AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವಿಮಾನದಲ್ಲಿ ಎಸಿ ಸ್ಥಗಿತಗೊಂಡು ಪ್ರಯಾಕರು ಸುಸ್ತೋ ಸುಸ್ತು! ವಿಮಾನ ಬಹಿಷ್ಕಾರದ ಎಚ್ಚರಿಕೆ ನೀಡಿದ ಪ್ರಯಾಣಿಕರು

ಗೋ ಫಸ್ಟ್ ಆಯ್ತು, ಇದೀಗ ಗೋ ಏರ್​ ವಿಮಾನದಲ್ಲಿ ಎಸಿ ಸಮಸ್ಯೆ. ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶಗೊಂಡ ಪ್ರಯಾಣಿಕರು, ವಿಮಾನದಲ್ಲೇ ವಿಡಿಯೋ ಮಾಡಿದ ಮಹಿಳೆಯೊಬ್ಬರಿಂದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇಲ್ಲಿದೆ ಆ ವಿಡಿಯೋ.

Viral Video: ವಿಮಾನದಲ್ಲಿ ಎಸಿ ಸ್ಥಗಿತಗೊಂಡು ಪ್ರಯಾಕರು ಸುಸ್ತೋ ಸುಸ್ತು! ವಿಮಾನ ಬಹಿಷ್ಕಾರದ ಎಚ್ಚರಿಕೆ ನೀಡಿದ ಪ್ರಯಾಣಿಕರು
ಗೋ ಏರ್ ವಿಮಾನದಲ್ಲಿ ಎಸಿ ಸ್ಥಗಿತಗೊಂಡು ಪರದಾಡಿದ ಪ್ರಯಾಣಿಕರು
TV9 Web
| Updated By: Rakesh Nayak Manchi|

Updated on:Jun 26, 2022 | 11:00 AM

Share

ಇತ್ತೀಚೆಗೆ ಗೋ ಫಸ್ಟ್ ವಿಮಾಣ (Go First flight)ನಲ್ಲಿ ಎಸಿ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ ಬೆನ್ನಲ್ಲೆ ಮುಂಬೈಗೆ ತೆರಳುತ್ತಿದ್ದ ಗೋಏರ್ ವಿಮಾನ(Go Air flight)ದಲ್ಲಿ ಎಸಿ ಸ್ಥಗಿತಗೊಂಡಿರುವ ಘಟನೆ ಬೆಳಕಿಗೆ ಬಂದಿದೆ. ವಿಮಾನ ಹಾರಾಟದ ವೇಳೆ ಎಸಿ ಇಲ್ಲದೆ ಪರದಾಡಿದ ಪ್ರಯಾಣಿಕರು ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ವಿಮಾನ ಬಹಿಷ್ಕಾರದ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.

ಗೋಏರ್ ಸ್ಥಾಪಿಸಿದ ಕಡಿಮೆ ವೆಚ್ಚದ ಮುಂಬೈ ವಿಮಾನಯಾನದ ವೇಳೆ ಎಸಿ ಸ್ಥಗಿತಗೊಂಡು ಆನ್‌ಲೈನ್‌ನಲ್ಲಿ ಹೆಚ್ಚು ಸುದ್ದಿಯಾಗಿದೆ. ವಿಮಾನದಲ್ಲಿ ಸಹ ಪ್ರಯಾಣಿಕರು ಪರದಾಡುತ್ತಿರುವ ಬಗ್ಗೆ ಕೆಲವು ಪ್ರಯಾಣಿಕರು ಅನುಭವಗಳನ್ನು ಹಂಚಿಕೊಂಡಿದ್ದಾರೆ. ಡೆಹ್ರಾಡೂನ್‌ನಿಂದ ಮುಂಬೈಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರು ವಿಮಾನದ ಕೂಲಿಂಗ್ ವ್ಯವಸ್ಥೆಯ ಬಗ್ಗೆ ದೂರುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

ಇದನ್ನೂ ಓದಿ: Viral Video: ವಾಹನದ ಗ್ಲಾಸ್ ಒರೆಸುವ ನೆಪದಲ್ಲಿ ಫಾಸ್ಟ್‌ಟ್ಯಾಗ್ ಸ್ಕ್ಯಾನ್ ಮಾಡಿ ಹಣ ಕದಿಯುವ ಮಕ್ಕಳು? NPCI ಏನು ಹೇಳಿದೆ ಗೊತ್ತಾ?

G8 2316 ಫ್ಲೈಟ್‌ನಲ್ಲಿ ಮಾಡಲಾದ ವಿಡಿಯೋ ಇದಾಗಿದ್ದು, ಪ್ರಯಾಣಿಕರು ವಿಮಾನಯಾನದ ಸಲಹೆ ಸೂಚನೆಗಳು ಒಳಗೊಂಡ ಸೂಚನಾ ಪತ್ರಗಳನ್ನು ಹಿಡಿದುಕೊಂಡು ಗಾಳಿ ಹಾಕುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಲ್ಲದೆ ಒಬ್ಬ ಮಹಿಳೆ ಸಹ ಪ್ರಯಾಣಿಕೆಯನ್ನು ಮುಂಭಾಗದ ಆಸನಕ್ಕೆ ಕರೆದೊಯ್ಯುವುದನ್ನು ಕಾಣಬಹುದು.

ಪ್ರಯಾಣಿಕರಿಗೆ ಸಹಾಯ ಮಾಡುತ್ತಿರುವ ಮಹಿಳೆಯು, ”ಅವರು ಕ್ಯಾನ್ಸರ್ ರೋಗಿಯಿದ್ದಾರೆ ಮತ್ತು ರೋಗಿಯು ಕ್ಲಾಸ್ಟ್ರೋಫೋಬಿಕ್ ಅನುಭವಿಸುತ್ತಿದ್ದಾರೆ. ಏರ್ ಕಂಡಿಷನರ್ ಕೆಲಸ ಮಾಡುತ್ತಿಲ್ಲ ಎಂದಾದರೆ ಪೈಲಟ್ ಎಂದಿಗೂ ವಿಮಾನವನ್ನು ಟೇಕಾಫ್ ಮಾಡಬಾರದಿತ್ತು. ಇದು ಇಡೀ ವ್ಯವಸ್ಥೆಗೆ ನಾಚಿಕೆಗೇಡು” ಎಂದ ಅವರ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಜನಪ್ರಿಯ ದೂರದರ್ಶನ ನಟಿ ರೋಶ್ನಿ ವಾಲಿಯಾ ಅವರು ವಿಡಿಯೋವನ್ನು ಹಂಚಿಕೊಂಡು, ”ಎಸಿ ಕಾರ್ಯನಿರ್ವಹಿಸದ ಪರಿಣಾಮ ಪ್ರಯಾಣಿಕರು ಉಸಿರುಗಟ್ಟುವಿಕೆಗೆ ಒಳಗಾದರು ಮತ್ತು ಕೆಲವು ಪ್ರಯಾಣಿಕರು ಕುಸಿದು ಬೀಳುವ ಹಂತದಲ್ಲಿದ್ದರು” ಎಂದು ಹೇಳಿಕೊಂಡಿದ್ದಾರೆ.

ಕಳೆದ ವಾರವೇ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದ್ದರೂ ಇದೀಗ ವೈರಲ್ ಪಡೆದು ಸದ್ದು ಮಾಡುತ್ತಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಕಂಪನಿ, “ಹಾಯ್, ನಮ್ಮನ್ನು ತಲುಪಿದ್ದಕ್ಕಾಗಿ ನಾವು ನಿಮಗೆ ಧನ್ಯವಾದಗಳನ್ನು ತಿಳಿಸುತ್ತೇವೆ ಮತ್ತು ನಿಮ್ಮ ಅಗತ್ಯದ ಸಮಯದಲ್ಲಿ ನಾವು ನಿಮ್ಮೊಂದಿಗಿದ್ದೇವೆ. ದಯವಿಟ್ಟು ನಿಮ್ಮ PNR, ಸಂಪರ್ಕ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು DM ಮೂಲಕ ಹಂಚಿಕೊಳ್ಳಿ, ನಮ್ಮ ತಂಡವು ನಿಮ್ಮನ್ನು ಸಂಪರ್ಕಿಸುತ್ತದೆ”ಎಂದು ಟ್ವೀಟ್ ಮಾಡಿದೆ.

ಇದನ್ನೂ ಓದಿ: Viral Video: ಮಳೆಯಲ್ಲಿ ‘ಬರ್ಸೋ ರೆ ಮೇಘ ಮೇಘ’ ಹಾಡಿಗೆ ಗ್ರೂಪ್ ಡಾನ್ಸ್ ಮಾಡಿದ ಯುವತಿಯರು! ಏನ್​ ವೈರಲ್ ಗುರು ಈ ವಿಡಿಯೋ

Published On - 10:59 am, Sun, 26 June 22

ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?