ನೀವು ಏನು ಬೇಕಾದರೂ ಮಾಡಿಕೊಳ್ಳಿ ಆದರೆ ಬಾಳಾಸಾಹೇಬ್ ಹೆಸರು ಬಳಸಬೇಡಿ: ಉದ್ಧವ್ ಠಾಕ್ರೆ

ಈ ಮೊದಲೇ ನಾನು ಹೇಳಿದ್ದೆ ಅವರು (ಬಂಡಾಯ ಶಾಸಕರು) ಅವರು ಏನು ಬೇಕಾದರೂ ಮಾಡಿಕೊಳ್ಳಲಿ , ಅವರ ವಿಷಯದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಅವರು ತಮ್ಮದೇ ಆದ ನಿರ್ಧಾರ ತೆಗೆದುಕೊಳ್ಳಬಹುದು

ನೀವು ಏನು ಬೇಕಾದರೂ ಮಾಡಿಕೊಳ್ಳಿ ಆದರೆ ಬಾಳಾಸಾಹೇಬ್ ಹೆಸರು ಬಳಸಬೇಡಿ: ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ
TV9kannada Web Team

| Edited By: Rashmi Kallakatta

Jun 25, 2022 | 5:11 PM

ಮುಂಬೈ: ಏಕನಾಥ್ ಶಿಂಧೆ (Eknath Shinde) ನೇತೃತ್ವದ ಬಂಡಾಯ ಗುಂಪು ತಮ್ಮ ಗುಂಪಿಗೆ ‘ಶಿವಸೇನಾ ಬಾಳಾಸಾಹೇಬ್’ (Shiv Sena Balasaheb)ಎಂದು ಹೆಸರಿಡುವುದಾಗಿ ಘೋಷಿಸಿದ ನಂತರ ಯಾರೂ ಬಾಳಾಸಾಹೇಬ್ ಠಾಕ್ರೆ ಹೆಸರನ್ನು ಬಳಸಬಾರದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray)ಶನಿವಾರ ಹೇಳಿದ್ದಾರೆ. “ಕೆಲವರು ಏನಾದರೂ ಹೇಳಿ ಎಂದು ನನ್ನಲ್ಲಿ ಕೇಳುತ್ತಿದ್ದಾರೆ. ಈ ಮೊದಲೇ ನಾನು ಹೇಳಿದ್ದೆ ಅವರು (ಬಂಡಾಯ ಶಾಸಕರು) ಅವರು ಏನು ಬೇಕಾದರೂ ಮಾಡಿಕೊಳ್ಳಲಿ , ಅವರ ವಿಷಯದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಅವರು ತಮ್ಮದೇ ಆದ ನಿರ್ಧಾರ ತೆಗೆದುಕೊಳ್ಳಬಹುದು, ಆದರೆ ಯಾರೂ ಬಾಳಾಸಾಹೇಬ್ ಠಾಕ್ರೆ ಹೆಸರು ಬಳಸಬಾರದು ಎಂದು ಉದ್ಧವ್ ಹೇಳಿದ್ದಾರೆ. ಬಿಕ್ಕಟ್ಟು ಉಲ್ಬಣಗೊಳ್ಳುತ್ತಿರುವ ನಡುವೆ ಶನಿವಾರ ಸಭೆ ಸೇರಿದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯು ಯಾವುದೇ ಗುಂಪು ‘ಶಿವಸೇನಾ’ ಮತ್ತು ‘ಬಾಳಾಸಾಹೇಬ್ ಠಾಕ್ರೆ’ ಹೆಸರನ್ನು ಬಳಸಲು ಅವಕಾಶ ನೀಡದಂತೆ ನಿರ್ಣಯವನ್ನು ಅಂಗೀಕರಿಸಿತು. ಈ ವಿಷಯದಲ್ಲಿಪಕ್ಷವು ಚುನಾವಣಾ ಆಯೋಗವನ್ನು ಸಂಪರ್ಕಿಸಲಿದೆ.

ಬಾಳಾಸಾಹೇಬ್ ಅವರ ನಿಜವಾದ ಅನುಯಾಯಿಗಳು ಎಂದು ಹೇಳಿಕೊಳ್ಳುತ್ತಿರುವ ಏಕನಾಥ್ ಶಿಂಧೆ ಬಣ ಶಿವಸೇನೆ ಬಾಳಾಸಾಹೇಬ್ ಎಂದು ಹೆಸರಿಸುವ ನಿರ್ಧಾರವನ್ನು ಬಂಡಾಯ ಶಶಾಸಕ ದೀಪಕ್ ಕೇಸರ್ಕರ್ ಘೋಷಿಸಿದರು. ಒಡೆದ ಗುಂಪು ಯಾವುದೇ ಪಕ್ಷದೊಂದಿಗೆ ವಿಲೀನವಾಗುವುದಿಲ್ಲ ಎಂದು ಹೇಳಿರುವ ಅವರು, ಶಾಸಕರು ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹವನ್ನು ತಳ್ಳಿಹಾಕಿದ್ದಾರೆ.

“ಅವರು ಮತ ಕೇಳಲು ಬಯಸಿದರೆ, ಅವರು ಅದನ್ನು ತಮ್ಮ ತಂದೆಯ ಹೆಸರಿನಲ್ಲಿ ಭಿಕ್ಷೆ ಬೇಡಬೇಕು ಎಂದು ಉದ್ಧವ್ ಜಿ ಹೇಳಿದ್ದಾರೆ” ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.

ಮಾತೋಶ್ರೀಯಿಂದ ಉದ್ಧವ್ ಸಭೆಯ ಅಧ್ಯಕ್ಷತೆ ವಹಿಸಬೇಕಾಗಿತ್ತು. ಆದರೆ ಅವರು ಸಭೆಗಾಗಿ ಶನಿವಾರ ದಾದರ್‌ನಲ್ಲಿರುವ ಪಕ್ಷದ ಪ್ರಧಾನ ಕಚೇರಿಗೆ ಬಂದಿದ್ದರು. ಕಳೆದ ಎರಡು ದಿನಗಳಲ್ಲಿ ಠಾಕ್ರೆ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಹಲವಾರು ಬಾರಿ ಸಂವಾದ ನಡೆಸಿದ್ದು ತಮ್ಮ ಮತ್ತು ಅವರ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ನಾವು ಶಿವಸೇನಾ ತೊರೆಯುತ್ತಿಲ್ಲ, ಶಿಂಧೆ ಶಾಸಕಾಂಗ ಪಕ್ಷದ ನಾಯಕರಾಗಿಯೇ  ಉಳಿಯಲಿದ್ದಾರೆ

ಇದನ್ನೂ ಓದಿ

ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಶಾಸಕರು ಈಗಲೂ ಶಿವಸೇನಾ ಸದಸ್ಯರಾಗಿದ್ದು, ವಿಧಾನಸಭೆಯಲ್ಲಿ ಪಕ್ಷಕ್ಕೆ ಮೂರನೇ ಎರಡರಷ್ಟು ಬಹುಮತವಿದೆ ಎಂದು ಶಿವಸೇನಾ ಬಂಡಾಯ ಪಾಳಯದ ವಕ್ತಾರ ದೀಪಕ್ ಕೇಸರ್ಕರ್ ಹೇಳಿದ್ದಾರೆ. ಏಕನಾಥ್ ಶಿಂಧೆ ಅವರು ಶಾಸಕಾಂಗ ಪಕ್ಷದ ನಾಯಕರಾಗಿ ಉಳಿದಿದ್ದಾರೆ ಎಂದು ಕೇಸರ್ಕರ್  ಹೇಳಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada