AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ರಾಜ್ಯದಲ್ಲಿ 25 ಕೋಟಿ ಮೌಲ್ಯದ ಡ್ರಗ್ಸ್​ ಜಪ್ತಿ! 21 ಟನ್‌ ಮಾದಕವಸ್ತು ನಾಶಪಡಿಸಲು ಪೊಲೀಸರ ಸಿದ್ಧತೆ

ಮಾದಕ ದ್ರವ್ಯ ವ್ಯಸನ ಮತ್ತು ಕಳ್ಳಸಾಗಣೆ ವಿರುದ್ಧದ ದಿನಾಚರಣೆ ಪ್ರಯುಕ್ತ ನಾಳೆ ರಾಜ್ಯ ಪೊಲೀಸ್ ಇಲಾಖೆ 21 ಟನ್‌ ಮಾದಕವಸ್ತು ನಾಶಪಡಿಸಲು ಸಿದ್ಧತೆ ನಡೆಸಿಕೊಂಡಿದೆ. ಶೇ.50ರಷ್ಟು ಡ್ರಗ್ಸ್​ ಅನ್ನು ಬೆಂಗಳೂರಿನಲ್ಲೇ ನಾಶ ಪಡಿಸಲಾಗುತ್ತಿದೆ.

Crime News: ರಾಜ್ಯದಲ್ಲಿ 25 ಕೋಟಿ ಮೌಲ್ಯದ ಡ್ರಗ್ಸ್​ ಜಪ್ತಿ! 21 ಟನ್‌ ಮಾದಕವಸ್ತು ನಾಶಪಡಿಸಲು ಪೊಲೀಸರ ಸಿದ್ಧತೆ
ಸಾಂಕೇತಿಕ ಚಿತ್ರ
TV9 Web
| Edited By: |

Updated on:Jun 25, 2022 | 1:28 PM

Share

ಬೆಂಗಳೂರು: ಮಾದಕ ದ್ರವ್ಯ ವ್ಯಸನ ಮತ್ತು ಕಳ್ಳಸಾಗಣೆ ವಿರುದ್ಧದ ದಿನಾಚರಣೆ ಪ್ರಯುಕ್ತ ನಾಳೆ (ಜೂ.26) ರಾಜ್ಯ ಪೊಲೀಸ್ ಇಲಾಖೆ ಸುಮಾರು 21 ಟನ್‌ ಮಾದಕವಸ್ತು ನಾಶಪಡಿಸಲು ಸಿದ್ಧತೆ ನಡೆಸಿಕೊಂಡಿದೆ. ಕಳೆದ ಒಂದು ವರ್ಷದಲ್ಲಿ ರಾಜ್ಯಾದ್ಯಂತ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದ 25 ಕೋಟಿ ಮೌಲ್ಯದ ಸುಮಾರು 21 ಟನ್ ಮಾದಕ ವಸ್ತುಗಳನ್ನು ನ್ಯಾಯಾಲಯದ ಅನುಮತಿಯೊಂದಿಗೆ ನಾಶ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ರಾಜ್ಯದಲ್ಲಿ ಕಳೆದ 1 ವರ್ಷದಲ್ಲಿ 25 ಕೋಟಿ ಮೌಲ್ಯದ ಸುಮಾರು 21 ಟನ್ ಡ್ರಗ್ಸ್​ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ಕೋರ್ಟ್​​ನ ಅನುಮತಿ‌ ಪಡೆದು ಮಾದಕ ದ್ರವ್ಯ ವ್ಯಸನ ಮತ್ತು ಕಳ್ಳಸಾಗಣೆ ವಿರುದ್ಧದ ದಿನವಾದ ನಾಳೆ ಜಪ್ತಿ ಮಾಡಲಾದ ಮಾಲುಗಳನ್ನು​ ನಾಶ ಮಾಡಲಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಹಳ್ಳದಲ್ಲಿ ಭ್ರೂಣ ಎಸೆದ ಪ್ರಕರಣ: ವೆಂಕಟೇಶ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್ ಜಪ್ತಿ ಮಾಡಿದ ಡಿಎಚ್​ಒ

ಡ್ರಗ್ಸ್ ಅಡ್ಡೆಯಾದ ಸಿಲಕಾನ್ ಸಿಟಿ

ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು ನಗರ ಡ್ರಗ್ಸ್ ಪೆಡ್ಲರ್​ಗಳ ಅಡ್ಡೆಯಾಗಿ ಪರಿಣಮಿಸಿದ್ದು, ಪೊಲೀಸರು ಜಪ್ತಿ ಮಾಡಿದ ಡ್ರಗ್ಸ್​ಗಳ ಪೈಕಿ ಶೇ.50ಕ್ಕೂ ಹೆಚ್ಚು ಡ್ರಗ್ಸ್ ಬೆಂಗಳೂರು ನಗರದಲ್ಲೇ ಜಪ್ತಿ ಮಾಡಲಾಗಿದೆ. ಕಳೆದ ವರ್ಷ ರಾಜ್ಯಾದ್ಯಂತ 24 ಟನ್ ಮಾದಕ ವಸ್ತು ನಾಶಪಡಿಸಲಾಗಿತ್ತು. ಈ ಬಾರಿ 21 ಟನ್​ಗಳಷ್ಟು ಗಾಂಜಾ, ಅಫೀಮು, ಹೆರಾಯಿನ್, ಕೊಕೇನ್, ಎಂಡಿಎಂಎ ಸೇರಿದಂತೆ ವಶಕ್ಕೆ ಪಡೆದ ಇದರ ಮಾದಕ ವಸ್ತುಗಳನ್ನು ನಾಶಪಡಿಸಲಾಗುತ್ತಿದೆ.

ಡ್ರಗ್ಸ್ ಜಾಲವನ್ನು ಮಟ್ಟ ಹಾಕಲು ಈಗಾಗಲೇ ಫೀಲ್ಡ್​ಗೆ ಇಳಿದ ರಾಜ್ಯ ಪೊಲೀಸ್ ಇಲಾಖೆ, ಎನ್‌ಡಿಪಿಎಸ್ ಕಾಯ್ದೆಯಡಿ ಒಟ್ಟು 8,505 ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಈ ಪೈಕಿ 5,363 ಪ್ರಕರಣಗಳ ತನಿಖೆ ಪೂರ್ಣಗೊಂಡಿದ್ದು, ಪ್ರಕರಣದಲ್ಲಿ ಅತಿಹೆಚ್ಚು ವಿದೇಶಿ ಪ್ರಜೆಗಳೇ ಆಗಿದ್ದಾರೆ ಎನ್ನಲಾಗುತ್ತಿದೆ. ಡ್ರಗ್ಸ್ ಪ್ರಕಣಗಳನ್ನು ಸರಿಯಾಗಿ ಗಮನಿಸಿದರೆ ಹೆಚ್ಚಾಗಿ ವಿದೇಶಿ ಪ್ರಜೆಗಳು ಅದರಲ್ಲೂ ವೀಸಾ ಅವಧಿ ಮುಗಿದು ರಾಜ್ಯದಲ್ಲಿ ನೆಲೆಸಿ ಡ್ರಗ್ಸ್ ದಂಧೆಯಲ್ಲಿ ತೊಡಗಿ ಪೊಲೀಸರ ಕೈಗೆ ಸಿಕ್ಕಿಬಿದ್ದವರೇ ಹೆಚ್ಚು.

ಇದನ್ನೂ ಓದಿ: ಏಕಾಏಕಿ ಹಂಪ್ ಎಗರಿಸಿದ ಕೆಎಸ್​ಆರ್​ಟಿಸಿ ಬಸ್​ ಚಾಲಕ: ಕೆಳಗೆ ಬಿದ್ದು ಕಾಲು ಮುರಿದುಕೊಂಡ ಕಂಡಕ್ಟರ್

Published On - 1:26 pm, Sat, 25 June 22

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್