Reporter’s Diary : ಸನ್ಯಾಸಿಯಾಗಲು ಹೊರಟವನು ಇಂದು ಐಎಎಸ್ ಅಧಿಕಾರಿಯಾಗಲು ಹೊರಟಿದ್ದಾನೆ

Impact Story : ಆತ ವಾಪಾಸು ಮನೆಗೆ ಬಂದಿದ್ದು ಶ್ರೀಗಳ ಮಾತಿನಿಂದ ಪ್ರಭಾವಿತನಾಗಿ. ಇನ್ನು ಎಲ್ಲ ಸರಿಹೋಗುವುದು ಎಂದು ತಂದೆತಾಯಿ ಭಾವಿಸಿದರು. ಆದರೆ ಆತನ ಆಧ್ಯಾತ್ಮದ ಸೆಳೆತ ಕಡಿಮೆಯಾಗಿರಲಿಲ್ಲ‌. ಆಗ ಮತ್ತೆ ಆತನನ್ನೇ ಲೈವ್​ಗೆ ಕೂರಿಸಿದೆ.

Reporter’s Diary : ಸನ್ಯಾಸಿಯಾಗಲು ಹೊರಟವನು ಇಂದು ಐಎಎಸ್ ಅಧಿಕಾರಿಯಾಗಲು ಹೊರಟಿದ್ದಾನೆ
ರಾಮ್, ಟಿವಿ9 ಕನ್ನಡ, ಮೈಸೂರು
Follow us
ಶ್ರೀದೇವಿ ಕಳಸದ
|

Updated on:Jun 25, 2022 | 12:51 PM

Reporter’s Diary: ನಾನು ಶೂಟ್ ಮುಗಿಸಿ ಬಂದಾಗ ಕಚೇರಿಯಲ್ಲಿ ಒಬ್ಬರು ನನಗಾಗಿ ಕಾದು ಕುಳಿತಿದ್ದರು. ಕುರುಚಲು ಗಡ್ಡ, ಕದಡಿದ ತಲೆಗೂದಲು. ನೋಡಿದ ತಕ್ಷಣ ಅಯ್ಯೋ ಪಾಪ ಅನಿಸುವಷ್ಟು ಮುಗ್ಧ ಭಾವ. ಸ್ಟೋರಿ ಫೈಲ್ ಮಾಡುತ್ತಲೇ, ಹೇಳಿ ಸರ್ ಅಂದೆ. ಅವರು ಏನು ಹೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಹೇಳಲು ಬಾಯಿ ತೆರೆದರು ಶಬ್ದಗಳೇ ಬರುತ್ತಿಲ್ಲ. ಸ್ವಲ್ಪ ಚೇತರಿಸಿಕೊಳ್ಳಲಿ ಆಮೇಲೆ ಮಾತನಾಡಿಸಿದರಾಯ್ತು ಎಂದು ನನ್ನ ಪಾಡಿಗೆ ಸ್ಕ್ರಿಪ್ಟ್ ಬರೆಯಲು ಆರಂಭಿಸಿದೆ. ಸ್ವಲ್ಪ ಸಮಯದ ನಂತರ ಸರ್ ಎಂದರು. ಸ್ಕ್ರಿಪ್ಟ್ ಅರ್ಧಕ್ಕೇ ನಿಲ್ಲಿಸಿ ಹೇಳಿ ಸರ್ ಅಂದೆ. ನನ್ನ ಒಬ್ಬನೇ ಮಗ ಕಾಣುತ್ತಿಲ್ಲ. ನಮಗೆ ಅವನೇ ಸರ್ವಸ್ವ. ನಾನು, ನನ್ನ ಹೆಂಡತಿ ಹಾಗೂ ಮಗ ಮೂರೇ ಜನ ಇದ್ದಿದ್ದು. ನಮಗೆ ಬೇರೆ ಯಾರೂ ಇಲ್ಲ. ಅವನು ಹೋದ ದಿನದಿಂದ ನಾವು ಏನೂ ತಿಂದಿಲ್ಲ, ನನ್ನ ಹೆಂಡತಿ ಹಾಸಿಗೆ ಹಿಡಿದಿದ್ದಾಳೆ. ಅವನಿಲ್ಲದೆ ನಾವಿಬ್ಬರೂ ಬದುಕುವುದಿಲ್ಲ ಎಂದು ಒಂದೇ ಉಸಿರಲ್ಲಿ ಹೇಳುತ್ತಾ ಜೋರಾಗಿ ಅಳತೊಡಗಿದರು. ಸರಿ ಸಮಾಧಾನದ ಮಾಡಿಕೊಳ್ಳಿ ಏನಾದರೂ ಮಾಡೋಣ ಎಂದು ಹೇಳಿ ಸಮಾಧಾನ ಮಾಡಿದೆ. ಆದರೂ ಹೆತ್ತಪ್ಪನ ನೋವು ಶಮನವಾಗಲಿಲ್ಲ. ರಾಮ್, ವಿಶೇಷ ಪ್ರತಿನಿಧಿ ಟಿವಿ9 ಮೈಸೂರು 

ಇದ್ದಕ್ಕಿದ್ದಂತೆ ನಾಪತ್ತೆ

ಅಂದು ಟಿವಿ9 ಕಚೇರಿಗೆ ಬಂದವರು ಮೈಸೂರಿನ ಕನಕಗಿರಿಯ ನಿವಾಸಿ. ಮಧ್ಯಮ ವರ್ಗದ ಕುಟುಂಬ, ಮಹಾಸ್ವಾಭಿಮಾನಿ. ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ತಮಗೆ ಏನೇ ಕೊರತೆಯಿದ್ದರೂ ಮಗನಿಗೆ ಯಾವುದಕ್ಕೂ ಕೊರತೆಯಿಲ್ಲದಂತೆ ಸಾಕಿದ್ದರು. ಮಗನೂ ಅಷ್ಟೇ ತಂದೆ, ತಾಯಿ ಅಂದರೆ ಎಲ್ಲಿಲ್ಲದ ಪ್ರೀತಿ, ಗೌರವ. ಯಾವಾಗಲೂ ತನ್ನಪಾಡಿಗೆ ತಾನಿರುತ್ತಿದ್ದ. ಆತನಿಗೆ ಸುಮಾರು 16 ವಯಸ್ಸಿರಬೇಕು ಅಷ್ಟೇ. ಯಾವುದೇ ಕೆಟ್ಟ ಅಭ್ಯಾಸಗಳಾಗಲಿ, ಸಹವಾಸಗಳಾಗಲಿ ಇರಲಿಲ್ಲ.‌ ಓದಿನಲ್ಲೂ ಮುಂದಿದ್ದ. ಈ ರೀತಿ ಇದ್ದವನು ಇದ್ದಕ್ಕಿದ್ದಂತೆ ಅದೊಂದು ದಿನ ಮನೆಯಿಂದ ನಾಪತ್ತೆಯಾಗಿ ಬಿಟ್ಟಿದ್ದ‌.

ಇದನ್ನೂ ಓದಿ
Image
Reporter’s Diary: ‘ಯಡಿಯೂರಪ್ಪನವರ ಜೈಲುಪ್ರಸಂಗ’ ಓರ್ವ ಪತ್ರಕರ್ತನಾಗಿ ಆ ದಿನ ನನಗೆ ಖುಷಿಯೂ ಇರಲಿಲ್ಲ ದುಃಖವೂ…
Image
Reporter‘s Diary : ಆ ಹಂತಕನ ಕರೆ ‘ಏಪ್ರಿಲ್ ಫೂಲ್’ ಆಗಬಾರದಿತ್ತೆ?
Image
Reporter‘s Diary: ಫೋನೋ, ನೇರಪ್ರಸಾರದ ಬಗ್ಗೆ ಮೊದಲ ಸಲ ಜನಕ್ಕೆ ಅರ್ಥವಾಯಿತು
Image
Reporter‘s Diary : ‘ಪುಸ್ತಕಗಳ ಮಧ್ಯೆ ಸಿಕ್ಕ ಆ ಸ್ಟ್ಯಾಂಪ್​ಸೈಝ್ ಫೋಟೋ ಸಂದೀಪನದ್ದೇ ಆಗಿರಲಿ’

ಟ್ರಂಕ್‌ನಲ್ಲಿತ್ತು ಸುಳಿವು

ಮಗ ಎಲ್ಲಿಗೆ ಹೋದ? ಏಕೆ ಹೋದ? ಎನ್ನುವುದು ಗೊತ್ತಾಗದೇ ಅಪ್ಪ, ಅಮ್ಮ ಕಂಗಾಲಾಗಿದ್ದರು. ಸ್ನೇಹಿತರು, ಪರಿಚಯದವರ ಮನೆಯಲ್ಲೆಲ್ಲಾ ಹುಡುಕಾಡಿದರು ಯಾವುದೇ ಪ್ರಯೋಜನವಾಗಿರಲಿಲ್ಲ. ಪೊಲೀಸ್ ಠಾಣೆಗೆ ದೂರು ನೀಡಿದರು. ಪೊಲೀಸರು ಕಾಣೆಯಾದವರ ಪಟ್ಟಿಯಲ್ಲಿ ಆತನ‌‌ ಭಾವಚಿತ್ರದ ಜೊತೆಗೆ ಪ್ರಕಟಣೆಯೊಂದನ್ನು ಪ್ರಕಟಿಸಿ ಕೈ ತೊಳೆದುಕೊಂಡಿದ್ದರು. ಕೊನೆಗೆ ದಿಕ್ಕು ಕಾಣದೆ ನನ್ನ ಸ್ನೇಹಿತರೊಬ್ಬರ ಮೂಲಕ ನಮ್ಮ ಟಿವಿ9 ಕಚೇರಿಗೆ ಬಂದಿದ್ದರು.‌ ಇನ್ನು ಕಾಣೆಯಾದವರ ಬಗ್ಗೆ ಪ್ರಕಟಣೆ ಬರುತ್ತಿದ್ದದ್ದು ದೂರದರ್ಶನದಲ್ಲಿ ಹಾಗೂ ಪತ್ರಿಕೆಗಳಲ್ಲಿ ಮಾತ್ರ. ನಮ್ಮಲ್ಲೂ ಕಾಣೆಯಾದವರ ಬಗ್ಗೆ ಹಾಕುತ್ತಿರಲಿಲ್ಲ. ಆದರೆ ಬಂದಿದ್ದವರ ದುಃಖವನ್ನು ನೋಡಲು ಆಗುತ್ತಿರಲಿಲ್ಲ. ಸರಿ ಏನಾದರೂ ಮಾಡಿದರಾಯ್ತು. ನಡಿರೀ ನಿಮ್ಮ ಮನೆಗೆ ಹೋಗೋಣ ಎಂದು ಅವರೊಂದಿಗೆ ಹೊರಟೆ.

ಹುಡುಗನ ತಾಯಿ ಹಾಸಿಗೆ ಹಿಡಿದಿದ್ದರು. ಮನೆ‌ಯಲ್ಲಿ ನೀರವ ಮೌನ. ಈ ಎಲ್ಲಾ ವಿಚಾವನ್ನು ಆಫೀಸ್‌ಗೆ ತಿಳಿಸಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ನಮ್ಮ ಕೈಲಾದ ಸಹಾಯ ಮಾಡೋಣ ಎನ್ನುವುದು ನನ್ನ ಉದ್ದೇಶವಾಗಿತ್ತು. ಆತನ ರೂಂ ತೋರಿಸುವಂತೆ ಹೇಳಿದೆ. ಆತನ ಬಟ್ಟೆ, ಪುಸ್ತಕ ಸೇರಿ ಆತನಿಗೆ ಸೇರಿದ ವಸ್ತುಗಳನ್ನು ಶೂಟ್ ಮಾಡಬೇಕಿತ್ತು. ಈ ರೀತಿ ಪರಿಶೀಲಿಸುವ ವೇಳೆ ಅಲ್ಲಿ ನಮಗೊಂದು ಟ್ರಂಕ್ ಸಿಕ್ಕಿತು. ಟ್ರಂಕ್ ಅಂದರೆ ಇಂದಿನ ಸೂಟ್‌ಕೇಸ್. ಅದನ್ನು ತೆಗೆದು ನೋಡಿದಾಗ ನಮಗೆ ಮಾತ್ರವಲ್ಲ ಅವರ ತಂದೆ ತಾಯಿಗೂ ಶಾಕ್ ಕಾದಿತ್ತು. ಆ ಟ್ರಂಕ್ ತುಂಬಾ ತುಂಬಿದ್ದು ಆಧ್ಯಾತ್ಮಕ್ಕೆ ಸಂಬಂಧಿಸಿದ ಪುಸ್ತಕಗಳು. ಪೂಜಿಸುವ ಲಿಂಗ.

ಇದನ್ನೂ ಓದಿ : Reporter’s Diary: ಕೋಲಾರದ ಗಡಿಭಾಗದಿಂದ ‘ನಂಗಾನಾಚ್’ ಎಂಬ ಭೂತವನ್ನು ಓಡಿಸಿದ ಆ ದಿನಗಳು​

ದೇವರ ಹುಡುಕಿ ಹೊರಟಿದ್ದ

ಆ ಪುಸ್ತಕಗಳು ಅಲ್ಲಿನ ವಸ್ತುಗಳನ್ನು ನೋಡಿದ ಮೇಲೆ ಅವನ ಅಪ್ಪ, ಅಮ್ಮ‌ ಶಾಕ್ ಆಗಿದ್ದರು. ಕಾರಣ ಆತ ಆ ಪುಸ್ತಕಗಳನ್ನು ಓದಿದ್ದಾಗಲಿ ಅಥವಾ ಆತನ ಬಳಿ ಇರುವುದಾಗಲಿ ಅಲ್ಲಿದ್ದ ಲಿಂಗವನ್ನು ಪೂಜೆ ಮಾಡಿದ್ದಾಗಲಿ ಎಂದೂ ಅವರು ನೋಡಿರಲಿಲ್ಲ. ಇದೆಲ್ಲ ಅವನ ಬಳಿ ಹೇಗೆ ಬಂತು ಎನ್ನುವುದು ಗೊತ್ತಿರಲಿಲ್ಲ. ಆದರೆ ಇದೆಲ್ಲ ನೋಡಿದಾಗ ಆತ ಸಂಪೂರ್ಣ ಆಧ್ಯಾತ್ಮದತ್ತ ವಾಲಿದ್ದ ಅನ್ನೋದು ಗೊತ್ತಾಗುತಿತ್ತು. ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಬುದ್ದ, ಬಸವ, ಅಶೋಕ ಹೀಗೆ ಆಧ್ಯಾತ್ಮ ಚಿಂತಕರ ಸಾಲು ಸಾಲು ಪುಸ್ತಕಗಳಿದ್ದವು. ಜೊತೆಗೊಂದು ಪತ್ರ. ಆ ಪತ್ರದಲ್ಲಿ ಆತ ನಾನು ದೇವರ ಸೇವೆ ಮಾಡಬೇಕು, ದೇವರನ್ನು ಕಾಣಬೇಕು ಅದಕ್ಕಾಗಿ ಸನ್ಯಾಸಿಯಾಗುತ್ತಿದ್ದೇನೆ. ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಬರೆದಿತ್ತು. ಅದನ್ನು ನೋಡಿದ ಅಪ್ಪ, ಅಮ್ಮನಿಗೆ ಹೋಗಿದ್ದ ಜೀವ ಬಂದಂತಾಯ್ತು. ತಮ್ಮ ಮಗನಿಗೆ ಏನು ಆಗಿಲ್ಲ ಎನ್ನುವ ಭರವಸೆ ಮೂಡಿತು. ಇನ್ನು ಇದನ್ನು ನೋಡಿದ ನನಗೆ ಒಂದು ಸ್ಟೋರಿ ಆ್ಯಂಗಲ್ ಸಿಕ್ಕಿತು. ಸ್ಟೋರಿಗಿಂತ ಹೆಚ್ಚಾಗಿ ನಂಬಿ ಬಂದವರಿಗೆ  ನಮ್ಮ‌ ಕೈಲಾದ ಸಹಾಯ ಮಾಡಬಹುದಲ್ಲ ಎನ್ನುವ ಸಮಾಧಾನ ಖುಷಿ ನೀಡಿತು.

ಸ್ಟೋರಿ ಮಾಡಿದ ಮರುದಿನವೇ ಸಿಕ್ಕ 

ಆತನ ಎಲ್ಲಾ ಪುಸ್ತಕ, ವಸ್ತುಗಳು, ಭಾವಚಿತ್ರದೊಂದಿಗೆ ತಂದೆ ತಾಯಿಯನ್ನು ಮಾತನಾಡಿಸಿ ದೇವರನ್ನು ಹುಡುಕಿ ಹೊರಟವನ ಬಗ್ಗೆ ವಿಸ್ತೃತ ವರದಿ ಪ್ರಸಾರ ಮಾಡಲಾಯಿತು. ಆ ತಾಯಿಯಂತೂ ಕಣ್ಣೀರಿಡುತ್ತಲೇ ರಾಜ್ಯದ ಜನರಲ್ಲಿ ಮನವಿ ಮಾಡಿದರು. ತಂದೆಯೂ ದುಃಖ ತೋಡಿಕೊಂಡರು. ಆ ತಾಯಿಯ ಮನವಿ ವ್ಯರ್ಥವಾಗಲಿಲ್ಲ. ಸ್ಟೋರಿ ಪ್ರಸಾರವಾದ ಮರುದಿನವೇ ತುಮಕೂರಿನ ಸಿದ್ದಗಂಗೆಯಿಂದ ನನಗೊಂದು ಕರೆ ಬಂದಿತು. ನಿಮಗೆ ಬೇಕಾದ ವ್ಯಕ್ತಿ ನಮ್ಮ ಮಠದಲ್ಲಿದ್ದಾರೆ ಎಂದು. ತಕ್ಷಣ ಹುಡುಗನ ತಂದೆ, ತಾಯಿಗೆ ವಿಚಾರ ತಿಳಿಸಿದೆ. ಆ ತಾಯಿ ತಂದೆಯ ಆನಂದಕ್ಕೆ ಪಾರವೇ ಇರಲಿಲ್ಲ. ತಕ್ಷಣ ತಂದೆ ಕಾರು ಮಾಡಿಕೊಂಡು ತುಮಕೂರು ಸಿದ್ದಗಂಗಾ ಮಠಕ್ಕೆ ಹೊರಟರು. ಅಲ್ಲಿ ಹೋದ ಮೇಲೆ ಗೊತ್ತಾಗಿದ್ದು ಅವರ ಮಗ ಇವರ ಜೊತೆ ಬರಲು ಸಿದ್ಧವಿಲ್ಲ ಎಂದು. ನಾನು ಬಂದಿರುವುದೇ ದೇವರ ಸೇವೆ ಮಾಡಲು, ಸನ್ಯಾಸಿಯಾಗಲು, ನಾನು ಮನೆಗೆ ಬರುವುದಿಲ್ಲ ಎಂದು ಪಟ್ಟುಹಿಡಿದ. ಇದರಿಂದ ತಂದೆಗೆ ದಿಕ್ಕೇ ತೋಚದಂತಾಗಿತ್ತು. ಕೊನೆಗೆ ಇವರ ಸಹಾಯಕ್ಕೆ ಬಂದವರು ನಡೆದಾಡುವ ದೇವರು ಸಿದ್ದಗಂಗೆಯ ಶಿವಕುಮಾರ ಸ್ವಾಮಿಗಳು. ದೇವರು ನಿಮ್ಮ ತಂದೆ ತಾಯಿಯಲ್ಲೇ ಇದ್ದಾರೆ. ಮೊದಲು ಅವರ ಸೇವೆ ಮಾಡು ನಿನಗೆ ದೇವರು ಸಿಗುತ್ತಾನೆ ಎಂದು ಉಪದೇಶ ಮಾಡಿದರು. ಶ್ರೀಗಳ ಮಾತು ಆತನ ಮೇಲೆ ಸಾಕಷ್ಟು ಪ್ರಭಾವ ಬೀರಿತು. ಅವರು ಹೇಳಿದ ಮೇಲೆ ಸುಮ್ಮನೆ ತಂದೆಯ ಜೊತೆ ಮೈಸೂರಿಗೆ ಬಂದ.

ಇದನ್ನೂ ಓದಿ : Reporter‘s Diary: ನೊಂದ ತಾಯಿ ಜೊತೆ ನಿಂತ ಟಿವಿ9; ತಾಯಿ ಮಡಿಲು ಸೇರಿದ ಕಂದಮ್ಮಗಳು

ಆತ ವಾಪಾಸು ಮನೆಗೆ ಬಂದಿದ್ದು ಶ್ರೀಗಳು ಹೇಳಿದ ಆ ಮಾತಿನಿಂದ ಪ್ರಭಾವಿತನಾಗಿ. ಇನ್ನು ಎಲ್ಲ ಸರಿಹೋಗುವುದು ಎಂದು ತಂದೆತಾಯಿ ಭಾವಿಸಿದರು. ಆದರೆ ಆತನ ಆಧ್ಯಾತ್ಮದ ಸೆಳೆತ ಕಡಿಮೆಯಾಗಿರಲಿಲ್ಲ‌. ಆಗ ಮತ್ತೆ ಫಲಶ್ರುತಿ ಸ್ಟೋರಿಗೆಂದು ಆತನನ್ನೇ ಲೈವ್​ಗೆ ಕೂರಿಸಿದೆ. ಆಗ ನಮ್ಮ ಆ್ಯಂಕರ್ ಆತನ ಯೋಚನಾ ಲಹರಿಯನ್ನು ಬದಲಿಸುವಲ್ಲಿ ಪ್ರಯತ್ನಿಸಿದರು. ಜೀವನದಲ್ಲಿ ಏನಾದರೂ ಸಾಧನೆ ಮಾಡಿ ಸಮಾಜಮುಖಿಯಾಗಿ ಕೆಲಸ ಮಾಡು, ಅದರಲ್ಲೇ ದೇವರನ್ನು ಕಾಣುತ್ತೀಯಾ ಎಂದು ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ಇದಾದ ನಂತರವೂ ಅವನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಸಾಕಷ್ಟು ತಿಳಿಹೇಳಿದೆ. ಆತ ಸಂಪೂರ್ಣ ಬದಲಾದ. ಅಷ್ಟೇ ಅಲ್ಲ ತಾನು ಚೆನ್ನಾಗಿ ಓದಿ ವಿದ್ಯಾಭ್ಯಾಸ ಮುಗಿಸಿ ಯುಪಿಎಸ್‌ಸಿ ಪರೀಕ್ಷೆ ಬರೆಯುತ್ತೇನೆ . ಐಎಎಸ್ ಅಧಿಕಾರಿಯಾಗುತ್ತೇನೆ ಸಮಾಜಕ್ಕೆ ತನ್ನ ಕೈಲಾದ ಸಹಾಯ ಮಾಡುತ್ತೇನೆ. ಅಪ್ಪ, ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದೂ ತಿಳಿಸಿದ. ಇದಾದ ನಂತರ ಆತ ಮತ್ತೆ ಆಧ್ಯಾತ್ಮ‌, ದೇವರ ಹುಡುಕಾಟದೆಡೆ ಮುಖ ಮಾಡಲಿಲ್ಲ. ವಿದ್ಯಾಭ್ಯಾಸ ಮುಗಿಸಿದ. ಸದ್ಯ ಯುಪಿಎಸ್‌ಸಿ ಪರೀಕ್ಷೆಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾನೆ.

ಧನ್ಯತೆ ವ್ಯಕ್ತಪಡಿಸಿದ ತಂದೆ ತಾಯಿ 

ಈ ಘಟನೆ ನಡೆದು ಸುಮಾರು 7 ರಿಂದ 8 ವರ್ಷಗಳು ಕಳೆದಿವೆ. ಈಗಲೂ ಪ್ರತಿನಿತ್ಯ ಅವನ ತಂದೆತಾಯಿಯರ ಗುಡ್ ಮಾರ್ನಿಂಗ್ ಮೆಸೇಜ್ ಬರುತ್ತದೆ. ಶೂಟ್‌ಗೆ ಹೋಗಿದ್ದಾಗ ಎಲ್ಲೇ ಸಿಕ್ಕರೂ ತಂದೆ ಓಡೋಡಿ ಬರುತ್ತಾರೆ. ಅವರ ಕಣ್ಣುಗಳು ತುಂಬಿಕೊಳ್ಳುತ್ತವೆ. ಅವರ ಬಡಾವಣೆಗೆ ಹೋದಾಗ ಸಿಕ್ಕರಂತೂ ಕಾಫಿ ಕುಡಿದೇ ಬರಬೇಕು. ಪ್ರತಿ ಬಾರಿ ಮನೆಗೆ ಹೋದಾಗಲು ಆ ತಂದೆ ತಾಯಿಯದ್ದು ಒಂದೇ ಮಾತು, ಸರ್ ನೀವು ನಮ್ಮ ಮನೆಯ ದೀಪ ಉಳಿಸಿದಿರಿ.

ಈ ಅಂಕಣದ ಎಲ್ಲಾ ಬರಹಗಳನ್ನು ಓದಲು ಕ್ಲಿಕ್ ಮಾಡಿ

ಪ್ರತಿಕ್ರಿಯೆಗಾಗಿ : tv9kannadadigital@gmail.com

Published On - 12:50 pm, Sat, 25 June 22

ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ