ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ: ದೇಶದಲ್ಲಿ ಬಿಜೆಪಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯುತ್ತಿದೆ; ಮಾಜಿ ಡಿಸಿಎಂ ಪರಮೇಶ್ವರ

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಈ ವಿಚಾರವಾಗಿ ಹೇಳಿಕೆ ನೀಡಿದ್ದು, ಇದೀಗ ಸರ್ಕಾರದ ವಿರುದ್ಧ ಅನೇಕರು ರೆಬೆಲ್ ಆಗಿದ್ದಾರೆ. ಬಂಡಾಯ ಎದ್ದವರು ಬಿಜೆಪಿ ಬೆಂಬಲಿಸೋ ವಿಶ್ವಾಸವಿದೆ ಎಂದರು.

ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ: ದೇಶದಲ್ಲಿ ಬಿಜೆಪಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯುತ್ತಿದೆ; ಮಾಜಿ ಡಿಸಿಎಂ ಪರಮೇಶ್ವರ
ಮಾಜಿ ಡಿಸಿಎಂ ಪರಮೇಶ್ವರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jun 25, 2022 | 12:05 PM

ಕಲಬುರಗಿ: ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ (Hydrama) ಮುಂದುವರೆದಿದ್ದು, ಈ ವಿಚಾರವಾಗಿ ನಗರದಲ್ಲಿ ಮಾಜಿ ಡಿಸಿಎಂ ಪರಮೇಶ್ವರ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಬಿಜೆಪಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯುತ್ತಿದೆ. ಮಹಾರಾಷ್ಟ್ರದಲ್ಲಿ ಕೂಡ ಇದೇ ಕೆಲಸ ಮಾಡುತ್ತಿದೆ ಎಂದು ಹೇಳಿದರು. ದೇಶದಲ್ಲಿ ಎಲ್ಲರು ಸೇರಿ ಈ ವ್ಯವಸ್ಥೆಗೆ ಸುಧಾರಣೆ ತರಬೇಕಿದೆ. ಒಂದು ಪಕ್ಷದಿಂದ ಗೆದ್ದು, ಮತ್ತೊಂದು ಪಕ್ಷಕ್ಕೆ ಹೋಗೋ ಬಗ್ಗೆ ಎಲ್ಲರು ಸೇರಿ ಚರ್ಚೆ ಮಾಡಬೇಕು. ಆ ಮೂಲಕ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಬೇಕು. ರಾಜ್ಯದಲ್ಲಿ ಮುಂದಿನ ಚುನಾವಣಾಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಾಗುವದು. ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಸಿಎಂ ಯಾರಾಗಬೇಕು ಅನ್ನೋದನ್ನು ಹೈ ಕಮಾಂಡ್ ನಿರ್ಧಾರ ಮಾಡುತ್ತದೆ. ನಾನು ಬಿಜೆಪಿಗೆ ಹೋಗುತ್ತೇನೆ, ಅಸಮಾಧಾನ ಗೊಂಡಿದ್ದೇನೆ ಅನ್ನೋದು ಸುಳ್ಳು ಎಂದು ಪರಮೇಶ್ವರ ಹೇಳಿದರು.

ರಾಜಕೀಯದಲ್ಲಿ ಯಾರು ಸನ್ಯಾಸಿಗಳಲ್ಲಾ: ಸಚಿವ ಮುರುಗೇಶ್ ನಿರಾಣಿ

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಈ ವಿಚಾರವಾಗಿ ಹೇಳಿಕೆ ನೀಡಿದ್ದು, ಇದೀಗ ಸರ್ಕಾರದ ವಿರುದ್ಧ ಅನೇಕರು ರೆಬೆಲ್ ಆಗಿದ್ದಾರೆ. ಬಂಡಾಯ ಎದ್ದವರು ಬಿಜೆಪಿ ಬೆಂಬಲಿಸೋ ವಿಶ್ವಾಸವಿದೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಬರುತ್ತದೆ. ಅವರಾಗಿಯೇ ಬಂದಾಗ ಬಿಜೆಪಿ ಸರ್ಕಾರ ರಚಿಸಲಾಗುತ್ತೆ ಎಂದು ಹೇಳಿದರು. ಆ ಸರ್ಕಾರದಲ್ಲಿ ಬ್ರೇಕ್ ಒಬ್ಬರ ಕೈಯಲ್ಲಿ, ಕ್ಲಚ್ ಒಬ್ಬರ ಕೈಯಲ್ಲಿ, ಸ್ಟೇರಿಂಗ್ ಒಬ್ಬರ ಕೈಯಲ್ಲಿತ್ತು. ಇದೀಗ ಅನೇಕರು ಸರ್ಕಾರದ ವಿರುದ್ಧ ಬಂಡಾಯ ವೆದ್ದಿದ್ದಾರೆ. ರಾಜಕೀಯದಲ್ಲಿ ಯಾರು ಸನ್ಯಾಸಿಗಳಲ್ಲಾ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.

16 ರೆಬೆಲ್ ಶಾಸಕರಿಗೆ ಇಂದು ನೋಟಿಸ್ ನೀಡ್ತಾರಾ ಡೆಪ್ಯುಟಿ ಸ್ಪೀಕರ್?

ಮಹಾರಾಷ್ಟ್ರದಲ್ಲಿ 16 ಶಾಸಕರ ವಿರುದ್ಧ ಡೆಪ್ಯುಟಿ ಸ್ಪೀಕರ್​ ಕ್ರಮ ಕೈಗೊಳ್ಳಲಿದ್ದಾರೆ. ಉಪಾಧ್ಯಕ್ಷ ನರಹರಿ ಜೀರವಾಲೆ 16 ಶಾಸಕರಿಗೆ ನೋಟಿಸ್ ಜಾರಿ ಮಾಡಿ, ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಕೇವಲ ಒಂದು ದಿನ ಸಮಯ ನೀಡಲಿರುವ ಡೆಪ್ಯುಟಿ ಸ್ಪೀಕರ್ ಅವರ ಉತ್ತರದ ಆಧಾರದಲ್ಲೇ ಶಾಸಕರ ಅನರ್ಹಗೊಳಿಸುವ ಸಾಧ್ಯತೆಯಿದೆ. ಕರ್ನಾಟಕದ ಮಾದರಿಯಲ್ಲೇ ಶಿವಸೇನೆಯ ಶಾಸಕರನ್ನು ಅನರ್ಹಗೊಳಿಸುವ ಸಾಧ್ಯತೆಯಿದೆ. ನಿನ್ನೆ ಮಹಾರಾಷ್ಟ್ರ (Maharashtra) ಎಜಿ ಜೊತೆಗೆ ಚರ್ಚಿಸಿರುವ ನರಹರಿ ಕಾನೂನು ತಜ್ಞರ ಜೊತೆಯೂ ಸುದೀರ್ಘ ಮಾತುಕತೆ ನಡೆಸಿದ್ದಾರೆ.

ಶಿವಸೇನೆ ಪಕ್ಷದ‌ ಮೇಲೆ ಹಿಡಿತಪಡೆದುಕೊಳ್ಳಲು ಉದ್ದವ್ ಠಾಕ್ರೆ ಕಸರತ್ತು ನಡೆಸಿದ್ದಾರೆ. ಇಂದು ಶಿವಸೇನೆ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕರೆದ ಉದ್ದವ್ ಠಾಕ್ರೆ ಈ ಮೂಲಕ ಪಕ್ಷ ತಮ್ಮಲ್ಲೇ ಉಳಿಸಿಕೊಳ್ಳಲು ಯತ್ನಿಸಲಿದ್ದಾರೆ. ಸಭೆಯಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಪಕ್ಷದ ಹೆಸರು, ಚಿನ್ಹೆ ಸೇರಿದಂತೆ ಯಾವುದನ್ನೂ ಬಿಟ್ಟಕೊಡದಂತೆ ತಂತ್ರ ರೂಪಿಸಲಾಗಿದೆ. ಇಂದು ಸಂಜೆ ಯುವ ಶಿವಸೈನಿಕರ ಜೊತೆ ಆದಿತ್ಯ ಠಾಕ್ರೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಬಂಡಾಯ ಶಾಸಕರ ವಿರುದ್ದ ಹೋರಾಟಕ್ಕೆ ತಂತ್ರ ರೂಪಿಸಲಿದ್ದಾರೆ.

ಇದನ್ನೂ ಓದಿ: Column: ವೈಶಾಲಿಯಾನ; ತಾಯ್ನಾಡಿಗೆ ಮರಳಿದ ಡಾ. ವಸುಂಧರಾ, ‘ಊರೆಂಬ ಉದರ’ದ ಪ್ರಮೀಳಾ

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ