತ್ತೇನೆ, ಆದರೆ ಯಾರೂ ನನ್ನೊಂದಿಗೆ ಡಾನ್ಸ್ ಮಾಡುತ್ತಿರಲಿಲ್ಲ. ಇಂಥ ಸಮಯದಲ್ಲಿ ಮಾರ್ಸೆಲೊ ನನ್ನ ಜೀವನದಲ್ಲಿ ಪ್ರವೇಶಿಸಿದರು. ಈಗ ಎಲ್ಲವೂ ಅರ್ಥಪೂರ್ಣವಾಗಿದೆ ಎಂದು ಜಾಮ್ ಪ್ರೆಸ್​ಗೆ ಹೇಳಿದ್ದಾರೆ.

“ಇದು ನನಗೆ ಅದ್ಭುತವಾದ ದಿನ, ಬಹಳ ಮುಖ್ಯವಾದ ಹಾಗೂ ತುಂಬಾ ಭಾವನಾತ್ಮಕ ದಿನವಾಗಿದೆ. ಅವನು ನನ್ನ ಜೀವನದಲ್ಲಿ ನಾನು ಯಾವಾಗಲೂ ಬಯಸಿದ ವ್ಯಕ್ತಿ. ಅವನೊಂದಿಗೆ ನಡೆಸುತ್ತಿರುವ ವೈವಾಹಿಕ ಜೀವನ ಅದ್ಭುತವಾಗಿದೆ. ಅವನು ನನ್ನೊಂದಿಗೆ ಜಗಳವಾಡುವುದಿಲ್ಲ, ಅವನು ವಾದ ಮಾಡುವುದಿಲ್ಲ ಮತ್ತು ಅವನು ಅರ್ಥಮಾಡಿಕೊಳ್ಳುತ್ತಾನೆ. ಮಾರ್ಸೆಲೊ ಒಬ್ಬ ಮಹಾನ್ ಮತ್ತು ನಿಷ್ಠಾವಂತ ಪತಿ. ಅವನು ಅಂತಹ ವ್ಯಕ್ತಿ ಮತ್ತು ಎಲ್ಲಾ ಮಹಿಳೆಯರು ಅವನನ್ನು ಅಸೂಯೆಪಡುತ್ತಾರೆ” ಎಂದು ಮೀರಿವೊನ್ ಹೇಳಿದರು.

ಇದನ್ನೂ ಓದಿ: Viral Video: ಮದುವೆಯಲ್ಲಿ ಗೆಳೆಯನನ್ನೇ ಶೂಟ್ ಮಾಡಿದ ಮದುಮಗ; ಹಸೆಮಣೆ ಏರಬೇಕಾದ ವರ ಜೈಲು ಸೇರಿದ

“ಅವನು ತುಂಬಾ ಉತ್ತಮ ಗುಣಗಳನ್ನು ಹೊಂದಿದ್ದಾನೆ. ಆದರೆ ಅವನ ಏಕೈಕ ನ್ಯೂನತೆಯೆಂದರೆ ಅವನು ಸೋಮಾರಿಯಾಗಿದ್ದಾನೆ. ಅವನು ಕೆಲಸ ಮಾಡುವುದಿಲ್ಲ. ನಾನೊಬ್ಬಳೇ ಎಲ್ಲವನ್ನೂ ನಿಭಾಯಿಸುತ್ತೇನೆ ಎಂದಿದ್ದಾರೆ. ಮಗುವಿನ ಬಗ್ಗೆ ಮಾತನಾಡಿದ ಅವರು, ನಾನು ನೋವಿನ ಸಂಕೋಚನವನ್ನು ಅನುಭವಿಸಲಿಲ್ಲ. ಅವನನ್ನು 35 ನಿಮಿಷಗಳಲ್ಲಿ ಪಡೆದಿದ್ದೇನೆ ಮತ್ತು ಅವನು ಶ್ರೇಷ್ಠ” ಎಂದು ಹೇಳಿದ್ದಾರೆ.

ಅಷ್ಟಕ್ಕೂ ಈ ಮಗು ನಿಜವಾದ ಮಗುವಲ್ಲ, ತಾಯಿಯು ರಾಗ್​ಡಾಲ್ ಮಾಡಿಕೊಟ್ಟಂತೆ ಮಗುವನ್ನು ಕೂಡ ಸಿದ್ಧಪಡಿಸಲಾಗಿದೆ. ದಂಪತಿಗಳು ಮೇ 21 ರಂದು ತಮ್ಮ ಗೊಂಬೆ ಮಗು ಮಾರ್ಸೆಲಿನ್ಹೋ ಅವರನ್ನು ಸ್ವಾಗತಿಸಿದ್ದಾರೆ. ಮೈರಿವೊನ್ ಅವರು ಮಗು ಪಡೆದ ಬಗ್ಗೆ 200 ಪ್ರೇಕ್ಷಕರಿಗೆ ಲೈವ್ ಸ್ಟ್ರೀಮ್ ಮಾಡಿದ್ದಾರೆ. ಈ ಮಗು ನಕಲಿ ಎಂದು ಜನರು ಹೇಳಿದರೆ ಮೀರಿವೋನ್ ಕೋಪಗೊಳ್ಳುತ್ತಾರೆ. “ಜನರು ಇದನ್ನು ನಕಲಿ ಎಂದು ಹೇಳಿದಾಗ ಅದು ನನಗೆ ನಿಜವಾಗಿಯೂ ಅಸಮಾಧಾನ ಮತ್ತು ಕೋಪ ಉಂಟುಮಾಡುತ್ತದೆ” ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: Viral Video: ರಸ್ತೆ ಮಧ್ಯೆ ಹೊತ್ತಿ ಉರಿದ ಎಲೆಕ್ಟ್ರಿಕ್ ಕಾರು! ಇದು ಭಾರತದಲ್ಲಿ ದಾಖಲಾದ ಮೊದಲ ಪ್ರಕರಣ

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್