ಬ್ರಿಟನ್ನಿನ ಗಣ್ಯ ಮಹಿಳೆಯೆನಿಸಿಕೊಂಡಿದ್ದ ಮ್ಯಾಕ್ಸ್​ವೆಲ್​ಳಿಗೆ ಮಕ್ಕಳ ಲೈಂಗಿಕ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಶಿಕ್ಷೆ ಮಂಗಳವಾರ ಪ್ರಕಟವಾಗಲಿದೆ

ಅಂಥ ಘೋರ ಅಪರಾಧಗಳನ್ನೆಸಗಿದರೂ ತನ್ನ ಕೃತ್ಯಗಳ ಬಗ್ಗೆ ಒಂದಿಷ್ಟೂ ಪಶ್ಚಾತ್ತಾಪ ಪಡದ ಮತ್ತು ತನ್ನ ಆಘಾತಕಾರಿ ದುಷ್ಕೃತ್ಯಗಳ ನಿಂದನೆಯನ್ನು ಬೇರೆಯವರ ಮೇಲೆ ಹೊರಿಸಿದ ಮ್ಯಾಕ್ಸ್​ವೆಲ್ ಕನಿಷ್ಟ 30 ವರ್ಷಗಳ ಸೆರೆವಾಸ ಅನುಭವಿಸಬೇಕೆನ್ನುವುದು ಪ್ರಾಸಿಕ್ಯೂಟರ್ ಗಳ ಬಯಕೆಯಾಗಿದೆ.

ಬ್ರಿಟನ್ನಿನ ಗಣ್ಯ ಮಹಿಳೆಯೆನಿಸಿಕೊಂಡಿದ್ದ ಮ್ಯಾಕ್ಸ್​ವೆಲ್​ಳಿಗೆ ಮಕ್ಕಳ ಲೈಂಗಿಕ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಶಿಕ್ಷೆ ಮಂಗಳವಾರ ಪ್ರಕಟವಾಗಲಿದೆ
ಘಿಸ್ಲೇನ್ ಮ್ಯಾಕ್ಸ್ವೆಲ್ ಮತ್ತು ಜೆಫ್ರಿ ಎಪ್ಸ್ಟೀನ್
TV9kannada Web Team

| Edited By: Arun Belly

Jun 26, 2022 | 8:07 AM

ನ್ಯೂ ಯಾರ್ಕ್: ಹಣಕಾಸು ಸಂಸ್ಥೆಯೊಂದನ್ನು ನಡೆಸುತ್ತಿದ್ದ ಭಾರಿ ಕುಳ ಜೆಫ್ರಿ ಎಪ್ಸ್ಟೀನ್ (Jeffrey Epstein) ಹೆಸರಿನ ವ್ಯಕ್ತಿಗೆ ಲೈಂಗಿಕ ತೃಷೆ ತೀರಿಸಿಕೊಳ್ಳಲು ಅಪ್ರಾಪ್ತ ಬಾಲಕಿಯರನ್ನು ಒದಗಿಸಿದ ಪ್ರಕರಣದಲ್ಲಿ ದೋಷಿಯೆಂದು ಸಾಬೀತಾಗಿರುವ ಬ್ರಿಟನಲ್ಲಿ ಸಮಾಜದ ಗಣ್ಯ ವ್ಯಕ್ತಿಯೆಂದು ಗುರುತಿಸಿಕೊಂಡಿದ್ದ ಘಿಸ್ಲೇನ್ ಮ್ಯಾಕ್ಸ್​ವೆಲ್ (Ghislaine Maxwell), ತನ್ನ ವಿರುದ್ಧ ಅರೋಪ ಮಾಡಿದ ನಾಲ್ವರು ಮಹಿಳೆಯರ ಸಾಕ್ಷ್ಯಗಳನ್ನು ಮಂಗಳವಾರದಂದು ಶಿಕ್ಷೆ ಪ್ರಕಟಿಸುವಾಗ ಗಣನೆಗೆ ತೆಗದುಕೊಳ್ಳಬಾರದೆಂದು ಅಮೇರಿಕದ ನ್ಯಾಯಾಧೀಶರೊಬ್ಬರಿಗೆ ಪತ್ರ ಬರೆದಿದ್ದಾಳೆ.

ಮ್ಯಾಕ್ಸ್​ವೆಲ್ ಪ್ರಕರಣದ ವಿಚಾರಣೆ ನಡೆಸಿದ ಜ್ಯೂರಿಯ ಮುಖ್ಯಸ್ಥರಾದ ಸರ್ಕೀಟ್ ಜಜ್ ಅಲಿಸನ್ ನೇಥನ್ ಅವರಿಗೆ ಶುಕ್ರವಾರದಂದು ಬರೆದಿರುವ ಪತ್ರದಲ್ಲಿ ಬ್ರಿಟಿಷ್ ಸೋಶಲೈಟ್ ವಕೀಲ ಬಾಬ್ಬಿ ಸ್ಟರ್ನ್ಹೀಮ್ ಅವರು, ‘ಸಂತ್ರಸ್ತರ ಮೇಲೆ ಬೀರಿದ ಪ್ರಭಾವದ ಬಗ್ಗೆ ಹೇಳಿಕೆಗಳನ್ನು’ ಪ್ರಚಾರ ಮಾಡುವುದು ಅಥವಾ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವಾಗ ಅವುಗಳನ್ನು ಪರಿಗಣಿಸುವುದು ‘ಅನಾವಶ್ಯಕ ಪೂರ್ವಾಗ್ರಹ’ ಅನಿಸುತ್ತದೆ,’ ಎಂದು ಹೇಳಿದ್ದಾರೆ.

‘ಶಿಕ್ಷೆ ವಿಧಿಸುವ ಪ್ರಕ್ರಿಯೆಯು ಶೋಷಣೆಗೊಳಗಾಗಿದ್ದೇವೆ ಎಂದು ಹೇಳಿಕೊಳ್ಳುವರಿಗೆ ಕಿರುಕುಳ ನೀಡುವಂಥ ಕ್ರಮ ಅನಿಸಿಕೊಳ್ಳಬಾರದು,’ ಎಂದು ಸ್ಟರ್ನ್ಹೀಮ್ ಬರೆದಿದ್ದಾರೆ.

ಅಪರಾಧಕ್ಕೊಳಗಾದ ಸಂತ್ರಸ್ತರ ಹಕ್ಕುಗಳ ಕಾನೂನಿನ (ಫೆಡರಲ್ ಕ್ರೈಮ್ ವಿಕ್ಟಿಮ್ಸ್ ಆ್ಯಕ್ಟ್) ಪ್ರಕಾರ ಬೇರೆ ಇಬ್ಬರು- ಆ್ಯನಿ ಫಾರ್ಮರ್ ಮತ್ತು ವರ್ಜೀನಿಯಾ ಜಿಫ್ರೀ ಸಂತ್ರಸ್ತರೆಂದು ಕರೆಸಿಕೊಳ್ಳಲು ಅರ್ಹರಾಗಿರುತ್ತಾರೆ ಎಂದು ಪ್ರಾಸಿಕ್ಯೂಟರ್ ಗಳು ಮತ್ತು ಮ್ಯಾಕ್ಸ್ವೆಲ್ ವಕೀಲರು ಒಪ್ಪಿಕೊಂಡಿದ್ದಾರೆ.

ಮ್ಯಾಕ್ಸ್​ವೆಲ್ ವಿಚಾರಣೆ ನಡೆದಾಗ ಸಾಕ್ಷ್ಯ ನುಡಿದ ಫಾರ್ಮರ್ ಮತ್ತು ದೂರುದಾರೆ ಕೇಟ್ ಅವರು ಮ್ಯಾನಹಟ್ಟನ್ ಫೆಡರಲ್ ಕೋರ್ಟ್ನಲ್ಲಿ ಮಂಗಳವಾರದಂದು ಮ್ಯಾಕ್ಸ್ವೆಲ್ ಗೆ ಶಿಕ್ಷೆ ಘೋಷಿಸುವ ಸಂದರ್ಭದಲ್ಲಿ ಹಾಜರಿರಲಿದ್ದಾರೆ ಉಳಿದವರು ಅಲ್ಲಿಗೆ ಬರದಿರಲು ನಿರ್ಧರಿಸಿದ್ದಾರೆ ಎಂದು ಪ್ರಾಸಿಕ್ಯೂಟರ್ ಗಳು ಹೇಳಿದ್ದಾರೆ.

ಲೈಂಗಿಕ ಕಳ್ಳಸಾಕಾಣಿಗೆ ಸೇರಿದಂತೆ, 60-ವರ್ಷ-ವಯಸ್ಸಿನ ಮ್ಯಾಕ್ಸ್​ವೆಲ್ ವಿರುದ್ಧ ಮಾಡಲಾಗಿದ್ದ 6 ಅರೋಪಗಳ ಪೈಕಿ 5ರಲ್ಲಿ ಆಕೆ ದೋಷಿ ಎಂದು ಕೋರ್ಟ್ ಡಿಸೆಂಬರ್ 29ರಂದು ನೀಡಿದ ತೀರ್ಪಿನಲ್ಲಿ ಪ್ರಕಟಿಸಿತ್ತು. ಅವಳು 1994 ಮತ್ತು 2004 ನಡುವೆ ಎಪ್ಸ್ಟೀನ್ ಗೆ ನಾಲ್ವರು ಬಾಲಕಿಯರನ್ನು ಒದಗಿಸಿದ ಮತ್ತು ಅವರನ್ನು ಅರೈಕೆ ಮಾಡಿದ ಆರೋದಪಲ್ಲಿ ಅವರು ದೋಷಿ ಎಂದು ಸಾಬೀತಾಗಿದೆ.

ಅಂಥ ಘೋರ ಅಪರಾಧಗಳನ್ನೆಸಗಿದರೂ ತನ್ನ ಕೃತ್ಯಗಳ ಬಗ್ಗೆ ಒಂದಿಷ್ಟೂ ಪಶ್ಚಾತ್ತಾಪ ಪಡದ ಮತ್ತು ತನ್ನ ಆಘಾತಕಾರಿ ದುಷ್ಕೃತ್ಯಗಳ ನಿಂದನೆಯನ್ನು ಬೇರೆಯವರ ಮೇಲೆ ಹೊರಿಸಿದ ಮ್ಯಾಕ್ಸ್​ವೆಲ್ ಕನಿಷ್ಟ 30 ವರ್ಷಗಳ ಸೆರೆವಾಸ ಅನುಭವಿಸಬೇಕೆನ್ನುವುದು ಪ್ರಾಸಿಕ್ಯೂಟರ್ ಗಳ ಬಯಕೆಯಾಗಿದೆ.

ಆದರೆ, ಮ್ಯಾಕ್ಸ್​​ವೆಲ್ ವಿಚಾರಣಾ ಅಧಿಕಾರಿಗಳು ಮಾಡಿರುವ ಶಿಫಾರಸ್ಸಿನಂತೆ 20 ವರ್ಷಗಳಿಗಿಂತ ಕಡಿಮೆ ಅವಧಿಯ ಶಿಕ್ಷೆ ನೀಡಬೇಕೆಂದು ಕೋರಿದ್ದಾಳೆ.

ಶುಕ್ರವಾರ ಕೋರ್ಟಿಗೆ ದಾಖಲಾದ ಕಾಗದಗಳ ಪೈಕಿ ಫಾರ್ಮರ್, ಕೇಟ್, ಜಿಫ್ರಿ ಅವರು ಮಾಕ್ಸ್ವೆಲ್ಳ ಕೃತ್ಯ ತಮ್ಮ ಮೇಲೆ ಬದುಕಿನ ಮೇಲೆ ಯಾವ ಪರಿಣಾಮ ಬೀರುತು ಎಂದು ಲಿಖಿತ ರೂಪದಲ್ಲಿ ನೀಡಿರುವ ಹೇಳಿಕೆಗಳು ಸಹ ಸೇರಿವೆ.

ನನ್ನ ಮೇಲೆ ನಡೆಯುತ್ತಿದ್ದ ಲೈಂಗಿಕ ಶೋಷಣೆಯಿಂದ ನಾನು ಕಂಗೆಟ್ಟು ಹೋಗಿದ್ದೆ. ನಾನು ಅಪ್ರಾಪ್ತೆ, ಅಮಾಯಕಿಯಾಗಿದ್ದೆ, ನನ್ನನ್ನು ನಾನು ದೂಷಿಸಿಕೊಳ್ಳುತ್ತಿದ್ದೆ. ಈ ವಿಷಕಾರಿ ಸಂಯೋಜನೆ ನನ್ನನ್ನು ಅಪಮಾನಕ್ಕೀಡು ಮಾಡಿತ್ತು; ಅವಮಾನ, ಅಸಾಯಯಕತೆಯಿಂದ ನಾನು ಕುದಿಯುತ್ತಿದ್ದೆ,’ ಎಂದು ಫಾರ್ಮರ್ ತಮ್ಮ ಹೇಳಿಕೆಯಲ್ಲಿ ಬರೆದಿದ್ದಾರೆ.

ಮ್ಯಾಕ್ಸ್​​ವೆಲ್ ಜೊತೆಯಲ್ಲಿದ್ದಾಗ ನಾನು ಸಮಚಿತ್ತ ಕಳೆದುಕೊಂಡವರಂತೆ, ನಿಶ್ಶಕ್ತ ಮತ್ತು ನಿಸ್ಸಹಾಯಕ ಬಾಲಕಿಯಾಗಿರುತ್ತಿದ್ದೆ,’ ಎಂದು ಕೇಟ್ ತನ್ನ ಅನುಭವವನ್ನು ಹೇಳಿಕೊಂಡಿದ್ದಾರೆ.

ಜಿಫ್ರೀ ನೇರವಾಗಿ ಮ್ಯಾಕ್ಸ್​​ವೆಲ್ ಉಲ್ಲೇಖಿಸಿ ಬರೆದಿದ್ದಾರೆ:

‘ನರಕದ ಬಾಗಿಲನ್ನು ತೆರೆದು ಅದರೊಳಗೆ ನನ್ನನ್ನು ದೂಡಿದೆ, ಆದರೆ ಘಿಸ್ಲೇನ್ ಒಂದು ಮಾತನ್ನು ನಿನಗೆ ಹೇಳಬಯಸುತ್ತೇನೆ. ನೀನು ನನ್ನ ಬದುಕನ್ನೇ ಕೊನೆಗಾಣಿಸಲು ಪ್ರಯತ್ನಿಸಿದೆ, ಆದರೆ ನಿನಗದು ಸಾಧ್ಯವಾಗಲಿಲ್ಲ.’

ಲೈಂಗಿಕ ಕಳ್ಳಸಾಕಾಣಿಕೆಯ ವಿಚಾರಣೆ ಎದುರಿಸುತ್ತಿದ್ದ 66-ವರ್ಷ-ವಯಸ್ಸಿನ ಎಪ್ಸ್ಟೀನ್ ಆಗಸ್ಟ್ 2019ರಲ್ಲಿ ತಾನಿದ್ದ ಜೈಲಿನ ಸೆಲ್ನಲ್ಲಿ ಹೆಣವಾಗಿ ಸಿಕ್ಕಿದ್ದ.

ಇದನ್ನೂ ಓದಿ:     ರಾಷ್ಟ್ರವ್ಯಾಪಿ ಗರ್ಭಪಾತವನ್ನು ಕಾನೂನುಬದ್ಧಗೊಳಿಸಿದ ರೋಯ್ vs ವೇಡ್ ತೀರ್ಪು ರದ್ದುಗೊಳಿಸಿದ ಅಮೆರಿಕದ ಸುಪ್ರೀಂಕೋರ್ಟ್

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada