ಕ್ಷುಲ್ಲಕ ಕಾರಣಕ್ಕೆ ಎರಡು ಸಮುದಾಯದವರ ಮಧ್ಯೆ ಘರ್ಷಣೆ: ಗಲಾಟೆಗೆ ಕಾರಣವಾದ ವ್ಯಕ್ತಿಯ ಸಾವು
ಉತ್ತರ ಕನ್ನಡ ಜಿಲ್ಲೆ ಸಮುದ್ರದಲ್ಲಿ ನಾಲ್ವರು ನೀಲುಪಾಲು ಪ್ರಕರಣಕ್ಕೆ ಸಂಬಂಧ ಕಿರಣ್, ತೇಜಸ್ ಶವಕ್ಕಾಗಿ ಕರಾವಳಿ ಕಾವಲುಪಡೆ, ಅಗ್ನಿಶಾಮಕ ದಳ, ಈಜು ತಜ್ಞರಿಂದ ಶೋಧ ಕಾರ್ಯ ಮುಂದುವರೆದಿದೆ.
ಬಳ್ಳಾರಿ: ಸಂಡೂರು ತಾಲೂಕಿನ ಗಂಗಾಲಪುರ ಗ್ರಾಮದಲ್ಲಿ ಎರಡು ಗುಂಪುಗಳ ಗಲಾಟೆಗೆ ಕಾರಣವಾದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಸಿಂಟೆಕ್ಸ್ ಟ್ಯಾಂಕ್ಗೆ ಕಲ್ಲು ಹೊಡೆದಿದ್ದ ಅನ್ನೋ ಕಾರಣಕ್ಕೆ ಕುಡಿದ ನಶೆಯಲ್ಲಿದ್ದ ಆಂಜನೇಯ ಮೇಲೆ ಮಾಯಪ್ಪ ಮತ್ತು ಆತನ ಮೂವರು ಮಕ್ಕಳಿಂದ ಹಲ್ಲೆ ಮಾಡಲಾಗಿತ್ತು. ರಾತ್ರಿ ಹಲ್ಲೆಗೊಳಗಾಗಿದ್ದ ಆಂಜನೇಯ ಬೆಳಗ್ಗೆ ಮೃತಪಟ್ಟಿದ್ದಾನೆ. ವಿಷಯ ತಿಳಿದ ಮತ್ತೊಂದು ಗುಂಪಿನಿಂದ ಮಾಯಪ್ಪನನ್ನು ಅರೆಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗಿದೆ. ಇದರಿಂದ 2 ಗುಂಪುಗಳಿಂದ ದೂರು, ಪ್ರತಿ ದೂರು ನೀಡಲಾಗಿದ್ದು, ತೋರಣಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ವಿದ್ಯುತ್ ಕಂಬಕ್ಕೆ ತ್ರಿಚಕ್ರ ಬೈಕ್ ಡಿಕ್ಕಿ, ಇಬ್ಬರು ದುರ್ಮರಣ
ಮೈಸೂರು: ವಿದ್ಯುತ್ ಕಂಬಕ್ಕೆ ತ್ರಿಚಕ್ರ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ ಸರಗೂರು ತಾಲೂಕಿನ ಶಾಂತಿನಿವಾಸ ಗ್ರಾಮದ ಬಳಿ ಸುಗೇವಾಡಿ ಹಾಡಿ ದೇಗುಲಕ್ಕೆ ಹೋಗಿ ಬರುತ್ತಿದ್ದಾಗ ಅಪಘಾತ ನಡೆದಿದೆ. ಕಲ್ಲಹಳ್ಳ ಹಾಡಿಯ ನಾಗಮ್ಮ, ವಿಜಯೇಂದ್ರ ಮೃತ ದುರ್ದೈವಿಗಳು. ಮತ್ತೊಬ್ಬ ಬೈಕ್ ಸವಾರ ಕಾಳ ಎಂಬಾತನಿಗೆ ಗಾಯವಾಗಿದೆ. ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಕಾಗಿದೆ.
ಕೊಳೆತ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ
ತುಮಕೂರು: ಕೊಳೆತ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆಯಾಗಿರುವಂತಹ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ತಾಳಕೆರೆ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಸುಮಾರು 40 ವರ್ಷದ ವ್ಯಕ್ತಿ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ವ್ಯಕ್ತಿ ಶವ ಪತ್ತೆಯಾಗಿದೆ. ಶವ ಕೊಳೆತ ಸ್ಥಿತಿಯಲ್ಲಿದ್ದು ಒಂದು ವಾರದ ಹಿಂದೆ ನೇಣು ಹಾಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕೊಡಿಗೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಕಿರಣ್, ತೇಜಸ್ ಮೃತದೇಹಕ್ಕಾಗಿ ಮುಂದುವರಿದ ಶೋಧ ಕಾರ್ಯ
ಕಾರವಾರ: ಉತ್ತರ ಕನ್ನಡ ಜಿಲ್ಲೆ ಸಮುದ್ರದಲ್ಲಿ ನಾಲ್ವರು ನೀಲುಪಾಲು ಪ್ರಕರಣಕ್ಕೆ ಸಂಬಂಧ ಕಿರಣ್, ತೇಜಸ್ ಶವಕ್ಕಾಗಿ ಕರಾವಳಿ ಕಾವಲುಪಡೆ, ಅಗ್ನಿಶಾಮಕ ದಳ, ಈಜು ತಜ್ಞರಿಂದ ಶೋಧ ಕಾರ್ಯ ಮುಂದುವರೆದಿದೆ. ನಿನ್ನೆ ಇಬ್ಬರು ಯುವಕರ ಮೃತ ದೇಹಗಳನ್ನ ಪತ್ತೆ ಮಾಡಲಾಗಿತ್ತು. ಉಳಿದ ಇಬ್ಬರು ಶವಗಳಿಗಾಗಿ ಮುಂದುವರಿದ ಶೋಧ ಕಾರ್ಯ ನಡೆಯುತ್ತಿದ್ದು, ಕಾಗಾಲ ಬೀಚ್ಗೆ ಬೆಂಗಳೂರು ಮೂಲದ ಯುವಕರು ಪ್ರವಾಸ ಬಂದಿದ್ದಾರೆ. ನಿನ್ನೆ ಬೀಚ್ನಲ್ಲಿ ಈಜಲು ಹೋಗಿ ನಾಲ್ವರು ನೀರುಪಾಲಾಗಿದ್ದರು. ಕುಮಟಾ ತಾಲೂಕಿನ ಕಾಗಾಲ ಬೀಚ್ನಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ;Column: ಅನುಸಂಧಾನ; ನಾನೊಂದು ಹತ್ತಿಯ ಬೊಂಬೆಯೋ ಎಂಬಂತೆ ದೇಹ ನಾನು ಬಿಕ್ಕಿದಂತೆಲ್ಲ ಕುಲುಕುತ್ತಿತ್ತು
Published On - 8:14 am, Sun, 26 June 22