ಠೇವಣಿದಾರರಿಗೆ ಕೋಟ್ಯಂತರ ರೂ ವಂಚನೆ: ಹನುಮಂತ ನಗರ ಪೊಲೀಸರಿಂದ ಇಂಡಿಯನ್ ಬ್ಯಾಂಕ್‌ ಮ್ಯಾನೇಜರ್‌ ಹರಿಶಂಕರ್ ಬಂಧನ

ಠೇವಣಿದಾರರಿಗೆ ಕೋಟ್ಯಂತರ ರೂ ವಂಚನೆ: ಹನುಮಂತ ನಗರ ಪೊಲೀಸರಿಂದ ಇಂಡಿಯನ್ ಬ್ಯಾಂಕ್‌ ಮ್ಯಾನೇಜರ್‌ ಹರಿಶಂಕರ್ ಬಂಧನ
ಪ್ರಾತಿನಿಧಿಕ ಚಿತ್ರ

ವಿಚಾರಣೆ ವೇಳೆ ಡೇಟಿಂಗ್ ಆ್ಯಪ್ ನಲ್ಲಿ ಪರಿಚಯವಾದ ಯುವತಿಗೆ ಹಣ ಪಾವತಿಸಿರುವುದಾಗಿ ಹರಿಶಂಕರ್ ಹೇಳಿಕೆ ನೀಡಿದ್ದಾರೆ. ಆರೋಪಿಯ ಅಸ್ಪಷ್ಟ ಹೇಳಿಕೆ ಹಿನ್ನಲೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. 5.70 ಕೋಟಿ ಹಣ ಯುವತಿಗೆ ಕೊಟ್ಟಿರದೆ ಸ್ವಂತಕ್ಕೆ ಬಳಸಿಕೊಂಡಿರೋ ಶಂಕೆ ವ್ಯಕ್ತವಾಗಿದೆ.

TV9kannada Web Team

| Edited By: Ayesha Banu

Jun 23, 2022 | 11:10 PM

ಬೆಂಗಳೂರು: ಠೇವಣಿದಾರರಿಗೆ 5.7 ಕೋಟಿ ರೂ. ವಂಚಿಸಿರುವ ಆರೋಪ ಹಿನ್ನೆಲೆ ಬೆಂಗಳೂರಿನ ಹನುಮಂತನಗರ ಶಾಖೆಯ ಇಂಡಿಯನ್ ಬ್ಯಾಂಕ್‌ನ ಮ್ಯಾನೇಜರ್‌(Indian Bank Manager) ಹರಿಶಂಕರ್ನನ್ನು ಪೊಲೀಸರು ಬಂಧಿಸಿದ್ದಾರೆ. ಎಫ್‌ಡಿ ಇಟ್ಟಿದ್ದ 5.7 ಕೋಟಿ ಮೇಲೆ ಅಸಿಸ್ಟೆಂಟ್ ಮ್ಯಾನೇಜರ್ ಕೌಸಲ್ಯಾ, ಕ್ಲರ್ಕ್ ಮುನಿರಾಜು ಮೂಲಕ ಲೋನ್ ಪಡೆದು ಪಶ್ಚಿಮ ಬಂಗಾಳದ 28 ಖಾತೆ, ರಾಜ್ಯದ 2 ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿ ವಂಚನೆ ಮಾಡಿದ್ದಾರೆ. ಬ್ಯಾಂಕ್‌ನ ಆಂತರಿಕ ಪರಿಶೀಲನೆ ವೇಳೆ ವಂಚನೆ ಬಯಲಾಗಿದೆ. ಇಂಡಿಯನ್ ಬ್ಯಾಂಕ್ ಜೋನಲ್ ಮ್ಯಾನೇಜರ್ ದೂರು ಆಧರಿಸಿ ಹನುಮಂತ ನಗರ ಪೊಲೀಸರು ಮ್ಯಾನೇಜರ್ ಹರಿಶಂಕರ್ನನ್ನು ಬಂಧಿಸಿದ್ದಾರೆ.

ಡೇಟಿಂಗ್ ಆ್ಯಪ್ ನಲ್ಲಿ ಪರಿಚಯವಾದ ಯುವತಿಗೆ ಕೊಟ್ರಾ ಹಣ? ಮೇ 13 -19 ರ ವರೆಗೆ ಠೇವಣಿದಾರೆ ಅನಿತಾರ ಎಫ್.ಡಿ‌ ಮೇಲೆ ಆರೋಪಿ ಹರಿಶಂಕರ್, ಸುಮಾರು 5.70ಕೋಟಿಯಷ್ಟು ಲೋನ್ ಪಡೆದಿದ್ದಾರೆ. ಪ.ಬಂಗಾಳದ 28 ಬ್ಯಾಂಕ್ ಖಾತೆ, ಕರ್ನಾಟಕದ 2 ಬ್ಯಾಂಕ್ ಖಾತೆಗಳಿಗೂ ಹಣ ಜಮಾ ಮಾಡಿದ್ದಾರೆ. ಬ್ಯಾಂಕಿನ ಆಂತರಿಕ ಪರಿಶೀಲನೆ ವೇಳೆ ವಂಚನೆ ಬಯಲಾಗಿದೆ. ಈ ಸಂಬಂಧ ಇಂಡಿಯನ್ ಬ್ಯಾಂಕ್ ಜೋನಲ್ ಮ್ಯಾನೇಜರ್ ಡಿ.ಎಸ್.ಮೂರ್ತಿ ಹನುಮಂತನಗರ ಠಾಣೆಗೆ ದೂರು ನೀಡಿದ್ದು ಪೊಲೀಸರು ಬಂಧಿಸಿದ್ದಾರೆ. ಇನ್ನು ವಿಚಾರಣೆ ವೇಳೆ ಡೇಟಿಂಗ್ ಆ್ಯಪ್ ನಲ್ಲಿ ಪರಿಚಯವಾದ ಯುವತಿಗೆ ಹಣ ಪಾವತಿಸಿರುವುದಾಗಿ ಹರಿಶಂಕರ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ‘ವಿಕ್ರಾಂತ್ ರೋಣ’ ಸಿನಿಮಾ ಕಲೆಕ್ಷನ್​ ಎಷ್ಟಾಗಲಿದೆ? ‘ಕಿಚ್ಚ’ ಸುದೀಪ್ ಕೊಟ್ರು ಲೆಕ್ಕಾಚಾರ

ಡೇಟಿಂಗ್ ಆ್ಯಪ್ ನಲ್ಲಿ ಯುವತಿ ಸಂಪರ್ಕ ಬೆಳೆದಿದ್ದು, ಅಷ್ಟೂ ಹಣ ಅದೇ ಯುವತಿಗೆ ನೀಡಿರೋದಾಗಿ ಹೇಳಿದ್ದಾರೆ. ಆರೋಪಿಯ ಅಸ್ಪಷ್ಟ ಹೇಳಿಕೆ ಹಿನ್ನಲೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. 5.70 ಕೋಟಿ ಹಣ ಯುವತಿಗೆ ಕೊಟ್ಟಿರದೆ ಸ್ವಂತಕ್ಕೆ ಬಳಸಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ಹಣ ವರ್ಗಾವಣೆಯಾದ ಖಾತೆಗಳ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸ್ತಿದ್ದಾರೆ. ಬಂಧಿತನನ್ನ 10 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದು ವಿಚಾರಣೆ ಮುಂದುವರೆದಿದೆ.

ಮರಿಯಮ್ಮನಹಳ್ಳಿ ಪೊಲೀಸರ ಕಾರ್ಯಾಚರಣೆ, ಕುಖ್ಯಾತ ಅಂತರಾಜ್ಯ ಕಳ್ಳರ ಬಂಧನ ವಿಜಯನಗರ: ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಕುಖ್ಯಾತ ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರದ ಖೇಡ್ ಜಿಲ್ಲೆಯ ವಿಜಯ್ ಬಲಭೀಮ್, ಗಣೇಶ್ ಪಾಂಡುರಂಗ ನಕಾತೆ, ಪ್ರಶಾಂತ್ ಪಾಂಡುರಂಗ ನಕಾತೆ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 30 ಲಕ್ಷ ರೂಪಾಯಿ ಬೆಲೆಬಾಳುವ ಎರಡು ಟಿಪ್ಪರ್ ವಶಕ್ಕೆ ಪಡೆಯಲಾಗಿದೆ. ಜೂನ್ 19 ರಂದು ಹೊಸಪೇಟೆ ತಾಲೂಕಿನ ಸ್ಮಯೋರ್ ಕಾರ್ಖಾನೆಯ ದಾಬಾ ಬಳಿ ನಿಂತಿದ್ದ ಲಾರಿ ಕಳ್ಳತನ ಮಾಡಿದ್ದ ಕಳ್ಳರನ್ನು 5 ದಿನದಲ್ಲೇ ಪೊಲೀಸರು ಪತ್ತೆಹಚ್ಚಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada