AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SSLC Supplementary Exam 2022: ಜೂನ್​ 27ರಿಂದ ಜುಲೈ 4ವರೆಗೆ ಎಸ್​​ಎಸ್​ಎಲ್​ಸಿ ಪೂರಕ ಪರೀಕ್ಷೆ ಆರಂಭ

ನಾಳೆಯಿಂದ ಜುಲೈ 4ವರೆಗೆ ಎಸ್​​ಎಸ್​ಎಲ್​ಸಿ (SSLC) ಪೂರಕ ಪರೀಕ್ಷೆ ನಡೆಯಲಿದ್ದು, ಈ ಬಾರಿ 94,649 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ.

SSLC Supplementary Exam 2022: ಜೂನ್​ 27ರಿಂದ ಜುಲೈ 4ವರೆಗೆ ಎಸ್​​ಎಸ್​ಎಲ್​ಸಿ ಪೂರಕ ಪರೀಕ್ಷೆ ಆರಂಭ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jun 26, 2022 | 3:13 PM

ಬೆಂಗಳೂರು: ನಾಳೆಯಿಂದ (ಜೂನ್​ 27) ಜುಲೈ 4ವರೆಗೆ ಎಸ್​​ಎಸ್​ಎಲ್​ಸಿ (SSLC) ಪೂರಕ ಪರೀಕ್ಷೆ ನಡೆಯಲಿದ್ದು, ಈ ಬಾರಿ 94,649 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. 423 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನ ಅಳವಡಿಸಲಾಗಿದೆ. ಈ ಬಾರಿ ರಾಜ್ಯದಲ್ಲಿ 8,20,900 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. 8,07,206 ವಿದ್ಯಾರ್ಥಿಗಳು ಹಾಜರಾಗಿದ್ದರು. 20,406 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು. ರಿಪೀಟರ್ಸ್​ ಸೇರಿದಂತೆ 8,53,436 ಒಟ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 625ಕ್ಕೆ 625 ಅಂಕಗಳನ್ನು ಒಟ್ಟು 145 ಮಕ್ಕಳು ಪಡೆದಿದ್ದರು.

ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಕೊರೊನಾ ಪಿಡುಗು ವ್ಯಾಪಿಸಿದ್ದ ಕಾರಣದಿಂದಾಗಿ ಪೂರ್ಣ ಪ್ರಮಾಣದಲ್ಲಿ ಪರೀಕ್ಷೆ ನಡೆದಿರಲಿಲ್ಲ. ಈ ವರ್ಷ ಪರೀಕ್ಷೆಗೆ ಹಾಜರಾಗಿದ್ದ ಮಕ್ಕಳ ಪೈಕಿ ಶೇ 85.63ರಷ್ಟು ಮಕ್ಕಳು ತೇರ್ಗಡೆಯಾಗಿದ್ದಾರೆ. ಶೇ 90.29 ಬಾಲಕಿಯರು ಮತ್ತು ಶೇ 81.03ರಷ್ಟು ಬಾಲಕರು ತೇರ್ಗಡೆಯಾಗಿದ್ದಾರೆ. ಗ್ರೇಸ್ ಅಂಕಗಳ ಮೂಲಕ 40,061 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 145 ವಿದ್ಯಾರ್ಥಿಗಳು ಔಟ್​ ಆಫ್ ಔಟ್ ಅಂದರೆ, 625ಕ್ಕೆ 625 ಅಂಕ ತೆಗೆದಿದ್ದರು.

SSLC ಪೂರಕ ಪರೀಕ್ಷೆಯ ವೇಳಾಪಟ್ಟಿ:

ಜೂನ್ 27-ವಿಜ್ಞಾನ, ರಾಜ್ಯಶಾಸ್ತ್ರ ಕರ್ನಾಟಕ ಸಂಗೀತ/ಹಿಂದೂಸ್ಥಾನಿ ಸಂಗೀತ

ಜೂನ್ 28-ಪ್ರಥಮ ಭಾಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ಉರ್ದು, ಇಂಗ್ಲಿಷ್, ಸಂಸ್ಕೃತ)

ಜೂನ್ 29-ದ್ವಿತೀಯ ಭಾಷೆ(ಇಂಗ್ಲಿಷ್-ಕನ್ನಡ)

ಜೂನ್ 30-ಸಮಾಜವಿಜ್ಞಾನ

ಜುಲೈ 1- ತೃತೀಯ ಭಾಷೆ (ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು) ಎನ್ ಎಸ್, ಕ್ಯೂ, ಎಫ್ ಪರೀಕ್ಷಾ ವಿಷಯಗಳು (ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟ್ ಅಂಡ್ ವೆಲ್ ನೆಸ್)

ಜುಲೈ -2 ಎಲಿಮೆಂಟ್‌ಆಫ್ ಮೆಕಾನಿಕಲ್ ಮತ್ತು ಎಲೆಕ್ಟ್ರಿಲ್ ಇಂಜಿನಿಯರಿಂಗ್-2, ಇಂಜಿನಿಯರಿಂಗ್ ಗ್ರಾಫಿಕ್ಸ್-2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ

ಇದನ್ನೂ ಓದಿ: TV9 Education Summit 2022, Day 3 Live: ಟಿವಿ9 ಪ್ರಸ್ತುತ ಪಡಿಸುತ್ತಿರುವ ಅತೀ ದೊಡ್ಡ ಎಜ್ಯುಕೇಷನ್​​​ ಎಕ್ಸ್​​ಪೋಗೆ ಇಂದು ಕೊನೆಯ ದಿನ

Published On - 10:59 am, Sun, 26 June 22

‘ದರ್ಶನ್ ಎದುರು ನಾನು ವಿಲನ್, ನಟಿಸುವಾಗ ನಾನೇ ನಡುಗುತ್ತಿದ್ದೆ’
‘ದರ್ಶನ್ ಎದುರು ನಾನು ವಿಲನ್, ನಟಿಸುವಾಗ ನಾನೇ ನಡುಗುತ್ತಿದ್ದೆ’
Live: ಪಾಕಿಸ್ತಾನ ಮೇಲಿನ ದಾಳಿ ಬಗ್ಗೆ ವಿದೇಶಾಂಗ ಇಲಾಖೆ ಪತ್ರಿಕಾಗೋಷ್ಠಿ
Live: ಪಾಕಿಸ್ತಾನ ಮೇಲಿನ ದಾಳಿ ಬಗ್ಗೆ ವಿದೇಶಾಂಗ ಇಲಾಖೆ ಪತ್ರಿಕಾಗೋಷ್ಠಿ
ಪಾಕ್ ಮೇಲೆ ಆಕ್ರಮಣಕ್ಕೆ ಪ್ರಧಾನಿ ಮೋದಿ 10 ವರ್ಷಗಳಿಂದ ತಯಾರಿ: ಸೂಲಿಬೆಲೆ
ಪಾಕ್ ಮೇಲೆ ಆಕ್ರಮಣಕ್ಕೆ ಪ್ರಧಾನಿ ಮೋದಿ 10 ವರ್ಷಗಳಿಂದ ತಯಾರಿ: ಸೂಲಿಬೆಲೆ
ತಮ್ಮ ದೇಶದ ಪ್ರಧಾನಿಯನ್ನು ರಣಹೇಡಿ ಎಂದು ಪಾಕಿಸ್ತಾನದ ಸಂಸದ
ತಮ್ಮ ದೇಶದ ಪ್ರಧಾನಿಯನ್ನು ರಣಹೇಡಿ ಎಂದು ಪಾಕಿಸ್ತಾನದ ಸಂಸದ
ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಇದೊಂದೇ ಮಾರ್ಗ ಇರೋದು: ಮಹಾದೇವಸ್ವಾಮಿ
ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಇದೊಂದೇ ಮಾರ್ಗ ಇರೋದು: ಮಹಾದೇವಸ್ವಾಮಿ
ಭಾರತ-ಪಾಕಿಸ್ತಾನದ ದಾಳಿ ಕೊನೆಗೊಳಿಸಲು ಮೆಹಬೂಬಾ ಮುಫ್ತಿ ಮನವಿ
ಭಾರತ-ಪಾಕಿಸ್ತಾನದ ದಾಳಿ ಕೊನೆಗೊಳಿಸಲು ಮೆಹಬೂಬಾ ಮುಫ್ತಿ ಮನವಿ
ಅಮಿತ್ ಶಾ ಬಿಎಸ್​ಎಫ್, ಸಿಅರ್​​ಪಿಎಫ್ ಡಿಜಿಗಳ ಜೊತೆ ನಡೆಸಲಿದ್ದಾರೆ ಸಭೆ
ಅಮಿತ್ ಶಾ ಬಿಎಸ್​ಎಫ್, ಸಿಅರ್​​ಪಿಎಫ್ ಡಿಜಿಗಳ ಜೊತೆ ನಡೆಸಲಿದ್ದಾರೆ ಸಭೆ
ಪಾಕ್​ ದಾಳಿಯ ಸಂತ್ರಸ್ತರಿಗೆ ಧೈರ್ಯ ತುಂಬಿದ ಸಿಎಂ ಒಮರ್
ಪಾಕ್​ ದಾಳಿಯ ಸಂತ್ರಸ್ತರಿಗೆ ಧೈರ್ಯ ತುಂಬಿದ ಸಿಎಂ ಒಮರ್
ಹಾರಂಗಿ ಜಲಾಶಯಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ
ಹಾರಂಗಿ ಜಲಾಶಯಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ
ಆಪರೇಷನ್ ಸಿಂಧೂರ್​ ಕಾರ್ಯಾಚರಣೆ ಬೆಂಬಲಿಸಿ ಕಾಂಗ್ರೆಸ್​ ತಿರಂಗಾ ಯಾತ್ರೆ
ಆಪರೇಷನ್ ಸಿಂಧೂರ್​ ಕಾರ್ಯಾಚರಣೆ ಬೆಂಬಲಿಸಿ ಕಾಂಗ್ರೆಸ್​ ತಿರಂಗಾ ಯಾತ್ರೆ