Maharashtra Political Analysis: ಶಿವಸೇನೆ ಪಕ್ಷದ ಇಬ್ಭಾಗ ಖಚಿತ; ಏಕನಾಥ್ ಶಿಂಧೆ ಬಣದ ಜೊತೆ ಸರ್ಕಾರ ರಚನೆಗೆ ಬಿಜೆಪಿ ಕಾತರ

ಮುಂದೆ ಏಕನಾಥ್ ಶಿಂಧೆ ಬಣ ಹಾಗೂ ಉದ್ದವ್ ಠಾಕ್ರೆ ಬಣದ ಮಧ್ಯೆ ಕಾನೂನು ಹೋರಾಟ ನಡೆಯಲಿದೆ. ಶಿಂಧೆ ಬಣದ ಶಾಸಕರನ್ನು ಶಾಸಕ ಸ್ಥಾನದಿಂದಲೇ ಅನರ್ಹಗೊಳಿಸುವಂತೆ ಉದ್ದವ್ ಠಾಕ್ರೆ ಬಣ ದೂರು ನೀಡಿದೆ.

Maharashtra Political Analysis: ಶಿವಸೇನೆ ಪಕ್ಷದ ಇಬ್ಭಾಗ ಖಚಿತ; ಏಕನಾಥ್ ಶಿಂಧೆ ಬಣದ ಜೊತೆ ಸರ್ಕಾರ ರಚನೆಗೆ ಬಿಜೆಪಿ ಕಾತರ
ಶಿವಸೇನೆ ಪಕ್ಷದ ಇಬ್ಭಾಗ ಖಚಿತ; ಏಕನಾಥ್ ಶಿಂಧೆ ಬಣದ ಜೊತೆ ಸರ್ಕಾರ ರಚನೆಗೆ ಬಿಜೆಪಿ ಕಾತರ
Follow us
S Chandramohan
| Updated By: ಸಾಧು ಶ್ರೀನಾಥ್​

Updated on: Jun 25, 2022 | 6:31 PM

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಬೇಗನೇ ತೆರೆ ಬೀಳುತ್ತಿಲ್ಲ. ಆದರೆ, ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ತೆರೆಯ ಮುಂದೆ ಏಕನಾಥ್ ಶಿಂಧೆ ಮತ್ತು ಉದ್ದವ್ ಠಾಕ್ರೆ ಬಣಗಳಿವೆ. ಆದರೆ, ತೆರೆಯ ಹಿಂದಿನ ಸೂತ್ರಧಾರ ಬಿಜೆಪಿ. ಬಿಜೆಪಿಯ ಯಾವುದೇ ನಾಯಕರೂ ಕೂಡ ತೆರೆಯ ಮುಂದೆ ಬರುತ್ತಿಲ್ಲ. ನಮಗೂ ಶಿವಸೇನೆಯ ಅಂತರಿಕ ಬಿಕ್ಕಟ್ಟಿಗೂ ಯಾವುದೇ ಸಂಬಂಧ ಇಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ, ಮಹಾ ವಿಕಾಸ್ ಅಘಾಡಿ ಸರ್ಕಾರ ಪತನವಾಗುವುದನ್ನೇ ಕಾಯುತ್ತಿರುವ ಬಿಜೆಪಿ ಪಕ್ಷ, ಏಕನಾಥ್ ಶಿಂಧೆ ಬಣದ ಜೊತೆಗೆ ಸರ್ಕಾರ ರಚನೆಗೆ ಮಾನಸಿಕವಾಗಿ ಸಿದ್ದವಾಗಿದೆ.

ಮಹಾರಾಷ್ಟ್ರದಲ್ಲಿ 1966ರಲ್ಲಿ ಸ್ಥಾಪನೆಯಾದ ಶಿವಸೇನೆ ಪಕ್ಷ ಈಗ ಇಬ್ಭಾಗವಾಗುವುದು ಖಚಿತವಾಗಿದೆ. ಉದ್ದವ್ ಠಾಕ್ರೆ ನೇತೃತ್ವದ ಒಂದು ಬಣವಾದರೇ, ಏಕನಾಥ್ ಶಿಂಧೆ ನೇತೃತ್ವದ್ದು ಮತ್ತೊಂದು ಬಣವಾಗುವುದು ಖಚಿತ. ಏಕನಾಥ್ ಶಿಂಧೆ ಬಣದ ಬಂಡಾಯದಿಂದಲೇ ಮಹಾರಾಷ್ಟ್ರದಲ್ಲಿ ಕಳೆದ 5 ದಿನಗಳಿಂದ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದೆ. ಆದರೆ, ಏಕನಾಥ್ ಶಿಂಧೆ ಒಬ್ಬರೇ ಇದ್ದಕ್ಕಿದ್ದಂತೆ, ಉದ್ದವ್ ಠಾಕ್ರೆ ವಿರುದ್ದ ಬಂಡಾಯ ಸಾರಿಲ್ಲ. ಏಕನಾಥ್ ಶಿಂಧೆ ಹಿಂದೆ ಪ್ರಮುಖ ರಾಷ್ಟ್ರೀಯ ಪಕ್ಷವೊಂದು ಇದೆ. ಇದನ್ನು ಮೊನ್ನೆ ರಾತ್ರಿ ಏಕನಾಥ್ ಶಿಂಧೆಯೇ ಗುವಾಹಟಿಯ ಹೋಟೇಲ್ ನಲ್ಲಿದ್ದ ತಮ್ಮ ಬೆಂಬಲಿಗ ಶಾಸಕರಿಗೆ ಹೇಳಿದ್ದಾರೆ.

ಆದರೆ, ನಿನ್ನೆ ತಮ್ಮ ಹಿಂದೆ ಯಾವುದೇ ರಾಷ್ಟ್ರೀಯ ಪಕ್ಷ ಇಲ್ಲ ಎಂದು ಉಲ್ಟಾ ಹೊಡೆದಿದ್ದಾರೆ. ಆದರೇ, ಮೊನ್ನೆ ರಾತ್ರಿಯ ಹೇಳಿಕೆಯೇ ನಿಜ ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ. ಏಕನಾಥ್ ಶಿಂಧೆ ಬಣದ ಹಿಂದೆ ಇರೋದು ಬಿಜೆಪಿ ಪಕ್ಷ. ಮಹಾರಾಷ್ಟ್ರ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಪ್ಲ್ಯಾನಿಂಗ್ ಪ್ರಕಾರವೇ, ಏಕನಾಥ್ ಶಿಂಧೆ ಬಣ ಈಗ ಉದ್ದವ್ ಠಾಕ್ರೆ ವಿರುದ್ಧ ಬಂಡಾಯ ಎದ್ದಿದೆ. ಈಗ ಮಹಾರಾಷ್ಟ್ರದ ಬಿಜೆಪಿ ಪಕ್ಷವು ಕೂಡ ಯಾವಾಗ ಉದ್ದವ್ ಠಾಕ್ರೆ ಸರ್ಕಾರ ಉರುಳಿಬೀಳುತ್ತೋ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದೆ. ಉದ್ದವ್ ಠಾಕ್ರೆ ಸರ್ಕಾರ ಉರುಳಿ ಬೀಳುತ್ತಿದ್ದಂತೆ, ಏಕನಾಥ್ ಶಿಂಧೆ ಬಣದ ಜೊತೆಗೆ ಹೊಸ ಪರ್ಯಾಯ ಸರ್ಕಾರ ರಚಿಸಲು ಬಿಜೆಪಿ ಪಕ್ಷ ಸಿದ್ದವಾಗಿದೆ.

ಆದರೆ, ಮಹಾರಾಷ್ಟ್ರ ಬಿಜೆಪಿಯ ಯಾವೊಬ್ಬ ನಾಯಕರು ಈಗ ನೇರವಾಗಿ ಏಕನಾಥ್ ಶಿಂಧೆ ಬಣದ ಜೊತೆಗೆ ಗುರುತಿಸಿಕೊಳ್ಳಲು ಹೊರಗಡೆ ಬರುತ್ತಿಲ್ಲ. ಇದರಿಂದ ಏಕನಾಥ್ ಶಿಂಧೆ ಬಣಕ್ಕೆ ಮುಂದೆ ಕಾನೂನು ಸಮಸ್ಯೆ ಎದುರಾಗಬಹುದು ಎಂಬ ಕಾರಣದಿಂದ ಶಿಂಧೆ ಬಂಡಾಯಕ್ಕೂ ತಮಗೂ ಸಂಬಂಧವಿಲ್ಲ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ. ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ತೆರೆಯ ಹಿಂದೆ ಇದ್ದುಕೊಂಡೇ ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡಿ ಮುಗಿಸಿದ್ದಾರೆ.

ದೇವೇಂದ್ರ ಫಡ್ನವೀಸ್ ಆಪ್ತರಾದ ಬಿಜೆಪಿ ಶಾಸಕ ರವೀಂದ್ರ ಚವ್ಹಾಣ್, ಡಾಕ್ಟರ್ ಸಂಜಯ್ ಕುಟೆ ಹಾಗೂ ಯುವ ನಾಯಕ ಮೋಹಿತ್‌ ಕಂಭೋಜ್ ಏಕನಾಥ್ ಶಿಂಧೆ ಬಣದ ಶಾಸಕರಿಗೆ ಸಾರಿಗೆ, ಹೋಟೇಲ್ ವಾಸ್ತವ್ಯದ ವ್ಯವಸ್ಥೆ, ಪೊಲೀಸ್ ರಕ್ಷಣೆಯ ವ್ಯವಸ್ಥೆ ಮಾಡಿದ್ದಾರೆ. ಜೊತೆಗೆ ಗುಜರಾತ್ ಬಿಜೆಪಿ ಅಧ್ಯಕ್ಷ ಸಿ.ಆರ್‌. ಪಾಟೀಲ್ ಕೂಡ ಗಾಂಧಿನಗರದಿಂದ ಸೂರತ್ ಗೆ ದೌಡಾಯಿಸಿ ಬಂದು ಶಿಂಧೆ ಬಣದ ಶಾಸಕರಿಗೆ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದಾರೆ.

ಬಿಜೆಪಿ ಆಳ್ವಿಕೆ ಇರೋ ಗುಜರಾತ್‌ನ ಸೂರತ್ ಹಾಗೂ ಅಸ್ಸಾಂನ ಗುವಾಹಟಿ ನಗರಗಳಿಗೆ ಹೋಗಿ ಬಂಡಾಯ ಶಾಸಕರು ಪೊಲೀಸ್ ರಕ್ಷಣೆ ಪಡೆಯುವಂತೆ ಮಾಡಿದ್ದಾರೆ. ಇದರಿಂದ ಈಗ ಮಹಾರಾಷ್ಟ್ರ ಪೊಲೀಸರು ಅಸ್ಸಾಂಗೆ ಹೋಗಿ ಬಂಡಾಯ ಶಿವಸೇನೆ ನಾಯಕರನ್ನು ಪೊಲೀಸ್ ಬಲ ಬಳಸಿ ಮುಂಬೈಗೆ ಕರೆ ತರಲಾಗಲ್ಲ. ಇನ್ನೂ ಇಂದು ಮುಂಬೈನ ದೇವೇಂದ್ರ ಫಡ್ನವೀಸ್ ನಿವಾಸದಲ್ಲಿ ರಿಪಬ್ಲಿಕನ್ ಪಕ್ಷದ ರಾಮದಾಸ್ ಅಠಾವಣೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ.

ಎರಡೂ ಬಣದ ನಡುವೆ ಕಾನೂನು ಹೋರಾಟ

ಮುಂದೆ ಏಕನಾಥ್ ಶಿಂಧೆ ಬಣ ಹಾಗೂ ಉದ್ದವ್ ಠಾಕ್ರೆ ಬಣದ ಮಧ್ಯೆ ಕಾನೂನು ಹೋರಾಟ ನಡೆಯಲಿದೆ. ಶಿಂಧೆ ಬಣದ ಶಾಸಕರನ್ನು ಶಾಸಕ ಸ್ಥಾನದಿಂದಲೇ ಅನರ್ಹಗೊಳಿಸುವಂತೆ ಉದ್ದವ್ ಠಾಕ್ರೆ ಬಣ ದೂರು ನೀಡಿದೆ. ಈ ದೂರಿನ ಬಗ್ಗೆ ಡೆಪ್ಯುಟಿ ಸ್ಪೀಕರ್ ತೀರ್ಮಾನ ಕೈಗೊಳ್ಳಬೇಕು. ಡೆಪ್ಯುಟಿ ಸ್ಪೀಕರ್ ನರಹರಿ ಜೀರವಾಲೆ, ಎನ್‌ಸಿಪಿ ಪಕ್ಷದವರು. ಹೀಗಾಗಿ ಶಿಂಧೆ ಬಣದ ವಿರುದ್ಧ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಡೆಪ್ಯುಟಿ ಸ್ಪೀಕರ್ ವಿರುದ್ದ ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಲಾಗಿದೆ.

ಹೀಗಾಗಿ ಈ ಕಾನೂನು ಹೋರಾಟ ಯಾವ ಹಂತಕ್ಕೆ ಹೋಗುತ್ತೆ, ಯಾವಾಗ ಉದ್ದವ್ ಠಾಕ್ರೆ ಸರ್ಕಾರ ಪತನವಾಗುತ್ತೆ ಎಂಬುದನ್ನು ಬಿಜೆಪಿ ಪಕ್ಷ ಕಾದು ನೋಡುತ್ತಿದೆ. ಉದ್ದವ್ ಠಾಕ್ರೆ ಸರ್ಕಾರ ಪತನವಾದ ಬಳಿಕ ಬಿಜೆಪಿಯ 106 ಶಾಸಕರ ಜೊತೆಗೆ ಶಿಂಧೆ ಬಣದ 50 ಶಾಸಕರು ಸೇರಿದಾಗ, ಒಟ್ಟು ಶಾಸಕರ ಸಂಖ್ಯಾಬಲ 156 ಕ್ಕೇರಿಕೆಯಾಗುತ್ತೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ-ಏಕನಾಥ್ ಶಿಂಧೆ ಬಣಕ್ಕೆ ಸ್ಪಷ್ಟ ಬಹುಮತ ಇರಲಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಈಗ ಏಕನಾಥ್ ಶಿಂಧೆ ಸಂವಿಧಾನದ 10ನೇ ಷೆಡ್ಯೂಲ್ ನಡಿ ಪ್ರತೇಕ ಬಣವಾಗಿ ಗುರುತಿಸಿಕೊಳ್ಳಲು ಅವಕಾಶ ಇದೆ.

ಪಕ್ಷದ ಮೂರನೇ ಎರಡರಷ್ಟು ಶಾಸಕರು ಪ್ರತೇಕ ಬಣವಾಗಿ ಇಲ್ಲವೇ ಮತ್ತೊಂದು ಪಕ್ಷದೊಂದಿಗೆ ತಮ್ಮ ಬಣವನ್ನು ವಿಲೀನ ಮಾಡಿದಾಗ, ಶಿಂಧೆ ಬಣದ ಶಾಸಕರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಆಗಲ್ಲ. ಈ ಅಸ್ತ್ರವನ್ನೇ ಈಗ ಏಕನಾಥ್ ಶಿಂಧೆ ಬಣ ಪ್ರಯೋಗಿಸುತ್ತಿದೆ. ಆದರೇ, ಡೆಪ್ಯುಟಿ ಸ್ಪೀಕರ್ ರಿಂದ ಶಾಸಕ ಸ್ಥಾನದಿಂದಲೇ ಅನರ್ಹಗೊಂಡರೆ, ಹೈಕೋರ್ಟ್, ಸುಪ್ರೀಂಕೋರ್ಟ್ ವರೆಗೂ ಕಾನೂನು ಹೋರಾಟ ನಡೆಸಿ ಗೆದ್ದು ಬರಬೇಕಾಗುತ್ತೆ. ಬಂಡಾಯ ಶಾಸಕರನ್ನು ಕಾನೂನು ಕುಣಿಕೆಯಲ್ಲಿ ಸಿಲುಕಿಸಿ ನರಳುವಂತೆ ಮಾಡುವ ಪ್ಲ್ಯಾನ್ ಅನ್ನು ಉದ್ದವ್ ಠಾಕ್ರೆ ಬಣ ಹಾಕಿಕೊಂಡಿದೆ. ಸುಲಭವಾಗಿ ಬಿಜೆಪಿ-ಶಿಂಧೆ ಬಣಕ್ಕೆ ರಾಜ್ಯದ ಅಧಿಕಾರದ ಗದ್ದುಗೆ ಸಿಗದಂತೆ ತಡೆಯುವ ಮೂಡ್ ನಲ್ಲಿ ಉದ್ದವ್ ಠಾಕ್ರೆ ಬಣ ಇದೆ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್